ಕೊರೋನಾ ವೈರಸ್‌ನಿಂದಾಗಿ 25,000 ಜನರ ಸಾವು, 1.54 ಲಕ್ಷ ದಾಟಿದ ಸೋಂಕಿತರ ಸಂಖ್ಯೆ : ಟೆನ್ಸೆಂಟ್ ವರದಿ

ಅಲಿಬಾಬಾ ಸಂಸ್ಥಾಪಕ ಜಾಕ್ ಮಾ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಮತ್ತು ಚೀನಾದ ಟೆಕ್ ಕಂಪನಿಗಳಾದ ಬೈಟ್‌ಡ್ಯಾನ್ಸ್, ಟೆನ್ಸೆಂಟ್ ಮತ್ತು ಹುವಾವೇ ಕಂಪನಿಗಳು ಕರೋನವೈರಸ್ ಎದುರಿಸಲು ಹಣಕಾಸಿನ ನೆರವಿನೊಂದಿಗೆ ಮುಂದೆ ಬಂದಿವೆ.

ಕೊರೋನಾ ವೈರಸ್‌ನಿಂದಾಗಿ 25,000 ಜನರ ಸಾವು, 1.54 ಲಕ್ಷ ದಾಟಿದ ಸೋಂಕಿತರ ಸಂಖ್ಯೆ : ಟೆನ್ಸೆಂಟ್ ವರದಿ

Thursday February 06, 2020,

2 min Read

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತಂಕಗಳ ಮಧ್ಯೆ, ಚೀನಾದಲ್ಲಿ ಕೊರೊನಾವೈರಸ್ ಗೆ ತುತ್ತಾದವರ ಸಾವಿನ ಸಂಖ್ಯೆ, ಅಧಿಕೃತ ವರದಿಯಲ್ಲಿ ಪ್ರಕಟವಾದ ಸಾವಿನ ಸಂಖ್ಯೆಗಿಂತ ಹೆಚ್ಚಿನದಾಗಿರಬಹುದು ಎಂದು ಸಾರುವ ವರದಿಯೊಂದು ಲಭ್ಯವಾಗಿದೆ.


ಗುರುವಾರ ಬೆಳಿಗ್ಗೆಯವರೆಗೆ, ವುಹಾನ್ ಪ್ರಾಂತ್ಯದಲ್ಲಿ ಈ ಸಾಂಕ್ರಾಮಿಕ ರೋಗದಿಂದ 560 ಜನ ಮರಣಹೊಂದಿದ್ದಾರೆ ಎಂದು ವರದಿಯಾಗಿದ್ದರೆ, ಇನ್ನೂ 28,000 ಜನರು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆಂದು ಹೇಳಲಾಗಿತ್ತು.



ಆದರೆ ಈಗ, ತೈವಾನ್ ನ್ಯೂಸ್ ವರದಿಯು ವೈರಸ್ ಹೆಚ್ಚು ಗಂಭೀರವಾಗಿರಬಹುದು ಎಂದು ಸೂಚಿಸುತ್ತಿದೆ. ಚೀನಾದ ಟೆಕ್ ಕಂಪೆನಿ ಟೆನ್ಸೆಂಟ್‌ನಿಂದ ಪಡೆದುಕೊಂಡ ವರದಿಯಲ್ಲಿ ಉಲ್ಲೇಖಿಸಿಸುರುವಂತೆ,


"ಕೊರೊನಾವೈರಸ್‌ನಿಂದ ಸಂಭವಿಸಿದ ಒಟ್ಟು ಸಾವುಗಳ ಸಂಖ್ಯೆ ಈಗಾಗಲೇ 24,589 ಕ್ಕೆ ಏರಿದೆ ಎಂದು ಹೇಳುತ್ತದೆ, ಚೀನಾ ಸರಕಾರದ ವರದಿಯಲ್ಲಿ ಸೋಂಕಿತರ ಸಂಖ್ಯೆ 28,000 ಎಂದು ದಾಖಲಾಗಿದೆ. ಆದರೆ, ಟೆನ್ಸೆಂಟ್ ವೆಬ್‌ಸೈಟ್ ಒಟ್ಟು 154,023 ಪ್ರಕರಣಗಳನ್ನು ಪಟ್ಟಿ ಮಾಡಿದೆ, ಇದು ಅಧಿಕೃತ ಸಂಖ್ಯೆಗಳಿಗಿಂತ ಹತ್ತು ಪಟ್ಟು ಹೆಚ್ಚಾಗಿದೆ.”


ಇದಲ್ಲದೆ, ಒಟ್ಟಾರೆ ಶಂಕಿತ ಪ್ರಕರಣಗಳು 79,808 ಎಂದು ವರದಿಯಾಗಿದೆ ಮತ್ತು ಗುಣಪಡಿಸಿದ ಪ್ರಕರಣಗಳ ಸಂಖ್ಯೆ 269 ಎಂದು ಹೇಳಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಧಿಕೃತ ಮಾಹಿತಿಯ ಪ್ರಕಾರ ಗುಣಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ 300 ಆಗಿರುವವುದು.


ತೈವಾನ್ ನ್ಯೂಸ್ ಪ್ರಕಾರ, ಈ ಡೇಟಾವು ಟೆನ್ಸೆಂಟ್‌ನಿಂದ ಬಂದಿದೆ - ಕಂಪನಿಯು ಅದನ್ನು "ಸಾಂಕ್ರಾಮಿಕ ಪರಿಸ್ಥಿತಿ ಟ್ರ್ಯಾಕರ್" ಎಂಬ ಶೀರ್ಷಿಕೆಯ ಅಡಿಯಲ್ಲಿ ತನ್ನ ವೆಬ್‌ಪುಟದಲ್ಲಿ ಹಂಚಿಕೊಂಡಿದೆ - ಮತ್ತು ಚೀನಾದಲ್ಲಿ ಕೋರೋನಾ ಏಕಾಏಕಿ ಹರಡಿರುವ ವಾಸ್ತವಿಕ ವ್ಯಾಪ್ತಿಯು ಏನೆಂದು ಕಂಪನಿಯು ಆಕಸ್ಮಿಕವಾಗಿ ಬಹಿರಂಗಪಡಿಸಿರಬಹುದು.


ಈ ಅಂಕಿಅಂಶಗಳನ್ನು ಪ್ರಕಟಿಸಿದ ಕೆಲವೇ ನಿಮಿಷಗಳಲ್ಲಿ, ಚೀನಾದ ಸರ್ಕಾರವು ಅನುಮೋದಿಸಿದಂತೆ ಅಧಿಕೃತ ಸಂಖ್ಯೆಗಳನ್ನು ಪ್ರತಿಬಿಂಬಿಸಲು ಟೆನ್ಸೆಂಟ್ ತನ್ನ ವೆಬ್‌ಪುಟವನ್ನು ನವೀಕರಿಸಿದೆ ಎಂದು ವರದಿಯಾಗಿದೆ.


ಡಬ್ಲ್ಯುಎಚ್‌ಒ ಪ್ರಕಾರ, ಕೊರೊನಾವೈರಸ್ ಸುದ್ದಿ ಚೀನಾದ ವುಹಾನ್‌ನಿಂದ 31 ಡಿಸೆಂಬರ್ 2019 ರಂದು ಮೊದಲು ವರದಿಯಾಗಿದೆ. ಅಂದಿನಿಂದ, ಸಾಂಕ್ರಾಮಿಕ ರೋಗವು ಜಾಗತಿಕವಾಗಿ ಉದ್ದಗಲಕ್ಕೂ ಹರಡಿತು ಮತ್ತು ಪ್ರಪಂಚದಾದ್ಯಂತದ ವ್ಯಾಪಾರ ಮತ್ತು ಪ್ರಯಾಣದ ಮೇಲೆ ಪರಿಣಾಮ ಬೀರಿದೆ. ಈ ವೈರಸ್ ಹರಡುವುದನ್ನು ತಡೆಗಟ್ಟಲು, ಹಲವಾರು ಜಾಗತಿಕ ದೈತ್ಯರು ಮತ್ತು ಉದ್ಯಮಿಗಳು ಮತ್ತು ಬಳಕೆದಾರರು ಸಹ ಮುಂದೆ ಬಂದಿದ್ದಾರೆ.


ಸೊಂಕಿನ ಪತ್ತೆಗೆ ಮತ್ತು ಚಿಕಿತ್ಸೆಗೆ ಸಹಾಯ ಮಾಡಲು ಗಮನಾರ್ಹ ಮೊತ್ತವನ್ನು ದಾನ ಮಾಡಿದ್ದಾರೆ. ಈ ವ್ಯಕ್ತಿಗಳು ಮತ್ತು ಕಂಪನಿಗಳಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ಕೆಲವು ಹೆಸರುಗಳಾದ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್, ಮತ್ತು ಚೀನೀ ಟೆಕ್ ಕಂಪನಿಗಳಾದ ಬೈಟ್‌ಡ್ಯಾನ್ಸ್, ಟೆನ್ಸೆಂಟ್ ಮತ್ತು ಹುವಾವೇ ಯು ಸೇರಿವೆ.