ಆವೃತ್ತಿಗಳು
Kannada

ಬಳಸಿಕೊಂಡಿದ್ದು ಸೆಕೆಂಡ್​ಹ್ಯಾಂಡ್​ ವಸ್ತು- ತಯಾರಾಗಿದ್ದು ಪರಿಸರ ಸ್ನೇಹಿ ಕಾರು..!

ಟೀಮ್​ ವೈ.ಎಸ್​. ಕನ್ನಡ

YourStory Kannada
21st Jun 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಮಾನವನ ಆವಿಷ್ಕಾರಗಳಿಗೆ ಅಂತ್ಯವೇ ಇಲ್ಲ. ಥಾಮಸ್​ ಅಲ್ವಾ ಎಡಿಸನ್​ ವಿದ್ಯುತ್​ ಬಲ್ಬ್​ ಕಂಡು ಹಿಡಿದಿದ್ದರಿಂದ ಹಿಡಿದು ಇಲ್ಲಿಯ ತನಕ ಅದೆಷ್ಟು ಆವಿಷ್ಕಾರಗಳು ನಡೆದಿವೆ ಅನ್ನೋದಿಕ್ಕೆ ಲೆಕ್ಕವೇ ಇಲ್ಲ. ಇವತ್ತು ಕೂಡ ಅಷ್ಟೇ ಏನೇನೋ ಪ್ರಯೋಗಗಳು ನಡೆಯುತ್ತವೆ. ಮನುಕುಲಕ್ಕೆ ಸಹಾಯ ನೀಡುವ ಆವಿಷ್ಕಾರಗಳು ಹೆಚ್ಚು ಗಮನ ಸೆಳೆಯುತ್ತವೆ. ಈಗ ಕರ್ನಾಟಕದಲ್ಲೂ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ.

ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆ ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯದಿಂದ ಸಾಕಷ್ಟು ತೊಂದರೆಯಾಗಿದೆ. ಆದ್ದರಿಂದ ಸರಕಾರ, ಸಂಘ ಸಂಸ್ಥೆಗಳು ಮಾಲಿನ್ಯ ರಹಿತ ವಾಹನಗಳನ್ನು ಬಳಸುವಂತೆ ಕರೆ ನೀಡುತ್ತಲೇ ಇದ್ದಾರೆ. ಆದರೆ ಅದು ಮಾತ್ರ ಇನ್ನೂ ಸರಿಯಾಗಿ ಇನ್ನು ಜಾರಿಗೆ ತರಲು ಆಗುತ್ತಿಲ್ಲ. ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರುವ ರಾಮನಗರದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸೌರ ಶಕ್ತಿಯನ್ನು ಬಳಸಿಕೊಂಡು ವಾಹನ ತಯಾರಿಸಿ ಅಚ್ಚರಿ ಮೂಡಿಸಿದ್ದಾನೆ.

image


ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ನವೀಕರಿಸಲಾಗದ ಇಂಧನ ಮೂಲಗಳನ್ನು ಬಳಸುವ ವಾಹನಗಳನ್ನು ಅವಲಂಭಿಸುವುದನ್ನು ತಡೆದು ಸೌರಶಕ್ತಿಯನ್ನು ಹೆಚ್ಚಾಗಿ ಬಳಸುವ ನಿಟ್ಟಿನಲ್ಲಿ ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಮಿಥುನ್, ತನ್ನ ಶೈಕ್ಷಣಿಕ ಯೋಜನೆಯಡಿ ಮಾನವ ಶಕ್ತಿ ಹಾಗೂ ಸೌರಶಕ್ತಿಯಿಂದ ಚಲಿಸುವ ಹೈಬ್ರಿಡ್ ಕಾರ್, ಯಕೋ ಕಾರ್ ಅಥವಾ ಟ್ರೈ ಸೈಕಲ್ ಕಾರ್ ಎಂದು ಕರೆಯಲ್ಪಡುವ ವಿಶೇಷ ತಂತ್ರಜ್ಞಾನದ ಮಾದರಿಯನ್ನು ತಯಾರಿಸಿದ್ದಾನೆ.

ಸೆಕೆಂಡ್ ಹ್ಯಾಂಡ್​ ವಸ್ತುಗಳ ಬಳಕೆ..!

ವಿಶೇಷ ಎಂದರೆ ಈ ಟ್ರೈಸಿಕಲ್ ನಿರ್ಮಾಣಕ್ಕೆ ಮಿಥುನ್ ವರ್ಕ್ ಶಾಪ್​ಗಳಲ್ಲಿ ದೊರೆಯುವ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಬಳಕೆ ಮಾಡಿದ್ದಾನೆ. ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ(8ನೇ ಸೆಮಿಸ್ಟರ್) ಅಸೋಸಿಯೇಟ್ ,ಪ್ರೊ. ಬಿ.ಎಸ್ ಮಹೇಶ್ ಮಾರ್ಗದರ್ಶನದಲ್ಲಿ ಸೌರಶಕ್ತಿ ಇಂಧನದಿಂದ ಚಲಿಸುವ ಟ್ರೈ ಸೈಕಲ್ ಯಕೋ ಕಾರ್ ಮಾದರಿಯನ್ನು ತಯಾರಿಸಿದ್ದಾನೆ. ಇದರ ಬಳಕೆಗೆ 29 ಸಾವಿರ ರೂಪಾಯಿ ಖರ್ಚಾಗಿದೆ.

ಇದನ್ನು ಓದಿ: ಪೆಟ್ರೋಲ್ ಡೀಸೆಲ್ ಬೇಡ್ವೇ ಬೇಡ..! ನೀರಿನಿಂದಲೇ ಓಡುತ್ತೆ ಈ ಅದ್ಭುತ ಕಾರು

ಏನಿದರ ವಿಶೇಷತೆ..?

ಸೈಕಲ್​ನ ಪೆಡಲ್ ಮಾದರಿಯನ್ನ ಹೊಂದಿರುವ ಈ ಮಾದರಿ ಕಾರು, ಸೌರಶಕ್ತಿ ಮೂಲಕ ಗಂಟೆಗೆ ಗರಿಷ್ಠ 25-30 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ. ಅಷ್ಟೇ ಅಲ್ಲದೇ ಈ ವಿಶೇಷ ಕಾರು 36 ವೋಲ್ಟ್ ಬ್ಯಾಟರಿ ಮತ್ತು 41 ವೋಲ್ಟ್ ಸೋಲಾರ್ ಪ್ಯಾನಲ್ ಹೊಂದಿದೆ. ನೀವು ಪೆಡಲ್ ತುಳಿದು ಆಯಾಸವಾದ ಸಮಯದಲ್ಲಿ ಇದರಲ್ಲಿರುವ ಪ್ಯಾನಲ್​ನಿಂದ ಸೌರಶಕ್ತಿ ಬಳಕೆ ಮಾಡಿಕೊಂಡು ಈ ಟ್ರೈಸಿಕಲ್​ನ್ನು ಚಲಿಸಬಹುದು. ಒಮ್ಮೆ ಬ್ಯಾಟರಿ ಸಂಪೂರ್ಣ ಚಾರ್ಜ್ ಆದರೆ ಸರಿ, ಸುಮಾರು 25 ಕಿಲೋ ಮೀಟರ್ ದೂರ ಹೈಬ್ರಿಡ್ ಕಾರು ಸಂಚರಿಸಲಿದೆ. 45 ಡಿಗ್ರಿ ವರೆಗೆ ಅಪ್ ಅಂಡ್ ಡೌನ್ ತಿರುಗಿಸಬಹುದಾದ ವಿಶೇಷವಾದ ನೂತನ ಸ್ಟೇರಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ ಏರೋ ಡೈನಮಿಕ್ ವಿನ್ಯಾಸವನ್ನು ಹೊಂದಿರುವ ಟ್ರೈ ಸೈಕಲ್ ಕಾರನ್ನು, ಗಾಳಿಯ ವಿರುದ್ಧ ನವಿರಾಗಿ ಚಾಲನೆ ಮಾಡಬಹುದು. ಏರೋ ಡೈನಮಿಕ್ ವಿನ್ಯಾಸವು ವಾಹನದ ವೇಗದ ವೇಳೆ ಒತ್ತಡ ಹೇರುವುದಿಲ್ಲ.

image


ಅನುಕೂಲ ಏನು?

ಪ್ರಸ್ತುತ ವಾಹನಗಳಲ್ಲಿ ನವೀಕರಿಸಲಾಗದ , ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಪೆಟ್ರೋಲ್, ಡೀಸೆಲ್​ನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದರ ಅವಲಂಭನೆ ದಿನೆದಿನೇ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ತಂತ್ರಜ್ಞಾನ ಮಾದರಿಯನ್ನು ಅಭಿವದ್ಧಿ ಪಡಿಸಲಾಗಿದೆ. ಇದರಿಂದ ನಾನಾ ರೀತಿಯ ಅನುಕೂಲಗಳಾಗಲಿವೆ. ಪರಿಸರ ಸ್ನೇಹಿಯಾಗಿರುವ ಹೈಬ್ರಿಡ್ ಕಾರು ಮಾನಸ ಶಕ್ತಿ ಮತ್ತು ಸೌರಶಕ್ತಿಯನ್ನು ಸದ್ಬಳಕೆ ಮಾಡುತ್ತದೆ. ಶೆಲ್ಟರ್ ಅವಶ್ಯಕತೆ ಇಲ್ಲ. ಪಾರ್ಕಿಂಗ್ ಸಮಯದಲ್ಲೂ ಬ್ಯಾಟರಿ ಚಾರ್ಜ್ ಆಗುವ ವ್ಯವಸ್ಥೆ ಇದೆ. ಮೂರು ಚಕ್ರದ ವಾನಹಗಳಲ್ಲಿ ಸೋಲಾರ್ ಶಕ್ತಿಯ ಬಳಕೆ ಇದೆ ಮೊದಲ ಪ್ರಯತ್ನ . ಪೆಡಲ್ ತುಳಿದು ಆಯಾಸವಾದ ಸಮಯದಲ್ಲಿ ಸೋಲಾರ್ ಪವರ್ ಬಳಸಿಕೊಳ್ಳಬಹುದು. ಪ್ರಸ್ತುತ ಒಂದು ಸೀಟರ್​ ಮಾದರಿಯನ್ನು ರಚಿಸಲಾಗಿದೆ. ಮುಂಭಾಗದಲ್ಲಿ ಎರಡು ಚಕ್ರ ಹಾಗೂ ಹಿಂಭಾಗದಲ್ಲಿ ಒಂದು ಚಕ್ರ ಅಳವಡಿಸಿರುವುದರಿಂದ ಹೆಚ್ಚಿನ ತೂಕವನ್ನು ತಡೆಯಬಲ್ಲ ಸಾಮರ್ಥ್ಯವಿದೆ. ಇದರ ವಿಶೇಷ ಚಾರ್ಸಿಯಿಂದ ಅಪಘಾತಗಳ ಸಂಭವವನ್ನು ಕಡಿಮೆ ಮಾಡಬಹುದು. ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಹಾಗೂ ಸೋಲಾರ್ ಪ್ಯಾನಲ್ ಬಳಸಿ ಮೂರು ಸೀಟರ್​ ಹೈಬ್ರಿಡ್ ಕಾರ್​ನ್ನು ರೂಪಿಸಬಹುದು. ಈ ಕಾರನ್ನು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಅನುಕೂಲವಾಗುತ್ತದೆ.

ಇದನ್ನು ಓದಿ

1. ಯೋಗದಿಂದ ರೋಗ ನಿರೋಧಕ ಶಕ್ತಿ..!

2. ಉತ್ತರ ಕರ್ನಾಟಕದ ಸವಿರುಚಿ ಬಯಸುವವರಿಗೆ ಸ್ವರ್ಗ ಹೊಟೇಲ್ ನಳಪಾಕ..

3. ಕ್ಯಾಮರಾ ಕಣ್ಣಲ್ಲಿ ಮಹಿಳೆಯ ಬವಣೆಗಳ ಮಿಡಿತ : ಇದು ಸೊನಾಲಿ ಗುಲಾಟಿ ಕೈಚಳಕ


 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags