ರುಚಿ ರುಚಿಯಾಗಿದೆ 'ಹುಡ್ಲಿ'ಯ ಉಪ್ಪಿನ ಕಾಯಿ- ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಿದ ಯುವಕರಿಗೆ ಜೈ

ಟೀಮ್​ ವೈ.ಎಸ್​. ಕನ್ನಡ

22nd Feb 2017
  • +0
Share on
close
  • +0
Share on
close
Share on
close

ಹುಡ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿರುವ ಚಿಕ್ಕ ಗ್ರಾಮ. ಬೆಳಗಾವಿಯಿಂದ ಈ ಗ್ರಾಮಕ್ಕೆ ಇರುವ ದೂರ ಕೇವಲ 29 ಕಿಲೋಮೀಟರ್. ಹುಡ್ಲಿಯಲ್ಲಿ ಸುಮಾರು 7000 ಜನರಿದ್ದಾರೆ. ಬಡತನ, ನಿರುದ್ಯೋಗ ಮತ್ತು ಇತರೆ ಸಮಸ್ಯೆಗಳು ಇಲ್ಲಿ ತಾಂಡವವಾಡುತ್ತಿದೆ. ಒಂದು ಕೆಲಸ ಮಾಡುತ್ತಿದ್ದರೆ, ಆ ಕೆಲಸ ಎಷ್ಟು ದಿನ ಇರುತ್ತದೆ ಅನ್ನುವ ಚಿಕ್ಕ ಐಡಿಯಾ ಕೂಡ ಇಲ್ಲಿನ ಜನರಿಗಿರುವುದಿಲ್ಲ. ಮುಂದೇನು ಅನ್ನುವ ಬಗ್ಗೆ ಕನಸುಗಳು ಇರುವುದು ಕೂಡ ಕಡಿಮೆಯೇ. ಭಾರತದ ಇತರೆ ಚಿಕ್ಕ ಗ್ರಾಮಗಳಲ್ಲಿ ಇರುವಂತೆ ಹುಡ್ಲಿಯಲ್ಲೂ ಜನ ಗುಳೆ ಹೋಗುತ್ತಾರೆ. ಜೀವನ ನಡೆಸುವುದಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಗುಳೆ ಹೋಗುವುದು ಮಾಮೂಲಿ ಅನ್ನುವ ಹಾಗಾಗಿದೆ.

image


ಅಂದಹಾಗೇ ಹುಡ್ಲಿಯಲ್ಲಿ ಇತಿಹಾಸವೂ ಅಡಗಿದೆ. 1937ರಲ್ಲಿ ಮಹಾತ್ಮ ಗಾಂಧಿಜಿಯವರು ಇಲ್ಲಿ ಖಾದಿಗ್ರಾಮವನ್ನು ಆರಂಭಿಸಿದ್ದರು. ಇದು ಈ ಗ್ರಾಮದ ಜನರಿಗೆ ಉದ್ಯೋಗ ಕೊಡುತ್ತಿದೆ. ಅಷ್ಟೇ ಅಲ್ಲ ಬದುಕಿಗೊಂದು ನೆಲೆ ಕಂಡುಕೊಳ್ಳಲು ಹಾದಿ ತೋರಿಸುತ್ತಿದೆ. ಆದ್ರೆ ಹುಡ್ಲಿ ಪ್ರಸಿದ್ಧಿ ಪಡೆಯುತ್ತಿರುವುದು ಅಲ್ಲಿನ ಉಪ್ಪಿನ ಕಾಯಿಗಾಗಿ. ಉಪ್ಪಿನ ಕಾಯಿಯ ಟೇಸ್ಟ್ ಎಲ್ಲರ ಬಾಯಲ್ಲೂ ನೀರೂರುವಂತೆ ಮಾಡುತ್ತಿದೆ. ಗ್ರಾಮದ ಸುಮಾರು 25 ಮಹಿಳೆಯರು ಉಪ್ಪಿನ ಕಾಯಿ ತಯಾರಿಕೆಯಲ್ಲಿ ಎತ್ತಿದ ಕೈ.

“ಇಲ್ಲಿನ ಉಪ್ಪಿನ ಕಾಯಿಗಳನ್ನು ನಮ್ಮ ಅಜ್ಜಿಯಂದಿರೂ ಕೂಡ ಮೆಚ್ಚಿಕೊಳ್ಳಬಲ್ಲರು. ಅವುಗಳ ರುಚಿ ಎಲ್ಲರಿಗೂ ಇಷ್ಟವಾಗುತ್ತದೆ. ಮತ್ತೆ ಮತ್ತೆ ತಿನ್ನಬೇಕು ಅನ್ನುವಷ್ಟು ಟೇಸ್ಟಿಯಾಗಿವೆ.”
- ಗೋವಿಂದಪ್ಪ, ಹುಡ್ಲಿ ನಿವಾಸಿ

ಹುಡ್ಲಿಯಲ್ಲಿ ಯುವಕರ ಚಿಕ್ಕ ಗುಂಪು ಸಮಾಜಮುಖಿ ಕೆಲಸವನ್ನು ಮಾಡುತ್ತಿದೆ. ಖಾದಿಗ್ರಾಮ ಯೋಜನೆಯ ಅಡಿಯಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಉಪ್ಪಿನಕಾಯಿ ತಯಾರಿಸುವ ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದೆ. ಹುಡ್ಲಿಯಲ್ಲಿ ತಯಾರಾಗುವ ಉಪ್ಪಿನಕಾಯಿಯ ಡಿಮ್ಯಾಂಡ್ ಅನ್ನು ಮಹಿಳೆಯರಿಗೆ ತಿಳಿಸಿಕೊಡಲಾಗುತ್ತಿದೆ. ಈ ಮೂಲಕ ಮುಂದಿನ ದಿನಗಳಲ್ಲಿ 100ಕ್ಕೂ ಹೆಚ್ಚು ಮಹಿಳೆಯರನ್ನು ಈ ಕೆಲಸದಲ್ಲಿ ತೊಡಗುವಂತೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಪ್ರೊಣಯ್ ರಾಯ್, ಅಮಿತ್ ವದಾವಿ ಮತ್ತು ಆದರ್ಶ್ ಮುತ್ತಣ್ಣ ಹುಡ್ಲಿ ಪ್ರಾಜೆಕ್ಟ್​ನ ಸಂಸ್ಥಾಪಕರು. ಹುಡ್ಲಿ ಗ್ರಾಮದಿಂದ ಜನ ಗುಳೆ ಹೋಗುವುದನ್ನು ತಡೆಯಲು ಹಲವು ಮಾರ್ಗಗಳನ್ನು ಮತ್ತು ಪ್ಲಾನ್​ಗಳನ್ನು ರೂಪಿಸಿದ್ದಾರೆ. ಜನರಿಗೆ ಕೆಲಸ ಸಿಕ್ಕಿದ್ರೆ ಅವರ ಜೀವನಕ್ಕೆ ದಾರಿಯಾಗುತ್ತದೆ. ಇದು ಜನರು ಗುಳೆ ಹೋಗುವುದನ್ನು ತಡೆಯುವ ಮೊದಲ ಹೆಜ್ಜೆಯಾಗಿದೆ. ಅಷ್ಟೇ ಅಲ್ಲ ಗ್ರಾಮದಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸುವ ಕಾರ್ಯ ಕೂಡ ನಡೆಯುತ್ತಿದೆ.

“ ನಾವು ಮೂವರು ಮು-ಸಿಗ್ಮ ಅನ್ನುವ ಡಿಸಿಷನ್ ಸೈನ್ಸ್ ಕಂಪನಿಯಲ್ಲಿ ಕನ್ಸಲ್ಟಂಟ್ ಗಳಾಗಿ ಕೆಲಸ ಮಾಡುತ್ತಿದ್ದೆವು. ನಾವು ಫಾರ್ಚ್ಯೂನ್ 100 ರಿಟೇಲರ್ಸ್ ಮತ್ತು ಸಿಪಿಜಿ ಕಂಪನಿಗಳ ಬ್ಯುಸಿನೆಸ್ ಪ್ರಾಬ್ಲಂಗಳನ್ನು ಸರಿಪಡಿಸುತ್ತಿದ್ದೆವು. ಗ್ರಾಮೀಣ ಭಾಗದ ಜನರು ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಸಹಾಯ ಮಾಡಬೇಕು ಅನ್ನುವ ಯೋಜನೆ ರೂಪಿಸಿಕೊಂಡು ಈ ಕೆಲಸಕ್ಕೆ ಇಳಿದಿದ್ದೇವೆ. ಹುಡ್ಲಿಯಲ್ಲಿ ನಮ್ಮ ಪ್ರಾಯೋಗಿಕ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲೂ ಉದ್ಯೋಗ ಸೃಷ್ಟಿಸಿ ಅವರ ಜೀವನಾಧರಾಕ್ಕೆ ದಾರಿ ಮಾಡಿಕೊಡುವುದು ನಮ್ಮ ಉದ್ದೇಶ ”
-ಪ್ರೊಣಯ್, ಸಂಸ್ಥಾಪಕರು

ಹುಡ್ಲಿ ಪ್ರಾಜೆಕ್ಟ್​​ನ ಹಣಕಾಸು ವ್ಯವಸ್ಥೆ ಕೂಡ ಮಾದರಿ ಆಗಿದೆ. ಆರಂಭದಲ್ಲಿ ಸಂಸ್ಥಾಪಕರು ತಮ್ಮ ಉಳಿಕೆ ಹಣವನ್ನು ಹೂಡಿಕೆ ಮಾಡಿದ್ದರು. ಸಬ್ ಸ್ಕ್ರಿಪ್ಷನ್ ಮಾಡೆಲ್ ಇದಾಗಿರುವುದರಿಂದ ಸದ್ಯಕ್ಕೆ ಉತ್ತಮ ಸ್ಥಿತಿಯನ್ನು ಹೊಂದಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿಯ ಕಡೆ ಮುಖ ಮಾಡುತ್ತಿದೆ. ಆಫ್ ಲೈನ್ ಮತ್ತು ಆನ್ಲೈನ್ ಮೂಲಕವೂ ಮುಂದಿನ ದಿನಗಳಲ್ಲಿ ಉದ್ಯಮ ನಡೆಸುವ ಕನಸು ಇದೆ. ಹುಡ್ಲಿ ಖಾದಿಗ್ರಾಮ ಪ್ರಾಜೆಕ್ಟ್ ಮೂಲಕ ಇನ್ನಿತರ ಉದ್ಯಮ ಮತ್ತು ಉದ್ಯೋಗಗಳನ್ನು ಈ ಗ್ರಾಮದಲ್ಲಿ ಸೃಷ್ಟಿಸುವ ಬಗ್ಗೆ ಆಲೋಚನೆಗಳು ನಡೆಯುತ್ತಿವೆ.

ಇದನ್ನು ಓದಿ: ತೆರೆ ಹಿಂದೆ ಡಾಕ್ಟರ್​...ಸಿನಿಮಾದಲ್ಲಿ ಆ್ಯಕ್ಟರ್​​..!

ಈ ಯೋಜನೆ ಆರಂಭವಾಗಿ ಒಂದು ತಿಂಗಳು ಕೂಡ ಕಳೆದಿಲ್ಲ. ಆದ್ರೆ ಅದಾಗಲೇ ನೂರಕ್ಕೂ ಅಧಿಕ ಬಲ್ಕ್ ಆರ್ಡರ್​​ಗಳು ಬಂದಿವೆ. ಈ ಮೂವರು ಸೇರಿಕೊಂಡ ಮಾಡಿದ ವೀಡಿಯೋ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು ಅನ್ನುವುದನ್ನು ಮರೆಯುವ ಹಾಗಿಲ್ಲ. ಫರ್ಹಾನ್ ಅಖ್ತರ್, ಶಶಿ ತರೂರ್ ಮತ್ತು ವಿಲಿಯಂ ಡಾರ್ಲಿಂಪಲ್ ಸೇರಿದಂತೆ ಹಲವು ಖ್ಯಾತನಾಮರು ಈ ಬಗ್ಗೆ ವಿಚಾರಿಸಿದ್ದಾರೆ. 30,000 ಗ್ರಾಹಕರನ್ನು ಹೊಂದುವುದೇ ಇವರ ಮೊದಲ ಗುರಿಯಾಗಿದೆ.ಹುಡ್ಲಿಯಲ್ಲಿ ತಯಾರಾದ ಉಪ್ಪಿನ ಕಾಯಿಯನ್ನು thehudliproject.com ಮೂಲಕ ಮಾರಾಟ ಮಾಡಲಾಗುತ್ತಿದೆ. ಒಂದು ವರ್ಷ ಅಥವಾ 18 ತಿಂಗಳ ಚಂದಾದಾರದರೆ ಪ್ರತೀ ತಿಂಗಳು "ಜವಾನ್" ಅನ್ನುವ ಬ್ರಾಂಡ್ ಹೆಸರಲ್ಲಿ 250 ಗ್ರಾಂನ ಎರಡು ಉಪ್ಪಿನಕಾಯಿ ಜಾರ್​ಗಳು ಚಂದಾದಾರರ ಕೈ ಸೇರಲಿವೆ. ಗ್ರಾಹಕರಿಂದ ಸಂಗ್ರಹವಾದ ಹಣವನ್ನು ಉಪ್ಪಿನಕಾಯಿ ತಯಾರಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ. ಈ ಮೂಲಕ ಹೆಂಗಸರ ಕೆಲಸಕ್ಕೆ ಕುತ್ತು ಬಾರದಂತೆ ನೋಡಿಕೊಳ್ಳಲಾಗುತ್ತದೆ.

ಸದ್ಯದ ಮಟ್ಟಿಗೆ ಹುಡ್ಲಿ ಪ್ರಾಜೆಕ್ಟ್ ಒಂದು ಪ್ರಾಯೋಗಿಕ ಕೆಲಸ. ಹಳ್ಳಯಲ್ಲಿ ತಯಾರಾದ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸುವ ಪ್ರಯತ್ನ ಇದಾಗಿದೆ. ಹಳ್ಳಿಯ ಉತ್ಪನ್ನಗಳಿಗೆ ಮತ್ತು ಮನೆ ರುಚಿಗೆ ನಗರದ ಜನರು ಕೂಡ ಮನಸೋತಿದ್ದಾರೆ. ಹೀಗಾಗಿ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯುವ ಕನಸು ಇದೆ. ಗ್ರಾಮೀಣ ಭಾಗದ ಜನರಿಗೆ ಕೆಲಸ ಕೊಡುವ ಜೊತೆಗೆ ಅವರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿರುವ ಈ ಮೂರು ಯುವಕರಿಗೆ ಆಲ್ ದಿ ಬೆಸ್ಟ್.

ಇದನ್ನು ಓದಿ:

1. ಕೇವಲ 20 ರೂಪಾಯಿಗೆ ವಾಟರ್ ಪ್ಯೂರಿಫೈಯರ್..!

2. ಖಡಕ್ ನಿರ್ಧಾರ ಮಾಡುವ ಯುವ ಐಎಎಸ್ ಆಫೀಸರ್- ಆಹಾರ ಉತ್ಪನ್ನಗಳ ಬಗ್ಗೆ ಕಾಳಜಿ ಮೂಡಿಸುತ್ತಿರುವ ಫುಡ್ ಸೇಫ್ಟಿ ಕಮಿಷನರ್

3. ಗರ್ಭಧಾರಣೆಯ ಪ್ರತಿ ಸಮಯದಲ್ಲೂ ನಿಮ್ಮ ಸಂಗಾತಿ ಈ ಆ್ಯಪ್

  • +0
Share on
close
  • +0
Share on
close
Share on
close

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India