ಸೈಲೆಂಟ್ ಹಾರ್ಟ್ ಅಟ್ಯಾಕ್ ವಿರುದ್ಧ ಹೋರಾಟ- ಹೊಸ ಡಿವೈಸ್ ಕಂಡುಹಿಡಿದ 15ರ ಹರೆಯದ ಬಾಲಕ

ಟೀಮ್​ ವೈ.ಎಸ್​. ಕನ್ನಡ

ಸೈಲೆಂಟ್ ಹಾರ್ಟ್ ಅಟ್ಯಾಕ್ ವಿರುದ್ಧ ಹೋರಾಟ- ಹೊಸ ಡಿವೈಸ್ ಕಂಡುಹಿಡಿದ 15ರ ಹರೆಯದ ಬಾಲಕ

Tuesday March 21, 2017,

2 min Read

ಆಕಾಶ್ ಮನೋಜ್, 15 ವರ್ಷ ವಯಸ್ಸಿನ ಹುಡುಗ. ತಮಿಳುನಾಡು ಮೂಲದ ಆಕಾಶ್ ಅದೆಷ್ಟೋ ಜನರ ಜೀವ ಉಳಿಸಬಲ್ಲ ಸಾಧನವೊಂದನ್ನು ಕಂಡುಹಿಡಿದಿದ್ದಾನೆ. ಮನೋಜ್ “ ಸೈಲೆಂಟ್ ಹಾರ್ಟ್ ಅಟ್ಯಾಕ್” ಅನ್ನು ಪತ್ತೆ ಹಚ್ಚಬಲ್ಲ ಡಿವೈಸ್ ಒಂದನ್ನು ಅಭಿವೃದ್ಧಿ ಮಾಡಿದ್ದಾನೆ. ಈ ಡಿವೈಸ್ ಮೂಲಕ ಆಕಾಶ್ ಹಲವರ ಜೀವ ಉಳಿಸಬಲ್ಲ ಪ್ರಯಾಣವನ್ನು ಆರಂಭಿಸಿದ್ದಾರೆ.

image


ಹೃದಯಾಘಾತದ ಸಮಯದಲ್ಲಿ ಎದೆನೋವು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ರೆ "ಸೈಲೆಂಟ್ ಹಾರ್ಟ್ ಅಟ್ಯಾಕ್" ಸಮಯದಲ್ಲಿ ಎದೆನೋವಾಗಲಿ ಅಥವಾ ಉಸಿರಾಟದ ತೊಂದರೆಯಾಗಲಿ ಕಾಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ "ಸೈಲೆಂಟ್ ಹಾರ್ಟ್ ಅಟ್ಯಾಕ್" ಅನ್ನು ಫ್ಲೂ ಜ್ವರ ಮತ್ತು ದೇಹದಲ್ಲಿನ ಏರುಪೇರು ಅಂತ ಅಂದುಕೊಂಡು ಸುಮ್ಮನಾಗುತ್ತೇವೆ. ಪದೇ ಪದೇ ಹೀಗಾದಾಗ ಜನರು ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಅಂತ ಅಂದುಕೊಂಡು ಸುಮ್ಮನಾಗುತ್ತಾರೆ. ಆಕಾಶ್ ಅಜ್ಜ ಕೂಡ ಸೈಲೆಂಟ್ ಹಾರ್ಟ್ ಅಟ್ಯಾಕ್ನಿಂದ ಪದೇ ಪದೇ ಬಳಲುತ್ತಿದ್ದರು. ಇದು ಆಕಾಶ್ಗೆ ಹೊಸ ಡಿವೈಸ್ ಒಂದನ್ನು ಅಭಿವೃದ್ಧಿ ಪಡಿಸಲು ಪ್ರೇರಣೆಯಾಯಿತು.

“ ನನ್ನ ಅಜ್ಜ ಸಕ್ಕರೆ ಕಾಯಿಲೆ ಮತ್ತು ಹೈ ಬಿಪಿಯಿಂದ ಬಳಲುತ್ತಿದ್ದರು. ಇವೆರಡನ್ನು ಬಿಟ್ಟರೆ ಅವರಿಗೆ ಬೇರೆ ಯಾವ ಕಾಯಿಲೆಯೂ ಇರಲಿಲ್ಲ. ಆದ್ರೆ ನನ್ನ ತಾತನಿಗೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಯಿತು. ಇದರಿಂದಲೇ ಅವರು ಸಾವನ್ನಪ್ಪಿದ್ರು ”
- ಆಕಾಶ್, ಸೈಲೆಂಟ್ ಹಾರ್ಟ್ ಅಟ್ಯಾಕ್ ಡಿವೈಸ್ ಕಂಡುಹಿಡಿದವರು

ಆಕಾಶ್​ಗೆ ಚಿಕ್ಕವಯಸ್ಸಿನಿಂದಲೇ ಮೆಡಿಕಲ್ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಎಂಟನೇ ತರಗತಿಯಿಂದಲೇ ಮೆಡಿಕಲ್ ವಿಷಯಗಳನ್ನು ತಮಾಷೆಗಾಗಿ ಓದುತ್ತಿದ್ದರು. ಹೊಸೂರ್​ನಿಂದ ಒಂದು ಗಂಟೆ ಪ್ರಯಾಣ ಮಾಡಿ ಬೆಂಗಳೂರಿನ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್​ನ ಗ್ರಂಥಾಲಯಕ್ಕೆ ಪದೇ ಪದೇ ಭೇಟಿ ನೀಡಿ ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು.

“ ಮೆಡಿಕಲ್ ವಿಷಯಗಳ ಪುಸ್ತಕ ಖರೀದಿ ಮಾಡುವುದಕ್ಕೆ ಹಣವಿರಲಿಲ್ಲ. ಹೀಗಾಗಿ ನಾನು ಗ್ರಂಥಾಲಯಕ್ಕೆ ಭೇಟಿ ನೀಡಿ ಅಭ್ಯಾಸ ಮಾಡುತ್ತಿದ್ದೆ. ಹೀಗೆ ಮಾಡದೇ ಇದ್ದಿದ್ದರೆ ನನ್ನ ಓದಿಗೆ ಈಗಲೇ ಒಂದು ಕೋಟಿ ರೂಪಾಯಿಗಿಂತಲೂ ಅಧಿಕ ಖರ್ಚು ಬೀಳುತ್ತಿತ್ತು. ನನಗೆ ಮೆಡಿಕಲ್ ಸೈನ್ಸ್ ಅಂದ್ರೆ ತುಂಬಾ ಇಷ್ಟ. ಅದ್ರಲ್ಲೂ ಕಾರ್ಡಿಯೋಲಾಜಿ ಬಗ್ಗೆ ಹೆಚ್ಚು ಆಸಕ್ತಿ ”
- ಆಕಾಶ್, ಸೈಲೆಂಟ್ ಹಾರ್ಟ್ ಅಟ್ಯಾಕ್ ಡಿವೈಸ್ ಕಂಡುಹಿಡಿದವರು

ಆಕಾಶ್ ದೇಹಕ್ಕೆ ದುಷ್ಪರಿಣಾಮವಿಲ್ಲದ ವಸ್ತುಗಳನ್ನು ಉಪಯೋಗಿಸಿಕೊಂಡು ಸೈಲೆಂಟ್ ಹಾರ್ಟ್ ಅಟ್ಯಾಕ್ ಅನ್ನು ಪತ್ತೆ ಹಚ್ಚಬಲ್ಲ ಡಿವೈಸ್ ಅನ್ನು ಕಂಡುಹಿಡಿದಿದ್ದಾರೆ. ಈ ಡಿವೈಸ್ ದೇಹದ ರಕ್ತದಲ್ಲಿನ ಪ್ರೊಟೀನ್, FABP3 ಅನ್ನು ಕಂಡುಹಿಡಿಯುತ್ತದೆ. ಈ ಡಿವೈಸ್ ಅನ್ನು ಮೊಣಕೈ ಅಥವಾ ಕಿವಿಯ ಹಿಂಭಾಗದಲ್ಲಿ ಇಟ್ಟುಕೊಳ್ಳಬಹುದು. ಈ ಮೂಲಕ ಸೈಲೆಂಟ್ ಹಾರ್ಟ್ ಅಟ್ಯಾಕ್ ಅನ್ನು ಪತ್ತೆ ಹಚ್ಚಬಹುದು.

“FABP3 ರಕ್ತದಲ್ಲಿ ಇರುವ ಅತ್ಯಂತ ಚಿಕ್ಕ ಪ್ರೋಟಿನ್ ಕಣ. ಇದು ನೆಗೆಟಿವ್ ಅಂಶಗಳನ್ನು ಹೊಂದಿರುವುದರಿಂದ ಪಾಸಿಟಿವ್ ಅಂಶಗಳನ್ನು ಆಕರ್ಷಿಸುತ್ತಿದೆ. ಆದ್ರೆ ನಾನು ಅಭಿವೃದ್ಧಿ ಪಡಿಸಿರುವ ಡಿವೈಸ್ ಮೂಲಕ ಅದನ್ನು ಕಂಡುಹಿಡಿಯಬಹುದು ”
- ಆಕಾಶ್, ಸೈಲೆಂಟ್ ಹಾರ್ಟ್ ಅಟ್ಯಾಕ್ ಡಿವೈಸ್ ಕಂಡುಹಿಡಿದವರು

ಆಕಾಶ್ ರಾಷ್ಟ್ರಪತಿ ಭವನದಲ್ಲಿ ಇನ್ನೋವೇಶನ್ಸ್ ಸ್ಕೋಲಾರ್ಸ್ ಇನ್ ರೆಸಿಡೆನ್ಸ್ ಪ್ರೋಗ್ರಾಂನಲ್ಲಿ ಅತಿಥಿಯಾಗಿ ಭಾಗಿಯಾಗಿದ್ದಾರೆ. ತಾವು ತಯಾರಿಸುವ ಸಾಧನದ ಮೂಲಕ ಹಲವರ ಪ್ರಾಣ ಉಳಿಯಬಹುದು ಅನ್ನುವ ನಂಬಿಕೆ ಆಕಾಶ್​ಗಿದೆ. ಅಷ್ಟೇ ಅಲ್ಲ ಗ್ರಾಮೀಣ ಭಾಗದ ಜನರಿಗೆ ಇದರಿಂದ ಸಾಕಷ್ಟು ಉಪಯೋಗ ಆಗುತ್ತದೆ ಅನ್ನೋ ವಿಶ್ವಾಸವೂ ಈ ಚಿಕ್ಕ ಹುಡುಗನಿಗಿದೆ. ಆಕಾಶ್ ಕಂಡುಹಿಡಿದಿರುವ ಸಾಧನಕ್ಕೆ ಪೇಟೆಂಟ್ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಆಕಾಶ್ ದೆಹಲಿಯ ಆಲ್ ಇಂಡಿಯಾ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಪದವಿ ಪಡೆಯುವ ಕನಸು ಕೂಡ ಕಾಣುತ್ತಿದ್ದಾರೆ.

ಅತ್ಯಂತ ಚಿಕ್ಕವಯಸ್ಸಿನಲ್ಲೇ ಆಕಾಶ್ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಈ ವಂಡರ್ ಬಾಯ್ ಭವಿಷ್ಯದಲ್ಲಿ ಏನೇನು ಸಾಧನೆ ಮಾಡುತ್ತಾನೆ ಅನ್ನುವ ಬಗ್ಗೆ ಕುತೂಹಲ ಹೆಚ್ಚಿದೆ. 

ಇದನ್ನು ಓದಿ:

1. ನಮ್ಮ ಮೆಟ್ರೋದ ಪಿಲ್ಲರ್​ಗಳಿಗೆ ಹೊಸ ಜೀವ- ಹೊಸ ತಂತ್ರಜ್ಞಾನದ ಮೂಲಕ ಪರಿಸರ ಕಾಯುವ ಕೆಲಸ

2. ಕೆನಾಡ ಬಿಟ್ಟು ಬಂದ ಆ ಹುಡುಗ ಮನೆ ಮನೆಯಲ್ಲೂ ಹಸಿರು ತಂದ!

3. ಟ್ರೇಲರ್​ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..