ರಸ್ತೆ ಅಪಘಾತಗಳನ್ನು ತಡೆಯಲು ಸಮಗ್ರ ಸುರಕ್ಷತಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಸೇನೆಯ ಕ್ಯಾಪ್ಟನ್

ಈ ‘ಸಮಗ್ರ ಸುರಕ್ಷತಾ ವ್ಯವಸ್ಥೆʼಯು ಚಾಲಕನು ಸೀಟ್ ಬೆಲ್ಟ್ ಧರಿಸಿರುವುದನ್ನು ಮತ್ತು ನಿರ್ದಿಷ್ಟ ಮಿತಿಗಿಂತ ಹೆಚ್ಚಾಗಿ ಸೇವಿಸಿದ ಮದ್ಯದ ಪ್ರಭಾವದಿಂದ ವಾಹನ ಚಲಾವಣೆ ಮಾಡುತ್ತಿಲ್ಲ ಎಂದು ಖಚಿತಪಡಿಸುತ್ತದೆ. ಎರಡರಲ್ಲಿ ಯಾವುದೊಂದನ್ನು ಸಿಸ್ಟಮ್ ಪತ್ತೆ ಮಾಡಿದರೆ, ವಾಹನವನ್ನು ಆರಂಭವಾಗದಂತೆ ಅದು ನೋಡಿಕೊಳ್ಳುತ್ತದೆ.

ರಸ್ತೆ ಅಪಘಾತಗಳನ್ನು ತಡೆಯಲು ಸಮಗ್ರ ಸುರಕ್ಷತಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಸೇನೆಯ ಕ್ಯಾಪ್ಟನ್

Friday January 03, 2020,

2 min Read

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಾರಿಗೆ ಸಂಶೋಧನಾ ವಿಭಾಗದ ಪ್ರಕಾರ, ಭಾರತೀಯ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳಿಂದ ಪ್ರತಿ ಹತ್ತು ನಿಮಿಷಕ್ಕೆ ಮೂರು ಜನರು ಸಾಯುತ್ತಾರೆ. ಹೆಚ್ಚಿನ ವೇಗ, ಕುಡಿದು ವಾಹನ ಚಲಾಯಿಸುವುದು, ಟ್ರಾಫಿಕ್ ಸಿಗ್ನಲ್‌ಗಳನ್ನು ನಿರ್ಲಕ್ಷಿಸುವುದು ಮತ್ತು ಸುರಕ್ಷತಾ ಸಾಧನಗಳ ಕೊರತೆಯಿಂದಾಗಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ ಎನ್ನಲಾಗಿದೆ.


ಕುಡಿದು ವಾಹನ ಚಲಾಯಿಸಿದರೆ, ಭಾರಿ ದಂಡ ವಿಧಿಸುವ ಕಾನೂನು ಈಗಾಗಲೇ ಜಾರಿಯಲ್ಲಿದೆ. ಉಸಿರಾಟದ ವಿಶ್ಲೇಷಕಗಳನ್ನು ಹೊಂದಿದ ಕಾರುಗಳು ಶೀಘ್ರದಲ್ಲೇ ವಾಸ್ತವವಾಗಬಹುದು, ಕುಡಿದು ವಾಹನ ಚಲಾಯಿಸುವ ಪ್ರಕರಣಗಳನ್ನು ಸಹ ಕಡಿಮೆ ಮಾಡಲು ಅವು ಸಹಾಯ ಮಾಡಬಲ್ಲವು.


ಸಾಧನವನ್ನು ಪ್ರದರ್ಶನಕ್ಕಿಟ್ಟಿರುವುದು (ಚಿತ್ರಕೃಪೆ: ಎಎನ್‌ಐ)




ಭಾರತೀಯ ಸೇನೆಯ ಕ್ಯಾಪ್ಟನ್ ಓಂಕರ್ ಕೇಲ್ ಎಲ್ಲಾ ಸೈನ್ಯದ ಟ್ರಕ್‌ಗಳಿಗಾಗಿ ಸಮಗ್ರ ವಾಹನ ಸುರಕ್ಷತಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ಈ ವ್ಯವಸ್ಥೆಯು ಚಾಲಕ ಸೀಟ್ ಬೆಲ್ಟ್ ಧರಿಸಿರುವುದನ್ನು ಖಚಿತಪಡಿಸುತ್ತದೆ ಮತ್ತು ನಿಗದಿಸಿದ ಮಿತಿಗಿಂತ ಹೆಚ್ಚಾಗಿ ಮದ್ಯ ಸೇವಿಸಿ ಅಮಲಿನಲ್ಲಿ ವಾಹನ ಚಲಾಯಿಸುತ್ತಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಸಿಸ್ಟಮ್ ಇವುಗಳಲ್ಲಿ ಯಾವುದನ್ನಾದರೂ ಪತ್ತೆ ಮಾಡಿದರೆ, ಅದು ವಾಹನವನ್ನು ಪ್ರಾರಂಭಿಸಲು ಅನುಮತಿಸುವುದಿಲ್ಲ.


ಎಎನ್‌ಐ ಪ್ರಕಾರ, ವ್ಯವಸ್ಥೆಯ ಒಟ್ಟು ವೆಚ್ಚ 10,320 ರೂ. ಇದ್ದು, ಇದು ಸೀಟ್ ಬೆಲ್ಟ್ ಮಾನಿಟರಿಂಗ್ ಸಿಸ್ಟಮ್, ಟೈಲ್ ಬಿಡಿ ಮಾನಿಟರಿಂಗ್ ಸಿಸ್ಟಮ್, ಆಂಟಿ-ಡಜಿಂಗ್ ಅಲಾರ್ಮ್ ಸಿಸ್ಟಮ್ ಅನ್ನು ಒಳಗೊಂಡಿರುತ್ತದೆ ಮತ್ತು ಸಂಭವಿಸಬಹುದಾದ ಅಪಘಾತಗಳ ಬಗ್ಗೆ ಪರಿಶೀಲಿಸುತ್ತದೆ.


ಭಾರತೀಯ ಸೇನಾ ಸಿಬ್ಬಂದಿ ಹೊಸತನ್ನು ಶೋಧಿಸುವುದರಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ಭಾರತೀಯ ಸೇನೆಯ ಮೇಜರ್ ಒಬ್ಬರು ಗುಂಡು ನಿರೋಧಕ ಜಾಕೆಟ್ ‘ಸರ್ವತ್ರ’ ವನ್ನು ಅಭಿವೃದ್ಧಿಪಡಿಸಿದರು, ಇದು ಸ್ನೈಪರ್ ರೈಫಲ್‌ನಿಂದ ತೂರಿಬಂದ ಗುಂಡುಗಳನ್ನು ತಡೆಯುತ್ತದೆ.


ಪುಣೆಯ ಕಾಲೇಜ್ ಆಫ್ ಮಿಲಿಟರಿ ಎಂಜಿನಿಯರಿಂಗ್‌ನಲ್ಲಿ ಮೇಜರ್ ಅನೂಪ್ ಮಿಶ್ರಾ ಅಭಿವೃದ್ಧಿಪಡಿಸಿದ ಈ ಅಂಗಿಯು ಹತ್ತು ಮೀಟರ್‌ನಿಂದಲೂ ಗುಂಡು ಹಾರಿಸಿದ ಸ್ನೈಪರ್ ಬುಲೆಟ್ ಅನ್ನು ತಡೆದುಕೊಳ್ಳಬಲ್ಲದು.


ಅವರ ಕೆಲಸ ಮತ್ತು ನಾವೀನ್ಯತೆಗಾಗಿ, ಮೇಜರ್ ಅನೂಪ್ ಅವರಿಗೆ ಆರ್ಮಿ ಚೀಫ್ ಜನರಲ್ ಬಿಪಿನ್ ರಾವತ್ ಅವರು ಇತ್ತೀಚೆಗೆ ಆರ್ಮಿ ಡಿಸೈನ್ ಬ್ಯೂರೋ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಿದರು.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.