ಫೇಸ್‌ಬುಕ್‌ ಸಹಾಯದಿಂದ 12 ವರ್ಷಗಳ ನಂತರ ಯುವತಿ ತನ್ನ ಕುಟುಂಬದೊಂದಿಗೆ ಮತ್ತೆ ಕೂಡಿಕೊಂಡಳು

ವಂಶಿ ಕೃಷ್ಣನ ಮನೆಯಲ್ಲಿ ಕೆಲಸಕ್ಕೆ ಬಂದ ಹದಿಹರೆಯದ ಭವಾನಿಗೆ ಅವಳ ಕುಟುಂಬ ಎಲ್ಲಿದೆ ಎಂದು ತಿಳಿದಿರಲಿಲ್ಲ. ಅವರು ಅವಳ ಮನೆಯವರನ್ನು ಹುಡುಕಲು ಸಹಾಯ ಮಾಡಲು ಮುಂದಾದರು. ಅವರು ಅಂತಿಮವಾಗಿ 12 ವರ್ಷಗಳ ನಂತರ ತಮ್ಮ ಕುಟುಂಬವನ್ನು ಭೇಟಿಯಾದರು.

ಫೇಸ್‌ಬುಕ್‌ ಸಹಾಯದಿಂದ 12 ವರ್ಷಗಳ ನಂತರ ಯುವತಿ ತನ್ನ ಕುಟುಂಬದೊಂದಿಗೆ ಮತ್ತೆ ಕೂಡಿಕೊಂಡಳು

Thursday December 12, 2019,

2 min Read

ಭವಾನಿ (16) ವಿಜಯವಾಡದಲ್ಲಿರುವ ವಂಶಿ ಕೃಷ್ಣನ ಮನೆಯಲ್ಲಿ ಕೆಲಸ ಅರಸಿ ಬಂದಾಗ, ಅವರು ನೇಮಕ ಮಾಡುವ ಎಲ್ಲ ಉದ್ಯೋಗಿಗಳೊಂದಿಗೆ ಮಾಡುವಂತೆ ಅವರು ಅವಳ ದಾಖಲೆಗಳನ್ನು ಕೇಳಿದರು. ಭವಾನಿಗೆ ಯಾರೂ ಇರಲಿಲ್ಲ. ಅವಳು ಬಾಲ್ಯದಲ್ಲಿ ನಾಪತ್ತೆಯಾಗಿದ್ದಳು ಮತ್ತು ಒಬ್ಬ ಮಹಿಳೆ ಅವಳನ್ನು ದತ್ತು ಪಡೆದಿದ್ದಳು ಎಂದು ಅವಳು ಅವರಿಗೆ ಹೇಳಿದಳು. ಅವಳ ನಿಜವಾದ ಕುಟುಂಬ ಎಲ್ಲಿದೆ ಎಂದು ಅವಳಿಗೆ ಯಾವುದೇ ಸುಳಿವು ಕೂಡಾ ಇರಲಿಲ್ಲ.


ವಂಶಿಯು ಅವಳ ಕಥೆಯನ್ನು ಕೇಳಿ ದುಃಖಿತರಾಗಿ ಮತ್ತು ಅವಳ ಕುಟುಂಬವನ್ನು ಹುಡುಕಲು ನಿರ್ಧರಿಸಿದರು. ಅವರು ಭವಾನಿಯ ವಿವರಗಳನ್ನು ಮತ್ತು ಬಾಲ್ಯದಲ್ಲಿ ಅವಳು ಹೇಗೆ ಕಾಣೆಯಾಗಿದ್ದಳು ಎಂಬುದನ್ನು ಜನಪ್ರಿಯ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಹಾಕಿ ಹುಡುಕುವ ಮೂಲಕ ಪ್ರಾರಂಭಿಸಿದರು.


ಭವಾನಿ (ಚಿತ್ರಕೃಪೆ: ಎಎನ್‌ಐ)




ಅವರ ಪ್ರಯತ್ನದ ಫಲವಾಗಿ, ಭವಾನಿ ಅವರು ಅವರ ಕುಟುಂಬದೊಂದಿಗೆ ಮತ್ತೆ ಒಂದಾದರು.


ಎಎನ್‌ಐ ಜೊತೆ ಮಾತನಾಡಿದ ವಂಶಿ,


"ನಾನು ನೇಮಿಸಿಕೊಳ್ಳುವ ಜನರ ದಾಖಲೆಗಳನ್ನು ನಾನು ಪರಿಶೀಲಿಸುತ್ತಿದ್ದೆ. ಹಾಗಾಗಿ, ಆಕೆಯ ವಯಸ್ಸನ್ನು ತಿಳಿಯಲು ನಾನು ಹುಡುಗಿಯ ದಾಖಲೆಗಳನ್ನು ಕೇಳಿದೆ. ಅವಳು ಕಾಣೆಯಾದಾಗ ಒಬ್ಬ ಮಹಿಳೆ ದತ್ತು ಪಡೆದಿದ್ದರಿಂದ ಅವಳು ಯಾವುದೇ ದಾಖಲೆಗಳನ್ನು ಹೊಂದಿಲ್ಲ ಎಂದು ಅವಳು ನನಗೆ ಹೇಳಿದಳು. ಅವಳು ತನ್ನ ಹೆತ್ತವರೊಂದಿಗೆ ಸಂಪರ್ಕ ಹೊಂದಲು ಬಯಸುತ್ತಾಳೆಯೇ ಎಂದು ನಾನು ಕೇಳಿದೆ, ಅವಳು ಹೌದು ಎಂದು ಹೇಳಿದಳು. ನಂತರ ನಾನು ಅವಳಿಂದ ವಿವರಗಳನ್ನು ತೆಗೆದುಕೊಂಡು ಫೇಸ್‌ಬುಕ್‌ನಲ್ಲಿ ಹುಡುಕಲು ಪ್ರಾರಂಭಿಸಿದೆ.”


ಎನ್‌ಡಿಟಿವಿ ಪ್ರಕಾರ, ವಿಜಯನಗರಂ ಜಿಲ್ಲೆಯಲ್ಲಿ ನಾಲ್ಕು ವರ್ಷದಿಂದ ತನ್ನ ಕುಟುಂಬದಿಂದ ಬೇರ್ಪಟ್ಟಾಗ ಭವಾನಿಯನ್ನು ವಿಜಯವಾಡd ಮಹಿಳೆಯೊಬ್ಬಳು ದತ್ತು ಪಡೆದಿದ್ದರು.


ವಂಶಿ ನಂತರ ಮುಂದುವರೆದು,


"ನಾನು ಕೆಲವು ಜನರಿಗೆ ಸಂದೇಶವನ್ನು ಕಳುಹಿಸಿದೆ. ಮತ್ತು ಒಬ್ಬ ವ್ಯಕ್ತಿಯು ನನ್ನ ಸಂದೇಶಕ್ಕೆ ಉತ್ತರಿಸಿದನು. ನಾನು ಅವನಿಂದ ವಿವರಗಳನ್ನು ತೆಗೆದುಕೊಂಡೆ, ಅದು ಹುಡುಗಿ ಒದಗಿಸಿದ ಮಾಹಿತಿಯೊಂದಿಗೆ ಹೊಂದಿಕೆಯಾಯಿತು. ನಂತರ ಅವನು ವೀಡಿಯೊ ಕರೆಗಾಗಿ ವಿನಂತಿಸಿದನು. ಅವನು ಮತ್ತು ಅವಳ ಪೋಷಕರು ನಂತರ ಹುಡುಗಿ ಅವರ ಕುಟುಂಬಕ್ಕೆ ಸೇರಿದವಳು ಎಂದು ದೃಢ ಪಡಿಸಿದರು,” ವರದಿ ಎಎನ್‌ಐ.


ಅಂತಿಮವಾಗಿ, ಭವಾನಿ ಅವರ ಕುಟುಂಬದೊಂದಿಗೆ ಮತ್ತೆ ಒಂದಾದರು. ಫೇಸ್‌ಬುಕ್, ಅನೇಕ ನಿದರ್ಶನಗಳಲ್ಲಿ, ಕಾಣೆಯಾದ ಜನರು ತಮ್ಮ ಕುಟುಂಬಗಳೊಂದಿಗೆ ಮತ್ತೆ ಒಂದಾಗಲು ಸಹಾಯ ಮಾಡಿದೆ.


ಈ ವರ್ಷದ ಆರಂಭದಲ್ಲಿ, 2011 ರಿಂದ ಕಾಣೆಯಾದ ವ್ಯಕ್ತಿಯನ್ನು ಮತ್ತೆ ಅವರ ಕುಟುಂಬದೊಂದಿಗೆ ಸೇರಿಸಲಾಯಿತು. ಅವರ ತಾಯಿ ಫೇಸ್‌ಬುಕ್‌ನಲ್ಲಿ ಅವರ ಪ್ರೊಫೈಲ್ ಅನ್ನು ನೋಡಿದ್ದಾರೆ ಮತ್ತು ಸೈಬರ್ ಅಪರಾಧ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ, ಅವರು ಐಪಿ ವಿಳಾಸವನ್ನು ಪತ್ತೆಹಚ್ಚಿದರು ಮತ್ತು ಪಂಜಾಬನ ಅಮೃತಸರ ಜಿಲ್ಲೆಯ ರಣಕಲಾ ಗ್ರಾಮದಲ್ಲಿ ನೆಲೆಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.