ಕರೋನಾವೈರಸ್: ಮನೆಯಿಂದ ಕೆಲಸ ಮಾಡುವುದನ್ನು ಉತ್ತೇಜಿಸಲು ಡಬಲ್ 4ಜಿ ಡೇಟಾ ನೀಡಲಿದೆ ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ ತನ್ನ ಬಳಕೆದಾರರ ಕೆಲಸವನ್ನು ಸುಗಮವಾಗಿಸಲು ನಿರ್ಧರಿಸಿದೆ. ಜಿಯೋ ಫೈಬರ್ ಮತ್ತು ಜಿಯೋ 4 ಜಿ ಬಳಕೆದಾರರಿಗೆ ತಮ್ಮ ಅಸ್ತಿತ್ವದಲ್ಲಿರುವ ಯೋಜನೆಗಳಲ್ಲೆ ಡಬಲ್ ಡೇಟಾ ನೀಡಲಿದೆ.

ಕರೋನಾವೈರಸ್: ಮನೆಯಿಂದ ಕೆಲಸ ಮಾಡುವುದನ್ನು ಉತ್ತೇಜಿಸಲು ಡಬಲ್ 4ಜಿ ಡೇಟಾ ನೀಡಲಿದೆ ರಿಲಯನ್ಸ್ ಜಿಯೋ

Monday March 23, 2020,

2 min Read

ಕರೋನಾವೈರಸ್: ಮನೆಯಿಂದ ಕೆಲಸ ಮಾಡುವುದನ್ನು ಉತ್ತೇಜಿಸಲು ಡಬಲ್ 4ಜಿ ಡೇಟಾ ನೀಡಲಿದೆ ರಿಲಯನ್ಸ್ ಜಿಯೋ


ರಿಲಯನ್ಸ್ ಜಿಯೋ ತನ್ನ ಬಳಕೆದಾರರ ಕೆಲಸವನ್ನು ಸುಗಮವಾಗಿಸಲು ನಿರ್ಧರಿಸಿದೆ. ಜಿಯೋ ಫೈಬರ್ ಮತ್ತು ಜಿಯೋ 4 ಜಿ ಬಳಕೆದಾರರಿಗೆ ತಮ್ಮ ಅಸ್ತಿತ್ವದಲ್ಲಿರುವ ಯೋಜನೆಗಳಲ್ಲೆ ಡಬಲ್ ಡೇಟಾ ನೀಡಲಿದೆ.


ಮನೆಯಿಂದ ಕೆಲಸ ಮಾಡುವುದು ಈಗ ಸರ್ವೇ ಸಾಮಾನ್ಯವಾಗಿದೆ ಮತ್ತು ಮುಂದಿನ ಕೆಲ ದಿನಗಳವರೆಗೆ ಇದು ಹೀಗೆಯೆ ಮುಂದುವರೆಯಲಿದೆ. ಹಾಗಾಗಿ ಜನರು ಎಲ್ಲಾ ಸಮಯದಲ್ಲೂ ಸಂಪರ್ಕದಲ್ಲಿರುವುದಕ್ಕೆ ಇಂಟರ್ನೆಟ್ ಬಳಕೆ ಕಡ್ಡಾಯವಾಗಿದೆ.


ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕದಲ್ಲಿ ತೊಂದರೆ ತಪ್ಪಿಸಲು ಭಾರತದ ಪ್ರಮುಖ ಟೆಲಿಕಾಂ ರಿಲಯನ್ಸ್ ಜಿಯೋ ತನ್ನ ಅಸ್ತಿತ್ವದಲ್ಲಿರುವ ಎಲ್ಲಾ ಯೋಜನೆಗಳ ಡೇಟಾ ಕೊಡುಗೆಯನ್ನು ದ್ವಿಗುಣಗೊಳಿಸುತ್ತಿದೆ.


ಜಿಯೋ ಫೈಬರ್ (ಬ್ರಾಡ್‌ಬ್ಯಾಂಡ್) ಮತ್ತು ಜಿಯೋ 4 ಜಿ (ಮೊಬೈಲ್) ಯ ಅಸ್ತಿತ್ವದಲ್ಲಿರುವ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೆಚ್ಚುವರಿ ಡೇಟಾ ಪಡೆಯಬಹುದಾಗಿದೆ. ಹೊಸ ಬಳಕೆದಾರರಿಗೆ, ಬೇಸಿಕ್ ಜಿಯೋಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಸಂಪರ್ಕವಿರುವ ಯಾವುದೇ ಸ್ಥಳಕ್ಕೆ (10 ಎಮ್‌ಬಿಪಿಎಸ್) ಯಾವುದೇ ಸೇವಾ ಶುಲ್ಕವಿಲ್ಲದೆ ನೀಡಲಾಗುವುದು.




ಜಿಯೋ ಹೋಮ್ ಗೇಟ್‌ವೇ ರೌಟರ್‌ಗಳನ್ನು ಕನಿಷ್ಠ ಠೇವಣಿಯೊಂದಿಗೆ ನೀಡಲಿದ್ದು, ಇದರಿಂದ ಪ್ರತಿಯೊಬ್ಬರೂ ಸ್ನೇಹಿತರು, ಕುಟುಂಬಗಳು, ಸಹೋದ್ಯೋಗಿಗಳು, ವ್ಯವಹಾರಗಳು ಮತ್ತು ಸಮುದಾಯಗಳೊಂದಿಗೆ ಸಾಮಾಜಿಕ ಸಂಪರ್ಕವನ್ನು ಕಡಿಮೆ ಮಾಡಬಹುದಾಗಿದೆ.


4 ಜಿ ಚಂದಾದಾರರಿಗೆ, ಆಡ್-ಆನ್ ಡೇಟಾ ಒದಗಿಸುವುದರ ಜೊತೆಗೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಬೇರೆ ಸಿಮ್ ಗೆ ಕರೆ ಮಾಡಬಹುದಾಗಿದೆ.


ದೇಶಾದ್ಯಂತ ಜನರಿಗೆ ಸಹಾಯ ಮಾಡಲು ಅಗತ್ಯ ತಂಡಗಳನ್ನು ನಿಯೋಜಿಸಿದೆ. ಈ ಯೋಜನೆಯು ಭಾರತೀಯರಿಗೆ ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ.




ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ


ರಿಲಯನ್ಸ್ ಜಿಯೋ ತನ್ನ ಡಿಜಿಟಲ್ ವ್ಯವಸ್ಥೆಯನ್ನು ಮೈಕ್ರೋಸಾಫ್ಟ್ ತಂಡದೊಂದಿಗೆ ಒಟ್ಟುಗೂಡಿಸಿದ್ದು, ಜನರಿಗೆ, ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಪರ ಜೀವನವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ.


ಮನೆಯಿಂದ ಕೆಲಸ ಮಾಡುತ್ತಿರುವ ಕಾರ್ಪೊರೇಟ್ ಉದ್ಯೋಗಿಗಳು ಒಳ್ಳೆಯ ಗುಣ ಮಟ್ಟದ ಆಡಿಯೋ ಮತ್ತು ವಿಡಿಯೋ ಸಭೆಗಳು, ಫೈಲ್ ಕಳುಹಿಸಲು ಮತ್ತು ಇತ್ಯಾದಿ ಕೆಲಸಗಳನ್ನು ಮಾಡಲು ಇದು ಸಹಾಯ ಮಾಡುತ್ತದೆ.


ಜಿಯೋ ಮತ್ತು ಮೈಕ್ರೋಸಾಫ್ಟ್ ಸಹಯೋಗವು "ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವೀಡಿಯೊ ಕರೆಗಳ ಮೂಲಕ ತರಗತಿಗಳನ್ನು ನಡೆಸಲು, ಡಾಕ್ಯುಮೆಂಟ್ ಕಳುಹಿಸಲು ಇದು ಸಹಾಯ ಮಾಡುತ್ತದೆ," ಎಂದು ರಿಲಯನ್ಸ್ ಕಂಪನಿ ಹೇಳಿದೆ.


ಕಳೆದ ತಿಂಗಳು, ಜಿಯೋ ಒಡೆತನದ ಎಐ ಸ್ಟಾರ್ಟ್ಅಪ್ ಹ್ಯಾಪ್ಟಿಕ್ ಕಂಪನಿಯು ಸರ್ಕಾರದ ಸಹಯೋಗದೊಂದಿಗೆ ವಾಟ್ಸಾಪ್ ಚಾಟ್‌ಬಾಟ್ನಲ್ಲಿ - ಮೈ ಗವರ್ನಮೆಂಟ್ ಕರೋನಾ ಹೆಲ್ಪ್‌ಡೆಸ್ಕ್ ಅನ್ನು ಪ್ರಾರಂಭಿಸಿದ್ದರು. ಇದು ಕೊರೋನಾ ವೈರಸ್ ಕುರಿತಂತೆ ಪ್ರತಿ ಕ್ಷಣದ ಮಾಹಿತಿಯನ್ನು ನೀಡುತ್ತದೆ.