ಆವೃತ್ತಿಗಳು
Kannada

ಬೆಂಗಳೂರಲ್ಲಿ ಸಾವಯವ ಮತ್ತು ರಾಷ್ಟ್ರೀಯ ಸಿರಿಧಾನ್ಯ ಮೇಳ…

ಟೀಮ್ ವೈ.ಎಸ್.ಕನ್ನಡ 

YourStory Kannada
26th Apr 2017
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ವಿಶ್ವದ ಬಹುತೇಕ ರೆಸ್ಟೋರೆಂಟ್ ಗಳು ಈಗ ಚಿಯಾ ಹಾಗೂ ಕಿನ್ವ ಬೀಜಗಳನ್ನು ಹೊರತುಪಡಿಸಿ ಉಳಿದ ಸಿರಿಧಾನ್ಯಗಳತ್ತಲೂ ಚಿತ್ತಹರಿಸಿವೆ. ಭಾರತ, ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ನವಣೆಯಂತಹ ಸಿರಿಧಾನ್ಯಗಳು ಒಂದು ಚಮತ್ಕಾರಿ ಬೆಳೆ ಎಂಬ ನಂಬಿಕೆ ಇದೆ. ಈ ವಿಚಾರ ಜಗತ್ತಿನ ಎಲ್ಲಾ ಆಹಾರ ತಜ್ಞರಿಗೂ ನಿಧಾನವಾಗಿ ಅರಿವಿಗೆ ಬರ್ತಿದೆ.

image


ಸಿರಿಧಾನ್ಯಗಳು ಹಳೆ ಫ್ಯಾಷನ್ ಆಹಾರ ಎಂಬ ತಾತ್ಸಾರ ಈಗಿಲ್ಲ. ಆರೋಗ್ಯ ಮತ್ತು ಪರಿಸರದ ಬಗ್ಗೆ ಕಾಳಜಿ ಇರುವವರೆಲ್ಲ ಸಿರಿಧಾನ್ಯಗಳ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ. ಈ ಧಾನ್ಯಗಳಲ್ಲಿ ಅಂಟಿನ ಅಂಶವಿರುವುದಿಲ್ಲ. ಅಕ್ಕಿ, ಜೋಳ ಮತ್ತು ಗೋಧಿಗಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬೋಹೈಡ್ರೇಡ್ ಇರುತ್ತದೆ. ಅಧಿಕ ಪ್ರೋಟೀನ್, ಫೈಬರ್, ಖನಿಜಾಂಶಗಳು ಸಿರಿಧಾನ್ಯಗಳಲ್ಲಿ ಹೇರಳವಾಗಿವೆ.

ಸಿರಿಧಾನ್ಯ ಮತ್ತು ಕರ್ನಾಟಕದ ಜೈವಿಕ ಉಪಕ್ರಮ…

ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಮೂರು ದಿನಗಳ ಸಾವಯವ ಮತ್ತು ಸಿರಿಧಾನ್ಯ2017 ಎಂಬ ರಾಷ್ಟ್ರೀಯ ವ್ಯಾಪಾರ ಮೇಳವನ್ನು ಆಯೋಜಿಸಿದೆ. ಎಪ್ರಿಲ್ 28ರಿಂದ 30ರವರೆಗೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿರೋ ತ್ರಿಪುರ ವಾಸಿನಿಯಲ್ಲಿ ಮೇಳ ನಡೆಯಲಿದೆ. ರಾಷ್ಟ್ರೀಯ ಸಿರಿಧಾನ್ಯ ಮಾರುಕಟ್ಟೆಯಲ್ಲಿ ಸುಧಾರಣೆ ಹಾಗೂ ಹೊಂದಾಣಿಕೆಯ ಗುರಿಯನ್ನಿಟ್ಟುಕೊಂಡು ಮೇಳ ಆಯೋಜಿಸಲಾಗಿದೆ ಅಂತಾ ಕರ್ನಾಟಕದ ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಕೃಷಿ ಉತ್ಪನ್ನ ಪ್ರಕ್ರಿಯೆ ಮತ್ತು ರಫ್ತು ಅಭಿವೃದ್ಧಿ ನಿಗಮ, ಐಐಎಂಆರ್, ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳು, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಪಶುವೈದ್ಯಕೀಯ ವಿಜ್ಞಾನ ಮತ್ತು ಅಂತರಾಷ್ಟ್ರೀಯ ಜೈವಿಕ ಕೃಷಿ ಸ್ಪರ್ಧಾತ್ಮಕ ಕೇಂದ್ರದ ಸಹಯೋಗದಲ್ಲಿ ಈ ಮೇಳವನ್ನು ಆಯೋಜಿಸಲಾಗುತ್ತಿದೆ. ಸಾಯವಯ ಮತ್ತು ಸಿರಿಧಾನ್ಯ ಉತ್ಪಾದನೆ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ರೈತರು ಮತ್ತು ಚಿಲ್ಲರೆ ವ್ಯಾಪಾರಿಗಳು, ಬೃಹತ್ ಮಾರಾಟಗಾರರು, ರಫ್ತುದಾರರು ಮತ್ತು ಸಂಸ್ಕರಣೆ ಮಾಡುವವರ ನಡುವೆ ಸಂಪರ್ಕ ಕಲ್ಪಿಸುವುದು ಮೇಳದ ಉದ್ದೇಶ. ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಪ್ರಚಾರಕ್ಕೂ ಇದೊಂದು ವೇದಿಕೆ. ಸಾವಯವ ಕೃಷಿ ಲಾಭದಾಯಕ ಹುದ್ದೆ ಅನ್ನೋ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಪ್ರಯತ್ನ ಇದು.

ಭಾರತದಲ್ಲಿ ಸಾವಯವ ಕೃಷಿ ಮಾರುಕಟ್ಟೆಯ ಮೌಲ್ಯ 4500 ಕೋಟಿ. 3500 ಕೋಟಿ ರಫ್ತು ವಹಿವಾಟು ಹಾಗೂ 1000 ಕೋಟಿ ಮೌಲ್ಯದ ಉತ್ಪಾದನೆ ನಡೆಯುತ್ತಿದೆ. 2020ರ ವೇಳೆಗೆ ಈ ಪ್ರಮಾಣ 10,000 ಕೋಟಿಗೆ ತಲುಪುವ ನಿರೀಕ್ಷೆ ಇದೆ. ಭಾರತದಲ್ಲಿ ಸಾವಯವ ಕೃಷಿ ನೀತಿ ಹೊಂದಿದ ಮೊದಲ ರಾಜ್ಯ ಕರ್ನಾಟಕ. ಸಾವಯವ ಕೃಷಿಕರಿಗೆ ಪ್ರಮಾಣಪತ್ರ, ರೈತರಿಗೆ ಕೃಷಿಯಲ್ಲಿ ಎನ್ ಜಿ ಓಗಳ ಸಹಕಾರ, ಸಾವಯವ ಕೃಷಿಕರ ಫೆಡರೇಶನ್ ಸ್ಥಾಪನೆ ಹೀಗೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಉತ್ಪಾದಕರು ಮತ್ತು ಚಿಲ್ಲರೆ ವ್ಯಾಪಾರಿಗಳ ಮಧ್ಯೆ ಸೇತುವೆ ಸಂಪರ್ಕ ಸೇತುವೆ ನಿರ್ಮಿಸುವುದು ನಮ್ಮ ಉದ್ದೇಶ. ಈ ಮೂಲಕ ಉದ್ಯಮ ಮಾದರಿಗಳನ್ನು ರಚಿಸುತ್ತೇವೆ. ಇದರಿಂದ ಎಲ್ಲರಿಗೂ ಖರೀದಿ ಮತ್ತು ವಿತರಣೆ ಅವಕಾಶ ಸಿಗುತ್ತದೆ ಎನ್ನುತ್ತಾರೆ ಕೃಷ್ಣಭೈರೇಗೌಡ.

ಸಿರಿಧಾನ್ಯಗಳ ನವೀಕರಣ…

ಸಾವಯವ ಕೃಷಿಗೆ ಮಹತ್ವ ನೀಡುವುದು ಅಂದ್ರೆ ಸಿರಿಧಾನ್ಯಗಳಿಗೆ ಪ್ರಾಧಾನ್ಯತೆ ನೀಡಿದಂತೆ. ಯಾಕಂದ್ರೆ ಸಿರಿಧಾನ್ಯ ಸೂಪರ್ ಫುಡ್ ಗಳ ಪಟ್ಟಿಗೆ ಸೇರಿದೆ. ಸಿರಿಧಾನ್ಯಗಳನ್ನು ಬೆಳೆಯಲು ಅತ್ಯಂತ ಕಡಿಮೆ ನೀರು ಮತ್ತು ರಾಸಾಯನಿಕಗಳು ಸಾಕಾಗುತ್ತವೆ. ಕಡಿಮೆ ನೀರಿರುವ ಮತ್ತು ಒಣಭೂಮಿಯಲ್ಲೂ ಇವನ್ನು ಬೆಳೆಯಬಹುದು. ನಷ್ಟದ ಸಾಧ್ಯತೆಗಳು ಕಡಿಮೆ, ಖರ್ಚು ಕೂಡ ಹೆಚ್ಚಾಗುವುದಿಲ್ಲ. ಬರಗಾಲದಲ್ಲೂ ಅನ್ನದಾತರ ಕೈಹಿಡಿಯುವ ಬೆಳೆಗಳು ಸಿರಿಧಾನ್ಯಗಳು. ಆದ್ರೂ ಸಿರಿಧಾನ್ಯಗಳ ಉತ್ಪಾದನೆ ಕುಸಿತ ಕಾಣುತ್ತಿದೆ. ಇದಕ್ಕೆ ಕಾರಣ ಜಾಗೃತಿಯ ಕೊರತೆ. ಮಹಾರಾಷ್ಟ್ರ, ಮಧ್ಯಪ್ರದೇಶವನ್ನು ಬಿಟ್ರೆ ಅತಿಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯುತ್ತಿರುವುದು ಕರ್ನಾಟಕದಲ್ಲಿ ಮಾತ್ರ. 2.01 ಮಿಲಿಯನ್ ಹೆಕ್ಟೇರ್ ಜಾಗದಲ್ಲಿ ಸಿರಿಧಾನ್ಯಗಳನ್ನು ಉತ್ಪಾದಿಸಲಾಗುತ್ತಿದೆ.

ಸಿರಿಧಾನ್ಯಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಸರ್ಕಾರ ಬೀಜಗಳ ಮೇಲೆ ಸಬ್ಸಿಡಿ ನೀಡುತ್ತಿದೆ. ಸರ್ಕಾರದ ಖರೀದಿ ಮೇಲೆ ಹೆಚ್ಚು ಬೋನಸ್ ಕೊಡಲಾಗ್ತಿದೆ. ಸಿರಿಧಾನ್ಯಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸೀಮಿತ ಪ್ರಮಾಣದಲ್ಲಿ ಪರಿಚಯಿಸಲಾಗಿದೆ. ಆದ್ರೆ ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಿದರೆ ಮಾತ್ರ ರೈತರಿಗೆ ಲಾಭ ಸಿಗಲಿದೆ. ಇದಕ್ಕಾಗಿ ಸರ್ಕಾರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

*ರಾಜ್ಯದ ಪ್ರಮುಖ ನಗರಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳ

*ಪೌಷ್ಠಿಕಾಂಶ ಮತ್ತು ಆಹಾರ ಪದ್ಧತಿಗೆ ಆರೋಗ್ಯ ಮತ್ತು ಕ್ಷೇಮ ಕಾರ್ಯಾಗಾರ

*ಜಾಗೃತಿ ಕಾರ್ಯಕ್ರಮಗಳು

*ಕೃಷಿಕರಿಗೆ ಮಾರುಕಟ್ಟೆ ವ್ಯವಸ್ಥೆ

*ಸಾವಯವ ಉತ್ಪನ್ನ ಮತ್ತು ಸಿರಿಧಾನ್ಯ ಕ್ಷೇತ್ರದಲ್ಲಿರುವ ಅವಕಾಶ ಮತ್ತು ಸವಾಲುಗಳ ಬಗ್ಗೆ ಕಾರ್ಯಾಗಾರ

ರಾಷ್ಟ್ರೀಯ ವ್ಯಾಪಾರ ಮೇಳ ಜಾಗೃತಿ ಮೂಡಿಸಲು ಇರುವ ಅವಕಾಶ ಮತ್ತು ಸಂದೇಶವನ್ನು ರಾಷ್ಟ್ರಮಟ್ಟದಲ್ಲಿ ತಲುಪಿಸುವ ವೇದಿಕೆ. ಸಿರಿಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಕಲ್ಪಿಸಿ ಕೃಷಿಕರಿಗೆ ಲಾಭ ಮಾಡಿಕೊಡುವುದು ಉದ್ದೇಶ. ಇದಕ್ಕಾಗಿ ರಿಟೇಲ್ ಕಂಪನಿಗಳ ಜೊತೆ ನೇರವಾಗಿ ರೈತರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ ಅಂತಾ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ.

ಮೇಳದ ಬಗ್ಗೆ ಇರುವ ನಿರೀಕ್ಷೆಗಳೇನು?

ಎಪ್ರಿಲ್ 28ರಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಮೇಳವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 30-40,000 ರೈತರು, ವ್ಯಾಪಾರಿಗಳು, ಸಂಸ್ಕರಣಕಾರರು, ರಫ್ತುದಾರರು, ಗ್ರಾಹಕರು, ಜನಸಾಮಾನ್ಯರು ಜೊತೆಗೆ 200 ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. ಎಲ್ಲರನ್ನೂ ಒಂದೇ ಸೂರಿನಡಿ ತರೋದು ಸರ್ಕಾರದ ಗುರಿ. ಈ ಮೂಲಕ ಮಾಹಿತಿ ವಿನಿಮಯ, ಅವಕಾಶ ಸೃಷ್ಟಿ, ಹೂಡಿಕೆಗೆ ಉತ್ತೇಜನ ಸಿಗಲಿದೆ.

2017ರ ಸಾವಯವ-ಸಿರಿಧಾನ್ಯ ರಾಷ್ಟ್ರೀಯ ವ್ಯಾಪಾರ ಮೇಳದ ಹೈಲೈಟ್ಸ್…

ಸಾವಯವ ಉತ್ಪನ್ನಗಳ ವೆರೈಟಿ, ಸಿರಿಧಾನ್ಯ, ಸಿರಿಧಾನ್ಯಗಳ ತಿನಿಸು, ಪರಿಸರ ಸ್ನೇಹಿ ಉತ್ಪನ್ನಗಳು, ಸಂಸ್ಕರಣಾ ಯಂತ್ರಗಳು, ಸಲಕರಣೆಗಳ ಬಗ್ಗೆ 200ಕ್ಕೂ ಹೆಚ್ಚು ಜಾಗತಿಕ ಕಂಪನಿಗಳಿಂದ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಡಾ.ತೇಜ್ ಪ್ರತಾಪ್, ಶೇರ್ ಇ ಕಶ್ಮೀರ್, ಡಾ.ದೇವಕುಮಾರ್, ಎಚ್.ಎನ್.ಜಯರಾಂ, ಡಾ.ಪೀಟರ್ ಕಾರ್ಬರ್ರಿ ಸೇರಿದಂತೆ ಹಲವು ದಿಗ್ಗಜರು ಮಾಹಿತಿ ಹಂಚಿಕೊಳ್ಳಲಿದ್ದಾರೆ.

*ಮಳೆಯಾಧಾರಿತ ಕೃಷಿ ಮತ್ತು ಸಮರ್ಥನೀಯತೆ ಕಡೆಗೆ ಗಮನ

*ಭಾರತ ಮತ್ತು ವಿಶ್ವದಾದ್ಯಂತ ಸಿರಿಧಾನ್ಯಗಳ ಮರುಹುಟ್ಟು

*ಕೃಷಿಯಲ್ಲಿ ಸಾವಯವ ಉತ್ಪಾದನೆಯಲ್ಲಿ ಸುಧಾರಣೆ, ತಂತ್ರಜ್ಞಾನ

*ಸಾವಯವ ಸಮರ್ಥನೀಯತೆ, ಹವಾಮಾನ ಬದಲಾವಣೆ, ತಗ್ಗಿಸುವಿಕೆ ಮತ್ತು ರೈತರ ಜೀವನೋಪಾಯ

*ಬೆಳೆಯುತ್ತಿರುವ ಮಾರುಕಟ್ಟೆ ಮತ್ತು ಅವಕಾಶಗಳು

*ಸಂಸ್ಕರಣ, ಲಾಭಗಳಿಗೆ ಬಗ್ಗೆ ರೈತರಿಗೆ ಅರಿವು

ಈ ಎಲ್ಲಾ ವಿಷಯಗಳ ಬಗ್ಗೆ ತಜ್ಞರು ಮಾತನಾಡಲಿದ್ದಾರೆ. ಸಿರಿಧಾನ್ಯ ಕೃಷಿ ಬಗ್ಗೆ ಕನ್ನಡದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದ್ದು, 3000 ರೈತರು ಪಾಲ್ಗೊಳ್ಳಲಿದ್ದಾರೆ.

ಗ್ರಾಹಕರನ್ನು ತಲುಪಲು ಸರ್ಕಾರದ ಯತ್ನ…

ಸಿರಿಧಾನ್ಯ ಮತ್ತು ಇತರ ಸಾವಯವ ವಸ್ತುಗಳಿಂದ ತಯಾರಿಸಿದ ವಿವಿಧ ತಿನಿಸುಗಳು ಮೇಳದಲ್ಲಿ ಗ್ರಾಹಕರನ್ನು ಸೆಳೆಯಲಿವೆ. ಸಿರಿಧಾನ್ಯಗಳ ಪ್ರಯೋಜನಗಳ ಬಗ್ಗೆ ಗ್ರಾಹಕರು ಖುದ್ದಾಗಿ ತಿಳಿದುಕೊಳ್ಳಬಹುದು. ಜನರ ಹವ್ಯಾಸ ಮತ್ತು ಜೀವನ ಶೈಲಿಯನ್ನು ಬದಲಾಯಿಸಲು ಇದು ನೆರವಾಗಲಿದೆ. ಸಾವಯವ ಆಹಾರ, ಮಹತ್ವ, ಆಹಾರ ಸುರಕ್ಷತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಡುಗೆ ಪ್ರದರ್ಶನ, ಸಿರಿಧಾನ್ಯಗಳ ಅಡುಗೆ ಸ್ಪರ್ಧೆ, ಡಯಟಿಶಿಯನ್ ಗಳಿಂದ ಉಚಿತ ಸಲಹೆ, ಸಮಾಲೋಚನೆಗಳಿಗೂ ವ್ಯವಸ್ಥೆ ಮಾಡಲಾಗಿದೆ.

ಸಿರಿಧಾನ್ಯ ಮಗ, ಸಿರಿಧಾನ್ಯ ಮಗಳು…

ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಸರ್ಕಾರ ಸಿರಿಧಾನ್ಯ ಮಗ, ಸಿರಿಧಾನ್ಯ ಮಗಳು ಎಂಬ ಎರಡು ಶುಭ ಸಂಕೇತಗಳನ್ನು ತಯಾರಿಸಿದೆ. ರಾಜ್ಯದ ಮುಂದಿನ ಪೀಳಿಗೆಯ ಸಂಕೇತ ಇದು. ಮಾಹಿತಿಯನ್ನೊಳಗೊಂಡ ಫನ್ನಿ ಕ್ಯಾಂಪೇನ್ ಇದು. ಮಿಲ್ಲೆಟ್ ಮಗ ಹಾಗೂ ಮಿಲ್ಲೆಟ್ ಮಗಳು ಸೂಪರ್ ಪವರ್ ಮೂಲಕ ಭೂಮಿಯನ್ನು ರಕ್ಷಿಸುತ್ತಾರೆ, ರೈತರಿಗೆ ನೆರವಾಗುತ್ತಾರೆ. 

ಇದನ್ನೂ ಓದಿ... 

ಅಮ್ಮನ ಪ್ರೀತಿಯನ್ನು ಸಾರುವ ಲಂಚ್ ಬಾಕ್ಸ್- "ವಾಯಾ ಬಾಕ್ಸ್"​ನಲ್ಲಿದೆ ವಿಶೇಷ ಗಮ್ಮತ್ತು 

ಅಭಿಮಾನಿಗಳು ದೇವರು, ನಿರ್ಮಾಪಕರು ಅನ್ನದಾತರು..!

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories