ಇದು ಬರಿ ಜಾಹೀರಾತು ಅಲ್ಲ ಗುರು...ಬೇರೆ ಏನೋ ಇದೆ..!

ಆರಾಭಿ ಭಟ್ಟಾಚಾರ್ಯ

ಇದು ಬರಿ ಜಾಹೀರಾತು ಅಲ್ಲ ಗುರು...ಬೇರೆ ಏನೋ ಇದೆ..!

Tuesday April 05, 2016,

3 min Read

ಜಾಹೀರಾತುಗಳು ಅಂದ್ರೆ ಹಾಗೆ, ನೆಚ್ಚಿನ ಸಿನಿಮಾ ನೋಡೋವಾಗ, ಕ್ರಿಕೆಟ್ ನೋಡುವಾಗ ಮಧ್ಯೆ ಬಂದು ಕಿರಿಕಿರಿ ಮಾಡುತ್ತವೆ. ಆದ್ರೆ ಕೆಲವೊಮ್ಮೆಇಂತಹ ಜಾಹೀರಾತುಗಳು ಮನಸ್ಸಿಗೆ ಹತ್ತಿರವಾಗಿ ಬಿಡುತ್ತವೆ. ಅದು ಜಾಹೀರಾತಿನ ಉತ್ತಮ ನಿರುಪಣೆ ಇಂದಲೋ, ಅಲ್ಲಿ ಬರೋ ಡೈಲಾಗ್​​ನಿಂದಲೋ ಅಥವಾ ಜಾಹೀರಾತಿನಲ್ಲಿ ಬರೋ ನಮ್ಮ ನೆಚ್ಚಿನ ಸ್ಟಾರ್ ಗಳಿಂದಲೋ ನಮಗೆ ಗೊತ್ತಾಗದ ಹಾಗೆ ಇಷ್ಟವಾಗುತ್ತವೆ. ಇನ್ನು ಕೆಲ ಜಾಹೀರಾತುಗಳು ಇವುಗಳನ್ನ ಹೊರತು ಪಡೆಸಿ ಮನಸ್ಸಿಗೆ ಹತ್ತಿವಾಗುತ್ತವೆ. ಅಂತಹ ಜಾಹೀರಾತು ಈಗ ಕನ್ನಡದಲ್ಲಿ ಬಂದಿದೆ. .ಸಖತ್‍ ಕ್ರಿಯೇಟಿವಿಟಿ , ಸೂಪರ್ ಮೇಕಿಂಗ್‍ ಇದೆಲ್ಲದ್ರ ಜೊತೆಗೆ ಈ ಜಾಹೀರಾತನ್ನ ನೋಡಿ ವಾವ್‍..ಇದ್ರಲ್ಲಿ ಏನೋ ವಿಶೇಷ ಇದೆ ಗುರು ಅಂತಿದ್ದಾರೆ ಜನರು.

image


ದೇಸಿ ಸ್ಟೈಲ್​​ನ ಸಖತ್‍ ಜಾಹೀರಾತು..!

ಸರ್ಕಾರಿ ಆ್ಯಡ್ ಗಳು ಅಂದ್ರೆ, ಡಾಕ್ಟರ್, ದೀದಿನೋ ಅಥವಾ ಟೀಚರ್‍ ಅಮ್ಮನೋ ಬಂದುಎರಡು ನಿಮಿಷ ಟಿವಿ ಪರದೆಯಲ್ಲಿ ಪಾಠ ಮಾಡಿ ಹೋಗೊ ಕಾಲ ಮುಗಿದು ಹೋಯ್ತು. ಈಗ ಕಾಲ ಬದಲಾಗಿದೆ. ನಾವು ನೀವು ಬದಲಾಗಿದ್ದೇವೆ. ಎಲ್ಲಾಕಡೆಯೂ ಹೊಸತನ ಆವರಿಸಿಕೊಳ್ತಿದೆ. ಹಾಗೆಯೇ ಸರ್ಕಾರಿ ಜಾಹೀರಾತುಗಳು ತಮ್ಮ ನಿರೂಪಣೆಯನ್ನ, ಮೇಕಿಂಗ್ ಸ್ಟೈಲ್‍ ಅನ್ನ ಬದಲಾಯಿಸಿಕೊಂಡಿವೆ. 90 ನಿಮಿಷ ಇರೋ ಹೊಸಬೆಳಕು ಆ್ಯಡ್ ನಿಮ್ಮ ಮನಸನ್ನ ನಾಟುತ್ತವೆ. ವಾಹ್​..! ಕನ್ನಡದಲ್ಲೂ ಸಖತ್‍ ಜಾಹೀರಾತು ಮಾಡುತ್ತಾರೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳೋ ಸಮಯ ಬಂದಿದೆ . ಇಲ್ಲಿ ಯಾವುದೇ ಬೇರೆ ಜಾಹೀರಾತಿನ ಪ್ರಭಾವ ಇಲ್ಲ. ಇದು ಪಕ್ಕಾ ದೇಸಿ ಸ್ಟೈಲ್​ನ ಅಡ್ವಟೈಸ್​ಮೆಂಟ್​..!

image


ಸಖತ್ ಫೇಮಸ್ ಹೊಸಬೆಳಕು ಎಲ್​​ಇಡಿ ಜಾಹೀರಾತು

ಜಾಹೀರಾತು ಲೋಕದಲ್ಲಿ ಸದ್ಯ ಸಖತ್ ಸದ್ದು ಮಾಡ್ತಿರೋದು ಕರ್ನಾಟಕ ಸರ್ಕಾರದ ಎಲ್ಇಡಿ ಬಲ್ಬ್ ಆ್ಯಡ್​. ಒಮ್ಮೆ ನೋಡಿದ್ರೆ ಮತ್ತೊಮ್ಮೆ ನೋಡಬೇಕೆನ್ನಿಸೋ ಜಾಹೀರಾತು. ಇದಕ್ಕೆ ಹಲವಾರು ಕಾರಣಗಳಿದೆ. ಇಲ್ಲಿ ಬರೋ ನಟ -ನಟಿಯೂ ಒಂದು ಕಾರಣ. ನಮ್ಮನೆ ಹುಡುಗ ಅನ್ನಿಸೋ ಪುನೀತ್‍ ರಾಜ್‍ಕುಮಾರ್‍ಗೆ ಸೂಪರ್‍ ಜೋಡಿ ಅನ್ನಿಸೋ ರಮ್ಯ ಅವ್ರ ಕಾಂಬಿನೇಷನ್. ಅಷ್ಟೇ ಅಲ್ಲ ಈ ಜಾಹೀರಾತಿನಲ್ಲಿ ನಮ್ಮತನ ಇದೆ. ಇಂತಹ ಮಾಡರ್ನ್​ ಯುಗದಲ್ಲೂ ಕಿಂದರ ಜೋಗಿಯನ್ನ ನೆನಪಿಸುತ್ತೆ. ಸ್ಟೈಲಿಷ್ ಲುಕ್​​ನಲ್ಲಿ ಅಪ್ಪುಎಂಟ್ರಿ ಕೊಟ್ರು ಬಲ್ಬ್​ಗಳು, ಕಿಂದರಜೋಗಿ ಹಿಂದೆ ಇಲಿಗಳು ಬರುವಂತೆ ಬಲ್ಬ್ ಗಳು ಹಿಂದೆ ಬರುತ್ತೆ. ಪುನೀತ್‍ ಎಂಟ್ರಿ ಆದ ನಂತ್ರ ಬ್ಯಾಕ್​ಗ್ರೌಂಡ್​ನಲ್ಲಿ ಬರೋ ಅಣ್ಣಾವ್ರ ಸಂಗೀತ. ಇವೆಲ್ಲವೂ ಜಾಹೀರಾತು ಲೋಕಕ್ಕೆ ಹೊಸತು. ಅಷ್ಟೇ ಅಲ್ಲದೆ ಸಂದೇಶವನ್ನ ಸಿಂಪಲ್ ವೇ ನಲ್ಲಿ ಹೇಳಲಾಗಿದೆ. ಮಾಮೂಲಿ ಬಲ್ಬ್ ಬೇಡ ಅನ್ನೋದನ್ನ ತಿಳಿಸೋದಕ್ಕೆ ಬಲ್ಬ್ ಗಳು ಹೋಗಿ ನೀರಲ್ಲಿ ಬೀಳುತ್ತೆ. ಬಲ್ಬ್ ಗಳೆಲ್ಲಾ ಎಲ್ಲಿ ಹೋದವು ಅಂತ ಪುನೀತ್ ಹಿಂದೆ ಓಡಿ ಬರೋ ರಮ್ಯ ಅವ್ರಿಗೆ ಹೂವನ್ನ ನೀಡೋ ಸ್ಟೈಲ್ ನಲ್ಲಿ ಎಲ್ಇಡಿ ಬಲ್ಬ್​ ಅನ್ನ ನೀಡೋ ಸ್ಟೈಲ್ ಗೆ ಎಲ್ಲರೂ ಫಿದಾ ಆಗ್ಲೇ ಬೇಕು. ಅದ್ರಜೊತೆಗೆ ಹೊಸ ಬೆಳಕು ಬದಲಾವಣೆಗಾಗಿ ಅನ್ನೋ ಮಾತು ಎಲ್ಲರ ಮನಸ್ಸು ಮುಟ್ಟತ್ತೆ..

image


ಹೊಸ ಬೆಳಕಿನ ಸೂತ್ರದಾರ ಯಾರು.? 

ಇಷ್ಟೆಲ್ಲ ವಿಶೇಷತೆ ಇರೋ ಜಾಹೀರಾತಿನ ಬಗ್ಗೆ ಹೇಳಿದ ನಂತ್ರ ಅದ್ರ ಸೂತ್ರದಾರನ ಬಗ್ಗೆ ಹೇಳದೆ ಇದ್ರೆ ಹೇಗೆ ಅಲ್ವ..?ಈಗಾಗಲೇ ಆ್ಯಡ್ ಪ್ರಪಂಚದಲ್ಲಿ ಸಖತ್ ಸುದ್ದಿ ಮಾಡಿರೋ ಶರತ್ ಈ ಜಾಹೀರಾತಿನ ಮೇಕರ್ ಪುನೀತ್‍ ರಾಜ್‍ಕುಮಾರ್‍ ಅವ್ರ ಜೊತೆಯಲ್ಲಿ ಎರಡು ವರ್ಷದ ಹಿಂದೆ ಕೆಎಂಎಫ್‍ ಆ್ಯಡ್​ಗೆ ಆ್ಯಕ್ಷನ್‍ ಕಟ್ ಹೇಳಿದ್ದ ಶರತ್‍ ಅವ್ರೇ ಹೊಸಬೆಳಕು ಜಾಹೀರಾತನ್ನ ನಿರ್ದೇಶನ ಮಾಡಿದ್ದಾರೆ. ಕೆಎಂಎಫ್‍ ಆ್ಯಡ್​ನಲ್ಲಿ ವಿಭಿನ್ನತೆಯನ್ನ ಪರಿಚಯಿಸಿದ ಕೀರ್ತಿಕೂಡ ಶರತ್‍ ಅವ್ರದ್ದೆ. ಈಗಿನ ಟ್ರೆಂಡ್ ಏನು ಅನ್ನೋದನ್ನ ಚೆನ್ನಾಗಿ ತಿಳಿದುಕೊಂಡಿರೋ ಶರತ್ ಈ ವಿಭಿನ್ನವಾದ ದೇಸಿ ಸ್ಟೈಲ್​ನ ಜಾಹೀರಾತನ್ನ ಜನರ ಮುಂದೆ ಪ್ರಸ್ತುತ ಪಡೆಸಿದ್ದಾರೆ. ಈ ಜಾಹೀರತುಈಗಾಗಲೇ ಜನರ ಮನೆ –ಮನ ಮುಟ್ಟೋದ್ರಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಸಾಕ್ಷಿ ಸಾವಿರಾರು ಮನೆಗಳಲ್ಲಿ ಎಲ್ಇಡಿ ಬಲ್ಬ್ ಗಳು ಉರಿಯುತ್ತಿರೋದು. ಇಂತಹ ಜಾಹೀರಾತುಗಳು ಬೇಕ್ರಿ ನಮಗೆ ಅನ್ನೋದು ನಮ್ಮ ಕನ್ನಡಿಗರ ಮಾತು. ಬೇರೆ ಬಾಷೆ ಜಾಹೀರಾತನ್ನ ಡಬ್ಬಿಂಗ್ ಮಾಡಿ ನಮ್ಮ ಮುಂದೆ ತರೋ ಬದ್ಲು ಸಿಂಪಲ್ ಆಗಿ ಸೂಪರ್‍ ಆಗಿರೋ ಆ್ಯಡ್ ಮಾಡಿದ್ರೆ ಜನ ಯಾಕೆ ಮೆಚ್ಚೋದಿಲ್ಲ ಅಲ್ವಾ..? ಅದೇನೇ ಆಗ್ಲಿ ಸಾಕಷ್ಟು ವರ್ಷಗಳ ನಂತ್ರ ಈ ರೀತಿಯ ವಿಭಿನ್ನ ಜಾಹೀರಾತನ್ನ ನೀಡಿ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿರೋ ಜಾಹೀರಾತಿನ ಸೂತ್ರದಾರರ ಕೆಲಸಕ್ಕೆ ಧನ್ಯವಾದ ಹೇಳಲೇಬೇಕು.

ಇದನ್ನು ಓದಿ:

1. ನೌಕರಿ ಸಿಗದಿದ್ದಾಗ ಮಾಡಿದ ಆವಿಷ್ಕಾರ..410 ಕಿ.ಮೀ. ಮೈಲೇಜ್​ ಕೊಡುವ ಬೈಕ್​..!

2. ಚಿತ್ರಕಲಾ ಲೋಕದಲ್ಲೊಂದು ವರ್ಣ ‘ವಿಲಾಸ’

3. ಓದಿದ್ದು ಎಂಬಿಎ, ಆಗಿದ್ದು ಕೋಳಿ ಫಾರ್ಮ್ ಮಾಲೀಕ..!