ದೃಷ್ಟಿ ಮತ್ತು ಶ್ರವಣದೋಷವುಳ್ಳ ಜನರಿಗೆ ಸಹಾಯ ಮಾಡುವ ಮಾರ್ಗದರ್ಶಿ ಕನ್ನಡಕವನ್ನು ಅಭಿವೃದ್ಧಿಪಡಿಸಿದ 13 ವರ್ಷದ ಬಾಲಕ
ಪ್ರಿಯಬ್ರತಾ ಸಾಹೂನ ಆವಿಷ್ಕಾರವು ಎರಡು ಮಾದರಿಗಳಲ್ಲಿದೆ, ಒಂದು ಅಲ್ಟ್ರಾಸಾನಿಕ್ ಸಂವೇದಕ ಮತ್ತು ಬಜರ್, ದೃಷ್ಟಿಹೀನರಿಗಾಗಿ, ಇನ್ನೊಂದು ಶ್ರವಣದೋಷವುಳ್ಳ ಜನರಿಗೆ ಅಲ್ಟ್ರಾಸಾನಿಕ್ ಸಂವೇದಕ, ಬಜರ್ ಮತ್ತು ವೈಬ್ರೇಟರ್ ಮೋಟರ್ ಅನ್ನು ಒಳಗೊಂಡಿವೆ.
ವರ್ಷದಿಂದ ವರ್ಷಕ್ಕೆ, ಅಂಗವಿಕಲ ಸಮುದಾಯವು ಪ್ರತಿಯೊಂದು ಕ್ಷೇತ್ರದ ಹಾಗೆ ವ್ಯಾಪಕವಾದ ತಾಂತ್ರಿಕ ಪ್ರಗತಿಯ ಲಾಭವನ್ನು ಪಡೆದುಕೊಂಡಿದೆ. ಸರಳವಾದ ಬೆಂಬಲ ಕೋಲು ಅಥವಾ ಶ್ರವಣ ಸಾಧನ, ದೃಷ್ಟಿ ಮತ್ತು ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸಂಪೂರ್ಣ ಸ್ವತಂತ್ರಮಯ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟಿದೆ.
ದಿವ್ಯಾಂಗ ಜನರ ಜೀವನವನ್ನು ಸರಳಗೊಳಿಸುವ ಸಾಧನಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ 8 ನೇ ತರಗತಿ ವಿದ್ಯಾರ್ಥಿ ಪ್ರಿಯಬ್ರತಾ ಸಾಹೂ. ಒಡಿಶಾದಿಂದ ಬಂದಿರುವ ಈ ಯುವಕ ಒಂದು ರೀತಿಯ ಕನ್ನಡಕವನ್ನು ಅಭಿವೃದ್ಧಿಪಡಿಸಿದ್ದು ಅದು ಬಳಕೆದಾರರಿಗೆ ಅವರ ದಾರಿಯಲ್ಲಿರುವ ಬರುವ ಅಡಚಣೆಯ ಬಗ್ಗೆ ಸಂಕೇತವನ್ನು ನೀಡಿ ಎಚ್ಚರಿಸುತ್ತದೆ.
ಅವನ ಆವಿಷ್ಕಾರದ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡುತ್ತ,
“ಹಳ್ಳಿಯ ದೃಷ್ಟಿಹೀನ ವೃದ್ಧರೊಬ್ಬರು ಬೆಂಬಲವಿಲ್ಲದೆ ನಡೆದಾಡಲು ಕಷ್ಟ ಅನುಭವಿಸುತ್ತಿರುವದನ್ನು ನೋಡಿದಾಗ ನನಗೆ ಈ ಆಲೋಚನೆ ಹೊಳೆಯಿತು. ಆದ್ದರಿಂದ, ನಾನು ಏನನ್ನಾದರೂ ಮಾಡಲು ನಿರ್ಧರಿಸಿದೆ ಮತ್ತು ನನ್ನ ವಿಜ್ಞಾನ ಶಿಕ್ಷಕ ತುಷರಕಾಂತಿ ಮಿಶ್ರಾ ಅವರೊಂದಿಗೆ ಚರ್ಚಿಸಿದೆ,” ಎಂದನು.
ಜಾಜ್ಪುರ ಜಿಲ್ಲೆಯ ಪುರುಷೋತ್ತಂಪುರದ ಅದಂಗದಲ್ಲಿರುವ ಪ್ರಹಲ್ಲಾದ್ ಚಂದ್ರ ಬ್ರಹ್ಮಚಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಿಯಬ್ರತಾ ತನ್ನ ಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಕನ್ನಡಕವನ್ನು ತಯಾರಿಸಿದ್ದಾನೆ. ಅವನ ಇತ್ತೀಚಿನ ಆವಿಷ್ಕಾರವು ಎರಡು ಮಾದರಿಗಳಲ್ಲಿ ಬರುತ್ತದೆ: ಒಂದು ಅಲ್ಟ್ರಾಸಾನಿಕ್ ಸಂವೇದಕ ಮತ್ತು ಬಜರ್ ಒಳಗೊಂಡಿದೆ-ಇದು ದೃಷ್ಟಿಹೀನ ಜನರಿಗೆ, ಮತ್ತು ಇನ್ನೊಂದು ದೃಷ್ಟಿಹೀನ ಮತ್ತು ಶ್ರವಣದೋಷವುಳ್ಳ ಜನರಿಗಾಗಿ ಅಲ್ಟ್ರಾಸಾನಿಕ್ ಸಂವೇದಕ, ಬಜರ್ ಮತ್ತು ವೈಬ್ರೇಟರ್ ಮೋಟರ್ ಅನ್ನು ಒಳಗೊಂಡಿದೆ.
ಪ್ರಿಯಬ್ರತಾ ಒಡಿಶಾಬೈಟ್ಸ್ ಜೊತೆ ಮಾತನಾಡುತ್ತಾ,
“ನಾನು ಜಿಪಿಎಸ್ ಮೋಟಾರ್ ಮತ್ತು ಸ್ಪೀಕರ್ ಅನ್ನು ಅಳವಡಿಸುವ ಮೂಲಕ ಕನ್ನಡಕವನ್ನು ನವೀಕರಿಸಲು ಬಯಸುತ್ತೇನೆ. ಕನ್ನಡಕವನ್ನು ನಂತರ ಗೂಗಲ್ ನಕ್ಷೆಗೆ ಜೋಡಿಸಿ ಮತ್ತು ಧ್ವನಿ-ನಿಯಂತ್ರಿತವಾಗಿರುವ ಹಾಗೆ ಮಾಡಿ, ಒಬ್ಬ ವ್ಯಕ್ತಿಯು ವಿಳಾಸವನ್ನು ಹಾಕಿದ ನಂತರ, ಅವರಿಗೆ ಸ್ವಯಂಚಾಲಿತವಾಗಿ ಮಾರ್ಗದರ್ಶನ ನೀಡುವ ಹಾಗೆ ಮಾಡುವುದು ನನ್ನ ಮುಂದಿನ ಗುರಿ,” ಎಂದನು.
ಪ್ರಿಯಬ್ರತಾನ ಶಿಕ್ಷಕರು ವಿದ್ಯಾರ್ಥಿಯು ತಮ್ಮ ಬಳಿ ಬಂದು ಶಾಲೆಯ ಪ್ರಯೋಗಾಲಯದಲ್ಲಿ ದೃಷ್ಟಿಹೀನ ಜನರಿಗೆ ಏನನ್ನಾದರೂ ಅಭಿವೃದ್ಧಿಪಡಿಸುವ ಸಾಧ್ಯತೆಗಳ ಬಗ್ಗೆ ಕೇಳಿದನು. ದೃಷ್ಟಿ ಮತ್ತು ಶ್ರವಣದೋಷವುಳ್ಳ ಜನರಿಗೆ ಪರಿಹಾರಗಳನ್ನು ನೀಡುವಲ್ಲಿ ಅವನ ಆಸಕ್ತಿ ಯಾವ ಮಟ್ಟಕ್ಕೆ ಇದೆ ಎಂದರೆ, ಅವರು ಶಾಲೆಯ ಸಮಯ ಮುಗಿದರು ತನ್ನ ಸಮವಯಸ್ಕರ ಹಾಗೆ ಆಟಕ್ಕೆ ಹೋಗದೆ ಶಾಲೆಯಲ್ಲಿಯೇ ಇರುತ್ತಾನೆ ಮತ್ತು ಭಾನುವಾರದಂದು ಸಹ ಅವನ ಯೋಜನೆಯ ಮೇಲೆ ಕೆಲಸ ಮಾಡುತ್ತಾನೆ.
ಕನ್ನಡಕವನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಇನ್ನಷ್ಟು ಉತ್ತಮವಾಗಿಸಲು, ಪ್ರಿಯಬ್ರತಾ ಪುಸ್ತಕಗಳ ಮೂಲಕ ಮತ್ತು ಶಿಕ್ಷಕರ ಕೆಲವು ಸಹಾಯದಿಂದ ಸಂವೇದಕ-ಚಾಲಿತ ಮೋಟರ್‌ಗಳ ಬಗ್ಗೆ ಅರ್ಥೈಸಿಕೊಂಡನು. ಇವನ ಮುಂದಿನ ಹಂತವು ಕನ್ನಡಕಕ್ಕೆ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸುವುದಾಗಿದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.