ಮಾರಕ‌ ಕ್ಯಾನ್ಸರ್‌ನಿಂದ ಪಾರಾಗಿ, ನಂತರ ಮಿಸ್ ಇಂಡಿಯಾ ವರ್ಲ್ಡ್‌ವೈಡ್ ಅಂತಿಮಸುತ್ತಿಗೆ ಆಯ್ಕೆಯಾಗುವರೆಗಿನ ತನಿಶಾ ರಾಯ್‌ಳ ಸಾಧನೆಯ ಹಾದಿ

ಕ್ಯಾನ್ಸ‌ರ್ ಗೆ ತುತ್ತಾಗಿದ್ದ ತನೀಶಾ ರಾಯ್ ಬೆಂಗಳೂರು ಮೂಲದ ಮಾಡೆಲ್. ಮುಂದಿನ ತಿಂಗಳು ಗ್ರೀಸ್‌ನಲ್ಲಿ ನಡೆಯಲಿರುವ ಮಿಸ್ ಇಂಡಿಯಾ ವರ್ಲ್ಡ್‌ ಬ್ಯೂಟಿ ಸ್ಪರ್ಧೆಗೆ ಭಾಗವಹಿಸಿದ್ದ 20 ದೇಶಗಳ 30,000 ಸ್ಪರ್ಧಿಗಳಲ್ಲಿ ಫೈನಲ್‌ಗೆ ಆಯ್ಕೆಯಾದ 172‌ ಫೈನಲಿಸ್ಟ್ಗಳಲ್ಲಿ ತನೀಶ ಕೂಡ ಒಬ್ಬರು.

ಮಾರಕ‌ ಕ್ಯಾನ್ಸರ್‌ನಿಂದ ಪಾರಾಗಿ, ನಂತರ ಮಿಸ್ ಇಂಡಿಯಾ ವರ್ಲ್ಡ್‌ವೈಡ್ ಅಂತಿಮಸುತ್ತಿಗೆ ಆಯ್ಕೆಯಾಗುವರೆಗಿನ ತನಿಶಾ ರಾಯ್‌ಳ ಸಾಧನೆಯ ಹಾದಿ

Friday October 04, 2019,

3 min Read

ಗ್ರೀಸ್‌ನಲ್ಲಿ ನಡೆಯಲಿರುವ ಮಿಸ್ ಇಂಡಿಯಾ ವರ್ಲ್ಡ್‌ವೈಡ್ ಬ್ಯೂಟಿ ಸ್ಪರ್ಧೆಯ ಫೈನಲ್‌ನಲ್ಲಿ ಭಾಗವಹಿಸಲು ತನಿಶಾ ರಾಯ್ ಸಜ್ಜಾಗಿದ್ದಾರೆ. ತನ್ನ ಕಣ್ಣಲ್ಲಿ ನಕ್ಷತ್ರಗಳ ಹೊಳಪನ್ನು ಹೊಂದಿರುವ ಹಾಗೂ ಯಾವುದೇ ಸ್ಥಳಗಳಿಗೆ ಹೋಗುವ ಆತ್ಮವಿಶ್ವಾಸವನ್ನು ಕಾಣುವ ಮಹಿಳೆ ತನಿಶಾ ಆದರೆ, ಅವರ ಪ್ರಯಾಣವು ಅತ್ಯಂತ ಹೋರಾಟದ‌ ಹಾದಿ.


2018 ರಲ್ಲಿ, ತನಿಶಾ ಲಾಲಾರಸ ಗ್ರಂಥಿಯ ಗೆಡ್ಡೆಯಾದ ಪ್ಲೆಮಾರ್ಫಿಕ್ ಅಡೆನೊಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಗೆಡ್ಡೆಯನ್ನು ತೆಗೆದುಹಾಕುವುದು ಹೊರತು‌ಪಡಿಸಿ ಇನ್ಯಾವುದೇ ಚಿಕಿತ್ಸೆಯ ಆಯ್ಕೆಗಳಿರಲಿಲ್ಲ.


“ನನಗೆ ಮಾಡಿದ ಶಸ್ತ್ರಚಿಕಿತ್ಸೆ ಅತ್ಯಂತ ದೊಡ್ಡ ಶಸ್ತ್ರಚಿಕಿತ್ಸೆಯಾಗಿತ್ತು. ನನ್ನ ಎಡ ಕಿವಿಯ ಹಾಲೆಯಿಂದ ನನ್ನ ಕತ್ತಿನ ಕೆಳಗಿನವರೆಗೂ ಕತ್ತರಿಸಲಾಗಿತ್ತು. ಶಸ್ತ್ರಚಿಕಿತ್ಸೆಯಲ್ಲಿ ಒಂದುಚೂರು ತಪ್ಪಾಗಿದ್ದರೆ, ನನ್ನ ಮುಖದ ನರಗಳು ತಿರುಚಲ್ಪಟ್ಟು ನಾನು ಪಾರ್ಶ್ವವಾಯುವಿಗೆ ಒಳಗಾಗುತ್ತಿದ್ದೆ ಅದರ ಫಲಿತಾಂಶ ಆಘಾತಕಾರಿಯಾಗಿರುತಿತ್ತು. ಅಂಗಾಂಶ ಪರೀಕ್ಷೆಯ ಫಲಿತಾಂಶವಾಗಿ ನನಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಗೆಡ್ಡೆ ನನಗೆ ಮಾರಕವಾಗಿಬಿಟ್ಟಿತು. ಅತ್ಯಂತ ವಿರಳ‌ ಖಾಯಿಲೆಯನ್ನು ಬೆಳೆಯಲು ಬಿಡದೆ ಆರಂಭಿಕ ಹಂತದಲ್ಲಿ ನಾನು ಸೂಕ್ತಚಿಕಿತ್ಸೆ ಪಡೆದು ಗುಣಮುಖಳಾಗಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ” ಎಂದು ಅವರು ತಮ್ಮ ನೋವನ್ನು ಹಂಚಿಕೊಳ್ಳುತ್ತಾರೆ.

ಖಿನ್ನತೆಗೆ ಒಳಗಾಗುವುದು

ತನೀಶಾ ಶಸ್ತ್ರಚಿಕಿತ್ಸೆಯ ನಂತರವೂ ಕೂಡ ಸಾಕಷ್ಟು ತೂಕವನ್ನು ಗಳಿಸಿದರು. ಅವರ ದೇಹವನ್ನು ಸ್ನೇಹಿತರು ಮತ್ತು ನೆರೆಹೊರೆಯವರು ಗೇಲಿ ಮಾಡುತ್ತಿದ್ದರು ಇದರಿಂದ ತನಿಶಾ ಖಿನ್ನತೆಗೆ ಜಾರಿದರು.


"ಅಂತಿಮವಾಗಿ ನನ್ನ ಆರು ತಿಂಗಳ ಬೆಡ್ ರೆಸ್ಟ್ ನಂತರ, ನನಗೆ ನಾನೆ ಹೇಳಿಕೊಂಡೆ - ಸಾಕು, ಈ ಗಾಢ ನಿದ್ರೆಯಿಂದ ನಾನು ಎಚ್ಚರಗೊಂಡು ನನ್ನ ಸ್ವಂತ ವಾಸ್ತವವನ್ನು ಸೃಷ್ಟಿಸುವ ಶಕ್ತಿ ನನಗಿದೆ ಎಂದು ನಾನೇ ಅರಿತುಕೊಂಡೆ" ಎನ್ನುತ್ತಾರೆ ತನಿಶಾ.


ತನೀಶಾ ದೈಹಿಕವಾಗಿ ಕಷ್ಟವಾಗಿದ್ದರೂ ಜಿಮ್‌ಗೆ ಹೋಗಲು ಪ್ರಾರಂಭಿಸಿದರು. ಅವರು ಸ್ವ-ಪ್ರೀತಿ ಮತ್ತು ಸ್ವ-ಆರೈಕೆಯ ಮಹತ್ವವನ್ನು ಅರ್ಥಮಾಡಿಕೊಂಡರೆಂದು ಹೇಳುತ್ತಾರೆ.


ನಾನು ನನ್ನ ದೇಹವನ್ನು ಒಳ್ಳೆಯ ಆಲೋಚನೆಗಳು ಮತ್ತು ಪೌಷ್ಟಿಕ ಆಹಾರದಿಂದ ಪೋಷಿಸಿದ್ದೇನೆ. ನನಗೆ ವಿಷಕಾರಿಯೆನಿಸಿದ ಎಲ್ಲ ವಸ್ತುಗಳನ್ನು ಬದಿಗೆ ಸರಿಸಿದೆ. ಅದು ಆಹಾರ, ಪಾನೀಯಗಳು ಅಥವಾ ಸುಳ್ಳು ಸ್ನೇಹಿತರು, ನನ್ನನ್ನು ಗುಣಪಡಿಸುವ ಬದಲು ನನ್ನಿಂದ ಶಕ್ತಿಯನ್ನು ಕುಂದಿಸುತ್ತಿದ್ದ ಸಂಬಂಧಿಕರನ್ನು (ಹಾನಿಕಾರಕ ಸಂಬಂಧಗಳು) ದೂರವಿಟ್ಟೆ" ಎಂದು ಹೇಳುತ್ತಾರೆ.

ಆತ್ಮವಿಶ್ವಾಸದ ಪುನರುತ್ಥಾನ

ತನಿಶಾ ಅವರ ಪ್ರಯತ್ನಗಳು ಫಲ ನೀಡಿದವು. ಈ ಪ್ರಕ್ರಿಯೆಯಲ್ಲಿ ಅವಳು 25 ಕೆಜಿ ಕಡಿಮೆ ಮಾಡಿಕೊಂಡರು ಹಾಗೂ ತಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆದರು.


ಈ ವರ್ಷದ ಫೆಬ್ರವರಿಯಲ್ಲಿ, ಬೆಂಗಳೂರಿನಲ್ಲಿ ನಡೆದ ಹೊ ಮಾಂಡ್ ಮಿಸೆಸ್ ಇಂಡಿಯಾ ವರ್ಲ್ಡ್‌ವೈಡ್ 2019 ರ ಬ್ಯೂಟಿ ಸ್ಪರ್ಧೆಯ ಸೀಸನ್ 9 ಗೆ ನೋಂದಾಯಿಸಿಕೊಳ್ಳಲು ಹಾಗೂ ಆಡಿಷನ್‌ನಲ್ಲಿ ಭಾಗವಹಿಸಲು ಆವರಿಗೆ ಕರೆ ಬಂತು. 20 ದೇಶಗಳ 30,000 ಸ್ಪರ್ಧಿಗಳಲ್ಲಿ ಇವರು ಆಯ್ಕೆಯಾದರು. ಇದೀಗ ಮುಂದಿನ ತಿಂಗಳು ಗ್ರೀಸ್‌ನಲ್ಲಿ ನಡೆಯಲಿರುವ ಗ್ರ್ಯಾಂಡ್ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ 175 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.


ತನೀಶಾ ಫೈನಲ್‌ಗಾಗಿ ಹುಮ್ಮಸ್ಸು ಮತ್ತು ಉತ್ಸಾಹದಿಂದ ತಯಾರಿ ನಡೆಸುತ್ತಿದ್ದಾರೆ. “ಅಣಕು ಸಂದರ್ಶನಗಳಿಂದ ಹಿಡಿದು ಕಾಗದದ ಕೆಲಸ ಅಧ್ಯಯನ, ಪರಿಣಾಮಕಾರಿ ಸಂವಹನ ಮತ್ತು ಉದ್ಯಮದ ಅತ್ಯುತ್ತಮ ಸೌಂದರ್ಯ ಸ್ಪರ್ಧಿ ತರಬೇತುದಾರರೊಂದಿಗೆ ತರಬೇತಿ ಹಾಗೂ ನಿಮ್ಮ ವಿಷಯವನ್ನು ನೀವು ತಿಳಿದುಕೊಳ್ಳುವುದು ತುಂಬಾ ಮುಖ್ಯ. ನನ್ನಲ್ಲಿ ಕಟ್ಟುನಿಟ್ಟಾದ ವ್ಯಾಯಾಮ ನಿಯಮ ಮತ್ತು ನಿಯಮಿತ ಆಹಾರ ಯೋಜನೆ ಇದೆ. ನನಗೆ ವೈಯಕ್ತಿಕ ತರಬೇತುದಾರ, ಆಹಾರ ತಜ್ಞ ಮತ್ತು ಪೌಷ್ಟಿಕತಜ್ಞ ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ. ನಾನು ನನ್ನ ಸ್ನೇಹಿತರೊಂದಿಗೆ ಡ್ರೆಸ್ ಶಾಪಿಂಗ್ ಮತ್ತು ನನ್ನ ಅಮ್ಮನೊಂದಿಗೆ ಚೌಕಾಸಿ ಮಾಡಲು ಹೋಗುತ್ತಿದ್ದೇನೆ. ಇದೆಲ್ಲವೂ ಒಂದು ಚಮತ್ಕಾರ!”‌ ಎನ್ನುತ್ತಾರೆ ತನಿಶಾ.


ಸಮಗ್ರತೆ, ಸಹಾನುಭೂತಿ ಮತ್ತು ಸಕಾರಾತ್ಮಕತೆಯು ಅವರನ್ನು ಕಾಯುತ್ತದೆ ಎಂದು ಅವರ ನಂಬಿಕೆ.


ಪ್ರತಿಯೊಬ್ಬರೂ ಅತ್ಯುತ್ತಮವಾದ ತಯಾರಿ ನಡೆಸುತ್ತಿದ್ದಾರೆ. ಯಾವಾಗಲೂ ನೆನಪಿಡಬೇಕಾದ ವಿಷಯವೆಂದರೆ, ನಾನು ನನ್ನೊಂದಿಗೆ ಸ್ಪರ್ಧೆಯಲ್ಲಿದ್ದೇನೆ ಬೇರೆ ಯಾರೊಂದಿಗೂ ಅಲ್ಲ ಎಂಬುದು ಇದು ಒತ್ತಡವನ್ನು ದೂರವಿರಿಸುತ್ತದೆ ಹಾಗೂ ನನ್ನ ಕೊರತೆಗಳಿಗೆ ಸಹಾಯಮಾಡುತ್ತದೆ. ಹೀಗಾಗಿ ನನಗೆ ನಾನು ಪ್ರತಿದಿನ ಉತ್ತಮ ಆವೃತ್ತಿಯಾಗುತ್ತೇನೆ.”

ಚೌಕಟ್ಟಿನಿಂದಾಚೆಗೆ ಆಲೋಚನೆ

ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಹುಟ್ಟಿ ಬೆಳೆದ ತನೀಶಾ 12ನೇ ತರಗತಿಯ ನಂತರ ವಿದ್ಯಾಭ್ಯಾಸವನ್ನು ಮುಂದುವರಿಸಲು ಬೆಂಗಳೂರಿಗೆ ತೆರಳಿದರು. ಜೈವಿಕ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು 10 ವರ್ಷಗಳಿಗೂ ಹೆಚ್ಚು ಕಾಲ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದ್ದಾರೆ. ಕಿಂಗ್‌ಫಿಶರ್ ಏರ್‌ಲೈನ್ಸ್‌ನಲ್ಲಿ ಗೆಸ್ಟ್ ರಿಲೇಷನ್ ಕಾರ್ಯನಿರ್ವಾಹಕರಾಗಿ ಪ್ರಾರಂಭಿಸಿ ತದನಂತರ ಕಾರ್ಪೊರೇಟ್ ಸಂವಹನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ, ಜನರಲ್ ಎಲೆಕ್ಟ್ರಿಕ್‌ ಆಗಿ ಸಾಂಸ್ಥಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ.


ಇದೀಗ ತಮ್ಮ ಆಳವಾದ ಆಸೆ-ಆಕಾಂಕ್ಷೆಗಳನದನು ಈಡೇರಿಸಿಕೊಳ್ಳಲು ವೃತ್ತಿ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ.


"ನಾನು ಏಕಾಂಗಿ ಪ್ರಯಾಣಿಕಳು ಹಾಗೂ ಉದ್ಯೋಗಗಳು ನಮ್ಮ ಪಾಕೆಟ್‌ಗಳನ್ನು ಮಾತ್ರ ತುಂಬುತ್ತವೆ ಆದರೆ ಸಾಹಸವು ನಮ್ಮ ಆತ್ಮಗಳನ್ನು ತುಂಬುತ್ತದೆ ಎಂಬುದರಲ್ಲಿ ಬಲವಾಗಿ ನಂಬಿಕೆ ಇಟ್ಟಿದ್ದೇನೆ. ದುಬೈ, ಕೀನ್ಯಾ, ನೈಜೀರಿಯಾ, ಘಾನಾ, ಮಾರಿಷಸ್, ಯುಎಸ್, ಯುರೋಪ್, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ 22 ದೇಶಗಳಲ್ಲಿ ಪ್ರಯಾಣಿಸಿದ್ದೇನೆ. ನಿಜವಾದ ಬೆಳವಣಿಗೆ ಮತ್ತು ಸುಲಭವಾದ ಯಶಸ್ಸು ಸಂಭವಿಸುವ ನನ್ನ ಕಂಫರ್ಟ್ ಝೋನ್‌ನಿಂದ ಹೊರಬರಲು ಏಕಾಂಗಿ ಪಯಣ ನನಗೆ ಪಾಠ ಕಲಿಸಿದೆ” ಎಂದು ಹೇಳುತ್ತಾರೆ.


ತನೀಶಾಳ 2012 ರಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ನಂತರ, ಅವಳ ಪ್ರತಿ ಪ್ರಯತ್ನದಲ್ಲೂ ಬೆಂಬಲವಾಗಿ‌ ನಿಂತಿದ್ದು ಆಕೆಯ ತಾಯಿ ಮತ್ತು ಪತಿ.


ಭವಿಷ್ಯದ ದೃಷ್ಟಿಯಿಂದ, ತನ್ನ ಕಂಫರ್ಟ್ ಝೋನ್‌ನಿಂದ ಹೊರಬರಲು ಹೆದರುವುದಿಲ್ಲ ಎಂದು ತನೀಶಾ ಹೇಳುತ್ತಾರೆ. "ನಾನೊಬ್ಬಳು ಪ್ರಬಲ ಪ್ರೇರಕಳಾಗಿ, ಜೀವನದ ತರಬೇತುದಾರಳಾಗಲು ಬಯಸುತ್ತೇನೆ. ಈ ಮೂಲಕ ನಾನು ಲಕ್ಷಾಂತರ ಜನರನ್ನು ತಲುಪಿ ಅವರನ್ನು ಚೌಕಟ್ಟಿನ ಹೊರಗೆ ಬದುಕಲು ಸಹಾಯ ಮಾಡಲು ಬಯಸುತ್ತೇನೆ" ಎನ್ನುತ್ತಾರೆ ತಿನಿಶಾ.


‘ಬಲಶಾಲಿಯಾಗಿರುವುದೊಂದೆ ಆಯ್ಕೆ ನಿಮಗಿರುವುದು ಎಂದು ನೀವು ತಿಳಿಯುವವರೆಗೂ, ನೀವೆಷ್ಟು ಬಲಶಾಲಿ ಎಂದು ನಿಮಗೆ ಗೊತ್ತಾಗುವುದಿಲ್ಲ' ಎಂಬ ನಾಣ್ಣುಡಿಯನ್ನು ಉದಾಹರಣೆ ನೀಡುತ್ತಾರೆ.


"ನಿಮ್ಮ ಆಶೀರ್ವಾದಗಳನ್ನು ಎಣಿಸಿ, ದೂರು ನೀಡುವುದನ್ನು ನಿಲ್ಲಿಸಿ ಮತ್ತು ನಿಮ್ಮ ದುರ್ಬಲ ಅಂಶಗಳನ್ನು ನಿಮ್ಮ ಸಾಮರ್ಥ್ಯವನ್ನಾಗಿ ಬಲಪಡಿಸಿ. ಬದಲಾವಣೆ ನಿಮ್ಮಿಂದಲೇ ಪ್ರಾರಂಭವಾಗುತ್ತದೆ. ನೀವು ಮಾಡಬಹುದು ಮತ್ತು ನಿಮ್ಮಿಂದ ಆಗುತ್ತದೆ ಎಂದು ನಂಬಿರಿ. ಇತರರು ಏನು ಯೋಚಿಸುತ್ತಾರೆ ಎಂದು ಯೋಚಿಸುವುದನ್ನು ಬಿಟ್ಟುಬಿಡಿ, ಬದಲಿಗೆ ನಿಮ್ಮ ಹೃದಯವನ್ನು ಮಾತ್ರ ಆಲಿಸಿ. ಪ್ರತಿ ಹಂತದಲ್ಲೂ ನಿಮ್ಮನ್ನು ಕೆಳಕ್ಕೆ ಎಳೆಯಲು ಬಯಸುವ ದ್ವೇಷಿಗಳು ಇರುತ್ತಾರೆ. ನಾನು ಆಗಲೇ ಹೇಳಿದಂತೆ ಅಸೂಯೆ ಗಳಿಸಬೇಕಾದದ್ದು‌ ಆದರೆ ಸಹಾನುಭೂತಿ ಉಚಿತ. ನೀವು ಎಷ್ಟು ಎತ್ತರಕ್ಕೆ ಹೋಗುತ್ತೀರೋ ಗೊತ್ತಿಲ್ಲ‌ ಆದರೆ ಚೌಕಟ್ಟಿನಿಂದ ಹೊರಬರಲು ಸಿದ್ಧರಾಗಿರಿ ಹಾಗೂ ನಿಮ್ಮ ಸ್ವಂತ ಜೀವನವನ್ನು ಜೀವಿಸಿ” ಎಂದು ಆತ್ಮವಿಶ್ವಾಸದ ಕಿಡಿಹೊತ್ತಿಸುತ್ತಾರೆ ತನಿಶಾ.