ಕೊರೊನಾವೈರಸ್:‌ ಗಾಯಗೊಂಡ ತಂದೆಯೊಡನೆ 15ರ ಯುವತಿಯ 1,200 ಕಿ.ಮೀ. ಸೈಕಲ್‌ ಪ್ರಯಾಣ

ಜ್ಯೋತಿ ಮತ್ತು ಗಾಯಗೊಂಡ ಅವಳ ತಂದೆ ಮೇ 10 ಕ್ಕೆ ದೆಹಲಿಯಿಂದ ಸೈಕಲ್‌ ಮೇಲೆ ಹೊರಟು, ಮೇ 16 ರಂದು ಬಿಹಾರದ ದರ್ಭಾಂಗಾ ಹಳ್ಳಿಗೆ ತಲುಪಿದರು.

ಕೊರೊನಾವೈರಸ್:‌ ಗಾಯಗೊಂಡ ತಂದೆಯೊಡನೆ 15ರ ಯುವತಿಯ 1,200 ಕಿ.ಮೀ. ಸೈಕಲ್‌ ಪ್ರಯಾಣ

Friday May 22, 2020,

2 min Read

ಲಾಕ್‌ಡೌನ್‌ ದಿನಗೂಲಿ ಕಾರ್ಮಿಕರನ್ನು, ವಲಸೆ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದೆ. ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದ್ದರಿಂದ ಇವರಲ್ಲಿ ಹಲವರು ನೂರಾರು ಕಿ. ಮೀ. ನಡೆದುಕೊಂಡೆ ಊರು ಸೇರಲು ಪ್ರಯತ್ನಿಸಿದ್ದಾರೆ.


ಆದರೆ ಲಾಕ್‌ಡೌನ್‌ನ ನಾಲ್ಕನೇ ಹಂತದಲ್ಲಿ ಭಾರತ ಸರ್ಕಾರ ಹಲವಾರು ಷರತ್ತುಗಳನ್ನು ಸಡಿಲಗೊಳಿಸಿ, ರೈಲು ಮತ್ತು ಬಸ್ಸಿನ ಮೂಲಕ ಜನರು ಪ್ರಯಾಣಿಸಿ ತಮ್ಮ ಊರುಗಳಿಗೆ ಸೇರಲು ಅವಕಾಶ ಮಾಡಿಕೊಟ್ಟಿತು.


ಆದರೆ ಇದಕ್ಕೂ ಮೊದಲು, ಗಾಯಗೊಂಡ ತನ್ನ ತಂದೆಯನ್ನು ಸೈಕಲ್‌ ಮೇಲೆ ಕೂರಿಸಿಕೊಂಡು ಯುವತಿಯೊಬ್ಬಳು ದೆಹಲಿಯಿಂದ ಬಿಹಾರನ ದರ್ಭಂಗಾ ಗೆ ಪ್ರಯಾಣಿಸಿದ್ದಾಳೆ. ಸಾರಿಗೆ ಸಂಪರ್ಕವಿರದ ಕಾರಣ 15 ವರ್ಷದ ಯುವತಿ ಮೇ 10 ರಂದು 1,200 ಕಿ ಮೀ ಪ್ರಯಾಣಿವನ್ನು ಸೈಕಲ್‌ನಲ್ಲೇ ಮಾಡಲು ನಿರ್ಧರಿಸಿದಳು.


ದರ್ಭಾಂಗಾದಲ್ಲಿ ತನ್ನ ತಂದೆಯೊಂದಿಗೆ ಜ್ಯೋತಿ (ಚಿತ್ರ: ನ್ಯೂಸ್ಡ್‌)




500 ರೂ ಖರ್ಚು ಮಾಡಿ ಕೊಂಡ ಸೈಕಲ್‌ನಲ್ಲಿ ಇವರಿಬ್ಬರೂ ಪ್ರಯಾಣಿಸಿದ್ದಾರೆ. ಆಟೋ ಓಡಿಸುವ ತಂದೆಗೆ ಕಾಲಿಗೆ ಗಾಯವಾಗಿದ್ದರಿಂದ ತಮ್ಮ ಮಗಳಿಗೆ ಸಹಾಯ ಮಾಡಲಾಗಿಲ್ಲ. ಅದಕ್ಕಾಗಿ ಯುವತಿಯೊಬ್ಬಳೇ ಸೈಕಲ್‌ ತುಳಿದಿದ್ದಾಳೆ.


ನಗರದಲ್ಲಿ ಅವರು ಒಂದು ಕೋಣೆಯಲ್ಲಿ ವಾಸವಾಗಿದ್ದರು, ಆದರೆ ಹಣದ ಅಭಾವದಿಂದ ಬಾಡಿಗೆ ಕೊಡಲಾಗದೆ ಊರಿಗೆ ಮರಳುವ ಯೋಚನೆ ಮಾಡಿದ್ದಾರೆ. ದೆಹಲಿಯಿಂದ ಹೊರಟಿದ್ದ ಟ್ರಕ್‌ ಚಾಲಕನೊಬ್ಬರನ್ನು ಊರಿಗೆ ಬಿಡುವಂತೆ ಕೇಳಿದ್ದರು, ಆದರೆ ಬಿಹಾರದವರೆಗೂ ಹೋಗಲು 6,000 ರೂ ಕೇಳಿದ್ದರಿಂದ ಬೇಡವೆಂದಿದ್ದಾರೆ.


“ದೆಹಲಿ ಬಿಟ್ಟಾಗ ನಮ್ಮ ಹತ್ತಿರ ಕೇವಲ 600 ರೂ ಇತ್ತು. ಹಗಲು ರಾತ್ರಿ ಎನ್ನದೆ ನಾನು ಸೈಕಲ್‌ ತುಳಿಯುತ್ತಿದ್ದೆ. ರಾತ್ರಿ ಪೆಟ್ರೋಲ್‌ ಬಂಕ್‌ಗಳಲ್ಲಿ 2 3 ಗಂಟೆ ವಿರಾಮ ತೆಗೆದುಕೊಳ್ಳುತ್ತಿದ್ದೇವು. ಬಹುತೇಕವಾಗಿ ನಾವು ಊಟವನ್ನು ವಿಶ್ರಾಂತಿ ಧಾಮಗಳಲ್ಲಿ ಮಾಡಿದ್ದೇವೆ ಮತ್ತು ಕೆಲವರು ನಮಗೆ ದಾರಿಯಲ್ಲೆ ಆಹಾರ ನೀಡಿದರು,” ಎನ್ನುತ್ತಾರೆ ಜ್ಯೋತಿ, ವರದಿ ಶಿದಿಪೀಪಲ್.‌


ಹೈವೇಗಳಲ್ಲಿ ಚಲಿಸುವಾಗ ಯಾವುದಾದರೂ ಗಾಡಿಯಿಂದ ಅಪಘಾತ ಆಗಬಹುದೆಂಬುದೇ ಜ್ಯೋತಿಯವರ ಚಿಂತೆಯಾಗಿತ್ತು.


“ರಾತ್ರಿ ಸೈಕಲ್‌ ಹೊಡಿಯಲು ನನಗೆ ಭಯವಾಗುತ್ತಿರಲಿಲ್ಲ, ದಾರಿಯಲ್ಲಿ ನೂರಾರು ವಲಸಿಗರು ನಡೆದುಕೊಂಡು ಹೋಗುತ್ತಿರುತ್ತಿದ್ದರು. ನಮಗಿದ್ದ ಒಂದೇ ಕಾಳಜಿಯೆಂದರೆ ಅದು ರಸ್ತೆ ಅಪಘಾತ, ಅದೃಷ್ಟದಿಂದ ನಮಗ್ಯಾವುದೇ ತೊಂದರೆ ಆಗಲಿಲ್ಲ,” ಎಂದರು ಜ್ಯೋತಿ.


ಮೇ 16 ರಂದು ತಮ್ಮ ಹಳ್ಳಿ ದರ್ಭಾಂಗಾವನ್ನು ತಲುಪಿದಾಗ ಹಳ್ಳಿಗರು ಸೈಕಲ್‌ನಲ್ಲಿ ಅಪ್ಪ ಮಗಳು ಬಂದಿದ್ದನ್ನು ನೋಡಿ ಆಶ್ಚರ್ಯಗೊಂಡು ತಕ್ಷಣ ಆಹಾರ ಮತ್ತು ನೀರನ್ನು ನೀಡಿದ್ದಾರೆ. ಮರುದಿನ ಅವರನ್ನು ಸಿರಹುಲ್ಲಿ ಸರ್ಕಾರಿ ಶಾಲೆಯಲ್ಲಿ ತಪಾಸಣೆ ಮಾಡಲಾಗಿದೆ.