ಆವೃತ್ತಿಗಳು
Kannada

ಇತಿಹಾಸ ಸೃಷ್ಟಿಸಿದ ಕೃಷಿ ನೀತಿಯಲ್ಲಿ ಅಂತಹದ್ದೇನಿದೆ..?

ಟೀಮ್​ ವೈ.ಎಸ್​. ಕನ್ನಡ

YourStory Kannada
3rd May 2017
Add to
Shares
12
Comments
Share This
Add to
Shares
12
Comments
Share

ಕರ್ನಾಟಕ ಸರಕಾರ ದೇಶಕ್ಕೆ ಮಾದರಿ ಆಗುವಂತಹ ಹೆಜ್ಜೆಯನ್ನು ಇಟ್ಟಿದೆ. ದೇಶದ ಮೊತ್ತ ಮೊದಲ ಸಾವಯವ ಕೃಷಿಧಾನ್ಯ ಮೇಳವನ್ನು ಆಯೋಜಿಸಿ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ಕರ್ನಾಟಕ ಸರಕಾದ ದೇಶದ ಮೊತ್ತ ಮೊದಲ ಸಾವಯವ ಕೃಷಿ ನೀತಿಯನ್ನು ಜಾರಿಗೆ ತಂದಿದೆ. ಈ ಮೂಲಕ ಸಾವಯವ ಮತ್ತು ಜೈವಿಕ ಕೃಷಿಗೆ ಸರಕಾರ ದೊಡ್ಡ ಬೆಂಬಲವನ್ನು ಒದಗಿಸಿದೆ. ಸರಕಾರದ ಈ ನೀತಿ ಕೃಷಿಕರನ್ನು ಹೆಚ್ಚು ಕ್ರೀಯಾಶೀಲರನ್ನಾಗಿ ಮಾಡುವುದಲ್ಲದೆ, ರೈತರನ್ನು ಗ್ರಾಹಕರು ಮತ್ತು ಮಾರಾಟಗಾರನ್ನು ಹತ್ತಿರಮಾಡುತ್ತದೆ.

image


“ರಾಜ್ಯ ಸರಕಾರದ ಸಾವಯವ ಕೃಷಿ ನೀತಿ ಹಲವು ವಿಧಗಳಲ್ಲಿ ರೈತರಿಗೆ ನೆರವು ನೀಡಲಿದೆ. ಮಣ್ಣಿನ ಸವೆತ, ಬರ ಮತ್ತು ಮಣ್ಣಿನಲ್ಲಿರುವ ಕಡಿಮೆ ಪೋಷಕಾಂಶಗಳಂತಹ ಸಮಸ್ಯೆಗಳನ್ನು ದೂರವಾಗಿಸಲು ನೆರವಾಗಲಿದೆ. ರೈತರಿಗೆ ಅಗತ್ಯವಿರುವ ಮಾರುಕಟ್ಟೆ ಸಂಪರ್ಕವನ್ನು ಕೂಡ ಒದಗಿಸಿಕೊಡಲಿದೆ. ”
- ಕೃಷ್ಣಬೈರೇ ಗೌಡ, ಕೃಷಿ ಸಚಿವರು, ಕರ್ನಾಟಕ ಸರಕಾರ

ಮುಖ್ಯವಾಹಿನಿಯಲ್ಲಿ ಸಾವಯವ ಕೃಷಿ

ಸಾವಯವ ಕೃಷಿ ನೀತಿ ರೈತರಿಗೆ ಸಾಕಷ್ಟು ಹೊಸ ಹೊಸ ಆಲೋಚನೆಗಳನ್ನು ತಂದುಕೊಡಲಿದೆ. ಹಳೆಯ ಕೃಷಿ ಪದ್ಧತಿಯನ್ನು ಬದಲಿಸಿ, ಸಾವಯವ ಕೃಷಿಯತ್ತ ರೈತರು ಗಮನಹರಿಸುವಂತೆ ಮಾಡುವುದೇ ಈ ನೀತಿಯ ಮೂಲ ಉದ್ದೇಶವಾಗಿದೆ. ಪರಿಸರಕ್ಕೆ ಪೂರಕವಾಗಿರುವ ಬೆಳೆ ಬೆಳೆಯುವಂತೆ ಮಾಡುವ ಗುರಿಯನ್ನು ಹೊಂದಿದೆ.

ಇದನ್ನು ಓದಿ: ಬೆಂಗಳೂರಲ್ಲಿ ಸಾವಯವ ಮತ್ತು ರಾಷ್ಟ್ರೀಯ ಸಿರಿಧಾನ್ಯ ಮೇಳ… 

ಅಚ್ಚರಿ ಅಂದ್ರೆ 2014ರಲ್ಲೇ ಸರಕಾರ ಸಾವಯವ ಕೃಷಿ ನೀತಿಯನ್ನು ಜಾರಿಗೆ ತಂದಿತ್ತು. ಆದ್ರೆ ಕೆಲವೇ ಕೆಲವು ರೈತರು ಮಾತ್ರ ಇದರ ಬಗ್ಗೆ ಆಸಕ್ತಿ ತೋರಿದ್ದರು, ಹೊಸ ನೀತಿಯ ಪ್ರಕಾರ ಸರಕಾರ ಸಾವಯವ ಕೃಷಿಗೆ ವಿಶೇಷ ಆಸಕ್ತಿ ತೋರಲಿದೆ. ಅಷ್ಟೇ ಅಲ್ಲ ಕೆಲವು ಋತುಗಳಲ್ಲಿ ಮಾತ್ರ ಬೆಳೆಯುವ ಬೆಳೆಗಳಿಗೆ ಪ್ರಾಮುಖ್ಯತೆ ನೀಡಲಿದೆ. ರೈತರ ಆದಾಯದ ಕಡೆಗೂ ಹೆಚ್ಚು ಗಮನ ಕೊಡಲಿದೆ. ಆಯಾ ಪ್ರದೇಶಗಳಲ್ಲಿ ಬೆಳೆಯುವ ಬೆಳೆಗಳಿಗೂ ಪ್ರೋತ್ಸಾಹ ಸಿಗಲಿದೆ.

ರೈತರ ಆದಾಯದತ್ತ ಗಮನ

ರಾಜ್ಯದಲ್ಲಿ ಬಹಳಷ್ಟು ಕೃಷಿಕರು ಮಳೆಯನ್ನೇ ನಂಬಿ ಬೆಳೆ ಬೆಳಯುತ್ತಿದ್ದಾರೆ. ಹೀಗಾಗಿ ಮಳೆಯ ಕೊರತೆಯಾದರೆ ನಷ್ಟ ಹೆಚ್ಚಾಗುತ್ತದೆ. ಆದ್ರೆ ಸಿರಿಧಾನ್ಯಗಳ ಕೃಷಿ ಕಡೆ ಗಮನ ಕೊಟ್ಟರೆ ಕಡಿಮೆ ನೀರಿನಲ್ಲಿ ಇಳುವರಿ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲದ ಆಹಾರೋತ್ಪನ್ನಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತದೆ.

“ ಸಾವಯವ ಕೃಷಿ ನಿಯಮ ಸಾಕಷ್ಟು ವಿಚಾರಗಳ ಕಡೆ ಗಮನಕೊಡಲಿದೆ. ಸಾವಯವ ಕೃಷಿ ಉತ್ಪನ್ನಗಳನ್ನು ಬೆಳೆಯುವ ಕಡೆಗೆ ಹೆಚ್ಚು ಗಮನಹರಿಸಲಾಗುತ್ತದೆ. ಸಾವಯವ ಕೈಗಾರಿಕೆಗಳ ಮೂಲಕ ದರ ಹಾಗೂ ತೆರಿಗೆ ವಿನಾಯ್ತಿಗಳನ್ನು ಪಡೆಯುವ ಬಗ್ಗೆಯೂ ರೈತರಿಗೆ ತಿಳಿಸಿಕೊಡಲಾಗುವುದು. ”
- ಕೃಷ್ಣಬೈರೇ ಗೌಡ, ಕೃಷಿ ಸಚಿವರು, ಕರ್ನಾಟಕ ಸರಕಾರ

ಕರ್ನಾಟಕ ಅತಿ ಹೆಚ್ಚು ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ಸಾಮರ್ಥ್ಯವನ್ನು ಹಿಂದಿದೆ. ಭಾರತದಿಂದ ಸುಮಾರು 3270 ಕೋಟಿ ಅಥವಾ 3.09 ಲಕ್ಷ ಟನ್​ಗಳಷ್ಟು ವಿವಿಧ ಕೃಷಿ ಉತ್ಪನ್ನಗಳು ರಫ್ತಾಗುತ್ತಿವೆ. ಈ ಪೈಕಿ ಸೋಯಾಬೀನ್ ಅತಿ ಹೆಚ್ಚು ಪಾಲನ್ನು ಹೊಂದಿದೆ. ಕರ್ನಾಟಕ ಕೂಡ ಕೃಷಿ ಉತ್ಪನ್ನಗಳ ರಫ್ತು ಮಾಡಲು ಉತ್ಸಾಹ ಹೊಂದಿದೆ.

ಸಾವಯವ ಕೃಷಿ ಕಡೆ ಹೆಚ್ಚು ಗಮನ

ಮುಂದಿನ ಮೂರು ವರ್ಷಗಳಲ್ಲಿ ಐದು ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಸರಕಾರ ಸಾವಯವ ಕೃಷಿ ಮಾಡುವಂತೆ ಪ್ರೇರೆಪಿಸಲಿದೆ. ಇದಕ್ಕಾಗಿ ಸರ್ಟಿಫಿಕೇಷನ್ ಕೂಡ ನಡೆಯಲಿದೆ. ಈಗಾಗಲೇ 4,178 ಕೃಷಿಕರ ಗುಂಪುಗಳಲ್ಲಿ 1.7 ಲಕ್ಷ ರೈತರು ಸರಕಾರದಿಂದ ಸರ್ಟಿಫಿಕೇಷನ್ ಪಡೆದುಕೊಂಡಿದ್ದಾರೆ. ಪಿಜಿಎಸ್ ಸ್ಕೀಮ್ ಅಡಿಯಲ್ಲಿ ಸುಮಾರು 1.23 ಹೆಕ್ಟೇರ್ ಪ್ರದೇಶಕ್ಕೆ ಸರ್ಟಿಫಿಕೇಷನ್ ನೀಡಲಾಗಿದೆ.

ಬೆಂಗಳೂರು ದೇಶದ ಮೊತ್ತ ಮೊದಲ ಸಾವಯವ ಕೃಷಿ ಧಾನ್ಯಗಳ ಮೇಳವನ್ನು ಆಯೋಜಿಸಿತ್ತು. ಈ ಮೂಲಕ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಗಳನ್ನು ಮಾಡಿತ್ತು. ಸಾವಯವ ಸಿರಿಧಾನ್ಯಗಳಲ್ಲಿ ಅಧಿಕ ಪೋಷಕಾಂಶಗಳು ಒಳಗೊಂಡಿರುತ್ತದೆ. ಕಡಿಮೆ ಪ್ರಮಾಣದ ಗ್ಲೇಮಿಕ್ ಇಂಡೆಕ್ಸ್, ಹೆಚ್ಚು ಫೈಬರ್ ಅಂಶಗಳು ಇರುವುದರಿಂದ ಇವರು ಆರೋಗ್ಯಕ್ಕೆ ಪೂರಕವಾಗಿದೆ. ಸ್ಥೂಲಕಾಯ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೈಪರ್ ಟೆನ್ಷನ್ ಮತ್ತು ಅನಿಮಿಯಾಗಳ ವಿರುದ್ಧ ಈ ಮಿಲ್ಲೆಟ್ಸ್ ಹೋರಾಡುತ್ತವೆ. ಗ್ರಾಹಕರಿಗೆ ಮತ್ತು ಕೃಷಿಕರಿಗೆ ಸಾವಯವ ಕೃಷಿ ಮತ್ತು ಅದರ ಉಪಯೋಗದ ಬಗ್ಗೆ ತಿಳಿಸುವ ಉದ್ದೇಶ ಹೊಂದಲಾಗಿದೆ. ಸಾವಯವ ಕೃಷಿ ಧಾನ್ಯಗಳ ಬೇಡಿಕೆ ಮತ್ತು ಪೂರೈಕೆಗಳ ಕುರಿತು ಕೂಡ ಯೋಜನೆ ರೂಪಿಸಲಾಗಿದೆ. ಇದು ಕೃಷಿಕರನ್ನು ಸಾವಯವ ಕೃಷಿಯತ್ತ ಗಮನಹರಿಸುವಂತೆ ಮಾಡಲಿದೆ. 

ಇದನ್ನು ಓದಿ:

1. ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ರು- ಸಾವಯವ ಕೃಷಿಕನಾಗಿ ಯಶಸ್ಸಿನ ಹೆಜ್ಜೆ ಇಟ್ರು..!

2. ಅಮ್ಮನ ಪ್ರೀತಿಯನ್ನು ಸಾರುವ ಲಂಚ್ ಬಾಕ್ಸ್- "ವಾಯಾ ಬಾಕ್ಸ್"​ನಲ್ಲಿದೆ ವಿಶೇಷ ಗಮ್ಮತ್ತು

3. ಮರೆತುಹೋಗಿದ್ದ ಆರೋಗ್ಯಕರ ಆಹಾರ : ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಕರ್ನಾಟಕ ಸರ್ಕಾರ 

Add to
Shares
12
Comments
Share This
Add to
Shares
12
Comments
Share
Report an issue
Authors

Related Tags