ಬೆಂಗಳೂರಿನಲ್ಲಿ ಲಾಕ್‌ಡೌನ್ ಆಗಿರುವ ಕೊಳಗೇರಿ‌‌ ಸಿವಾಸಿಗಳಿಗೆ ಆಹಾರ ಒದಗಿಸುತ್ತಿದೆ ಈ ಎನ್‌ಜಿಒ

ಯುನೈಟೆಡ್ ಫೌಂಡೇಶನ್ ಸಂಸ್ಥೆಯು ಸರ್ಕಾರವು ಲಾಕ್‌ಡೌನ್ ಅನ್ನು ಘೋಷಿಸಿದ ಕೂಡಲೇ ಮರ್ಸಿ ಕಿಚನ್‌ಗಳನ್ನು ಸ್ಥಾಪಿಸಿ ಜನರಿಗೆ ಆಹಾರವನ್ನು ವಿತರಿಸಲು ಪ್ರಾರಂಭಿಸಿತು.

ಬೆಂಗಳೂರಿನಲ್ಲಿ ಲಾಕ್‌ಡೌನ್ ಆಗಿರುವ ಕೊಳಗೇರಿ‌‌ ಸಿವಾಸಿಗಳಿಗೆ ಆಹಾರ ಒದಗಿಸುತ್ತಿದೆ ಈ ಎನ್‌ಜಿಒ

Wednesday April 01, 2020,

2 min Read

ಜನರ ಮನಸ್ಸಿನಲ್ಲಿ ನೊವೆಲ್ ಕೊರೊನ ವೈರಸ್‌ನ ಕುರಿತಾದ ಭೀತಿ ಹೆಚ್ಚಾಗಿ ಕಂಡು ಬರುತ್ತಿದೆ.‌ ಈ ಸಾಂಕ್ರಾಮಿಕ ರೋಗದಿಂದ ಬದುಕುಳಿಯುವುದು ಕಷ್ಟ ಎಂದು ಭಾವಿಸಿದ್ದಾರೆ. ಆದರೆ, ನಿಮ್ಮ‌‌ ದೈನಂದಿನ ಆದಾಯದ ಮೂಲವನ್ನು ತೆಗೆದುಕೊಂಡರೆ, ಆಹಾರ ಮತ್ತು ಆಶ್ರಯವನ್ನು ‌ಕಂಡು ಕೊಳ್ಳುವುದು ಕಷ್ಟವಾಗುತ್ತದೆ. ಕೆಲವೊಂದಿಷ್ಟು ಜನರು ಅಗತ್ಯ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವಷ್ಟು ಶಕ್ತರಾಗಿರುತ್ತಾರೆ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ.


ಮನುಷ್ಯನ ಉಳಿವಿಕೆಗಾಗಿ ಆಹಾರವು ಅತ್ಯಂತ ಮೂಲಭೂತ‌‌ ಅವಶ್ಯಕತೆಯಾಗಿದೆ. ಅದಕ್ಕಾಗಿಯೇ ದ ಯುನೈಟೆಡ್ ಫೌಂಡೇಶನ್ (ಟಿಯುಎಫ್) ಅಗತ್ಯವಿರುವವರಿಗೆ ಸೇವೆ ಸಿಗುವಂತಾಗಲು ಅನೇಕ ಉಪಕ್ರಮಗಳನ್ನು ಪ್ರಾರಂಭಿಸಿದೆ.


2008ರಲ್ಲಿ ಸ್ಥಾಪನೆಯಾದ ಬೆಂಗಳೂರು ಮೂಲದ ಟಿಯುಎಫ್ ಸರ್ಕಾರಿ ನೋಂದಾಯಿತವಾದ ಒಂದು‌ ಲಾಭರಹಿತ ಸಂಸ್ಥೆಯಾಗಿದೆ. ಈ ತಂಡವು ಆಹಾರ ನೆರವು, ಆಶ್ರಯ, ಸಮುದಾಯ ನೈರ್ಮಲ್ಯ, ತುರ್ತು ಪರಿಹಾರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ‌ ಮಾಡುವಂತಹ ಉತ್ಸಾಹಿತ ಯುವ ಜನತೆಯನ್ನು ಒಳಗೊಂಡಿದೆ.


ಕೋವಿಡ್-19 ಒಂದು ಸಾಂಕ್ರಾಮಿಕ ರೋಗ ಎಂಬ ಘೋಷಣೆಯ ನಂತರ, ಟಿಯುಎಫ್ ತನ್ನ ಪ್ರಸ್ತುತ ಉಪಕ್ರಮಗಳಾದ ಮರ್ಸಿ ಕಿಟ್‌ಗಳ ವಿತರಣೆ ಮತ್ತು ಮರ್ಸಿ ಕಿಚನ್‌ನ ಬಳಕೆ ಇವೆರಡರ ಮೇಲೆ ಪೂರ್ಣವಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ.


ಯುನೈಟೆಡ್ ಫೌಂಡೇಶನ್: ಆಹಾರ ವಿತರಣೆ ಮತ್ತು ತಯಾರಿಕೆ




ಮರ್ಸಿ ಕಿಟ್‌ನಲ್ಲಿ‌ ಮೂಲಭೂತವಾಗಿ ಅಕ್ಕಿ,‌ ಗೋಧಿ, ಬೇಳೆ, ಎಣ್ಣೆ, ಸಕ್ಕರೆ, ರವೆ ಮತ್ತು ಹೆಚ್ಚಿನ ಅಗತ್ಯ ವಸ್ತುಗಳನ್ನು ಒಳಗೊಂಡಂತಹ ಪಡಿತರ ಕಿಟ್‌ ಆಗಿದೆ. ಈ ಕಿಟ್‌ಗಳನ್ನು ಟಿಯುಎಫ್‌ನ ದೀರ್ಘಕಾಲದ ಮಾರಾಟಗಾರರಿಂದ ಸಂಗ್ರಹಿಸಲಾಗಿದ್ದು, ಪ್ರತಿ ಕಿಟ್‌ನ ಮೌಲ್ಯ 1,500 ರೂ ಇದ್ದು, ಮುಂದಿನ ಎರಡು ತಿಂಗಳಲ್ಲಿ‌ ಪ್ರತಿ ಸ್ಲಂ ಪ್ರದೇಶಕ್ಕೂ 30,000 ಕಿಟ್‌ಗಳನ್ನು ನೀಡುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ. ಸಾಮಾಜಿಕ ಮಾಧ್ಯಮಗಳ ಮೂಲಕವಾಗಿ ಕ್ರೌಢ ಫಂಡಿಂಗ್ ಮತ್ತು ವ್ಯಕ್ತಿಗಳಿಂದ ದೇಣಿಗೆ ಮತ್ತು ಸ್ವಯಂಸೇವಕರ ನೆಟ್‌ವರ್ಕ್‌ನಿಂದಾಗಿ ಈ ಯೋಜನೆಯನ್ನು ನಡೆಸಲಾಗುತ್ತಿದೆ.


ಕಳೆದ 11 ವರ್ಷಗಳಿಂದ ಡಿಜೆ ಹಳ್ಳಿ, ಇಜಿಪುರ ಮತ್ತು ಬೊಮ್ಮನಹಳ್ಳಿಯ ಪ್ರಮುಖ ಕೊಳಗೇರಿ ಪ್ರದೇಶಗಳ ಜನಸಂಖ್ಯೆ ಹಾಗೂ ಆ ವಾತಾವರಣದ ಕುರಿತಾಗಿ ಟಿಯುಎಫ್ ತಿಳಿದುಕೊಂಡಿದೆ. ಪ್ರತಿ ಕೊಳಗೇರಿ ಪ್ರದೇಶದಲ್ಲೂ ಕನಿಷ್ಟ 30,000 ಕುಟುಂಬ ನೆಲೆ ನಿಂತಿದೆ ಎಂದು ಹೇಳಲಾಗುತ್ತದೆ. 300ಕ್ಕೂ ಹೆಚ್ಚು ಸ್ವಯಂ ಸೇವಕರು ಈ ಸಂಸ್ಥೆಯಲ್ಲಿದ್ದು, ಅಂಗವಿಕಲರು, ನಿರಾಶ್ರಿತರು, ಹಿರಿಯ ನಾಗರಿಕರು, ಅನಾಥರನ್ನು ಬೆಂಬಲಿಸುವ ಉದ್ದೇಶವನ್ನು ಟಿಯುಎಫ್ ಹೊಂದಿದೆ.


"ದೈನಂದಿನ ಕೂಲಿ ಕಾರ್ಮಿಕರು ಮತ್ತು ಅತ್ಯಂತ ದುರ್ಬಲರಿಗೆ ಸಹಾಯದ ಅವಶ್ಯಕತೆಯಿದ್ದು, ಸಾಮೂಹಿಕ ಪ್ರಯತ್ನಿಸುವಿಕೆ ಈ ಸಮಯದ ಅವಶ್ಯಕತೆಯಾಗಿದೆ," ಎಂದು ಯುನೈಟೆಡ್ ಫೌಂಡೇಶನ್‌ನ ಸಂಸ್ಥಾಪಕ ಡಾ.ಹಬೀಬ್ ಹೇಳುತ್ತಾರೆ.


ಯೋಜನೆಯ ಪ್ರಮುಖ ಫಲಾನುಭವಿಗಳೆಂದರೆ, ಹಣ್ಣು‌ ಮತ್ತು ತರಕಾರಿ ಮಾರಾಟಗಾರರು, ಅಡುಗೆ ಮಾಡುವವವರು, ಮನೆ ಕಾರ್ಮಿಕರು, ಅಗರಬತ್ತಿ ಘಟಕದ ಕಾರ್ಯಕರ್ತರು,‌ ಮದುವೆ ಕೆಲಸಗಾರರು, ಆಟೋ ಚಾಲಕರು ಮತ್ತು ಇತರೆ ದೈನಂದಿನ ಕೂಲಿ ಕಾರ್ಮಿಕರು.


ಮಾರ್ಚ್ 24ರಂದು ಲಾಕ್‌ಡೌನ್ ಅನ್ನು ಘೋಷಿಸಿದ ಕೂಡಲೇ ಮರ್ಸಿ ಕಿಚನ್ ಉಪಕ್ರಮವನ್ನು ಕೂಡಲೇ ಪ್ರಾರಂಭಿಸಲಾಯಿತು. ಇದರ ಅಡಿಯಲ್ಲಿ, ದೈನಂದಿನ ಊಟವನ್ನು ಪಡೆಯಲು ಸಾಧ್ಯವಾಗದ ಕೂಲಿ ಕಾರ್ಮಿಕರಿಗಾಗಿ ಡಿಜೆ ಹಳ್ಳಿ ಮತ್ತು ಇಜಿಪುರದಲ್ಲಿ ತಾತ್ಕಾಲಿಕವಾಗಿ ಎರಡು ಅಡುಗೆ ಮನೆಗಳನ್ನು ಸ್ಥಾಪಿಸಲಾಗಿದೆ. ಊಟವನ್ನು ತಯಾರಿಸುವಾಗ ಮತ್ತು ಬಡಿಸುವಾಗ‌ ಎಲ್ಲ ಸುರಕ್ಷತೆ ಮತ್ತು ನೈರ್ಮಲ್ಯ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂದು ತಂಡದ ಪ್ರಮುಖ ಸದಸ್ಯರು‌ ಮತ್ತು ಟ್ರಸ್ಟಿಗಳು ಗಮನಿಸುತ್ತಾರೆ. ಮರ್ಸಿ ಕಿಚನ್ ಮೂಲಕ ಪ್ರತಿದಿನ ಪ್ರಸ್ತುತ 3,000 ಜನರಿಗೆ ಆಹಾರವನ್ನು ಒದಗಿಸಲಾಗುತ್ತಿದೆ.

"ನಾವು ಸ್ವಾರ್ಥವನ್ನು ನಿಸ್ವಾರ್ಥವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ಜಗತ್ತನ್ನು ಅದೇ ರೀತಿ ಮಾಡಲು ಒತ್ತಾಯಿಸುತ್ತೇವೆ. ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ದುರ್ಬಲ ಸ್ತರಗಳಿಗೆ ಹೆಚ್ಚು ಸೇವೆ ನೀಡುವುದು ನಮ್ಮ‌ ಪ್ರಮುಖ ಗುರಿಯಾಗಿದೆ," ಎಂದು ಡಾ. ಹಬೀಬ್ ಹೇಳುತ್ತಾರೆ.