ಕೊರೊನಾವೈರಸ್: ಲಾಕ್‌ಡೌನ್‌ ನಡುವೆ 20 ಲಕ್ಷ ಜನರ ಹಸಿವು ನೀಗಿಸಿದ 81 ರ ವೃದ್ಧ

ಕಳೆದ ಎರಡು ತಿಂಗಳಿಂದ ಬಾಬಾ ಕರ್ನೈಲ್‌ ಸಿಂಗ್‌ ಖೈರಾ ಅವರು ತಮ್ಮ ತಂಡದೊಂದಿಗೆ ಸೌಲಭ್ಯವಂಚಿತರಿಗೆ ಉಚಿತವಾಗಿ ಊಟ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಬೀದಿಯಲ್ಲಿರುವ ಪ್ರಾಣಿಗಳಿಗೂ ಆಹಾರ ಒದಗಿಸುತ್ತಿದ್ದಾರೆ.

ಕೊರೊನಾವೈರಸ್: ಲಾಕ್‌ಡೌನ್‌ ನಡುವೆ 20 ಲಕ್ಷ ಜನರ ಹಸಿವು ನೀಗಿಸಿದ 81 ರ ವೃದ್ಧ

Tuesday June 02, 2020,

2 min Read

ಕೊರೊನಾವೈರಸ್‌ ತಂದೊಡ್ಡಿರುವ ಲಾಕ್‌ಡೌನ್‌ ಹಲವರ ಬಾಳನ್ನು ಗೋಳಾಗಿಸಿದೆ. ಅದರಲ್ಲೂ ಊಟ ವಸತಿಯ ಸೌಲಭ್ಯವಿಲ್ಲದೆ ನಡೆದುಕೊಂಡೆ ಊರು ಸೇರುತ್ತಿರುವ ವಲಸೆ ಕಾರ್ಮಿಕರ ಪಾಡಂತು ಹೇಳತಿರದು.


ಇವರ ಕಷ್ಟಗಳನ್ನರಿತ ಭಾರತ ಸರ್ಕಾರ ಮತ್ತು ಸರ್ವೋಚ್ಚ ನ್ಯಾಯಾಲಯ ಊಟ, ವಸತಿ ಮತ್ತು ಊರಿಗೆ ತೆರೆಳಲು ಶ್ರಮಿಕ ರೈಲಿನ ವ್ಯವಸ್ಥೆಯನ್ನೂ ಕಲ್ಪಿಸಿದೆ.


ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಹಲವು ಸಂಘ ಸಂಸ್ಥೆಗಳು, ಜನರು ಇವರ ಸಹಾಯಕ್ಕೆ ಮುಂದೆ ಬರುತ್ತಿದ್ದಾರೆ. ಅಂತವರಲ್ಲಿ ಒಬ್ಬರು 81 ರ ಬಾಬಾ ಕರ್ನೈಲ್‌ ಸಿಂಗ್‌ ಖೈರಾ.


ಬಾಬಾ ಕರ್ನೈಲ್‌ ಸಿಂಗ್‌ ಖೈರಾ (ಚಿತ್ರಕೃಪೆ: ದಿ ಲಾಜಿಕಲ್‌ ಇಂಡಿಯನ್‌)




ಮಹಾರಾಷ್ಟ್ರದ ಕರಂಜಿಯವರಾದ ಖೈರಾ ಬಾಬಾ ಕಳೆದ ಎರಡು ತಿಂಗಳಿಂದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿರುವ ಶೆಡ್‌ನಲ್ಲಿ ಉಚಿತ ಊಟವನ್ನು ನೀಡುತ್ತಿದ್ದಾರೆ. 450 ಕಿ.ಮೀ. ನ ದಾರಿಯಲ್ಲಿ ಇದೊಂದೆ ಸ್ಥಳದಲ್ಲಿ ಊಟ ಸಿಗುತ್ತದೆ ಎಂಬುದು ವಿಶೇಷವಾಗಿದೆ.


“ಇದು ದೂರದಲ್ಲಿರುವ ಬುಡಕಟ್ಟು ಪ್ರದೇಶ. ನಮ್ಮ ಶೇಡ್‌ ನ ಹಿಂದೆ 150 ಕಿ.ಮೀ ಮತ್ತು ಮುಂದೆ 300 ಕಿ.ಮೀ. ವರೆಗೆ ಯಾವುದೇ ಹೊಟೆಲ್‌, ಧಾಬಾಗಳಲ್ಲಿ. ಹಾಗಾಗಿ ಬಹಳ ಜನರು ಗುರು ಕಾ ಲಂಗರ ನಲ್ಲಿ ತಂಗಿ, ನಮ್ಮ ಸೇವೆಯನ್ನು ಪಡೆಯಲು ಬಯಸುತ್ತಾರೆ,” ಎನ್ನುತ್ತಾರೆ ಖೈರಾ, ವರದಿ ಐಎಎನ್‌ಎಸ್‌.


ಗುರು ಕಾ ಲಂಗರ ಎಂಬುದು 11 ಕಿ.ಮೀ ದೂರದ ಕಾಡು ಪ್ರದೇಶದಲ್ಲಿರುವ ವಾಯಿಯ ಐತಿಹಾಸಿಕ ಗುರುದ್ವಾರ ಭಾಗಿದ್‌ ಸಾಹಿಬ್‌ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ.


ಭಾರತ ಸರ್ಕಾರ ಮಾರ್ಚ್‌ 24 ಕ್ಕೆ ಲಾಕ್‌ಡೌನ್‌ ಘೋಷಿಸಿದ್ದಾಗಿನಿಂದಲೂ 20 ಲಕ್ಷಕ್ಕೂ ಹೆಚ್ಚು ಜನರ ಹಸಿವು ನೀಗಿಸಲು ಖೈರಾ ಬಾಬಾ ಅವರ ಲಂಗರ ಸಹಾಯಮಾಡಿದೆ.


“ತಂಡ ತಂಡವಾಗಿ ಜನರು ಬರುತ್ತಲಿದ್ದರು ಮತ್ತು ಅವರಿಗಾಗಿ ಅಡುಗೆ ಸಿದ್ಧವಾಗುತ್ತಿತ್ತು. ಧರ್ಮ, ಜಾತಿಯ ಭೇದವಿಲ್ಲದೆ ಬರುವವರೆಲ್ಲರನ್ನೂ ಸ್ವಾಗತಿಸಿದ್ದೇವೆ. 17 ಜನರ ‘ಸೇವಕʼ ಎಂಬ ತಂಡದ ಜೊತೆಗೆ 11 ಜನ ಬಾಣಸಿಗರು ಮತ್ತು ಇತರ ಸಹಾಯಕರು ಸೇರಿ ಹೆಚ್ಚು ಸಮಯ ಕೆಲಸಮಾಡುತ್ತಾ ಬಿಸಿಬಿಸಿಯಾದ ಆಹಾರ ಒದಗಿಸುತ್ತಿದ್ದೇವು,” ಎಂದರು ಬಾಬಾಜಿ, ವರದಿ ದಿ ಲಾಜಿಕಲ್‌ ಇಂಡಿಯನ್‌.


ಇಷ್ಟೇ ಅಲ್ಲದೆ ತಂಡವು ನಾಯಿ, ಬೆಕ್ಕು, ದನ ಮತ್ತು ಇತರ ಪ್ರಾಣಿಗಳಿಗೂ ಆಹಾರ ನೀಡುತ್ತಿದೆ.


ಯು.ಎಸ್‌.ನಲ್ಲಿ ನೆಲೆಸಿರುವ ಅವರ ಸಹೋದರ ಬಾಬಾ ಗುರಿಬಕ್ಸ್‌ ಸಿಂಗ್‌ ಖೈರಾ ಈ ಕಾರ್ಯಕ್ಕಾಗಿ ದೇಣಿಗೆ ಸಂಗ್ರಹಿಸಲು ಸ್ಥಳೀಯ ಸಿಖ್‌ ಸಮುದಾಯವನ್ನು ಸಂಪರ್ಕಿಸಿದ್ದಾರೆ.


ಲಂಗರ ಗೆ 3 ವಾಹನಗಳನ್ನು ಭಕ್ತರು ದೇಣಿಗೆ ನೀಡಿದ್ದಾರೆ…ಆದರೆ ಭೂವಿಯಲ್ಲಿ ನನ್ನ ವಸ್ತುಗಳೆಂದರೆ 3 ಜೊತೆ ಬಟ್ಟೆಗಳಷ್ಟೇ. ನಾನು ಇಲ್ಲೇ ಇರುತ್ತೇನೆ, ಮಲಗುತ್ತೇನೆ ಮತ್ತು ಎಲ್ಲರಿಗೂ ಕೊಡುವ ಊಟವನ್ನೆ ತಿನ್ನುತ್ತೇನೆ,” ಎನ್ನುತ್ತಾರೆ ಖೈರಾ ಬಾಬಾ.