ಗರ್ಭಧಾರಣೆಯ ಪ್ರತಿ ಸಮಯದಲ್ಲೂ ನಿಮ್ಮ ಸಂಗಾತಿ ಈ ಆ್ಯಪ್
ಟೀಮ್ ವೈ.ಎಸ್.ಕನ್ನಡ
ಈಗ ಪ್ರತಿ ಕ್ಷೇತ್ರವನ್ನೂ ತಂತ್ರಜ್ಞಾನ ಆವರಿಸಿದೆ. ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ಟೆಕ್ನಾಲಜಿಯ ಪ್ರಭಾವ ಜಾಸ್ತಿ ಇದೆ ಎಂದ್ರೆ ತಪ್ಪಾಗಲಾರದು. ಡಾಕ್ಟರ್,ಟೆಕ್ ಗುರು, ರೋಗಿ ಎಲ್ಲರೂ ಒಟ್ಟಾಗಿ ಉತ್ತಮ ಆರೋಗ್ಯಕ್ಕಾಗಿ ಹೊಸ ಮಾರ್ಗ ಹುಡುಕುತ್ತಿದ್ದಾರೆ. ಈಗ ನೀವು ನಿಮ್ಮ ಕ್ಯಾಲೋರಿ, ಹೃದಯ ಬಡಿತ, ಪ್ರತಿದಿನದ ಜೀವನ ಕ್ರಮ ಎಲ್ಲವನ್ನೂ ಸ್ಮಾರ್ಟ್ ಫೋನ್ ಸಹಾಯದಿಂದ ತಿಳಿಯಬಹುದಾಗಿದೆ.
ಮಹಿಳೆಯರ ವಿಚಾರಕ್ಕೆ ಬಂದ್ರೆ ತಾಯಿಯಾಗುವುದು ಅವರ ಜೀವನದ ಒಂದು ಮಹತ್ವದ ಘಟ್ಟ. ಗರ್ಭಿಣಿಯಾದವಳು ತಮ್ಮ ಹಾಗೂ ಗರ್ಭದಲ್ಲಿರುವ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಪ್ರತಿ ದಿನದ ಬೆಳವಣಿಗೆಗಳ ಬಗ್ಗೆ ಗರ್ಭಿಣಿಯಾದವಳು ತಿಳಿದುಕೊಳ್ಳಲು ಬಯಸುತ್ತಾಳೆ. ದೇಹದಲ್ಲಾಗುವ ಚಿಕ್ಕ ಬದಲಾವಣೆಯೂ ಆಕೆಯಲ್ಲಿ ಅನೇಕ ಪ್ರಶ್ನೆಗಳು ಹುಟ್ಟುಹಾಕುತ್ತದೆ. ತಕ್ಷಣ ಉತ್ತರ ಕಂಡುಕೊಳ್ಳಲು ಆಕೆ ಬಯಸುತ್ತಾಳೆ. ಆಕೆಗೆ ಹಳೆಯ ಪುಸ್ತಕಕ್ಕಿಂತ ಹೊಸ ಅಪ್ಲಿಕೇಷನ್ ಗಳು ಬಹಳ ನೆರವಾಗ್ತಾ ಇವೆ.
ಪ್ರೆಗ್ನೆನ್ಸಿ ಅಪ್ಲಿಕೇಷನ್ ಗಳು ಬಹಳ ಪ್ರಸಿದ್ಧಿ ಪಡೆದಿದೆ. ಗೂಗಲ್ ಪ್ಲೇಸ್ಟೋರ್ ಹಾಗೂ ಐಒಎಸ್ ಆ್ಯಪ್ ಸ್ಟೋರ್ ಮೂಲಕ ಸಾವಿರಾರು ಜನರು ಪ್ರೆಗ್ನೆನ್ಸಿ ಅಪ್ಲಿಕೇಷನನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ಆ್ಯಪ್ ಗಳು ಕೇವಲ ಮಗುವಿನ ಆರೋಗ್ಯದ ಬಗ್ಗೆ ಮಾತ್ರ ಹೇಳುವುದಿಲ್ಲ. ಬದಲಾಗಿ ಗರ್ಭಿಣಿಯರು ಒತ್ತಡ ಕಡಿಮೆ ಮಾಡಿಕೊಳ್ಳುವುದು ಹೇಗೆ, ಯಾವ ಆಹಾರ ಸೇವಿಸಬೇಕು,ಯಾವ ಯಾವ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯದು ಎಂಬೆಲ್ಲ ವಿಷಯವನ್ನು ತಿಳಿಸುತ್ತದೆ. ಯುವರ್ ಸ್ಟೋರಿ ಇಂದು ಕೆಲವು ಪ್ರೆಗ್ನೆನ್ಸಿ ಅಪ್ಲಿಕೇಷನ್ ಗಳ ಬಗ್ಗೆ ನಿಮಗೆ ತಿಳಿಸುತ್ತದೆ.
1. ಮೈ ಪ್ರೆಗ್ನೆನ್ಸಿ ಟುಡೆ
ಮೈ ಪ್ರೆಗ್ನೆನ್ಸಿ ಅಪ್ಲಿಕೇಶನ್ ನಿಮ್ಮ ಪ್ರಶ್ನೆಗಳಿಗೆ ವಿಡಿಯೋ, ನ್ಯೂಟ್ರಿಷನ್ ಗೈಡ್ಸ್ ಹಾಗೂ ಬರ್ತ್ ಕ್ಲಬ್ ಮೂಲಕ ಉತ್ತರ ನೀಡುತ್ತದೆ. ಕ್ಯಾಲೆಂಡರ್ ಫಂಕ್ಷನ್ ಹಾಗೂ Tracking your babies movement ಪ್ರೆಗ್ನೆನ್ಸಿ ಬಗ್ಗೆ ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಈ ಅಪ್ಲಿಕೇಶನ್ ಮಗುವಿನ ಪ್ರತಿದಿನದ ಬೆಳವಣಿಗೆಯನ್ನು ತಿಳಿಯಲು ನಿಮಗೆ ನೆರವಾಗುತ್ತದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಯಲ್ಲಿ ಲಭ್ಯವಿದೆ.
2. ಪ್ರೆಗ್ನೆನ್ಸಿ Sprout
ಪ್ರೆಗ್ನೆನ್ಸಿ Sprout ನವಜಾತದ ಬಗ್ಗೆ ಸಲಹೆ ನೀಡುತ್ತದೆ. ತಪಾಸಣೆ, ಆಯ್ಕೆಗಳು,ಕೆಲವು ಗಮನಾರ್ಹ ಚಿತ್ರಗಳನ್ನು ಇದರಲ್ಲಿ ತೋರಿಸುತ್ತದೆ. ಗರ್ಭಧಾರಣೆ ಸಮಯ ಮತ್ತು ಮಗುವಿನ ಓಡಾಟ, ಅವಶ್ಯವಿರುವ ಸಂಗತಿಗಳ ಜೊತೆಗೆ ವೈಯಕ್ತಿಕವಾಗಿ ನಿಮ್ಮ ವಿಷಯಗಳನ್ನು ತಿಳಿಯಬಹುದಾಗಿದೆ. ಫೇಸ್ಬುಕ್ ನಲ್ಲಿ ನಿಮ್ಮ ಕುಟುಂಬದವರಿಗೆ ಇದನ್ನು ಪೋಸ್ಟ್ ಕೂಡ ಮಾಡಬಹುದಾಗಿದೆ. ಇದು ಐಒಎಸ್ ನಲ್ಲಿ ಲಭ್ಯವಿದೆ.
3. ಬೇಬಿ ಬಂಪ್ ಪ್ರೆಗ್ನೆನ್ಸಿ ಪ್ರೋ
ಬೇಬಿ ಬಂಪ್ ಪ್ರೆಗ್ನೆನ್ಸಿ ಪ್ರೊ ಅಪ್ಲಿಕೇಶನ್ ಬಳಸುವುದು ಬಹಳ ಸುಲಭ. ಬೇಬಿ ಬಂಪ್ ಪ್ರೆಗ್ನೆನ್ಸಿ ಪ್ರೊ ಫೋಟೋ ಅಲ್ಬಂ ತರಹ ಕೆಲಸ ಮಾಡುತ್ತದೆ. ಬೇಬಿ ಕಿಕ್ಕನ್ನು ನೀವು ರೇಕಾರ್ಡ್ ಕೂಡ ಮಾಡಬಹುದಾಗಿದೆ. ತೂಕವನ್ನು ಪತ್ತೆ ಮಾಡಬಹುದಾಗಿದೆ. ಈ ಅಪ್ಲಿಕೇಷನ್ ಮೂಲಕ ನಿಮಗೆ ಅಗತ್ಯವಿರುವ ಮಾಹಿತಿಯನ್ನು ಪಡೆಯುವ ಜೊತೆಗೆ ಬೇರೆ ಗರ್ಭಿಣಿಯರನ್ನು ಸಂಪರ್ಕಿಸಬಹುದಾಗಿದೆ. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಲಭ್ಯವಿದೆ.
4. ಹ್ಯಾಪಿ ಪ್ರೆಗ್ನೆನ್ಸಿ ಟಿಕ್ಕರ್
ಈ ಅಪ್ಲಿಕೇಷನ್ ನಿಮ್ಮ ಸಪ್ತಾಹಿಕ ತೂಕವನ್ನು ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ಮೂಲಕ ನೀವು ಬೇರೆ ಗರ್ಭಿಣಿಯರಿಂದ ಸಲಹೆ ಹಾಗೂ ಮಾಹಿತಿಯನ್ನು ಪಡೆಯಬಹುದು ಹಾಗೂ ನೀಡಬಹುದಾಗಿದೆ. ಗರ್ಭಧಾರಣೆಯನ ನೆನಪನ್ನು ನೀವು ಇದರಲ್ಲಿ ಸಂಗ್ರಹಿಸಿಡಬಹುದು. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಲಭ್ಯವಿದೆ.
5. ಐ ಎಂ ಎಕ್ಸ್ಪೆಕ್ಟಿಂಗ್
ಐ ಎಂ ಎಕ್ಸ್ಪೆಕ್ಟಿಂಗ್ ಅಪ್ಲಿಕೇಷನ್ ಬಳಸುವುದು ಬಹಳ ಸುಲಭ. ಇದು ವೈದ್ಯಕೀಯ ಹಾಗೂ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿಡುತ್ತದೆ. ಇದು ಸಾಪ್ತಾಹಿಕ ಸಲಹೆಗಳು,ಮಕ್ಕಳ ಬೆಳವಣಿಗೆ ಹಾಗೂ ಸಾಪ್ತಾಹಿಕ ವಿಡಿಯೋಗಳನ್ನು ನೀಡುತ್ತದೆ. ಅಲ್ಲದೆ ನಿಮ್ಮ ಆರೋಗ್ಯದ ಮಾಹಿತಿಯನ್ನು ನಿಮ್ಮ ವೈದ್ಯರಿಗೆ ತಿಳಿಸುತ್ತದೆ. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಲಭ್ಯವಿದೆ.
6. ಪ್ರೆಗ್ನೆನ್ಸಿ ಗೈಡ್ ಇನ್ ಹಿಂದಿ
ಹಿಂದಿಯಲ್ಲಿ ಬಹಳ ಕಡಿಮೆ ಅಪ್ಲಿಕೇಷನ್ ಗಳಿವೆ. ಅದ್ರಲ್ಲಿ ಇದೂ ಒಂದು. ಪ್ರೆಗ್ನೆನ್ಸಿ ಗೈಡ್ ಇನ್ ಹಿಂದಿ ನಿಮ್ಮ ಆಹಾರದಿಂದ ಹಿಡಿದು ಮಲಗುವವರೆಗಿನ ಎಲ್ಲ ಮಾಹಿತಿಯನ್ನು ನೀಡುತ್ತದೆ. ಈ ಅಪ್ಲಿಕೇಷನ್ ಮೊದಲ ವಾರದಿಂದ ಹಿಡಿದು 9ನೇ ತಿಂಗಳವರೆ ಗರ್ಭಧಾರಣೆಯ ಎಲ್ಲ ಮಾಹಿತಿಯನ್ನು ತಿಳಿಸುತ್ತದೆ. ಈ ಆ್ಯಪ್ ಗೂಗಲ್ ಪ್ಲೇನಲ್ಲಿ ಲಭ್ಯವಿದೆ.
7. ಎಂ ಪ್ರೆಗ್ನೆನ್ಸಿ
ಎಂ ಪ್ರೆಗ್ನೆನ್ಸಿ ಐಫೋನ್ ನ ಮೊದಲ ಗರ್ಭಧಾರಣೆಯ ಅಪ್ಲಿಕೇಷನ್ . ಪುರುಷರ ಅಪ್ಲಿಕೇಷನ್ ಇದಾಗಿದೆ. ಈ ಅಪ್ಲಿಕೇಷನ್ ಮೂಲಕ ಪುರುಷ ತನ್ನ ಸಂಗಾತಿಯ ಸಮಸ್ಯೆಯನ್ನು ತಿಳಿಯಬಹುದಾಗಿದೆ. ಇದು ಅನೇಕ ವಿಷಯಗಳನ್ನು ಒಳಗೊಂಡಿದೆ. ಮಕ್ಕಳ ಅಭಿವೃದ್ಧಿ ಹಾಗೂ ಬೆಳವಣಿಗೆಗಳ ಬಗ್ಗೆ ಪುರುಷರಿಗೆ ಅರ್ಧವಾಗುವ ರೀತಿಯಲ್ಲಿ ಮಾಹಿತಿ ನೀಡಲಾಗಿದೆ. ಈ ಅಪ್ಲಿಕೇಷನ್ ಕೇವಲ ಗರ್ಭಧಾರಣೆಯ ಅವಧಿ,ಮಗುವಿನ ಬೆಳವಣಿಗೆಯನ್ನು ಮಾತ್ರ ನೀಡುವುದಿಲ್ಲ,ಔಷಧಿಗಳ ಬಗ್ಗೆಯೂ ಮಾಹಿತಿ ನೀಡುತ್ತದೆ.
8. ಪ್ರೆಗ್ನೆನ್ಸಿ ಅಸಿಸ್ಟೆಂಟ್
ಇದರ ಹೆಸರೇ ಹೇಳುತ್ತಿದೆ. ಇದು ಗರ್ಭಧಾರಣೆಯ ಬಗ್ಗೆ ಮಾಹಿತಿ ನೀಡುತ್ತದೆ. ಇದನ್ನು ಉಪಯೋಗಿಸುವುದು ಸುಲಭ. ಇದು ಫೋಟೋಗಳ ಮೂಲಕ ಭ್ರೂಣದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಈ ಅಪ್ಲಿಕೇಷನ್ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ.
9. ಪ್ರೆಗ್ನೆನ್ಸಿ ++
ಪ್ರೆಗ್ನೆನ್ಸಿ ++ ವಿಶ್ವದಲ್ಲಿ ಬಹಳ ಚರ್ಚೆಯಲ್ಲಿರುವ ಅಪ್ಲಿಕೇಷನ್ ಆಗಿದೆ. ಪ್ರೆಗ್ನೆನ್ಸಿ ++ ಮಕ್ಕಳ ಸಾಪ್ತಾಹಿಕ ಹಾಗೂ ಮಾಸಿಕ ಬೆಳವಣಿಗೆಗಳ ಬಗ್ಗೆ ಫೋಟೋ ಮೂಲಕ ಮಾಹಿತಿ ನೀಡುತ್ತದೆ. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಲಭ್ಯವಿದೆ.
10. ಪ್ರೆಗ್ನೆನ್ಸಿ ಡ್ಯೂ ಡೇಟ್ ಕ್ಯಾಲ್ಕುಲೇಟರ್
ಪ್ರೆಗ್ನೆನ್ಸಿ ಡ್ಯೂ ಡೇಟ್ ಕ್ಯಾಲ್ಕುಲೇಟರ್ ಮಕ್ಕಳ ಜನನದ ದಿನಾಂಕವನ್ನು ಕ್ಯಾಲ್ಕುಲೇಟ ಮಾಡಲು ನೆರವಾಗುತ್ತದೆ. ಇದು ಮೊದಲ ತ್ರೈಮಾಸಿಕದಿಂದ ಹಿಡಿದು ಕೊನೆಯವರೆಗೂ ಮಾಹಿತಿ ನೀಡುತ್ತದೆ. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಲಭ್ಯವಿದೆ.
ಇದನ್ನೂ ಓದಿ..
ಮಹಿಳೆಯರ ಒಳಿತಾಗಿ ಎದ್ದು ನಿಂತ ನಾರಿಯರು- "ಸ್ಕಿಲ್ ಶ್ರೀ"ನಿಂದ ಹೆಣ್ಣುಮಕ್ಕಳ ಜೀವನಕ್ಕೆ ಶ್ರೀಕಾರ
ಕೊಹ್ಲಿ, ಧೋನಿಗಿಂತ ಇವರು ಕಡಿಮೆಯಲ್ಲ- ವಿಶ್ವಚಾಂಪಿಯನ್ನರಾದರೂ ಜೀವನದಲ್ಲಿ ನೆಮ್ಮದಿ ಕಂಡಿಲ್ಲ..!