ಸಮಯ ಸಾಧಕನಿಗೆ ಈಗ ಲಕ್ಷ ಲಕ್ಷ ರೂಪಾಯಿ..!

ವಿಸ್ಮಯ

ಸಮಯ ಸಾಧಕನಿಗೆ ಈಗ ಲಕ್ಷ ಲಕ್ಷ ರೂಪಾಯಿ..!

Thursday January 21, 2016,

3 min Read

ಪ್ರತಿಯೊಬ್ಬರಿಗೂ ಒಂದಂದು ಕ್ರೇಜ್ ಇರುತ್ತೆ. ಅದಕ್ಕೆ ವಯಸ್ಸಿನ ಅಂತರ ಇರೋಲ್ಲ. ಕೆಲವರು ಹಳೆಯದಾದ ಪೆನ್‍ಗಳನ್ನ ಸಂಗ್ರಹಿಸಿದ್ರೆ, ಇನ್ನು ಕೆಲವರು ಬುಕ್‍ಗಳನ್ನ ಸಂಗ್ರಹಿಸೋ ಕ್ರೇಜ್ ಹೊಂದಿರುತ್ತಾರೆ. ಹೀಗೆ ಬೇರೆ ಬೇರೆ ವಿಷಯಗಳಿಗೆ, ಬೇರೆ ಬೇರೆ ರೀತಿ ಕ್ರೇಜ್ ಹೊಂದಿರುತ್ತಾರೆ. ಅರೇ ಇವರು ಕ್ರೇಜ್ ಬಗ್ಗೆ ಯಾಕೆ ಮಾತಡುತ್ತಿದ್ದಾರೆ ಅಂದುಕೊಂಡರಾ. ಹೌದು ಕಣ್ರೀ ನಮ್ಮ ದೇಶದಲ್ಲಿ ಎಲ್ಲರು ಯಾವುದಾದ್ರೂ ಹವ್ಯಾಸವನ್ನ ಹೊಂದಿರುತ್ತಾರೆ. ಇಂತಹದ್ದೇ ಹವ್ಯಾಸದಿಂದ ಇಲ್ಲೊಬ್ಬರು ದುಡಿಮೆಯ ದಾರಿ ಕಂಡುಕೊಂಡಿದ್ದಾರೆ. ಇವರ ಮಳಿಗೆಗೆ ಬರೋ ಪ್ರತಿಯೊಬ್ಬರು ಖುಷಿಯಿಂದ ವಾಪಸ್ಸು ಹೋಗುತ್ತಾರೆ. ಇವರು ಸಮಯ ಸಾಧಕನಿಗೆ ಮಾಲೀಕರು. ತಾವು ಸಂಗ್ರಹಿಸಿದ ವಸ್ತುಗಳಿಗೆ ಈಗ ಲಕ್ಷ ಲಕ್ಷ ರೂಪಾಯಿ.

image


ಇವರ ಹೆಸರು ಅಬ್ದುಲ್ ಲತಿಫ್ 1959ರಲ್ಲಿ ಗಡಿಯಾರ ರಿಪೇರಿ ಮಾಡುವ ಅಂಗಡಿಯನ್ನು ಆರಂಭಿಸಿದ್ರು. ಮಲ್ಲೇಶ್ವರಂನಲ್ಲಿ ಇವರದೇ ಈಗ ವೆಸ್ಟೆಂಡ್ ಜಿಯಸ್ ಎಂಬ ದೊಡ್ಡ ಮಳಿಗೆಯಿದೆ. ದಕ್ಷಿಣ ಭಾರತದ ಅತೀ ದೊಡ್ಡ ಗಡಿಯಾರ ಪ್ರದರ್ಶನವನ್ನು ಕೂಡ ಆಯೋಜಿಸ್ತಾರೆ. ಇವರಲ್ಲಿ ದೇಶ ವಿದೇಶದ ವಾಚ್‍ಗಳಿವೆ. ಅರ್ಮಾನಿ, ಟಾಮಿ ಹಿಲ್ಫಿಗರ್, ಕ್ಯಾಸಿಯೋ, ಫಾಸ್ಟ್​ಟ್ರಾಕ್, ಟೈಟಾನ್, ಆಸ್ಪೆನ್, ಕೆನ್ನೆತ್ ಕೋಲೆ ಸೇರಿದಂತೆ ಅಂತರಾಷ್ಟ್ರೀಯ ವಾಚ್ ಬ್ರ್ಯಾಂಡ್ ಇಲ್ಲಿದೆ. ವಿಶ್ವದಾದ್ಯಂತ ಅತ್ಯಂತ ಹೆಸರು ವಾಸಿ ಹೊಂದಿರುವ ಗಡಿಯಾರದ ಬ್ರಾಂಡ್‍ಗಳು ಇಲ್ಲಿ ಕಾಣಸಿಗುತ್ತವೆ.

ತಿರುಗುವ ಕಾಲದ ಜೊತೆ ಜೊತೆಗೆ ಕಾಲವನ್ನು ಅಳೆಯುವ ಸಾಧನಗಳು ಬದಲಾಗಿವೆ. ಆದ್ರೂ ಡಿಜಿಟಲ್ ಟೈಂ ತೋರಿಸುವ ಗಡಿಯಾರ, ಮೊಬೈಲ್ ಆ್ಯಪ್​ಗಳನ್ನ ಹೊಂದಿರೋ ವಾಚ್‍ಗಳ ಮಧ್ಯೆ ಹಳೆ ಕಾಲದ ಗೋಲ್ಡನ್ ಐಟಂಗಳು ಹಳೆ ಕಾಲದ ಹಾಡಿನಂತೆ ಮನಸೂರೆಗೊಳ್ಳತ್ತೆ. ಅಂದಿನ ಕಾಲದ ಆ್ಯಂಟಿಕ್ ಟೈಂ ಪೀಸ್‍ಗಳನ್ನು ನೀವು ನೋಡಿದ್ರೆ ನಿಜಕ್ಕೂ ಖುಷಿ ಪಡ್ತೀರಾ..

image


ಅಜ್ಜಿಯ ತಲೆಬುಡದಲ್ಲಿರುತ್ತಿದ್ದ ಅಲರಾಮು, ಅಜ್ಜನ ಕಾಲದ ಗಡಿಯಾರ, ಪ್ರತಿಷ್ಟೆಯಾಗಿದ್ದ ಲೋಲಕದ ಗಂಟೆ, ಕರಕರ ಸದ್ದಿನ ಇಂಫೋರ್ಟ್ ವಾಲ್ ಕ್ಲಾಕ್.. ಮನೆಯ ಅರ್ಧ ಜಾಗವನ್ನೇ ತಿಂತಿದ್ದ ಆನೆಗಡಿಯಾರ. ಅಬ್ಬಾ ಒಂದೆಲ್ಲಾ ಎರೆಡೆಲ್ಲಾ..ಪುರಾತನ ಕಾಲದ ಗಡಿಯಾರಗಳೆಲ್ಲಾ..ಇಲ್ಲಿ ಸಭೆ ಸೇರಿರುವಂತಿದೆ ಅಲ್ವಾ.. ಈಗ ಇವುಗಳ ಅಪ್ಪನಂತಹ ವಾಚ್‍ಗಳು, ವಾಲ್‍ಕ್ಲಾಕ್‍ಗಳು ರಾರಾಜಿಸುತ್ತಿವೆ. ಅಷ್ಟೆಯಾಕೆ ಬ್ರಹ್ಮಾಂಡವನ್ನೇ ಅಳವಡಿಸಿಕೊಂಡು ಗಡಿಯಾರಗಳು ಮಾರುಕಟ್ಟೆಗೆ ಬರುತ್ತಿವೆ. ಹೀಗಿದ್ರೂ ಬರಿ ಗಂಟೆಯಷ್ಟೇ ತೋರಿಸುತ್ತಿದ್ದ ಅಂದಿನ ಕಾಲದ ಈ ಗಡಿಯಾರಗಳ ಮುಂದೆ, ಹೈಟೆಕ್ ಯುಗದ ವಾಲ್‍ಕ್ಲಾಕುಗಳು ಕಳೆಗುಂದಿ ಬಿಡುತ್ತೆ.

ಹಾಗಂತ ಗುಡಾಣ ಗಾತ್ರದ ಗಡಿಯಾರಗಳನ್ನು ಒಟ್ಟು ಹಾಕೋದು ಸುಲಭದ ಮಾತಲ್ಲ ಬಿಡಿ.. ಅಷ್ಟೆಯಾಕೆ ಹುಡುಕಿ ಹೋದರೆ ಅವುಗಳು ಸಿಗೋದು ಕೂಡ ಕಷ್ಟ..ಆದ್ರೆ ಅಂತಹ ನೂರಾರು ಕಷ್ಟಗಳನ್ನು ಮೀರಿ ನಿಂತು ಓಲ್ಡ್ ಆ್ಯಂಟಿಕ್ ಟೈ ಪೀಸ್‍ಗಳನ್ನು ಮಲ್ಲೇಶ್ವರಂ ವೆಸ್ಟೆಂಡ್ ಜಿಯಾಸ್ ಮಳಿಗೆಯಲ್ಲಿ ಕಾಣಬಹುದು. ಅಷ್ಟೆಅಲ್ಲ ಹಳೆ ಗಡಿಯಾರದ ಅಭಿಮಾನಿಗಳಿಗಾಗಿ ಮಾರಾಟವು ಮಾಡಲಾಗುತ್ತಿದೆ. 50 ವರ್ಷದ ಹಳೆ ಕಾಲದ ವಾಚ್‍ಗಳಿಗೆ ಚಿನ್ನದ ಬೆಲೆ ಬಂದಿದೆ.

ಗಾಂಧಿಕ್ಲಾಕ್, ಗ್ರಾಂಡ್ ಫಾದರ್ ಕ್ಲಾಕ್, ಮಹಾರಾಜ ಕ್ಲಾಕ್ ಸೇರಿದಂತೆ ಹತ್ತಾರು ವೈರೆಟಿ ಗಡಿಯಾರಗಳು ಇಲ್ಲಿವೆ. ಅಂದಹಾಗೆ ಗಡಿಯಾರಗಳನ್ನೂ ನೋಡೊದಕ್ಕೆ ಅಂತಲೇ ದಿನಂಪ್ರತಿ ಸಾವಿರಾರು ಜನ ಇಲ್ಲಿಗೆ ಬರುತ್ತಾರೆ. ಮೇಲಾಗಿ ಸಾವಿರ, ಲಕ್ಷ ಅಂದ್ರೂ ಕ್ಯಾರೆ ಮಾಡದೇ, ಇತಿಹಾಸದ ಪುರಾವೆಗಳನ್ನು ಖರೀದಿಸಿ ಕೊಂಡೊಯ್ಯುತ್ತಿವೆ ಅಂತಾರೆ ಪ್ರಶಾಂತ್. ಅವುಗಳನ್ನು ನೋಡುವುದೇ ಒಂದು ಖುಷಿ ವಿಚಾರ. ನಮ್ಮ ಮನೆಗೆ ಬರುವವರು ಇದನ್ನ ನೋಡಿ ಇಷ್ಟ ಪಡತ್ತಾರೆ. ನಮಗೂ ಖುಷಿ ಆಗುತ್ತೆ.

image


ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಅಂತಾರೆ. ಆದರೆ ಇಲ್ಲಿರೋ ಸಮಯಕ್ಕೆ 2 ಲಕ್ಷ ರೂಪಾಯಿ ಬೆಲೆ ಕಟ್ಟಲಾಗಿದೆ. ಅಂದ್ರೆ ಅದು ಕೇವಲ ಸಮಯ ಅಲ್ಲ ಅದು ಸಮಯ ಸಾಧಕ. ವರ್ಷಗಟ್ಟಲೆ ಸಮಯ ತೋರ್ಸಿ ಸುಸ್ತಾಗಿ ನಿಂತ ಗಡಿಯಾರಕ್ಕೆ ಈಗ ಎಲ್ಲಿಲ್ಲದ ಬೆಲೆ. ಹಳೆಯ ಗಡಿಯಾರ ಎಂದು ಮೂಗು ಮುರಿಯುತ್ತಿದ್ದ ಮಂದಿ ಈಗ ಲಕ್ಷಾಂತರ ರೂಪಾಯಿ ತೆತ್ತು ಖರೀದಿ ಮಾಡುತ್ತಿದ್ದಾರೆ. ಇವೆಲ್ಲ ಆ್ಯಂಟಿಕ್ ಪೀಸ್‍ಗಳಾಗಿವೆ. ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಭಿನ್ನ ವಿಭಿನ್ನ, ಚಿತ್ರ ವಿಚಿತ್ರ ಗಡಿಯಾರು ಕಾಣಿಸಿಕೊಳ್ತಿವೆ. ಇವೆಕೆಲ್ಲ ಸಾವಿರಾರು ರೂಪಾಯಿ ಬೆಲೆ ಇದೆ. ಆದ್ರೆ ಆ್ಯಂಟಿಕ್ ಗಡಿಯಾರಗಳಿಗೆ ಮಾತ್ರ ಲಕ್ಷ ಲಕ್ಷ ಬೆಲೆ ಇದೆ.

ಗಡಿಯಾರಗಳ ಮೇಲಿನ ಪ್ರೀತಿಯಿಂದ ಸಿಕ್ಕಲ್ಲಿ, ಹುಡುಕಿ ಆಯ್ದು ತಂದ ಗಡಿಯಾರಗಳಿಗೆ ಕೀ ಕೊಟ್ಟು, ಸ್ಪ್ರಿಂಗ್​​ ತಿರುಗಿಸಿ, ಅದರ ಅಭಿಮಾನಿಗಳು ಭರ್ಜರಿಯಾಗಿ ಖರೀದಿಸುತ್ತಿದ್ದಾರೆ. ಇಲ್ಲಿಗೆ ಬರೋ ಜನರು ಮಾತ್ರ ದಶಕಗಳಷ್ಟು ಹಳೆಯ ಗಡಿಯಾರದ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅಲ್ಲದೇ ಈ ಗಡಿಯಾರಗಳ ಬೆಲೆ 2 ಲಕ್ಷದಿಂದ ಪ್ರಾರಂಭವಾದ್ರೂ ಆಂಟಿಕ್ ಪ್ರಿಯರು ಡೋಂಟ್ ಕೇರ್ ಅಂತಿದ್ದಾರೆ. ಓಲ್ಡ್ ಈಸ್ ಗೋಲ್ಡ್ ಅನ್ನೋ ಮಾತು ಮತ್ತೆ ಮತ್ತೆ ನೆನಪಾಗುತ್ತಿದೆ ಅಲ್ವಾ. ಯಾವಾಗಲ್ಲೂ ಕಾಮನ್ ವಾಚ್‍ಗಳನ್ನ ನೋಡೋ ಜನ್ರಿಗೆ ಈ ಅಂಗಡಿಗೆ ಬಂದ್ರೆ ಹೊಸ ಅನುಭವಾಗೋದಂತು ನಿಜ.