ನಿಧನರಾದ "ಜನರ ಸಚಿವೆ" ಸುಷ್ಮಾ ಸ್ವರಾಜ್
ಪ್ರಪಂಚದಾದ್ಯಂತ ಭಾರತೀಯರಿಗೆ ಯಾವುದೇ ಸಮಯದಲ್ಲಿ ತೊಂದರೆ ಆಗಿದ್ದರೂ ಸುಷ್ಮಾ ಸ್ವರಾಜ್ ಅವರು ಸದಾ ಸಹಾಯಕ್ಕಿರುವ ಮಂತ್ರಿಯಾಗಿದ್ದರು. ಅವರು ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಹಾಗೂ ತಮ್ಮನ್ನು ಪ್ರೀತಿಸುವರೊಂದಿಗೆ ಸಂವಹಿಸಲು ಅದನ್ನು ಭಾವನಾತ್ಮಕ ಅಂಶವಾಗಿ ಸಂಯೋಜಿಸಿದ್ದರು.
"ನೀವು ಮಂಗಳ ಗ್ರಹದಲ್ಲಿ ಸಿಲುಕಿಕೊಂಡಿದ್ದರು ಸಹ, ನಿಮಗೆ ಭಾರತೀಯ ರಾಯಭಾರಿ ಕಚೇರಿ ಸಹಾಯ ಮಾಡುತ್ತದೆ" ಎಂದು 2017 ರ ಸಮಯದಲ್ಲಿ ಸುಷ್ಮಾ ಸ್ವರಾಜ್ ಅವರು ಮಾಡಿದ ಈ ಟ್ವೀಟ್ ಸೋಮವಾರ ನಿಧನರಾದ ಭಾರತದ ಅತ್ಯಂತ ಪ್ರೀತಿಪಾತ್ರ ವಿದೇಶಾಂಗ ಸಚಿವರ ಜೀವನ ಹಾಗೂ ಕೆಲಸದ ಕುರಿತು ಸಂಕ್ಷೀಪ್ತವಾಗಿ ತಿಳಿಸುತ್ತದೆ.
ವಿಶ್ವಾದ್ಯಂತವಿರುವ ಭಾರತೀಯರಿಗೆ ಹೆಚ್ಚಿನ ತೊಂದರೆಯಾದ ಸಮಯದಲ್ಲಿ ಮೊದಲು ನೆನಪಿಗೆ ಬರುವ ಮಂತ್ರಿಯೆಂದರೆ ಸುಷ್ಮಾ ಸ್ವರಾಜ್. ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಅವರು ವ್ಯವಹಾರ ನಡೆಸುತ್ತಿದ್ದ ರೀತಿ, ಅವರ ಅನುಯಾಯಿಗಳನ್ನು ಸಂಪರ್ಕಿಸಿ ಅವರಿಗೆ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳುತ್ತಿದ್ದುದು ಅವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿಯಾಗಿತ್ತು.
ಭಾರತ ತಾಯಿ ರಕ್ಷಣೆಗೆ ಸದಾ ಸಿದ್ಧ
ಮೋದಿ ನೇತೃತ್ವದ 1.0 ಸರ್ಕಾರದಲ್ಲಿ ಮೋದಿಯ ಕೈಯಂತೆ ಕಾರ್ಯವನ್ನು ನಿರ್ವಹಿಸಿದ ಸಚಿವೆ ಎಂದರೆ ಅದು ಸುಷ್ಮಾ ಸ್ವರಾಜ್. 13 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ಅವರ ಟ್ವಿಟರ್ ಖಾತೆಯು ಸಾಮಾನ್ಯವಾಗಿ ಹೆಚ್ಚಿನ ಜನರು ಸಹಾಯವನ್ನು ಕೋರಿರುತ್ತಿದ್ದ ಸಂದೇಶಗಳಿಂದಲೆ ತುಂಬಿತ್ತು. ಅವರು ದೂರದ ದೇಶದಲ್ಲಿ ಸಿಕ್ಕಿ ಹಾಕಿಕೊಂಡಿರಲಿ, ಅವರು ಪಾಸ್‌ಪೋರ್ಟ್‌ಗಳನ್ನು ಕಳೆದುಕೊಂಡಿರಲಿ, ಅಥವಾ ತಮ್ಮ ಪ್ರೀತಿಪಾತ್ರರ ಮಾರಣಾಂತಿಕ ಅವಶೇಷಗಳು ಅಥವಾ ಶವಗಳನ್ನು ಕಳುಹಿಸಬೇಕಾಗಿರಬಹುದು, ಇಂತಹ ಸಹಾಯಕ್ಕೆ ಸುಷ್ಮಾ ಸ್ವರಾಜ್ ಸದಾ ಸಿದ್ಧರಾಗಿರುತ್ತಿದ್ದರು.
ಟ್ವಿಟರ್ ನಲ್ಲಿ, ಆಗಾಗ ಸುಷ್ಮಾ ಅವರು ತಮ್ಮ ಹಾಸ್ಯಪ್ರಜ್ಞೆಯನ್ನು ತೋರುತ್ತಿದ್ದರು. ಅವರು ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ಹಾಗೂ ಬುದ್ಧಿವಂತಿಕೆಯಿಂದ ಎದುರಿಸಬಹುದೆಂದು ತೋರಿಸುತ್ತಿದ್ದರು.
ಅವರು ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳ ಶಕ್ತಿಯನ್ನು ಧನಾತ್ಮಕವಾಗಿ ಬಳಸಿಕೊಂಡು ಮತ್ತು ಅದನ್ನು ಭಾವನಾತ್ಮವಾಗಿ ಸಂಯೋಜಿಸಿದ್ದರು. ಜೊತೆಗೆ ವಿದೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಕೊನೆಯ ಭಾರತೀಯನಿಗೆ ಕೂಡ ಅವರು ಸಹಾಯಕ್ಕೆ ನಿಲ್ಲುತ್ತಾರೆ. ಅವರ ಟ್ವಿಟರ್ ಖಾತೆಗೆ ಎಲ್ಲರೂ ಮುಕ್ತವಾಗಿ ಪ್ರವೇಶಿಸಬಹುದಿತ್ತು ಹಾಗೂ ಯಾವಾಗಲೂ ಅವರು ಪ್ರತಿಕ್ರಿಯಿಸಲು ತ್ವರಿತವಾಗಿರುತ್ತಿದ್ದರು.
ಇರಾಕ್‌ನಲ್ಲಿ ಸಿಕ್ಕಿ ಬಿದ್ದ 168 ಭಾರತೀಯರನ್ನು ರಕ್ಷಿಸುವುದಾಗಲಿ, ಹಣ ಮತ್ತು ಪಾಸ್ ಪೋರ್ಟ್ ಕಳೆದುಕೊಂಡು ಬರ್ಲಿನ್ ನಲ್ಲಿ ಒದ್ದಾಡುತ್ತಿರುವ ಭಾರತೀಯ ನಾಗರೀಕನಿಗೆ ಸಹಾಯ ಮಾಡುವುದಾಗಲಿ, ಯುಎಇ ನಲ್ಲಿ ಹುಡುಗಿಯೊಬ್ಬಳನ್ನು ಕಳ್ಳಸಾಗಾಣಿಕೆಯಿಂದ ರಕ್ಷಿಸುವುದು ಇಂತಹ ಹತ್ತು ಹಲವು ಉದಾಹರಣೆಗಳೇ ಸುಷ್ಮಾ ಸ್ವರಾಜ್ ಅವರ ವಿದೇಶಾಂಗ ಸಚಿವರಾದ ಸಮಯದಲ್ಲಿ ಅವರ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿವೆ.
ಅದು ಎಷ್ಟರ ಮಟ್ಟಿಗೆ ಎಂದರೆ, ಟ್ವಿಟರ್ ನಲ್ಲಿ ಹಲವಾರು ಜನರು ಸುಷ್ಮಾ ಅವರನ್ನು "ಮದರ್ ಇಂಡಿಯಾ" ಎಂದು ಕರೆಯುತ್ತಿದ್ದರು. ಅವರು ಯಾವಾಗಲೂ ಅವರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು.
(ವಿಕಾಸ್- ಇದನ್ನು ಓದಲು ನನಗೆ ಸಂತೋಷವಿಲ್ಲ. ಭಾರತೀಯ ಪ್ರಜೆಗಳ ಮಾರಣಾಂತಿಕ ಅವಶೇಷಗಳು ಹಣದ ಅಪೇಕ್ಷೆಗಾಗಿ ಕಾಯಬಾರದು. ದಯವಿಟ್ಟು ವಿಳಂಬ ಮಾಡದೆ ಭಾರತಕ್ಕೆ ಕಳುಹಿಸಿ.
-ಸುಷ್ಮಾ ಸ್ವರಾಜ್
ಇದು ಅವರ ಟ್ವಿಟರ್ ಖಾತೆಯ ಒಂದು ಉದಾಹರಣೆ)
ಗೆಳೆಯರಲ್ಲಿ ಎತ್ತರವಾಗಿ ನಿಲ್ಲುವುದು
ಸುಷ್ಮಾ ಅವರು ನಿಜವಾಗಿಯೂ ‘ಜನರ ಮಂತ್ರಿ'ಯಾಗಿದ್ದರು
ಅವರ ನಿಧನ ಭಾರತಕ್ಕೆ ಭರಿಸಲಾರದ ನಷ್ಟವಾಗಿದೆ. ಇತ್ತೀಚೆಗೆ ನಿಧನರಾದ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಂತೆ, ಸುಷ್ಮಾ ಸ್ವರಾಜ್ ಅವರ ಜನಪ್ರಿಯತೆಯು ಪಕ್ಷದ ವ್ಯಾಪ್ತಿಯನ್ನು ಮೀರಿ ಹರಡಿತು, ಎಲ್ಲರಿಂದಲೂ ಪ್ರೀತಿಸಲ್ಪಟ್ಟಳು. ಇತರೆ ಕ್ಯಾಬಿನೆಟ್ ಮಂತ್ರಿಗಳು ಸೇರಿದಂತೆ ಅವರೊಂದಿಗೆ ಕೆಲಸ ಮಾಡಿದ ಹೆಚ್ಚಿನ ಜನರು ಇದಕ್ಕೆ ಸಾಕ್ಷಿಯಾಗಿದ್ದರು.
ಅವರು ಭಾರತ ಮತ್ತು ಜಗತ್ತಗೆ ಒಂದು ಸಮರ್ಥ ಉದಾಹರಣೆಯ ಮೂಲಕ ದೇಶವನ್ನು ಹೇಗೆ ಮುನ್ನಡೆಸಬೇಕು ಎಂದು ತೋರಿಸಿದ ನಾಯಕಿ.
ಅವರು ಅತ್ಯಂತ ಸರಳವಾಗಿ ಬದುಕುತ್ತಿದ್ದರು. ಅವರ ಉಡುಗೆ-ತೊಡುಗೆ ಇನ್ನೂ ಸರಳ. ಅರ್ಧ ಜಾಕೆಟ್‌ನ್ನು ಹೊಂದಿದ ಸೀರೆ, ದೊಡ್ಡ ಬಿಂದಿ ಇದಿಷ್ಟೇ ಅವರ ಉಡುಗೆ. ಸುಷ್ಮಾರವರು ತಮ್ಮ ತೀಕ್ಷ್ಣ ಆಲೋಚನೆ, ಅತ್ಯುತ್ತಮ ಆಡಳಿತ, ವಾಗ್ಮಿ ಹಾಗೂ ಕೌಶಲ್ಯಗಳಿಂದ ವಿಶ್ವದ ನಾಯಕರಲ್ಲಿ ಎದ್ದು ಕಾಣುತ್ತಾರೆ.
ವಿಶ್ವ ನಾಯಕರೊಂದಿಗಿನ ಹೆಚ್ಚಿನ ಛಾಯಾಚಿತ್ರಗಳಲ್ಲಿ, ಒಬ್ಬಳೇ ಮಹಿಳೆ ಎತ್ತರವಾಗಿ ನಿಂತು, ಅವಳು ಯಾವುದೇ ರೀತಿಯಲ್ಲಿ ಅವರಿಗಿಂತ ಕಡಿಮೆಯಿಲ್ಲ ಎಂದು ಸಾಬೀತು ಪಡಿಸಿದ್ದಾರೆ.
ಭಾರತದ ಅತ್ಯಂತ ಪ್ರೀತಿಯ ರಾಜಕಾರಣಿ
ಸುಷ್ಮಾ ಸ್ವರಾಜ್ ಅವರು ಭಾರತದ ಹಾಗೂ ವಿಶ್ವದ ಅತ್ಯಂತ ಪ್ರೀತಿಯ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಫೆಬ್ರವರಿ 14, 1952 ರಂದು ಹರಿಯಾಣ ರಾಜ್ಯದ ಅಂಬಾಲಾದಲ್ಲಿ ಜನಿಸಿದ ಇವರು, ಚಂಡಿಗಡನ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಷಯವನ್ನು ಅಭ್ಯಸಿಸಿದರು. 1973 ರಿಂದ ಸುಪ್ರೀಂ ಕೋರ್ಟ್ ನಲ್ಲಿ ಪ್ರ್ಯಾಕ್ಟೀಸ್ ಮಾಡಲಾರಂಭಿಸಿದರು. 1970 ರ ದಶಕದ ಆರಂಭದಲ್ಲಿ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ ನ ನಂಟಿನೊಂದಿಗೆ ಅವರು ರಾಜಕೀಯ ಜೀವನದತ್ತ ಹೆಜ್ಜೆ ಹಾಕಿದರು. 1977 ರಲ್ಲಿ ಜನತಾ ಪಕ್ಷದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. 1988 ರಲ್ಲಿ ದೆಹಲಿಯ ಮುಖ್ಯಮಂತ್ರಿಯಾಗಿದ್ದರು. 2014 ರಲ್ಲಿ ವಿದೇಶಾಂಗ ಸಚಿವರಾಗಿ, ಆರೋಗ್ಯ ಸಚಿವರಾಗಿ ಕ್ಯಾಬಿನೆಟ್‌ನಲ್ಲಿರುವ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. 1999 ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ನಿಂತು ಕೆಚ್ಚೆದೆಯಿಂದ ಕನ್ನಡದಲ್ಲಿ ಮಾಡಿದ ಭಾಷಣವನ್ನು ಯಾರು ತಾನೇ ಮರೆಯುತ್ತಾರೆ?
2016 ರಲ್ಲಿ ಸುಷ್ಮಾರವರು ಮೂತ್ರಪಿಂಡದ ಕಸಿಗೆ ಒಳಗಾಗಿದ್ದರು. ಅನಾರೋಗ್ಯದ ನೆಪದಿಂದಾಗಿ ಅವರು 2019 ರ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದರು.
ಸೋಮವಾರ ಅವರ ಸಾವಿಗೆ ಕೆಲವೇ ಗಂಟೆಗಳ ಮೊದಲು, ಜಮ್ಮು ಮತ್ತು ಕಾಶ್ಮೀರದ ಏಕೀರಣದ ಬಗ್ಗೆ ತುಂಬಾ ಸಂತೋಷವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದರು.
ಪ್ರಧಾನಿಯವರೆ ಧನ್ಯವಾದಗಳು. ತುಂಬಾ ಧನ್ಯವಾದಗಳು. ನನ್ನ ಜೀವನದಲ್ಲಿ ನಾನು ಈ ದಿನವನ್ನು ನೋಡಲು ತುಂಬಾ ದಿನದಿಂದ ಕಾಯುತ್ತಿದ್ದೆ. @narendramodiji
- ಸುಷ್ಮಾ ಸ್ವರಾಜ್ (@ ಸುಷ್ಮಾಸ್ವರಾಜ್) ಆಗಸ್ಟ್ 6, 2019
ಸುಷ್ಮಾ ಸ್ವರಾಜ್ ತುಂಬಾ ಬೇಗ ನಿಧನರಾಗಿರಬಹುದು, ಆದರೆ ಅವರು ಮಾಡಿದ ಕೆಲಸ ಎಲ್ಲರ ಎದೆಯಲ್ಲೂ ಸದಾ ಜೀವಂತವಾಗಿರುತ್ತದೆ.