ಆವೃತ್ತಿಗಳು
Kannada

ರಂಗಭೂಮಿಯಲ್ಲಿ ಪ್ರಯೋಗದ ಕಿಕ್​​- "ವಿ ಮೂವ್"​ನಿಂದ ಹೊಸತನದ ಟಚ್​

ಟೀಮ್​ ವೈ.ಎಸ್​.ಕನ್ನಡ

YourStory Kannada
27th Feb 2017
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ರಂಗಭೂಮಿ ಕಲೆಯ ಮೂಲಸ್ಥಾನ. ಒಬ್ಬ ನಟನಲ್ಲಿನ ಪ್ರತಿಭೆಯನ್ನು ಹೊರಹಾಕಿ, ಆತನಿಗೆ ವೇದಿಕೆ ಕಲ್ಪಿಸುವುದು ಮೊದಲಿಗೆ ರಂಗಭೂಮಿಯೇ. ಇಲ್ಲಿ ಗೆದ್ದವರು ಎಲ್ಲಿ ಬೇಕಾದರೂ ಗೆಲ್ಲಬಲ್ಲರು. ಇವತ್ತಿನ ಫಾಸ್ಟ್​ ದುನಿಯಾದಲ್ಲೂ ರಂಗಭೂಮಿ ತನ್ನದೇ ಹಿಡಿತ ಹೊಂದಿದೆ. ತನ್ನ ವಿಭಿನ್ನ ಪ್ರಯೋಗಗಳ ಮೂಲಕ ಹಲವರ ಗಮನಸೆಳೆಯುತ್ತಿದೆ. ಸಾಮಾಜಿಕ ಕಳಕಳಿ ಮೂಲಕ ಸಮಾಜದ ಉದ್ದಾರಕ್ಕೆ ತನ್ನದೇ ಕೊಡುಗೆ ನೀಡುತ್ತಿದೆ. 

image


ಎಲ್ಲೆಲ್ಲಿ ಪ್ರಯೋಗ ನಡೆಯುತ್ತಿದೆಯೋ ಗೊತ್ತಿಲ್ಲ. ಆದ್ರೆ ರಂಗಭೂಮಿ ಪ್ರಯೋಗಕ್ಕೆ ಮೊದಲ ವೇದಿಕೆ. ಇವತ್ತು ಭಾರತ ಸ್ಟಾರ್ಟ್​ ಅಪ್​ ಬಗ್ಗೆ ಮಾತನಾಡುತ್ತಿದ್ದರೆ, ರಂಗಭೂಮಿ ಹೊಸತರ ಬಗ್ಗೆ ಕನಸು ಕಾಣುತ್ತಿದೆ. ಪ್ರಯೋಗಗಳು ಅನುಭವಿ ಹಿರಿತಲೆಯಿಂದ ಹಿಡಿದು, ಹೊಸಬರ ಜಮಾನದ ತನಕವೂ ನಡೆಯುತ್ತಿದೆ. ಇತ್ತೀಚಿನ ಕೃತಿಗಳನ್ನು ರಂಗಭೂಮಿ ಮೇಲೆ ಪ್ರಯೋಗ ಮಾಡುವ ಕಾಲ ಇದಾಗಿದೆ. ಇಂದಿನ ಜನಜೀವನ, ಮುಖ್ಯವಾಗಿ ಬೆಂಗಳೂರು ಕೇಂದ್ರಿತ ನಗರ ಜೀವನ ಅನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿಯ ಕಷ್ಟ, ಸುಖ, ನೋವು, ನಲಿವು, ಎಲ್ಲವೂ ರಂಗಭೂಮಿ ಮೇಲೆ ಪ್ರಯೋಗವಾಗುತ್ತಾ ಇದೆ. ನಗರ ಜೀವನದ ನಡುವೆಯೂ ವಿಭಿನ್ನ ಪ್ರಯೋಗಗಳ ಮೂಲಕ ಸಕ್ರಿಯವಾಗಿರುವ ರಂಗತಂಡವೊಂದು ಬೆಂಗಳೂರಿನಲ್ಲಿದೆ.

ಇದನ್ನು ಓದಿ: ರುಚಿ ರುಚಿಯಾಗಿದೆ 'ಹುಡ್ಲಿ'ಯ ಉಪ್ಪಿನ ಕಾಯಿ- ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಿದ ಯುವಕರಿಗೆ ಜೈ

2000 ಇಸವಿಯಿಂದೀಚೆಗಿನ ಹೊಸ ಕೃತಿಗಳನ್ನು ರಂಗದ ಮೇಲೆ ತರಲೆಂದೇ ‘ವಿ ಮೂವ್’ ಎಂಬ ರಂಗತಂಡವನ್ನು ಅಭಿಷೇಕ್ ಅಯ್ಯಂಗರ್ ಮತ್ತು ರಂಗರಾಜ್​ಭಟ್ಟಾಚಾರ್ಯ ಎಂಬ ಇಬ್ಬರು ರಂಗಭೂಮಿ ಕಲಾವಿದರು ಶ್ರಮಿಸುತ್ತಿದ್ದಾರೆ. 2006ರಲ್ಲಿ ಈ ತಂಡವನ್ನು ಆರಂಭಿಸಿದ ಈ ಇಬ್ಬರೂ ಸ್ನೇಹಿತರು ಇದುವರೆಗೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ 162ಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಇತ್ತೀಚೆಗಷ್ಟೇ ಅಮೇರಿಕಾದಲ್ಲಿ ‘ಮಾಗಡಿ ಡೇಸ್’ ಎಂಬ ನಾಟಕವನ್ನು ಈ ತಂಡದ ವತಿಯಿಂದ ಪ್ರದರ್ಶನ ಮಾಡಲಾಗಿತ್ತು.

" ಜನರ ಜೀವನಕ್ಕೆ ಹತ್ತಿರವಾಗುವಂತಹ ನಾಟಕಗಳನ್ನು ನೀಡುವುದೇ ನಮ್ಮ ಉದ್ದೇಶ. ಅಲ್ಲದೇ ನಾವು ವಿದೇಶಿ ಬರಹಗಾರರ ಕೃತಿಗಳನ್ನು ಆಧರಿಸಿ ನಾಟಕಗಳನ್ನು ಮಾಡುವುದಿಲ್ಲ. ಭಾರತೀಯರ ಕೃತಿಗಳೇ ನಮ್ಮ ನಾಟಕದ ಕಥಾವಸ್ತುವಾಗಿರುತ್ತವೆ."
- ಅಭಿಷೇಕ್ ಅಯ್ಯಂಗರ್, "ವಿ ಮೂವ್" ತಂಡದ ಸಂಸ್ಥಾಪಕ

ಬೆಂಗಳೂರಿನ ಜನ ಜೀವನದ ‘ನಮ್ಮ ಮೆಟ್ರೋ’

ಈ "ವಿ ಮೂವ್" ತಂಡದ ವತಿಯಿಂದ ಕೆಲ ದಿನಗಳ ಹಿಂದೆ ನಮ್ಮ ಮೆಟ್ರೋ ಎಂಬ ನಾಟಕ ಪ್ರದರ್ಶಿಸಲಾಗಿತ್ತು. ಈ ನಾಟಕದಲ್ಲಿ ಕೇವಲ ನಾಲ್ಕು ಪಾತ್ರಗಳನ್ನಿಟ್ಟುಕೊಂಡು ಬೆಂಗಳೂರಿನ ಸದ್ಯದ ಜೀವನವನ್ನು ಬಿಂಬಿಸಲಾಗಿತ್ತು. ಕೇವಲ ಸಿನಿಮಾಗಳೀಗೆ ಸೀಮಿತವಾಗಿದ್ದ ಥ್ರಿಲ್ಲರ್ ಸಬ್ಜೆಕ್ಟ್ ಇಟ್ಟುಕೊಂಡು ಇ=ಎಮ್​ಸಿಸ್ಕ್ವೇರ್ (E=mc2) ಎಂಬ ನಾಟಕವನ್ನು ಸಹ ಇದೇ ತಂಡದಿಂದ ಪ್ರದರ್ಶಿಸಲಾಗಿತ್ತು.

image


ಮೂಲತಃ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅಭಿಷೇಕ್ ಅಮೇರಿಕಾದ ಬಾಸ್ಟನ್ ಡಬ್ಲ್ಯು. ಎಚ್. ಥಿಯೇಟರ್​​ನಲ್ಲಿ ಸ್ಕಾಲರ್​ಶಿಪ್ ಪಡೆದು ಅಡ್ವಾನ್ಸ್ ಥಿಯೇಟರ್ ಕೋರ್ಸ್​ನಲ್ಲಿ ಪದವಿ ಪಡೆದಿದ್ದಾರೆ. ಈ ಪದವಿ ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಅಭಿಷೇಕ್ ಪಾತ್ರರಾಗಿದ್ದಾರೆ.

ರಂಗಭೂಮಿಯ ವಿವರಗಳಿರುವ ವೆಬ್​ಸೈಟ್​​

ಈ "ವಿಮೂವ್" ತಂಡ ಬೆಂಗಳೂರಿನಲ್ಲಿರುವ ರಂಗಾಸಕ್ತರು ಮತ್ತು ಕಲಾವಿದರಿಗೆ ಮಾಹಿತಿಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಥಿಯೇಟರ್ ಸರ್ಕೀಟ್ ಎಂಬ ವೆಬ್​ಸೈಟ್​ನ್ನು ಸಹ ಲಾಂಚ್ ಮಾಡಿದೆ. ಈ ವೆಬ್​ಸೈಟ್​​ನಲ್ಲಿ ಬೆಂಗಳೂರಿನಲ್ಲಿ ನಡೆಯುವ ರಂಗಭೂಮಿಯ ಸಮಗ್ರ ಮಾಹಿತಿ ಇರುತ್ತದೆ. ಅಲ್ಲದೆ ಬೆಂಗಳೂರಿನಲ್ಲಿ ಎಲ್ಲೆಲ್ಲಿ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ..? ಯಾವ ಯಾವ ನಾಟಕಗಳು ಎಲ್ಲೆಲ್ಲಿ ನಡೆಯುತ್ತಿದೆ, ಹೀಗೆ ಎಲ್ಲದರ ಮಾಹಿತಿಯೂ ಇದರಲ್ಲಿರುತ್ತದೆ. ನಾಟಕದ ಕುರಿತ ಮಾಹಿತಿ ಕಲಾವಿದರ ಮಾಹಿತಿ, ನಾಟಕದ ವಿಮರ್ಷೆಗಳನ್ನು ಇಲ್ಲಿ ಓದಬಹುದು. ಅಲ್ಲದೇ ಓದುಗರಿಗೂ ವಿಮರ್ಷೆ ಬರೆಯಲು ಇದರಲ್ಲಿ ಅವಕಾಶ ಕಲ್ಪಿಸಿದ್ದಾರೆ. ನಾಟಕಕ್ಕೆ ಬೇಕಾಗಿರುವ ಪ್ರಸಾಧನ ವಸ್ತುಗಳು ಎಲ್ಲಿ ದೊರಕುತ್ತವೆ ಎಂಬುದು ಸಹ ಇಲ್ಲಿ ತಿಳಿಯುತ್ತದೆ. ಒಟ್ಟಿನಲ್ಲಿ ಬದಲಾವಣೆ ಬಯಸುತ್ತಿರುವ ರಂಗಭೂಮಿಗೆ ವಿ ಮೂವ್​ ತಂಡದಿಂದ ಹೊಸ ಟಚ್​ ಸಿಕ್ಕಿದೆ. ಪ್ರಗತಿ ಯಾವ ರೀತಿಯಲ್ಲೂ ನಡೆದ್ರೂ ತೊಂದರೆ ಇಲ್ಲ. ಆದ್ರೆ ಅಭಿವೃದ್ಧಿಯೆಡೆಗೆ ನಡೆ ಸದಾ ಇರಬೇಕು ಅಷ್ಟೇ.

ಇದನ್ನು ಓದಿ:

1. ತಿಂಡಿ ಉಚಿತ-ಟೈಮ್​ಗೆ ದುಡ್ಡು..! ಇದು ಬೆಂಗಳೂರಿನ ಸ್ಪೆಷಲ್​ ಹೊಟೇಲ್​​​

2. ವಯಸ್ಸಾದ ಮೇಲೂ ಅದ್ಭುತ ಕನಸು ಕಾಣಬಹುದು..!

3. ಕಾರು ತಯಾರಿಸುವ ಕನಸು ನನಸು ಮಾಡಿಕೊಂಡ ಬೆಂಗಳೂರಿನ ಯುವಕ..!

 

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags