ರಾಸಾಯನಿಕಗಳ ಬಳಕೆಯಿಲ್ಲದೇ ಕಲುಷಿತ ಅಂತರ್ಜಲವನ್ನು ಸಂಸ್ಕರಿಸುತ್ತಿದೆ ಐಐಟಿ ಗುವಾಹಟಿ

ಪ್ರಸ್ತುತ ಅಸ್ಸಾಂನ ಕನಿಷ್ಟ 6,881 ಪ್ರದೇಶಗಳು ಆರ್ಸೆನಿಕ್‌ ಮಾಲಿನ್ಯಕ್ಕೊಳಗಾಗಿದೆ ಮತ್ತು ರಾಜ್ಯದ 930 ಪ್ರದೇಶಗಳು ಫ್ಲೋರೈಡ್‌ ಮಾಲಿನ್ಯಕ್ಕೊಳಗಾಗಿದೆ.

ರಾಸಾಯನಿಕಗಳ ಬಳಕೆಯಿಲ್ಲದೇ ಕಲುಷಿತ ಅಂತರ್ಜಲವನ್ನು ಸಂಸ್ಕರಿಸುತ್ತಿದೆ ಐಐಟಿ ಗುವಾಹಟಿ

Wednesday September 11, 2019,

2 min Read

ನೀತಿ ಆಯೋಗದ ವರದಿ ಪ್ರಕಾರ ದೇಶದ ಹಲವು ನಗರಗಳು ಮುಂಬರುವ ದಿನಗಳಲ್ಲಿ ತೀವ್ರ ನೀರಿನ ಕೊರತೆಯನ್ನು ಎದುರಿಸಲಿದೆ. ಅಂತರ್ಜಲ ಮಾಲಿನ್ಯ ಮತ್ತು ವಿಪರೀತ ಜಲ ಮಾಲಿನ್ಯದಿಂದ ನೀರಿನ ಕೊರತೆ ಎದುರಿಸುವ ಕೆಲವೇ ನಗರಗಳಲ್ಲಿ ಬೆಂಗಳೂರು, ಹೈದರಾಬಾದ್, ದೆಹಲಿ, ಮತ್ತು ಮುಂಬೈ ನಗರಗಳು ಸೇರಿವೆ.


ಆದರೆ ಇತ್ತೀಚಿನ ವರ್ಷಗಳಿಂದ, ಅಸ್ಸಾಂನ ಜನರು ಆರ್ಸೆನಿಕ್ ಮತ್ತು ಫ್ಲೋರೈಡ್ ಕಲುಷಿತ ನೀರಿನ ರೂಪದಲ್ಲಿ ಮತ್ತೊಂದು ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.


ಈ ಸಮಸ್ಯೆಯನ್ನು ನಿಭಾಯಿಸುವ ಪ್ರಯತ್ನದಲ್ಲಿ, ಪರಿಹಾರ ಕ್ರಮವನ್ನು ಹುಡುಕಿರುವ ಐಐಟಿ ಗುವಾಹಟಿ, ರಾಜ್ಯದ ಜನರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.


ಇದರ ಪ್ರಧಾನ ಸಂಸ್ಥೆಯು ಕಲುಷಿತವಾದ ಅಂತರ್ಜಲವನ್ನು ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ ಸಂಸ್ಕರಿಸುತ್ತದೆ. ಇದು ಕಲುಷಿತ ಕುಡಿಯುವ ನೀರು ಮತ್ತು ಕೈಗಾರಿಕಾ ತ್ಯಾಜ್ಯ ಎರಡನ್ನೂ ಸಂಸ್ಕರಿಸುತ್ತದೆ ಎಂದು ವರದಿಗಳು ತಿಳಿಸಿವೆ.


ಸಾಂದರ್ಭಿಕ ಚಿತ್ರ


ಐಐಟಿ ಗುವಾಹಟಿಯ ನಿರ್ದೇಶಕರಾದ ಟಿಜಿ ಸೀತಾರಾಮ್‌ರವರು ಈ ವಿಷಯದ ಕುರಿತು ಇಂಡಿಯಾ ಟುಡೇಗೆ ಹೀಗೆ ಹೇಳುತ್ತಾರೆ.


“ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಕುಡಿಯುವ ನೀರಿನ ಮಾಲಿನ್ಯ ಒಂದು ಪ್ರಮುಖ ಸಮಸ್ಯೆಯಾಗಿದೆ. ಈ ರಾಸಾಯನಿಕ ಮುಕ್ತ ಚಿಕಿತ್ಸಾ ತಂತ್ರ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಾಗರಿಕರಿಗೆ ಉಪಯುಕ್ತವಾಗಬಹುದು.”


ಈ ಕಾರ್ಯಕ್ಕಾಗಿ, ಸಂಸ್ಥೆಯು ಆರ್‌ಡಿ ಗ್ರೋ ಗ್ರೀನ್‌ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ, ಐಐಟಿ ಟೆಕ್ನಾಲಜಿ ಇನ್‌ಕ್ಯೂಬೇಷನ್‌ ಸೆಂಟರ್ ಗುವಾಹಟಿ ಸಹಯೋಗದೊಂದಿಗೆ ಇದನ್ನು ನಡೆಸಲಾಗುತ್ತಿದೆ.


ಈ ಕಾರ್ಯವು ಸಂಸ್ಥೆಯ ಪ್ರೊಫೆಸರ್‌ ಎಂ.ಕೆ ಪುರ್ಕೈಟ್‌ರವರು ಅಭಿವೃದ್ಧಿಪಡಿಸಿ ಪೇಟೆಂಟ್‌ ಪಡೆದ ತಂತ್ರಜ್ಞಾನದ ತತ್ವ "ಕಲುಷಿತ ಕುಡಿಯುವ ನೀರಿನಿಂದ ಫ್ಲೋರೈಡ್‌, ಕಬ್ಬಿಣ, ಆರ್ಸೆನಿಕ್‌ ಮತ್ತು ಸೂಕ್ಷ್ಮಾಣುಗಳನ್ನು ತೆಗೆದುಹಾಕುವ ಉಪಕರಣ ಮತ್ತು ವಿಧಾನವನ್ನು" ಆಧರಿಸಿದೆ


ತಮ್ಮ ತಂತ್ರಜ್ಞಾನದ ಕುರಿತು ಪುರ್ಕೈಟ್‌ರವರು ಹೀಗೆ ಹೇಳುತ್ತಾರೆ,


“ಅನುಕೂಲಕರ ಕಾರ್ಯಾಚರಣೆಯ ಪರಿಸ್ಥಿತಿಗಳಲ್ಲಿ ಕಬ್ಬಿಣ, ಆರ್ಸೆನಿಕ್‌ ಮತ್ತು ಫ್ಲೋರೈಡ್‌ಗಳನ್ನು ತೆಗೆದುಹಾಕಲು ಅಲ್ಯೂಮಿನಿಯಂ ಹೆಚ್ಚು ಪರಿಣಾಮಕಾರಿ ಆಗಿದೆ. ಎಣ್ಣೆಯುಕ್ತ ತ್ಯಾಜ್ಯನೀರು ಸೇರಿದಂತೆ ಕೈಗಾರಿಕಾ ತ್ಯಾಜ್ಯಗಳ ಸಂಸ್ಕರಣೆಗೂ ಈ ತಂತ್ರಜ್ಞಾನವು ಸಮಾನ ಪರಿಣಾಮಕಾರಿಯಾಗಿದೆ.”


ಇತರ ನೀರಿನ ಸಂಸ್ಕರಣಾ ಪ್ರಕ್ರಿಯೆಗಳಂತೆ, ಈ ಪ್ರಕ್ರಿಯೆ ಯಾವುದೇ ರೀತಿಯಲ್ಲಿ ನೀರನ್ನು ವ್ಯರ್ಥ ಮಾಡುವುದಿಲ್ಲ, ಎಂದು ಆರ್‌ಡಿ ಗ್ರೋ ಗ್ರೀನ್‌ನ ಎಂಡಿ, ರಾಜೀವ್‌ ಶಿಕಿಯಾರವರು ಹೇಳುತ್ತಾರೆ.


ನೀರಿನಲ್ಲಿರುವ ಹೆಚ್ಚುವರಿ ಫ್ಲೋರೈಡ್ನಿಂದಾಗಿ ಹಲ್ಲು ಮತ್ತು ಬೋನುಗಳ ಫ್ಲೋರೋಸಿಸ್‌ಗೆ ಕಾರಣವಾಗಬಹುದು ಮತ್ತು ಆರ್ಸೆನಿಕ್ನಿಂದಾಗಿ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.