ಪಿಝ್ಝಾ ಮಾರುಕಟ್ಟೆಗೆ ರಾಜ `ಡಾಮಿನೋಸ್'
ಭಾರತಿ ಭಟ್
ಪಿಝ್ಝಾ, ಬರ್ಗರ್ ಅಂದ್ರೆ ಸಾಕು, ಎಲ್ಲರ ಬಾಯಲ್ಲೂ ನೀರೂರುತ್ತೆ. ಇತ್ತೀಚೆಗಂತೂ ಇಂತಹ ಜಂಕ್ ಫುಡ್ಗಳಿಗೆ ಗ್ರಾಹಕರು ಮನಸೋಲ್ತಾ ಇದ್ದಾರೆ. ಹಾಗಾಗಿ ತಂತ್ರಜ್ಞಾನವನ್ನು ಸಫಲವಾಗಿ, ಪರಿಣಾಮಕಾರಿಯಾಗಿ ಬಳಸಿಕೊಂಡು ಗ್ರಾಹಕರನ್ನು ಸೆಳೆಯುವಲ್ಲಿ ಯಾರಾದ್ರೂ ಯಶಸ್ವಿಯಾಗಿದ್ದಾರೆ ಅಂದ್ರೆ ಅದು `ಡಾಮಿನೋಸ್ ಪಿಝ್ಝಾ' ಮಾತ್ರ. ಪಿಝ್ಝಾ ಮಾರ್ಕೆಟ್ನಲ್ಲಿ ಶೇಕಡಾ 70ರಷ್ಟು ಪಾಲು ಡಾಮಿನೋಸ್ನದ್ದು ಎಂದ್ರೆ ನೀವು ನಂಬಲೇಬೇಕು. `ಭುಕ್ಕಡ್'ನ ಸಂಸ್ಥಾಪಕ ಅರುಜ್ ಗರ್ಗ್ ಡಾಮಿನೋಸ್ನ ಯಶಸ್ಸಿನ ಬಗ್ಗೆ ಯುವರ್ಸ್ಟೋರಿ ಜೊತೆ ಮಾತನಾಡಿದ್ದಾರೆ. ಬರೀ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಡಾಮಿನೋಸ್ ಅತ್ಯಂತ ಜನಪ್ರಿಯವಾಗಿರೋದಕ್ಕೆ ಕಾರಣ ಶುದ್ಧ ತಂತ್ರಜ್ಞಾನ ಎನ್ನುತ್ತಾರೆ ಅರುಜ್. ಅಂಕಿ-ಅಂಶಗಳು ಕೂಡ ಇದನ್ನೇ ಪುಷ್ಠೀಕರಿಸುತ್ತವೆ. ಫೋರ್ಬ್ಸ್ ವರದಿಯ ಪ್ರಕಾರ ಡಾಮಿನೋಸ್ ಪಿಝ್ಝಾ ಶೇಕಡಾ 750ರಷ್ಟು ಪ್ರಗತಿ ಕಾಣ್ತಾ ಇದೆ. ಇದಕ್ಕೆ ಕಾರಣ ಡಾಮಿನೋಸ್ ಪಿಝ್ಝಾಗಳ ಗುಣಮಟ್ಟ ಮತ್ತು ರುಚಿ ಮಾತ್ರವಲ್ಲ, ಡಿಜಿಟಲ್ ತಂತ್ರಜ್ಞಾನ ಮತ್ತು ಅದಕ್ಕೆ ತಕ್ಕಂಥ ರಣತಂತ್ರ. ಡಾಮಿನೋಸ್ನ ಡಿಜಿಟಲ್ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಅಂದ್ರೆ, ಗ್ರಾಹಕರಿಗೆ ಪಿಝ್ಝಾ ಆರ್ಡರ್ ಮಾಡುವುದಕ್ಕಾಗಲೇ, ಅದು ತಲುಪುವ ಸಮಯ ತಿಳಿದುಕೊಳ್ಳೋದಕ್ಕಾಗಲಿ, ಹಣ ಪಾವತಿಸುವುದಕ್ಕಾಗಲಿ ಯಾವುದೇ ಸಮಸ್ಯೆಯಿಲ್ಲ. ಭಾರತದಲ್ಲಿ ಕೂಡ ಅವರ ಡೆಲಿವರಿ ವ್ಯವಸ್ಥೆ ಸರಳ ಮತ್ತು ವೇಗವಾಗಿದೆ.
ಗ್ರಾಹಕರ ಮನಸ್ಥಿತಿ ಅರಿಯಲು ಅಂಕಿ-ಸಂಖ್ಯೆಗಳ ನೆರವು
`ಜುಬಿಲಿಯಂಟ್ ಫುಡ್ ವರ್ಕ್ಸ್'ನ ಸಿಇಓ ಅಜಯ್ ಕೌಲ್ ಅವರ ಪ್ರಕಾರ, ಡಾಮಿನೋಸ್ ಸುಮಾರು 20 ಮಿಲಿಯನ್ನಷ್ಟು ಅನನ್ಯ ಗ್ರಾಹಕರನ್ನು ಹೊಂದಿದೆ. ಇದು ಏಕವ್ಯಕ್ತಿ ಪ್ರಯತ್ನದಿಂದ ಆಗಿದ್ದಲ್ಲ. ಈ ಸಾಧನೆಯ ಹಿಂದೆ ಸಾಂಘಿಕ ಶ್ರಮವಿದೆ. ಡಾಮಿನೋಸ್ ಪ್ರತಿಯೊಬ್ಬ ಗ್ರಾಹಕನನ್ನೂ ಒಂದು ವಿಭಾಗದಂತೆ ಪರಿಗಣಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ಗ್ರಾಹಕರ ಪ್ರತಿಕ್ರಿಯೆ ಕೂಡ ಮಹತ್ವದ್ದು. ಅದರ ಆಧಾರದ ಮೇಲೆ ಡಾಮಿನೋಸ್ ತನ್ನ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವತ್ತ ಗಮನಹರಿಸಿದೆ ಎನ್ನುತ್ತಾರೆ ಅಜಯ್ ಕೌಲ್.
ಸರಪಣಿಯ ಪ್ರತಿ ಕೊಂಡಿಯ ಶೋಧ
ಪ್ರತಿಯೊಬ್ಬ ಗ್ರಾಹಕರಿಗೂ ಅತ್ಯುತ್ತಮ ಅನುಭವ ಆಗಬೇಕು ಅನ್ನೋದು ಡಾಮಿನೋಸ್ನ ಉದ್ದೇಶ. ತಿನಿಸು, ಅವುಗಳ ವಿತರಣೆ, ಅತಿ ಹೆಚ್ಚಾಗಿ ಕೆಟ್ಟುಹೋಗುವಂತ ತಂತ್ರಜ್ಞಾನ. ಇದು ಸಂಸ್ಥೆಯ ಕಾರ್ಯವೈಖರಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಗತ್ಯ ವಸ್ತುಗಳ ಕ್ರೋಢೀಕರಣ, ಅಡುಗೆ, ತಿನಿಸುಗಳ ವಿತರಣೆ ಹೀಗೆ ಆಹಾರ ಉದ್ಯಮದ ಸರಣಿ ಸುಲಲಿತವಾಗಬೇಕೆಂದ್ರೆ ಪ್ರತಿಯೊಂದು ಕೊಂಡಿಯೂ ಸರಿಯಾಗಿರಬೇಕು ಅನ್ನೋದು ಅಜಯ್ ಅವರ ಅಭಿಪ್ರಾಯ. ತಾಪಮಾನ ಮತ್ತು ಇಂಧನ ದಕ್ಷತೆಯ ಜಾಡು ಹಿಡಿಯುವ ಓವನ್ನಂತೆ, ಪ್ರತಿಬಾರಿ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತಿರುತ್ತೆ. ಅಗತ್ಯ ವಸ್ತುಗಳಿದ್ರೆ ಈ ಪಿಝ್ಝಾ ಉದ್ಯಮವೇನೂ ಕಷ್ಟವಲ್ಲ ಅನ್ನೋ ಭಾವನೆ ನಮಗಿದೆ. ಆದ್ರೆ ಇದರಲ್ಲೂ ಪರಿಪೂರ್ಣತೆ ಬರಬೇಕಂದ್ರೆ ತಂತ್ರಜ್ಞಾನದ ಮೇಲ್ವಿಚಾರಣೆ ಅತ್ಯತತ್ಯ ಅನ್ನೋದು ಅಜಯ್ ಕೌಲ್ ಅವರ ಅನುಭವದ ಮಾತು.
ಅಸ್ಥಿರ ತಾಣಗಳಲ್ಲೂ ಆಹಾರ ವಿತರಣೆ
ಸದ್ಯ ಡಾಮಿನೋಸ್ ಆಹಾರ ಸೇವನೆಯ ಪರಿಸರದ ಮೇಲೆ ಹೆಚ್ಚಿನ ಗಮನಹರಿಸಿದೆ. ರೈಲ್ವೆ ಸ್ಟೇಶನ್ಗಳಲ್ಲಿ ಕೂಡ ಗ್ರಾಹಕರು ಸುಲಭವಾಗಿ ಪಿಝ್ಝಾ ಆರ್ಡರ್ ಮಾಡಿ ಅದನ್ನು ಈಸಿಯಾಗಿ ಪಡೆಯುವಂತೆ ಮಾಡುವುದು ಡಾಮಿನೋಸ್ ಮುಂದಿರುವ ಸವಾಲು. ರೈಲು ನಿಲ್ದಾಣಗಳಲಿ ಪಿಝ್ಝಾ ಮಳಿಗೆಗಳನ್ನು ತೆರೆಯುವುದರ ಜೊತೆಗೆ ಐಆರ್ಸಿಟಿಸಿ ಜೊತೆಗೂ ಒಪ್ಪಂದ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಇನ್ನು ಮುಂಬೈನ ಜುಹೂ ಬೀಚ್ನ ಪಕ್ಕದಲ್ಲೇ ಡಾಮಿನೋಸ್ ಪಿಝ್ಝಾಗಳ ಆರ್ಡರ್ ತೆಗೆದುಕೊಳ್ಳುವ ಸ್ಥಳವಿದೆ. ವೈಫೈ ಮೂಲಕ ಹತ್ತಿರದ ಡಾಮಿನೋಸ್ ಅಂಗಡಿಗೆ ಸಂಪರ್ಕ ಕಲ್ಪಿಸಲಾಗಿದೆ. ಬೀಚ್ನಲ್ಲೇ ಕುಳಿತು ಪಿಝ್ಝಾ ಆರ್ಡರ್ ಮಾಡಿದ್ರೆ ಕೆಲ ಹೊತ್ತಿನಲ್ಲೇ ಸಮೀಪದ ಅಂಗಡಿಯಿಂದ ಪಿಝ್ಝಾವನ್ನು ಅವರಿಗೆ ತಲುಪಿಸುವ ವ್ಯವಸ್ಥೆಯಿದೆ.
ಸದ್ಯ ಡಾಮಿನೋಸ್ ಪಿಝ್ಝಾದಲ್ಲಿ 30,000 ನೌಕರರು ಕೆಲಸ ಮಾಡ್ತಿದ್ದಾರೆ. ಹಣ ಪಾವತಿಗೆ, ಗ್ರಾಹಕರ ಪ್ರತಿಕ್ರಿಯೆ ಪಡೆಯಲು ಹಾಗೂ ಜಿಪಿಎಸ್ ಟ್ರ್ಯಾಕಿಂಗ್ಗಾಗಿ ಎಲ್ಲ ಸಿಬ್ಬಂದಿಗೂ ಡಿವೈಸ್ಗಳನ್ನು ಕೊಡಲು ಸಂಸ್ಥೆ ಮುಂದಾಗಿದೆ. ಡೆಲಿವರಿ ಬಾಯ್ ಯಾವ ಮಾರ್ಗದಲ್ಲಿ ಹೋಗುತ್ತಿದ್ದಾನೆ ಅನ್ನೋದ್ರಿಂದ ಹಿಡಿದು ಪ್ರತಿಯೊಂದು ಮಾಹಿತಿಯನ್ನೂ ಸಿಬ್ಬಂದಿ ತಿಳಿದುಕೊಳ್ಳುವಂತೆ ಮಾಡುವುದು ಡಾಮಿನೋಸ್ನ ಉದ್ದೇಶ.
ಪಿಝ್ಝಾ ಮೊಬೈಲ್
ಸದ್ಯ ಸಹಸೃಷ್ಟಿಯ ಕಲ್ಪನೆಯತ್ತ ಡಾಮಿನೋಸ್ ಈ ಚಿತ್ತ ಹರಿಸಿದೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಗ್ರಾಹಕರಿಗೆ ಕೂಡ ಅವಕಾಶವಿದೆ. ಇದ್ರಿಂದಾಗಿ ಡಾಮಿನೋಸ್ ಬ್ರ್ಯಾಂಡ್ ಜೊತೆಗಿನ ಗ್ರಾಹಕರ ಭಾವನಾತ್ಮಕ ಸಂಬಂಧ ಮತ್ತಷ್ಟು ಬಲವಾಗಲಿದೆ. ಗ್ರಾಹಕರು ಆನ್ಲೈನ್ನಲ್ಲಿ ವೈಯಕ್ತಿಕವಾಗಿ ತಮಗಿಷ್ಟವಾದ ಪಿಝ್ಝಾ ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕೆ ಅವರೇ ದರವನ್ನೂ ನಿಗದಿಪಡಿಸ್ತಾರೆ. ಈ ಪೈಕಿ ಅತಿ ಹೆಚ್ಚು ಮಾರಾಟವಾದ ಪಿಝ್ಝಾಗಳಿಂದ ಬಂದ ಲಾಭದಲ್ಲಿ ಗ್ರಾಹಕರಿಗೂ ಪಾಲು ಸಿಗಲಿದೆ.
ಮತ್ತೊಂದ್ಕಡೆ ಆನ್ಲೈನ್ನಲ್ಲೂ ಡಾಮಿನೋಸ್ ಹವಾ ಜೋರಾಗಿಯೇ ಇದೆ. ಪಿಝ್ಝಾ ಟ್ರ್ಯಾಕರ್, ಪಿಝ್ಝಾ ಹೀರೋ, ಗ್ರಾಹಕರ ಪಿಝ್ಝಾ ಪ್ರೊಫೈಲ್ ಜೊತೆಗೆ ಐಪಾಡ್ ಆ್ಯಪ್ ಒಂದನ್ನು ಕೂಡ ಡಾಮಿನೋಸ್ ಬಿಡುಗಡೆ ಮಾಡಿದೆ. ಅದಕ್ಕೆ 3ಡಿ ಪಿಝ್ಝಾ ಬಿಲ್ಡರ್ ಅಂತಾ ಹೆಸರಿಡಲಾಗಿದೆ.