ಆವೃತ್ತಿಗಳು
Kannada

ಮೆಡಿಕಲ್​ಗೆ ಹೋಗೋ ಚಿಂತೆ ಬಿಟ್ಟುಬಿಡಿ- ಆನ್​ಲೈನ್​ನಲ್ಲೇ ಆರ್ಡರ್​ ಮಾಡಿ

ಟೀಮ್​ ವೈ.ಎಸ್​. ಕನ್ನಡ

YourStory Kannada
24th Aug 2016
Add to
Shares
3
Comments
Share This
Add to
Shares
3
Comments
Share

ಈಗ ಎಲ್ಲೆಲ್ಲೂ ಆನ್​ಲೈನ್ ಯುಗ. ಇಂಟರ್​ನೆಟ್​ ಒಂದಿದ್ರೆ ಸಾಕು, ಕುಳಿತಲ್ಲಿಗೇ ಎಲ್ಲವೂ ಬಂದು ಬೀಳುವಂತಹ ಕಾಲವಿದು. ಅಷ್ಟೇ ಅಲ್ಲ ನಮಗೆ ಏನು ಬೇಕೋ ಅದನ್ನು ಆನ್​ಲೈನ್​ನಲ್ಲೇ ಕೊಳ್ಳುವ ಕಾಲವಿದು. ದಿನನಿತ್ಯದ ಉಡುಪುಗಳಿಂದ ಹಿಡಿದು, ಮದುವೆಗೆ ಉಡುವ ಅದ್ದೂರಿಯ ಬಟ್ಟೆ ತನಕ ಎಲ್ಲಾ ವ್ಯಾಪಾರವೂ ನಡೆಯುವುದು ಆನ್​ಲೈನ್​ನಲ್ಲೇ. ಅಷ್ಟೇ ಅಲ್ಲ ಪುಸ್ತಕ, ಆಹಾರ ಪದಾರ್ಥ, ಸೇರಿ ಮತ್ತಿತರ ಯಾವುದೇ ಸಾಮಾಗ್ರಿ ಬೇಕಿದ್ದರೂ ಪ್ರತಿಯೊಂದಕ್ಕೂ ಒಂದೊಂದು ವೆಬ್​ಸೈಟ್ ಹುಟ್ಟಿಕೊಂಡಿವೆ. ಎಲ್ಲವನ್ನು ಬೆರಳ ತುದಿಯಲ್ಲೇ ಮನೆ ಬಾಗಿಲಿಗೆ ತಲುಪಿಸುವ ಆಧುನಿಕತೆಗೆ ತಂತ್ರಜ್ಞಾನಕ್ಕೆ ಒಗ್ಗಿ ಹೋಗಿದ್ದೇವೆ. ಆದರೆ ಔಷಧ, ಮೈದ್ಯಕೀಯ ಉಪಕರಣಗಳಿಗೆ ಮಾತ್ರಯಾವುದೇ ಆನ್​ಲೈನ್ ಮಾರುಕಟ್ಟೆ ಇಲ್ಲ ಎಂದು ಸಾಕಷ್ಟು ಜನ ಹೇಳುತ್ತಿದ್ದರು. ಆದರೆ ಅದನ್ನು ನಿವಾರಿಸಲು ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಕಾರ್ತಿಕ್ ಎನ್ನುವವರು ಸಪ್ಲೈದಿಸ್ ಡಾಟ್ ಕಾಂ ಎಂಬ ವೆಬ್​ಸೈಟ್​ ಆರಂಭಿಸಿದ್ದಾರೆ. ಈಗ ವೈದ್ಯರಿಗೆ ಬೇಕಾಗುವ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಆನ್​ಲೈನ್ ಮಾರಾಟಕ್ಕೆ ವರದಾನವಾಗಿ ಸಪ್ಲೈ ದಿಸ್ ಡಾಟ್ ಕಾಂ ಇದೆ. ವೈದ್ಯ ಅಥವಾ ಗ್ರಾಹಕರು ತಮಗೆ ಬೇಕಾದ ವೈದ್ಯೋಪಚಾರದ ವಸ್ತುಗಳನ್ನು ಆನ್​ಲೈನ್​ನಲ್ಲಿ ಬುಕ್ ಮಾಡಿದರೆ ಸಾಕು ಕೆಲವೇ ಗಂಟೆಗಳಲ್ಲಿ ಅವರ ಕ್ಲಿನಿಕ್ ಬಾಗಿಲಿಗೆ ಬಂದು ತಲುಪುತ್ತವೆ.

ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಕಾರ್ತಿಕ್ ದೇಶಪಾಂಡೆ ಅವರ ಕನಸಿನ ಕೂಸು ಈ ಸಪ್ಲೈ ದಿಸ್ ಡಾಟ್ ಕಾಂ. ಕಾರ್ತಿಕ್ ಅವರ ತಂದೆ ಆರ್ ಟಿ ನಗರದಲ್ಲಿ ಸಣ್ಣದೊಂದು ಕ್ಲಿನಿಕ್ ಇಟಟುಕೊಂಡು ಇದ್ದರು . ಆಗಾಗ ಅಲ್ಲಿಗೆ ಹೋಗುತ್ತಿದ್ದ ಕಾರ್ತಿಕ್ ಅವರಿಗೆ ಅಲ್ಲಿ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಬೆಲೆಯಲ್ಲಿ ಡೀಲರ್​ಗಳಿಂದ ಆಗುತ್ತಿದ್ದ ವ್ಯತ್ಯಾಸ ಕಂಡು ಬಂದಿತು. ಔಷಧ ವಸ್ತುಗಳನ್ನು ಜಾಸ್ತಿ ಕೊಂಡುಕೊಂಡರೆ ಆಗುವ ಖರ್ಚು ಕಡಿಮೆ ಇರುತ್ತಿತ್ತು. ಇದನ್ನು ಗಮನಿಸಿದ ಕಾರ್ತಿಕ್ ಒಂದು ವಸ್ತುವಿನ ಬೆಲೆಯಲ್ಲಿ ಇಷ್ಟೊಂದು ವ್ಯತ್ಯಾಸವಾಗುವುದಾದರೆ ನಿತ್ಯ ಲಕ್ಷಾಂತರ ಬಗೆಬಗೆಯ ಔಷಧ, ವೈದ್ಯಕೀಯ ಸಲಕರಣೆಗಳನ್ನು ಜನರು ಕೊಳ್ಳುತ್ತಾರೆ. ಹಾಗಾದರೆ ಹೀಗೆ ಕೊಳ್ಳುವವರಿಗೆ ನ್ಯಾಯಯುತ ಬೆಲೆಯಲ್ಲಿ ವಸ್ತುಗಳನ್ನು ಏಕೆ ನೀಡಬಾರದು ಎನ್ನುವ ಐಡಿಯಾದಿಂದ ರೂಪ ಗೊಂಡಿದ್ದೆ ಈ ಸಪ್ಲೈದಿಸ್ ಡಾಟ್ ಕಾಂ.

ಇದನ್ನು ಓದಿ: ಆಟದಲ್ಲಿ ಬೆಳ್ಳಿ ಗೆದ್ರೂ ಹೃದಯ ಗೆದ್ದ ಭಾರತದ ಬಂಗಾರ..!

ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದ ಕಾರ್ತಿಕ್ ಬಳಿಕ ಕೆಲಾಕ್ಸ್ ಸ್ಕೂಲ್ ಆಫ್ ಮ್ಯಾನೇಜ್​ಮೆಂಟ್​ನಲ್ಲಿ ವ್ಯಾಸಂಗ ಮುಗಿಸಿದ್ದರು. ಈ ಐಡಿಯಾ ಹೊಳೆದಿದ್ದೇ ತಡ ವೆಬ್​ಸೈಟ್ ರೂಪಿಸಲು ಆರಂಭಿಸಿದರು. ಇದಕ್ಕೆ ಇವರ ಗೆಳೆಯ ಪ್ರಶಾಂತ್ ಕೂಡಾ ಸಾಥ್ ನೀಡಿದರು. ಅದರಂತೆ ಕಳೆದ 2015ರ ಮಾರ್ಚ್​ನಿಂದಲೇ ವೆಬ್​ಸೈಟ್​ನ ತಾಂತ್ರಿಕ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದರು.

ಯಾವಾಗ ಪ್ರಾರಂಭ..?

ಸಪ್ಲೈ ದಿಸ್ ಡಾಟ್ ಕಾಂ ವೆಬ್​ಸೈಟ್​ನ್ನು 2016ರ ಫೆಬ್ರವರಿಯಲಿ ಲಾಂಚ್ ಮಾಡಿದರು. ಸಧ್ಯ 1200 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಈ ವೆಬ್ ತಾಣಕ್ಕೆ ದಿನವೊಂದಕ್ಕೆ ಐದು ಸಾವಿರ ಆರ್ಡರ್​ಗಳು ದೊರೆಯುತ್ತವೆ.

ಏನೇನು ಸಿಗುತ್ತದೆ..?

ಔಷಧ, ಸಿರಿಂಜ್, ಕಾಟನ್, ಗ್ಲೌಸ್, ಶಸಚಿಕಿತ್ಸೆಗಾಗಿ ವೈದ್ಯರು ಬಳಸುವ ಸಲಕರಣಗಳು ಹಾಗೂ ಉಪಕರಣಗಳು ಈ ವೆಬ್​ಸೈಟ್​ನಲ್ಲಿ ಲಭ್ಯವಿದೆ. ಸದ್ಯ ಬೆಂಗಳೂರಿನಲ್ಲಷ್ಟೇ ಕಾರ್ಯ ನಿರ್ವಹಿಸುತ್ತಿರುವ ಈ ವೆಬ್​ಸೈಟ್ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ನಗರಗಳಿಗೂ ತಮ್ಮ ವ್ಯಾಪಾರವನ್ನು ವಿಸ್ತರಿಸುವ ಆಲೋಚನೆ ಹೊಂದಿದೆ. ಈಗಾಗಲೇ ಬೆಂಗಳೂರಿನಲ್ಲಿ ಸಾವಿರಾರು ಗ್ರಾಹಕರನ್ನು ಸೆಳೆದಿರುವ ಈ ಸಪ್ಲೈದಿಸ್ ಡಾಟ್ ಕಾಮ್ ಸಂಸ್ಥೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಹಕರನ್ನು ತಲುಪಿ ಅವರ ಸಂತೃಪ್ತಿಗೊಳಿಸಲು ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ನಿಮಗೂ ವೈದ್ಯಕೀಯಕ್ಕೆ ಸಂಬಂಧಪಟ್ಟ ವಸ್ತುಗಳು ಬೇಕಾಗಿದ್ದಲ್ಲಿ www.supplythis.com ಗೆ ಲಾಗ್ ಇನ್ ಆಗಿ ಬುಕ್ ಮಾಡಬಹುದು.

ಇದನ್ನು ಓದಿ:

1. ಜನಸೇವಕ, ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೀವನಗಾಥೆ..

2. ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೀವನಗಾಥೆ - ಭಾಗ 2

3. ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೀವನಗಾಥೆ - ಭಾಗ 3

Add to
Shares
3
Comments
Share This
Add to
Shares
3
Comments
Share
Report an issue
Authors

Related Tags