Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಕರೊನಾವೈರಸ್: ಕೋವಿಡ್-19 ಹೆದರಿಕೆಯ ಮಧ್ಯೆ ಕೇರಳ ಸರ್ಕಾರ ಮನೆ ಮನೆಗೆ ಮಧ್ಯಾಹ್ನದ ಬಿಸಿಯೂಟವನ್ನು ತಲುಪಿಸುತ್ತಿದೆ

ಕೇರಳದ ಮುಖ್ಯ ಮಂತ್ರಿ ಪಿಣಿರಾಯಿ ವಿಜಯನ್ ತಮ್ಮ ರಾಜ್ಯದಲ್ಲಿ ಕರೊನಾವೈರಸ್ ಎಲ್ಲೆಡೆ ಹರಡಿ ಆತಂಕದ ವಾತಾವರಣ ಸೃಷ್ಟಿಸಿದ್ದರೂ, ರಾಜ್ಯದ ನರ್ಸರಿ ಮಕ್ಕಳ ಮನೆಗೆ ತೆರಳಿ ಮದ್ಯಾಹ್ನದ ಬಿಸಿಊಟವನ್ನು ನೀಡುವ ವ್ಯವಸ್ಥೆ ಮಾಡಿದ್ದಾರೆ.

ಕರೊನಾವೈರಸ್: ಕೋವಿಡ್-19 ಹೆದರಿಕೆಯ ಮಧ್ಯೆ ಕೇರಳ ಸರ್ಕಾರ ಮನೆ ಮನೆಗೆ ಮಧ್ಯಾಹ್ನದ ಬಿಸಿಯೂಟವನ್ನು ತಲುಪಿಸುತ್ತಿದೆ

Tuesday March 17, 2020 , 2 min Read

ಕೇರಳ ರಾಜ್ಯ ಸರ್ಕಾರವು ಕರೋನವೈರಸ್ ಹರಡುವಿಕೆಯನ್ನು ತಗ್ಗಿಸುವ ಕ್ರಮಗಳನ್ನು ಪೂರ್ವಭಾವಿಯಾಗಿ ಜಾರಿಗೊಳಿಸುತ್ತಿದೆ. ಕೇರಳವನ್ನು ಭಾರತದಲ್ಲಿ ಕರೋನವೈರಸ್ ಹೆಚ್ಚು ಪರಿಣಾಮ ಬೀರುವಂತೆ ಮಾಡಿದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಾಗ ಶಾಲೆಗಳು, ಮದರಸಾಗಳು ಮತ್ತು ಅಂಗನವಾಡಿಗಳನ್ನು ಸ್ಥಗಿತಗೊಳಿಸಲು ಸರ್ಕಾರ ಕೂಡಲೇ ಆದೇಶಿಸಿತು. ಕೇರಳದಲ್ಲಿ ಈವರೆಗೆ 22 ವೈರಸ್ ಪ್ರಕರಣಗಳು ವರದಿಯಾಗಿವೆ.


(ಚಿತ್ರಕೃಪೆ: ಇಂಡಿಯಾ ಟೈಮ್ಸ್)




ಮೂರು ಜನರು ವೈರಸ್‌ಗೆ ತುತ್ತಾಗಿರುವುದನ್ನು ಪರೀಕ್ಷೆಯ ಮುಲಕ ದೃಢ ಪಡಿಸಿದ ನಂತರ, ಫೆಬ್ರವರಿ 3 ರಂದು ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ರೋಗಿಗಳನ್ನು ಪ್ರತ್ಯೇಕ ವಾರ್ಡ್‌ಗಳಲ್ಲಿ ವೀಕ್ಷಣೆಯಲ್ಲಿ ಇಡಲಾಯಿತು


ಇದಲ್ಲದೆ, ಸಮಾರಂಭಗಳನ್ನು ತಪ್ಪಿಸಲು ಸಿನೆಮಾ ಹಾಲ್‌ಗಳು ಮತ್ತು ಪ್ರಮುಖ ಪ್ರವಾಸಿ ಆಕರ್ಷಣೆಗಳನ್ನು ಮುಚ್ಚಲಾಗಿದೆ. ಮತ್ತೊಂದು ಶ್ಲಾಘನೀಯ ಕ್ರಮದಲ್ಲಿ, ತನ್ನ ನಾಗರಿಕರ ಕಲ್ಯಾಣಕ್ಕೆ ಆದ್ಯತೆ ನೀಡಿ, ಸರ್ಕಾರವು ತನ್ನ ಅಂಗನವಾಡಿ ಮಕ್ಕಳ ಮನೆಗಳಿಗೆ ಮಧ್ಯಾಹ್ನದ ಬಿಸಿಊಟವನ್ನು ತಲುಪಿಸಲು ನಿರ್ಧರಿಸಿತು.


ಮಧ್ಯಾಹ್ನದ ಊಟವು ಅಕ್ಕಿ, ಬೇಳೆಕಾಳುಗಳು, ತರಕಾರಿಗಳು, ಮೊಟ್ಟೆ, ಬಾಳೆಹಣ್ಣು ಮತ್ತು ವಾರಕ್ಕೆ ಎರಡು ಬಾರಿ 150 ಎಮ್‌ ಎಲ್‌ ಹಾಲನ್ನು ಒಳಗೊಂಡಿದೆ - ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನ ಯೋಜನೆಯಾಗಿದೆ.


"ಅಂಗನವಾಡಿಗಳನ್ನು ಮುಚ್ಚಲಾಗಿರುವುದರಿಂದ, ಈ ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕ ಆಹಾರವನ್ನು ಅವರಿಗೆ ಒದಗಿಸುವಂತೆ ನೋಡಿಕೊಳ್ಳಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ," ಎಂದು ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವ ಕೆ.ಕೆ.ಶೈಲಜಾ ಹೇಳಿದ್ದಾರೆ, ವರದಿ ದಿ ಲಾಜಿಕಲ್ ಇಂಡಿಯನ್.


ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಮುಖ ಪಾತ್ರ ವಹಿಸಿದ್ದರು. ನರ್ಸರಿಯಿಂದ ಏಳನೇ ತರಗತಿಯವರೆಗೆ ಶಾಲಾ ಮಕ್ಕಳಿಗೆ ಆಹಾರವನ್ನು ನೀಡುವ ರಾಜ್ಯದ ಜವಾಬ್ದಾರಿಯ ಮೇಲೆ ಕಾರ್ಯನಿರ್ವಹಿಸುವುದು ಇವರ ಆಲೋಚನೆ.


ಕೇರಳದಾದ್ಯಂತ 33,115 ಅಂಗನವಾಡಿ ಕೇಂದ್ರಗಳಲ್ಲಿ 3.75 ಲಕ್ಷ ಮಕ್ಕಳು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗಿದೆ. ಈಗಾಗಲೇ ಸುಮಾರು ಮೂರು ಲಕ್ಷ ಹಾಲುಣಿಸುವ ತಾಯಂದಿರು, ಎರಡು ಲಕ್ಷ ಹದಿಹರೆಯದವರು ಮತ್ತು ಮೂರು ವರ್ಷದೊಳಗಿನ 4.75 ಲಕ್ಷ ಮಕ್ಕಳಿಗೆ ಪೌಷ್ಠಿಕಾಂಶದ ಸೇವೆಗಳನ್ನು ಒದಗಿಸಲಾಗಿದೆ. ಈಗಿನಂತೆ, ರಾಜ್ಯದಲ್ಲಿ ಸುಮಾರು 13.5 ಲಕ್ಷ ಜನರಿಗೆ ಈ ಸೇವೆಗಳನ್ನು ಒದಗಿಸಲಾಗುತ್ತಿದೆ.


"ವೈರಸ್ ಮತ್ತು ಇತರ ಸೋಂಕುಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ರಾಜ್ಯ ಹೊಂದಿದೆ," ಎಂದು ವೈರಾಲಜಿಸ್ಟ್ ಡಾ. ಶಾಹಿದ್ ಜಮೀಲ್ ದಿ ವೀಕ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.


ಈಗಿನಂತೆ, ಸೋಂಕಿತ ಮೂವರೂ ಚೇತರಿಸಿಕೊಂಡಿದ್ದಾರೆ. ಈ ವೈರಸ್ ಅನ್ನು ಪಳಗಿಸುವ ಮತ್ತು ಅರ್ಥಮಾಡಿಕೊಳ್ಳುವಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಕ್ಕಾಗಿ ಕೇರಳಕ್ಕೆ ಪ್ರಶಂಸೆ ಎಲ್ಲೆಡೆಯಿಂದ ಬಂದಿದೆ.