ಜೋಧ್​ಪುರದ ಉದ್ಯಮಿಗಳಿಗೆ ಸಹಾಯ ನೀಡುತ್ತಾ "ಫೇಸ್​ಬುಕ್​"ಎಂಟ್ರಿ..?

ಟೀಮ್​ ವೈ.ಎಸ್​. ಕನ್ನಡ

ಜೋಧ್​ಪುರದ ಉದ್ಯಮಿಗಳಿಗೆ ಸಹಾಯ ನೀಡುತ್ತಾ "ಫೇಸ್​ಬುಕ್​"ಎಂಟ್ರಿ..?

Sunday September 04, 2016,

2 min Read

ಸಾಮಾಜಿಕ ಜಾಲತಾಣ ಫೇಸ್​ಬುಕ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಫೇಸ್​ಬುಕ್​ಗೆ ಎಂಟ್ರಿ ಆಗದೆ ಕೆಲವರ ದಿನವೇ ಆರಂಭವಾಗುವುದಿಲ್ಲ. ಆದ್ರೆ ಫೇಸ್​ಬುಕ್​ನಿಂದ ಲಾಭ ಏನು ಅಂತ ಕೇಳುವವರಿಗೆ ಉತ್ತರವೊಂದು ಸಿಗಲಿದೆ. ಜೋಧಪುರದ ಕರಕುಶಲ ಉದ್ಯಮಿಗಳಿಗೆ ಸಹಾಯಹಸ್ತ ಚಾಚಿದೆ.

ಜೋಧಪುರದ ಕರಕುಶಲಕರ್ಮಿಗಳಿಗೆ ಫೇಸ್​ಬುಕ್​ ಟೀಮ್ ಹಲವು ವಿಷಯಗಳಲ್ಲಿ ಸಹಾಯ ಹಸ್ತ ನೀಡಿಲಿದೆ. ಆಮದು ಮತ್ತು ರಫ್ತು ವಿಷಯಗಳ ಬಗ್ಗೆ ಫೇಸ್​ಬುಕ್ ತಂಡ ತಿಳಿ ಹೇಳಲಿದೆ. ಅಷ್ಟೇ ಅಲ್ಲ ಫೇಸ್​ಬುಕ್ ತಂಡ ಜೋಧಪುರದ ಕರಕುಶಲ ಉದ್ಯಮಿಗಳಿಗೆ ಸೆಮಿನಾರ್ ಮೂಲಕ ಉದ್ಯಮಕ್ಕೆ ಬೇಕಾದ ಮತ್ತು ಅದನ್ನು ವಿಸ್ತರಿಸುವ ಬಗ್ಗೆ ವಿವರಣೆಯನ್ನು ನೀಡಲಿದೆ.

image


ಫೇಸ್​ಬುಕ್ ತಂಡ ಈಗಾಗಲೇ ರಾಜಸ್ಥಾನ ಸರ್ಕಾರ ಜೊತೆಗೆ ಈ ಬಗ್ಗೆ ಮಾತುಕತೆಯನ್ನು ಕೂಡ ಯಶಸ್ವಿಯಾಗಿ ನಡೆಸಿದೆ. ಜೋಧಪುರದ ಕರಕುಶಲಕರ್ಮಿಗಳು ತಯಾರಿಸುವ ವಸ್ತುಗಳನ್ನು ಫೇಸ್​ಬುಕ್ ಪೇಜ್ ಮೂಲಕ ಪ್ರೊಮೋಟ್ ಮಾಡಲು ಕೂಡ ಪ್ಲಾನ್ ಮಾಡ್ಕೊಂಡಿದೆ. ಈ ಮೂಲಕ ಅತೀ ಹೆಚ್ಚು ಜನರನ್ನು ಆಕರ್ಷಿಸುವ ಬಗ್ಗೆ ಯೋಜನೆಗಳು ನಡೆಯುತ್ತಿದೆ.

“ ಇಂತಹ ಕರಕುಶಲ ಕರ್ಮಿಗಳು, ರಫ್ತು ಮಾಡುವ ವರ್ತಕರಿಂದ ಆರ್ಡರ್​ಗಳನ್ನು ಪಡೆಯುತ್ತಾರೆ. ಕಷ್ಟಪಟ್ಟು ಬೆವರು ಸುರಿಸಿ ವಸ್ತುಗಳನ್ನು ತಯಾರಿಸುತ್ತಾರೆ. ಆದ್ರೆ ಲಾಭದ ಹೆಚ್ಚಿನ ಅಂಶ ಮಧ್ಯವರ್ತಿಗಳಿಗೆ ಹೋಗುತ್ತದೆ. ಆರ್ಥಿಕ ಮುಗ್ಗಟ್ಟು ಮತ್ತು ಮಾರುಕಟ್ಟೆ ಬಗ್ಗೆ ಇರುವ ಕಡಿಮೆ ಜ್ಞಾನ ಈ ಕರಕುಶಲಕರ್ಮಿಗಳಿಗೆ ಸಾಕಷ್ಟು ಹಿನ್ನಡೆಯನ್ನು ಉಂಟುಮಾಡಿವೆ.”
- ವೈ.ಎಸ್. ಮಾಥುರ್, ಜಿ.ಎಂ. ಡಿಸ್ಟ್ರಿಕ್ಟ್ ಇಂಡಸ್ಟ್ರೀಸ್ ಸೆಂಟರ್

ರಾಜಸ್ಥಾನದ ಕರಕುಶಲ ವೈವಿಧ್ಯತೆ ಜೈಪುರ, ಜೋಧಪುರ ಮತ್ತು ಉದಯ್​ಪುರಗಳಲ್ಲಿ ವಸ್ತುಸಂಗ್ರಹಾಲಯದಲ್ಲಿ ಕಣ್ಣಿಗೆ ಕಳೆಕಟ್ಟುತ್ತವೆ. ಸ್ಥಳೀಯ ಕರಕುಶಲ ಕರ್ಮಿಗಳು ರಾಜಸ್ಥಾನದ ಸಂಸ್ಕೃತಿ ಮತ್ತು ರಾಜವೈಭವವನ್ನು ತಮ್ಮ ಕಲೆಗಳ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಈ ಕಲೆಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ವರ್ಚಸ್ಸುಗಳು ಕೂಡ ಕಾಣಸಿಗುತ್ತದೆ.

ಜೋಧಪುರದ ಕರಕುಶಲ ಉದ್ಯಮ ವಾರ್ಷಿಕವಾಗಿ 1700 ಕೋಟಿ ರೂಪಾಯಿಗಳ ವಹಿವಾಟನ್ನು ಹೊಂದಿದೆ. ಸುಮಾರು 400 ಸಣ್ಣ ಮತ್ತು ಮಧ್ಯಮ ಕೈಗಾಗಾರಿಕೆಗಳು ಮರ, ಟೆಕ್ಸ್​ಟೈಲ್, ಕಲ್ಲು ಮತ್ತು ಮೆಟಲ್​ಗಳಿಂದ ಹಲವು ಉತ್ಪನ್ನಗಳನ್ನು ಮಾರುತ್ತಿವೆ. ಆದ್ರೆ ಇವೆಲ್ಲವೂ ನೇರವಾಗಿ ಕರಕುಶಲ ಕರ್ಮಿಗಳ ಕೈ ಸೇರದೆ ಮಧ್ಯವರ್ತಿಗಳ ಮೂಲಕ ವಹಿವಾಟು ನಡೆಯುತ್ತಿದೆ. ಈಗ ಫೇಸ್​ಬುಕ್ ಎಂಟ್ರಿ ಜೋಧಪುರದ ಸಂಸ್ಕೃತಿಗೆ ಹೊಸ ಟಚ್ ನೀಡಲಿದೆ.

ಇದನ್ನು ಓದಿ:

1. ಕ್ಯಾನ್ಸರ್ ಪೀಡಿತ ಮಗುವಿಗಾಗಿ ಒಲಿಂಪಿಕ್ಸ್ ಪದಕ ಮಾರಿದ ಕ್ರೀಡಾಪಟು

2. 15 ಲಕ್ಷದ ನೌಕರಿ ತೊರೆದು ಹಳೆ ಸೆಲೂನ್ ಗೆ ಹೊಸ ಟಚ್ ನೀಡಿದ ಸ್ನೇಹಿತರು

3. ಮನೆ ಮನೆಗೆ ಡಿಟರ್ಜೆಂಟ್ ಮಾರುತ್ತಿದ್ದ ''ಎಲ್ಲರ ನೆಚ್ಚಿನ ನಿರ್ಮಾ''ದ ಸೃಷ್ಟಿಕರ್ತ

    Share on
    close