ಸೌರ ಚಾಲಿತ ಆಟೋ ರಿಕ್ಷಾದೊಂದಿಗೆ ಸುವರ್ಣ ಚತುರ್ಭುಜ ರಸ್ತೆಯಲ್ಲಿ ಪ್ರಯಾಣಿಸಿ ಜಾಗೃತಿ ಮೂಡಿಸುತ್ತಿದ್ದಾನೆ ಐಐಟಿ ಬಾಂಬೆಯ ಈ ಹಳೆಯ ವಿದ್ಯಾರ್ಥಿ
ಸುಶೀಲ್ ರೆಡ್ಡಿ, ತನ್ನ ಸೌರ ಚಾಲಿತ ಅಟೋ ರಿಕ್ಷಾದಲ್ಲಿ ಹಸಿರು ಶಕ್ತಿಯ ಬಗ್ಗೆ ಜಾಗೃತಿ ಮೂಡಿಸಲು ಕೊಲ್ಕತ್ತಾ, ಚೆನ್ನೈ, ಮುಂಬೈ ಹಾಗು ದೆಹಲಿ ನಗರಗಳನ್ನು ಸಂಪರ್ಕಿಸುವ ಸುವರ್ಣ ಚತುರ್ಭುಜ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾನೆ.
ಈ ವರ್ಷದ ಆರಂಭದಲ್ಲಿ ವಿಶ್ವ ಸಂಸ್ಥೆ ಚಕಿತಗೊಳಿಸುವ ವಿಷಯವೊಂದನ್ನು ಬಹಿರಂಗಪಡಿಸಿತ್ತು.- ಹವಾಮಾನ ವೈಪರೀತ್ಯಗಳಿಂದ ಆಗಬಲ್ಲ ಎದುರಿಸಲಾಗದ ಹಾನಿಯನ್ನು ತಡೆಗಟ್ಟಲು ನಮಗೆ ಉಳಿದಿರುವುದು ಕೇವಲ 11 ವರ್ಷಗಳು. ಈ ಪ್ರಕಟನೆಯು ಇಂಗಾಲ ಹೊರಸೂಸುವಿಕೆಯ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸುವಂತೆ ಸರಕಾರಗಳಿಗೆ ಉತ್ತೇಜನ ನೀಡಿದೆ ಹಾಗು ಕೆಲ ವ್ಯಕ್ತಿಗಳಿಗಾದರೂ ಕಾಳಜಿ ವಹಿಸಿ ಜವಾಬ್ದಾರಿ ತೆಗೆದುಕೊಳ್ಳುವಂತೆಯೂ ಮಾಡಿದೆ.
ಅಂತಹವರಲ್ಲೊಬ್ಬ ಐಐಟಿಯ ಸುಶೀಲ್ ರೆಡ್ಡಿ, ಕೊಲ್ಕತ್ತಾ, ಚೆನ್ನೈ, ಮುಂಬೈ ಹಾಗು ದೆಹಲಿ ನಗರಗಳನ್ನು ಸಂಪರ್ಕಿಸುವ ಸುವರ್ಣ ಚತುರ್ಭುಜ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾನೆ.
ಕುತೂಹಲಕಾರಿ ಅಂಶವೆಂದರೆ, ಸುಶೀಲ್ ಈ ಸಂಪೂರ್ಣ ಪ್ರಯಾಣವನ್ನು ಶುದ್ಧ ಹಸಿರು ಶಕ್ತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ತನ್ನ ಸೌರ ಚಾಲಿತ ಆಟೋದಲ್ಲಿ ಪ್ರಯಾಣಿಸುತ್ತಿದ್ದಾನೆ.
ಎಡೆಕ್ಸ್ ಲೈವ್ ನೊಂದಿಗೆ ಮಾತನಾಡುತ್ತ ತನ್ನ ಪ್ರಯಾಣದ ಅನುಭವವನ್ನು ಹಂಚಿಕೊಂಡ ಸುಶೀಲ್,
"ಸೌರ ಶಕ್ತಿಯ ಬಗ್ಗೆ ಜನರಲ್ಲಿ ಇರುವ ಹಲವು ತಪ್ಪು ಗ್ರಹಿಕೆಯ ಬಗ್ಗೆ ನಾನು ಅರಿತೆ. ಉದಾಹರಣೆಗೆ, ಅದು ತುಂಬಾ ದುಬಾರಿ ಎಂದೇ ಜನ ಅಂದುಕೊಂಡಿದ್ದಾರೆ. ಅದು ದೀರ್ಘಾವಧಿಯಲ್ಲಿ ಎಷ್ಟು ಉಪಯುಕ್ತವಾದದ್ದು ಎಂಬ ಮೂಲ ಸತ್ಯವೂ ಜನರಿಗೆ ತಿಳಿದಿಲ್ಲ. ಜಾಗೃತಿ ಮೂಡಿಸುವ ಕಲ್ಪನೆ ನನಗೆ ಮೂಡಿದ್ದೇ ಆಗ."
ಮೇ 25 ರಂದು ತನ್ನ ಪ್ರಯಾಣವನ್ನು ಆರಂಭಿಸಿದ ಮೂವತ್ತರ ವಯಸ್ಸಿನ ಈ ಯುವಕ ಹಸಿರು ಶಕ್ತಿಯ ಬಗ್ಗೆ ಅತ್ಯುತ್ಸಾಹದಿಂದಿರುವ ಜುಲೈ 26 ರಂದು ತನ್ನ ಪ್ರಯಾಣವನ್ನು ಮುಗಿಸುವ ಗುರಿಯನ್ನು ಹೊಂದಿದ್ದಾನೆ. ಪ್ರಸ್ತುತದಲ್ಲಿ, ಸುಶೀಲ್ ದೆಹಲಿಯಿಂದ ಹೊರಟು 3600 ಕಿ.ಮೀ ದೂರವನ್ನು ಕ್ರಮಿಸಿದ್ದಾರೆ. ಈ ಸುಶೀಲ್ 2016 ರಲ್ಲಿ ಸೌರ ಚಾಲಿತ ವಿದ್ಯುತ್ ಬೈಸಿಕಲ್ ಓಡಿಸಿ ಗಿನ್ನಿಸ್ ದಾಖಲೆ ಮಾಡಿದ್ದರು.
ದೆಹಲಿ ಮೂಲಕ ಪ್ರಯಾಣಿಸಿದ್ದರ ಬಗ್ಗೆ ಹೇಳುತ್ತ,
"ನಾನು ಮಥುರಾ, ಆಗ್ರ, ಇಟಾವ, ಕಾನ್ಪುರ್, ಲಕ್ನೌ, ಸುಲ್ತಾನಪುರ ಹಾಗು ವಾರಣಾಸಿ ಪ್ರದೇಶಗಳಲ್ಲಿ ಇತ್ತೀಚೆಗೆ ಪ್ರಯಾಣಿಸಿದ್ದೇನೆ. ಆದರೆ ದೆಹಲಿಯನ್ನು ಪ್ರವೇಶಿಸುತ್ತಿದಂತೆ ಗಾಳಿ ಗಣನೀಯವಾಗಿ ವಿಷಕಾರಿಯಾಗಿರುವುದು ನನ್ನ ಅನುಭವಕ್ಕೆ ಬಂತು. ಈ ಮಟ್ಟಿಗಿನ ಮಲಿನವನ್ನು ನಾನು ಯಾವ ನಗರಗಳಲ್ಲಿಯೂ ಕಂಡಿರಲಿಲ್ಲ. ಇದಕ್ಕಾಗಿ ಪರ್ಯಾಯ ಶಕ್ತಿಗಳ ಬಳಕೆ ಉದಾಹರಣೆಗೆ, ಮಳೆ, ಸೌರಶಕ್ತಿ, ಭೂಶಾಖ ಹಾಗು ಒಳ್ಳೆಯ ಗಾಳಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಅನಿವಾರ್ಯವಾಗಿವೆ"- ನ್ಯೂ ಇಂಡಿಯಾ ಎಕ್ಸ್ಪ್ರೆಸ್ ವರದಿ.
ಈ ಪ್ರಯಾಣದ ಅವಧಿಯಲ್ಲಿ ಸುಶೀಲ್ ಸೌರಶಕ್ತಿಯಂತಹ ಹಸಿರು ಶಕ್ತಿಗಳು ಹೇಗೆ ಪರಿಸ್ಥಿತಿಯನ್ನು ಬದಲಾಯಿಸಿ ನಮ್ಮ ಪರಿಸರವನ್ನು ಸಂರಕ್ಷಿಸಬಲ್ಲವು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿಕೊಡುತ್ತಾರೆ.
ಸುಶೀಲರ ಈ ಆಟೋ ರಿಕ್ಷಾ ಎಲ್ 5 ಮಾದರಿಯ ಪರವಾನಗಿ ಹೊಂದಿದ.
ಇದು ಗಂಟೆಗೆ 55 ಕಿ.ಮೀ ವೇಗದಲ್ಲಿ ಚಲಿಸಬಲ್ಲದು ಹಾಗು 600 ಕೆ.ಜಿ ಭಾರವನ್ನು ಹೊರಬಲ್ಲದು. ಸುಶೀಲ್ ತನ್ನ ಅಗತ್ಯತೆಗೆ ತಕ್ಕಂತೆ ವಾಹನ ತಯಾರಿಸಿಕೊಡಲು ಬೆಂಗಳೂರು ಮೂಲದ ವೋಲ್ಟಾ ಆಟೋಮೊಬೈಲ್ ಇಂಡಿಯಾ ಕಂಪನಿಯನ್ನು ಕೇಳಿಕೊಂಡರು. ಈ ಕಂಪನಿಯು ಪೆಟ್ರೋಲ್ ಮತ್ತು ಡಿಸೆಲ್ ಚಾಲಿತ ವಾಹನಗಳನ್ನು ವಿದ್ಯುತ್ ಚಾಲಿತ ವಾಹನವನ್ನಾಗಿ ಪರಿವರ್ತಿಸುವಲ್ಲಿ ಪರಿಣಿತಿಯನ್ನು ಹೊಂದಿದೆ.
ಈ ವಾಹನದ ಮೇಲೆ ಸೌರ ಫಲಕವನ್ನು ಹಾಗು ಹಿಂಬದಿ ಗಾಲಿಗಳಿಗೆ ಲೀಥಿಯಮ್ ಬ್ಯಾಟರಿ ಚಾಲಿತ ಮೋಟಾರ್ ಒಂದನ್ನು ನೋಯ್ಡ ಮೂಲದ ಜಾಕ್ಸನ್ ಗ್ರೂಪಿನವರು ಅಳವಡಿಸಿಕೊಟ್ಟಿದ್ದಾರೆ.
ಸೌರ ಫಲಕ ಮತ್ತು ಬ್ಯಾಟರಿ ನಡುವೆ ವಿದ್ಯುತ್ ವಿಭವಾಂತರದ ಪ್ರಮಾಣವನ್ನು(ವೋಲ್ಟೇಜ್) ಸಮತೋಲನದಿಂದಿರಿಸಲು ಒಂದು ವಿದ್ಯುತ್ ಪೂರಣ ನಿಯಂತ್ರಕವನ್ನು ಅಳವಡಿಸಲಾಗಿದೆ.
ತನ್ನ ಪ್ರಯಾಣದ ನಂತರ ಸುಶೀಲ್ ಮತ್ತೊಂದು ಸವಾರಿ ಹೊರಡುವ ಪ್ರಯತ್ನದಲ್ಲಿದ್ದಾರೆ. ಈ ಬಾರಿ ಅವರು ಉದ್ದನೆಯ, ವಿಸ್ತೃತವಾಗಿ ಮರುಹೊಂದಿಸಲಾದ ವಿದ್ಯುತ್ ಚಾಲಿತ ಅಟೋ ರಿಕ್ಷಾಗಳ ಪ್ರಯಾಣವನ್ನ ಆಯ್ದುಕೊಂಡಿದ್ದಾರೆ.