ಕೊರೊನಾವೈರಸ್:‌ ಮಾನವರ ಭೌತಿಕ ಸಂಪರ್ಕವಿಲ್ಲದೆಯೆ ಕಾರ್ಯನಿರ್ವಹಿಸುವ ಡೋರ್‌ ಬೆಲ್‌ ಅಭಿವೃದ್ಧಿಪಡಿಸಿದ ದೆಹಲಿಯ ವಿದ್ಯಾರ್ಥಿ

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ವಚ್ಛತೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾದ ಈ ಸಮಯದಲ್ಲಿ ದೆಹಲಿಯ ಸಾರ್ಥಕ್‌ ಜೈನ್‌ ಮನುಷ್ಯರ ಸಂಪರ್ಕವಿಲ್ಲದೆ ನಿರ್ವಹಿಸಬಹುದಾದ ಡೋರ್‌ಬೆಲ್‌ ಅಭಿವೃದ್ಧಿಪಡಿಸಿದ್ದಾರೆ.

ಕೊರೊನಾವೈರಸ್:‌ ಮಾನವರ ಭೌತಿಕ ಸಂಪರ್ಕವಿಲ್ಲದೆಯೆ ಕಾರ್ಯನಿರ್ವಹಿಸುವ ಡೋರ್‌ ಬೆಲ್‌ ಅಭಿವೃದ್ಧಿಪಡಿಸಿದ ದೆಹಲಿಯ ವಿದ್ಯಾರ್ಥಿ

Tuesday April 21, 2020,

1 min Read

ವಿಶ್ವವೇ ನಾವೆಲ್‌ ಕೊರೊನಾವೈಸರ್‌ ವಿರುದ್ಧ ಹೋರಾಡುತ್ತಿರುವ ಈ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಸಂಶೋಧಕರು ಎಡಬಿಡದೆ ಮಹಾಮಾರಿಯನ್ನು ಮಣಿಸಲು ಕೆಲಸ ಮಾಡುತ್ತಿದ್ದಾರೆ.


ವರ್ಡೋಮೀಟರ್‌ ಪ್ರಕಾರ ಜಾಗತಿಕವಾಗಿ ಕೊರೊನಾವೈರಸ್‌ ಪ್ರಕರಣಗಳ ಸಂಖ್ಯೆ 1.65 ಲಕ್ಷ ಸಾವುಗಳೊಂದಿಗೆ 2.5 ಮಿಲಿಯನ್‌ ತಲುಪಿದೆ. ಭಾರತದಲ್ಲಿ 559 ಸಾವುಗಳೊಂದಿಗೆ ಪ್ರಕರಣಗಳ ಸಂಖ್ಯೆ 17,615 ತಲುಪಿದೆ.


ಈ ಜಾಗತಿಕ ಪಿಡುಗು ಮಾನವನಿಂದ ಮಾನವನಿಗೆ ಹರಡುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಸ್ವಚ್ಛತೆಯೆಡೆಗೆ ಗಮನ ನೀಡಲು ಸೂಚಿಸಲಾಗಿದೆ.


ಸಂಶೋಧಕರು ಪರೀಕ್ಷಾ ಕಿಟ್‌ಗಳನ್ನು ಮತ್ತು ಲಸಿಕೆ ಕಂಡುಹಿಡಿಯುವಲ್ಲಿ ನಿರತರಾಗಿದ್ದರೆ, ದೆಹಲಿಯ ಕಿರಿಯ ವಿಜ್ಞಾನಿಯೊಬ್ಬರು ಡೋರ್‌ಬೆಲ್‌ ಒಂದನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ಮಾನವನ ಭೌತಿಕ ಸಂಪರ್ಕದ ಅವಶ್ಯಕತೆ ಇಲ್ಲದೆಯೆ ನಿರ್ವಹಿಸಬಹುದು.


ಟ

ತನ್ನ ಅನ್ವೇಷನೆಯೊಂದಿಗೆ ಸಾರ್ಥಕ್‌ ಜೈನ್‌




ಸ್ವಿಚ್‌ಗಳು ಅದರಲ್ಲೂ ಡೋರ್‌ ಬೆಲ್‌ ಗಳು ಸೂಕ್ಷ್ಮಾಣುಜೀವಿಗಳ ಸಾಮಾನ್ಯವಾಗಿ ಇರುವ ತಾಣ, ಏಕೆಂದರೆ ಅವುಗಳನ್ನು ಯಾರೂ ನಿಯಮಿತವಾಗಿ ಸ್ವಚ್ಛಗೊಳಿಸುವ ಗೋಜಿಗೆ ಹೋಗುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ದೆಹಲಿಯ ಮಾಡರ್ನ್‌ ಪಬ್ಲಿಕ್‌ ಸ್ಕೂಲ್‌ ನ 11ನೇ ತರಗತಿಯ ವಿದ್ಯಾರ್ಥಿ ಸಾರ್ಥಕ್‌ ಜೈನ್‌ ಮಾನವರ ಭೌತಿಕ ಸಂಪರ್ಕವಿಲ್ಲದೆಯೆ ಕಾರ್ಯನಿರ್ವಹಿಸುವ ಡೋರ್‌ ಬೆಲ್‌ ಕಂಡುಹಿಡಿದಿದ್ದಾರೆ.


“ಸಾರ್ಥಕ್‌ ಯಾವಾಗಲೂ ಸವಾಲುಗಳನ್ನು ಎದುರಿಸುತ್ತಾ, ಅವುಗಳನ್ನು ಬಿಡಿಸಲು ಹೊಸದನ್ನು ಪ್ರಯತ್ನಿಸುತ್ತಿರುತ್ತಾನೆ. ಭೌತಿಕ ಸಂಪರ್ಕವಿಲ್ಲದೆ ನಿರ್ವಹಿಸಬಹುದಾದ ಡೋರ್‌ಬೆಲ್‌ ನ ಅನ್ವೇ಼ಷನೆಯೊಂದಿಗೆ ಹಲವು ಸಮಸ್ಯೆಗಳಿಗೆ ವಿಜ್ಞಾನ ಉತ್ತರವೆಂದು ನಿರೂಪಿಸಿದ್ದಾನೆ. ಅವನ ಈ ವಿಶಿಷ್ಟ ಚಿಂತನೆಯ ಬಗ್ಗೆ ನನಗೆ ಅತೀವ ಮೆಚ್ಚುಗೆಯಿದೆ,” ಎಂದರು ಹೆಹಲಿಯ ಮಾಡರ್ನ್‌ ಪಬ್ಲಿಕ್‌ ಶಾಲೆಯ ಮುಖ್ಯೋಪಾಧ್ಯಾಯರಾದ ಅಲ್ಕಾ ಕಪೂರ್‌.


ಸಾರ್ಥಕ್‌ ಅವರಂತೆ ಹಲವು ಜನರು, ಐಐಟಿಯಂತಹ ಸಂಸ್ಥೆಗಳು, ನವೋದ್ಯಮಗಳು ಕಾಂಟಾಕ್ಟ್‌ ಟ್ರೇಸಿಂಗ್‌, ಟೆಲೆಮೆಡಿಸಿನ್‌ ಸೇವೆಗಳು, ವೈಯಕ್ತಿಯ ಸಂರಕ್ಷಣಾ ಸಾಧನಗಳಾದ ಫೇಸ್‌ ಮಾಸ್ಕ್‌ಗಳು, ಶೀಲ್ಡ್‌ ಮತ್ತು ವೆಂಟಿಲೆಟರ್‌ ನಂತಹ ಮುಂತಾದ ಉಪಾಯಗಳನ್ನು ಕಂಡುಹಿಡಿಯುತ್ತಿದ್ದಾರೆ.