76 ವರ್ಷ ವಯಸ್ಸಿನ ಇವರು 'ಆಟೋ ಆ್ಯಂಬುಲೆನ್ಸ್' ಮೂಲಕ ಉಚಿತ ಸೇವ ನೀಡುತ್ತಿದ್ದಾರೆ.
ಹರ್ಜಿಂದರ್ ಸಿಂಗ್ ಅವರು ದೆಹಲಿ ನಗರದಲ್ಲಿ ರಸ್ತೆ ಅಪಘಾತಕ್ಕೊಳಗಾದವರನ್ನು ಉಚಿತವಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಅವರು ತಮ್ಮ ನೆರೆಹೊರೆಯಲ್ಲಿ ಇರುವಂತಹರಿಗೆ ಉಚಿತ ಜೌಷಧಿಗಳನ್ನು ಸಹ ಒದಗಿಸುತ್ತಾರೆ.
ಈ ಗದ್ದಲ ತುಂಬಿದ ದೆಹಲಿ ನಗರದಲ್ಲಿ 76 ವಯಸ್ಸಿನ ಹರ್ಜಿಂದರ್ ಸಿಂಗ್ ತಮ್ಮ 'ಆಟೋ ಆ್ಯಂಬುಲೆನ್ಸ್'ನಲ್ಲಿ ಹತ್ತಿರದ ಆಸ್ಪತ್ರೆಗೆ ಉಚಿತವಾಗಿ ರಸ್ತೆ ಅಪಘಾತದಲ್ಲಿ ತೊಂದರೆಗೀಡಾದ ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ನಿರತರಾಗಿದ್ದಾರೆ.
ಈ ಸೇವೆಯ ಜೊತೆಗೆ ಅವರು ತಮ್ಮ ನೆರೆಹೊರೆಯ ರೋಗಿಗಳಿಗೆ ಉಚಿತ ಔಷಧಿಗಳನ್ನು ವಿತರಿಸುತ್ತಾರೆ. ಎ ಎನ್ ಐ ಸುದ್ದಿಯ ಪ್ರಕಾರ ಹರ್ಜಿಂದರ್ ಸಿಂಗ್ ಅವರು ತಮ್ಮ ಆದಾಯದ ಹತ್ತನೇ ಒಂದು ಭಾಗವನ್ನು ಮಧುಮೇಹ ರೋಗಿಗಳ ಜೌಷಧಿಗಳಿಗಾಗಿ ಖರ್ಚು ಮಾಡುತ್ತಾರೆ. ಅವರ ಆಟೋ ಹಿಂಭಾಗದಲ್ಲಿ ಬರೆದ ಅವರ ಸಂಪರ್ಕಸಂಖ್ಯೆಯು ದೆಹಲಿ ನಗರದ ತುರ್ತು ಸಂಖ್ಯೆಯ ಪ್ರಕಾರಗಳಲ್ಲಿ ಸೇರಿದೆ.
ಹರ್ಜಿಂದರ್ ಸಿಂಗ್ ಬಗ್ಗೆ ತಿಳಿದಿರುವ ಅನೇಕ ಜನರು ಅವರ ಸಂಪರ್ಕ ಸಂಖ್ಯೆಯನ್ನು ಸೇವ್ ಮಾಡಿಕೊಂಡಿದ್ದು ಜೌಷಧಿಯ ಅಗತ್ಯವಿದ್ದಾಗ ಅವರಿಗೆ ಕರೆ ಮಾಡುತ್ತಾರೆ. ಸಿಂಗ್ ಅವರು ವಿಳಾಸವನ್ನು ಗಮನಿಸಿ ಮತ್ತು ಅವರು ಸೀಮಿತ ಪ್ರದೇಶದಲ್ಲಿದ್ದಾಗ ಅವರ ಮನೆಗೆ ಉಚಿತವಾಗಿ ತಲುಪಿಸುತ್ತಾರೆ.
ಸಿಂಗ್ ಅವರು 1978 ರಿಂದ ಈ ಸೇವೆಯನ್ನು ಸಲ್ಲಿಸುತ್ತಿದ್ದು, ಇದರೊಂದಿಗೆ ದಯೆಯ ಸಂದೇಶವನ್ನು ಹೊಂದಿದ್ದಾರೆ.ಮತ್ತು ಜೀವನದುದ್ದಕ್ಕೂ ಇದನ್ನು ಮಾಡಲು ಯೋಚಿಸಿದ್ದಾರೆ. ಆದರೆ ಅದೇ ತುರ್ತು ಸಮಯದಲ್ಲಿ ಜನರ ವರ್ತನೆಯ ಬಗ್ಗೆ ದಿಗಿಲುಗೊಳ್ಳುತ್ತಾರೆ.
'ದಿ ಲಾಜಿಕಲ್ ಇಂಡಿಯನ್' ಗೆ ನೀಡಿದ ಸಂದರ್ಶನದಲ್ಲಿ ಅವರು,
"ಜನರು ಗಾಯಗೊಂಡು ಬೀದಿಗಳಲ್ಲಿ ನರಳಾಡುತ್ತಿರುವಾಗ ಇತರರು ಅವರಿಗೆ ಸಹಾಯ ಮಾಡುವ ಬದಲು ಫೋಟೋ, ವಿಡಿಯೋ ಮಾಡುತ್ತಿರುವುದನ್ನು ನೋಡಿದ್ದೇನೆ. ನಿಮಗೆ ಅಗತ್ಯವಿರುವ ಯಾರಿಗಾದರೂ ನೀವು ಸಹಾಯ ಮಾಡಲು ಸಾಧ್ಯವಾಗದಿದ್ದರೆ ಮನುಷ್ಯನಾಗಿರುವುದರ ಅರ್ಥವೇನು? ನಾನು ಆಟೋ ಖರೀದಿಸಿದ ನಂತರವೇ ಈ ಜನರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿದ್ದೇನೆ ಎಂದು ಅರಿವಾಯಿತು".
ಸಿಂಗ್ ಅವರು 1964 ರಿಂದ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮತ್ತು ಆಗಲೂ ಅವರು ಯಾವಾಗಲೂ ಬ್ಯಾಂಡೇಜ್, ನಂಜುನಿರೋಧಕ ಮತ್ತು ಲೋಷನ್ ಅಂತಹ ಮೂಲವಸ್ತುಗಳನ್ನು ಹೊಂದಿರುವ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಇಟ್ಟುಕೊಂಡಿರುತ್ತಿದ್ದರು. ಇವರ ಈ ಸಾಮಾಜಿಕ ಸೇವೆಯನ್ನು ಗುರುತಿಸಿದ ದೆಹಲಿ ಟ್ರಾಫಿಕ್ ಪೋಲಿಸರು ಅವರಿಗೆ ಟ್ರಾಫಿಕ್ ಪೋಲಿಸ್ ವಾರ್ಡನ್ ಆಗಿ ಮಾಡಿದರು ಮತ್ತು ಅನೇಕ ಪ್ರಶಂಸಾ ಪ್ರಮಾಣಪತ್ರಗಳನ್ನು ಸಹ ನೀಡಿದ್ದಾರೆ.
ತನ್ನನ್ನು ಪ್ರೇರೆಪಿಸಿದ ಅಂಶದ ಕುರಿತು ಮಾತನಾಡಿದ ಅವರು,
"ನಾನು ಸಹಾಯ ಮಾಡಿದವರು ನನ್ನ ಮೇಲೆ ತೋರಿಸುವ ಪ್ರೀತಿಯೇ ನನ್ನನ್ನು ಈ ಕೆಲಸ ಮಾಡಲು ಪ್ರೇರೇಪಿಸುತ್ತದೆ. ನಾನು ಶಾಶ್ವತವಾಗಿ ಬದುಕಲು ಸಾಧ್ಯವಿಲ್ಲ, ಆದರೆ ಬದುಕಿರುವವರೆಗೂ ನನಗೆ ಅಗತ್ಯವಿರುವ ಜನರಿಗಾಗಿ ನಾನು ಬದುಕುತ್ತೇನೆ. ನಾವು ಮನುಷ್ಯರಾಗಿ ಒಬ್ಬರಿಗೊಬ್ಬರು ಆಗದೇ ಇದ್ದರೆ, ನಾವು ನಮಗಾಗಿ ಮಾತ್ರ ಬದುಕುತ್ತಿದ್ದರೆ, ಬದುಕುವುದರ ಅರ್ಥವೇನು? ನಾನು ಯಾರಿಗಾದರೂ ಸಹಾಯ ಮಾಡಿದಾಗ ಅವರು ನನ್ನ ಕುಟುಂಬವಾಗುತ್ತಾರೆ. ಪ್ರತಿಯೊಬ್ಬರಿಗೂ ಒಬ್ಬರಿಗೊಬ್ಬರು ದಯೆ ತೋರಬೇಕು ಮತ್ತು ಪರಸ್ಪರ ಪ್ರೀತಿಸಬೇಕು ಎಂಬುದೊಂದೆ ನನ್ನ ಕೋರಿಕೆ. ಆಗ ಮಾತ್ರ ನಾವು ಉತ್ತಮ ಜಗವನ್ನು ನಿರ್ಮಿಸಲು ಸಾಧ್ಯ."
ಸಿಂಗ್ ಅವರ ಅತಿ ದೊಡ್ಡ ಸ್ಪೂರ್ತಿ ಎಂದರೆ ಅವರ ತಂದೆ ಹಾಗೂ ಅನೇಕ ಆರೋಗ್ಯ ಶಿಬಿರಗಳನ್ನು ಸ್ಥಾಪಿಸಿದ "ಭಾಯಿ ಕನ್ಹಯ್ಯ ಬ್ರಿಗೇಡ್" ಎಂಬ ಸಂಸ್ಥೆ ನೀಡಿದ ಮೌಲ್ಯಗಳು ಎಂದು ಅವರು ಹೇಳಿಕೊಳ್ಳುತ್ತಾರೆ.