ನಮ್ಮ ಮೆಟ್ರೋದ ಪಿಲ್ಲರ್ಗಳಿಗೆ ಹೊಸ ಜೀವ- ಹೊಸ ತಂತ್ರಜ್ಞಾನದ ಮೂಲಕ ಪರಿಸರ ಕಾಯುವ ಕೆಲಸ
ಟೀಮ್ ವೈ.ಎಸ್.ಕನ್ನಡ
ಬೆಂಗಳೂರು ಬೆಳೆಯುತ್ತಿದೆ. ಸಿಲಿಕಾನ್ ಸಿಟಿ ದಿನಕ್ಕೆ ಲಕ್ಷಾಂತರ ಜನರನ್ನು ಆಹ್ವಾನಿಸುತ್ತಿದೆ. ಉದ್ಯೋಗಾವಶಗಳು, ಕಂಪನಿಗಳ ಅಭಿವೃದ್ಧಿ ಎಲ್ಲವೂ ಪೂರಕವಾಗಿದೆ. ಬೆಂಗಳೂರು ಬೆಳೆಯತ್ತಿದೆ. ಆದ್ರೆ ಮರಗಳು ಮಾತ್ರ ಧರೆಗುರುಳುತ್ತಿವೆ. ನಗರೀಕರಣ ನೆಪದಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದೆ. ಇದೆಲ್ಲದಕ್ಕಿಂತಲೂ ಯೋಚನೆ ಮಾಡಬೇಕಾದ ಸಂಗತಿಗಳು ಕೂಡ ಇವೆ. ದೊಡ್ಡದೊಂದು ಸ್ಮಾರ್ಟ್ ಫೋನ್ ಕಂಪನಿ, ತನ್ನ ಜಾಹೀರಾತು ಹೋರ್ಡಿಂಗ್ ಚೆನ್ನಾಗಿ ಕಾಣಿಸಬೇಕು ಅನ್ನುವ ಉದ್ದೇಶದಿಂದ ಒಂದು ಪ್ರಸಿದ್ಧ ಸ್ಥಳದಲ್ಲಿದ್ದ ಮರವನ್ನು ಧರೆಗುರುಳಿಸಿದೆ. ಮೆಟ್ರೋ ಕಾಮಗಾರಿಯ ನೆಪದಲ್ಲಿ ಅದೆಷ್ಟೋ ಮರಗಳು ನೆಲಕ್ಕುರುಳಿವೆ. ಆದ್ರೆ ಬೆಂಗಳೂರಿನಲ್ಲಿ ಮರಗಳನ್ನು ಬೆಳೆಸಲು ಹೊಸ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ.
ಬೆಂಗಳೂರಿನಲ್ಲಿ ಮರ ಬೆಳೆಸುವುದಕ್ಕಾಗಿ ಹೈಡ್ರೋಪೊನಿಕ್ಸ್ ಅನ್ನುವ ಸ್ಪೆಷಲ್ ಯೋಜನೆಯನ್ನು ಮಾಡಲಾಗಿದೆ. ಹೈಡ್ರೋಪೊನಿಕ್ಸ್ ತಂತ್ರಜ್ಞಾನದಲ್ಲಿ ಗಿಡಗಳನ್ನು ಮಣ್ಣಿನ ಬದಲು ಮರಳು ಮತ್ತು ಜಲ್ಲಿಕಲ್ಲುಗಳ ಮೇಲೆ ಬೆಳೆಯಬಹುದು. ಈ ಅದಕ್ಕೆ ತಕ್ಕಂತೆ ಪೋಷಕಾಂಶಗಳನ್ನು ಕೂಡ ನೀಡಲಾಗುತ್ತಿದೆ. ಮೆಟ್ರೋ ಪಿಲ್ಲರ್ಗಳು ಮತ್ತು ದೊಡ್ಡ ದೊಡ್ಡ ಟವರ್ಗಳಲ್ಲಿ ಈ ತಂತ್ರಜ್ಞಾನದ ಮೂಲಕ ಗಾರ್ಡನ್ಗಳನ್ನು ಕ್ರೀಯೆಟ್ ಮಾಡುವುದೇ ಈ ಯೋಜನೆಯ ಉದ್ದೇಶ. ಈ ತಂತ್ರಜ್ಞಾನಕ್ಕೆ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ನಿಂದಲೂ ಅನುಮತಿ ಸಿಕ್ಕಿದ್ದು, ಹೈಡ್ರೋಬ್ಲೂಮ್ ಅನ್ನುವ ಕಂಪನಿ ಈ ತಂತ್ರಜ್ಞಾನದ ನೇತೃತ್ವವಹಿಸಿಕೊಂಡಿದೆ. ಸದ್ಯ ಅನಿಲ್ ಕುಂಬ್ಳೆ ಸರ್ಕಲ್ ಬಳಿಯ ಮೆಟ್ರೋ ಪಿಲ್ಲರ್ಗಳು ವರ್ಟಿಕಲ್ ಗಾರ್ಡನ್ ಮೂಲಕ ಮಿಂಚುತ್ತಿವೆ. ಆದ್ರೆ ಈಗ ಲಂಲಾಬಾಕಾರದಲ್ಲಿ ಗಾರ್ಡನ್ ಮಾಡಲು ಪೈಲಟ್ ಪ್ರಾಜೆಕ್ಟ್ ಅನ್ನು ಪ್ಲಾನ್ ಮಾಡಲಾಗಿದೆ. ಮೆಟ್ರೋ ಪಿಲ್ಲರ್ಗಳಲ್ಲಿ ಹಸಿರು ಕಾಣುವಂತೆ ಮಾಡುವುದೇ ಇದರ ಗುರಿ.
“ ನಮ್ಮ ಆರಂಭಿಕ ಯೋಜನೆ ಯಶಸ್ಸು ಕಂಡರೆ, ಬೆಂಗಳೂರಿನ ಎಲ್ಲಾ ಮೆಟ್ರೋ ಪಿಲ್ಲರ್ಗಳಲ್ಲೂ ಗಾರ್ಡನ್ ಮಾಡಬೇಕು ಅನ್ನುವುದು ನಮ್ಮ ಉದ್ದೇಶ. ಸದ್ಯಕ್ಕೆ ಎಂ.ಜಿ.ರೋಡ್ ನಲ್ಲಿರುವ ಪಿಲ್ಲರ್ಗಳಲ್ಲಿ ಹಸಿರು ಕಾಣುವಂತೆ ಮಾಡಲಾಗುತ್ತದೆ. ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿಯಡಿ ಯಾವುದಾದರೂ ಸಂಸ್ಥೆ ಕೈ ಜೋಡಿಸುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ವಾಯಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇಂತಹ ಪ್ರಾಜೆಕ್ಟ್ನ ಅನಿವಾರ್ಯತೆ ಹೆಚ್ಚಾಗಿದೆ."
- ಸುನೀಲ್ ಜೋಸ್, ಸಿಇಒ ಹೈಡ್ರೋಬ್ಲೂಮ್
ಅಂದಹಾಗೇ ಈ ಮಾಡರ್ನ್ ಗಾರ್ಡನ್ ಕ್ರಿಯೇಟ್ ಮಾಡಲು ಕಡಿಮೆ ಪ್ರಮಾಣದ ನೀರು ಸಾಕಾಗುತ್ತದೆ. ಮಾಮೂಲಿ ಗಾರ್ಡನ್ಗಿಂತ ಶೇಕಡಾ 90ರಷ್ಟು ಕಡಿಮೆ ನೀರಿನಲ್ಲಿ ಹಸಿರು ಬೆಳೆಯಬಹುದು. ಅಂದಾಜಿನ ಪ್ರಕಾರ ಒಂದು ಪಿಲ್ಲರ್ನಲ್ಲಿ ಗಾರ್ಡನ್ ಬೆಳೆಯಲು ಒಂದು ತಿಂಗಳಿಗೆ ಸುಮಾರು 500 ಲೀಟರ್ ನೀರು ಸಾಕಾಗುತ್ತದೆ. ಒಟ್ಟಿನಲ್ಲಿ ಧರೆಗುರುಳಿತ್ತಿರುವ ಮರಗಳನ್ನು ಲೆಕ್ಕಹಾಕಿದ್ರೆ, ಬೆಳೆಯುತ್ತಿರುವ ಹಸಿರಿನ ಪ್ರಮಾಣವೇ ಕಡಿಮೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಹಸಿರು ಹೇಗೇ ಬೇಕಾದ್ರೂ ಬೆಳೆಯಲಿ, ಪರಿಸರ ಹಾಳಾಗದಿರಲಿ ಅನ್ನುವುದೇ ಎಲ್ಲರ ಆಶಯ.
1. ಡಿಜಿಟಲ್ ಲೆಕ್ಕದಲ್ಲಿ ಹಿಂದೆ ಬಿದ್ದ ಭಾರತ- ಮೋದಿ ಕನಸಿಗೆ ಪೆಟ್ಟು ಕೊಡುತ್ತಿದೆ ಹಾರ್ಡ್ಕ್ಯಾಶ್..!