Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಕೋವಿಡ್-19 ಕುರಿತಾಗಿ ಸಾರ್ವಜನಿಕರಲ್ಲಿ ವಿಭಿನ್ನವಾಗಿ ಅರಿವು ಮೂಡಿಸುತ್ತಿರುವ ಪೋಲಿಸ್‌ ಇಲಾಖೆ

ಲಾಕ್‌ಡೌನ್ ಸಮಯದಲ್ಲಿ ಜನರನ್ನು ಮನೆಯೊಳಗೆ ಇರುವಂತೆ ಮಾಡಲು ಭಾರತೀಯ ಪೋಲಿಸ್ ಇಲಾಖೆ ವಿಭಿನ್ನ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಜನರಿಗೆ ಸಂದೇಶವನ್ನು ನೀಡುತ್ತಿದ್ದಾರೆ.

ಕೋವಿಡ್-19 ಕುರಿತಾಗಿ ಸಾರ್ವಜನಿಕರಲ್ಲಿ ವಿಭಿನ್ನವಾಗಿ ಅರಿವು ಮೂಡಿಸುತ್ತಿರುವ ಪೋಲಿಸ್‌ ಇಲಾಖೆ

Monday April 13, 2020 , 2 min Read

ಕೋವಿಡ್ -19 ತಡೆಗಟ್ಟುವುದಕ್ಕಾಗಿ ನಾಗರಿಕರು ಮನೆಯಲ್ಲಿ ಉಳಿಯುವಂತೆ ಮಾಡಲು 21 ದಿನಗಳ ದೇಶವ್ಯಾಪಿ‌ ಲಾಕ್‌ಡೌನ್ ಘೋಷಿಸಲಾಗಿದೆ. ಅದರೂ ಹಲವರು ಇದನ್ನು ಪಾಲಿಸದೆ‌ ಮನೆಯಿಂದ ಹೊರ‌ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಭಾರತೀಯ ಪೋಲಿಸರು ಜನರು ಒಳಗೆ ಇರಲು, ನೈರ್ಮಲ್ಯ ಪಾಲಿಸುವಿಕೆ, ಸರ್ಕಾರದ‌ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮಾಡಲು ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.


ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿಯಂತೆ ಜನರು ತಮ್ಮ ಸುರಕ್ಷತೆಗಾಗಿ ಹೊರಗಡೆ ಬರದಂತೆ‌ ನೋಡಿಕೊಳ್ಳಲು ಪೋಲಿಸರು ಕೂಡ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ.


ಕೆಲವು ನಗರಗಳಲ್ಲಿ ತಮ್ಮ ಮನೆಗೆ ಹೊರಗೆ‌ ಬಂದಿದ್ದಕ್ಕೆ, ನಿಯಮ ಉಲ್ಲಂಘಿಸಿದ್ದಕ್ಕೆ ಪೋಲಿಸರು ವ್ಯಕ್ತಿಗಳನ್ನು ಥಳಿಸಿದ್ದಾರೆ‌‌ ಎಂಬ ಸುದ್ದಿ ಇದ್ದರೂ, ಜನರು ಸುರಕ್ಷಿತವಾಗಿರುವದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಪೋಲಿಸ್ ಪಡೆ ಗಡಿಯಾರದ ರೀತಿ ಕೆಲಸ ಮಾಡುತ್ತಿದೆ ಮತ್ತು ವಿನೂತನ ಮಾರ್ಗಗಳನ್ನು ಕಂಡು ಹಿಡಿಯುತ್ತಿದ್ದಾರೆ.


ಸಾರ್ವಜನಿಕರನ್ನು ಮನೆಯಲ್ಲಿಯೇ ಇರುವಂತೆ ಮಾಡಲು ಭಾರತೀಯ ಪೋಲಿಸರು ನವೀನ ಮಾರ್ಗ ಕಂಡುಕೊಳ್ಳುತ್ತಿರುವುದು (ಚಿತ್ರಕೃಪೆ: ಗ್ಲೋಬಲ್‌ನ್ಯೂಸ್)


ಯುವರ್‌ಸ್ಟೊರಿ ನಿಮಗೆ ವಿವಿಧ ನಗರಗಳ ಪೋಲಿಸ್ ಅಧಿಕಾರಿಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಮತ್ತು ಕೊರೊನ ವಿರುದ್ಧವಾಗಿ ಮತ್ತು ಜನರನ್ನು ಸುರಕ್ಷಿತವಾಗಿಡುವಲ್ಲಿ ಯಾವ ಸಂದೇಶವನ್ನು ಸಾರುತ್ತಿರುತ್ತಿದ್ದಾರೆ ಎಂಬುದನ್ನು ತಿಳಿಸುತ್ತದೆ.


ಅನೇಕ ಭಾರತೀಯ ನಾಗರಿಕರು ತಮ್ಮ ಸಾಮಾಜಿಕ ಜಾಲತಾಣ‌ಗಳಾದ ಇನ್ಸ್ಟಾಗ್ರಾಂ, ಫೇಸ್‌ಬುಕ್‌ ಟ್ವಿಟರ್‌ಗಳಲ್ಲಿ ದೇಶಾದ್ಯಂತ ಪೋಲಿಸ್ ಅಧಿಕಾರಿಗಳು ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅದರ ಕುರಿತಾಗಿ ಕೆಲವೊಂದು‌ ಪೋಸ್ಟ್‌ಗಳು ಇಲ್ಲಿವೆ.


ಬೆಂಗಳೂರು ಮತ್ತು ಮುಂಬೈ ಪೋಲಿಸರು ವಿಶಿಷ್ಟವಾದಂತಹ‌ ಶಿರಸ್ತ್ರಾಣವನ್ನು ಧರಿಸಿ ಮನೆಯಿಂದ ಆಚೆ ಬರುವವರಿಗೆ ಹೊರ ಬರದಂತೆ ನವೀನ ರೀತಿಯಲ್ಲಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.


ಬೆಂಗಳೂರು ಪೋಲಿಸ್ ಅಧಿಕಾರಿಗಳು‌ ಸೃಜನಾತ್ಮಕ ಶಿರಸ್ತ್ರಾಣಗಳನ್ನು ಧರಿಸಿರುವುದು (ಚಿತ್ರಕೃಪೆ: ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌)


ಬೆಳಗಾವಿಯ ಪೋಲಿಸರು ರಸ್ತೆಯ ಮೇಲೆ ಕೊರೊನಾವೈರಸ್‌ ಬಗ್ಗೆ ವಿಭಿನ್ನ ಸಾಲುಗಳನ್ನು ಬರೆದು ಗಮನ ಸೆಳೆದಿದ್ದಾರೆ.

ಛತ್ತಿಸಘಡದ ಭಾರತೀಯ ಪೋಲಿಸ್ ಅಧಿಕಾರಿಯೊಬ್ಬರು‌ ಕೊರೊನ ವೈರಸ್ ಕುರಿತಾಗಿ ಭರವಸೆಯ ಹಾಡನ್ನು ಹಾಡಿದ್ದಾರೆ. ಕೊರೊನ ವೈರಸ್‌ ಅನ್ನು ನಿಭಾಯಿಸಲು ಮತ್ತು ಅದರಲ್ಲಿ ನಾಗರಿಕರು ಮನೆಯಿಂದ ಆಚೆ ಬಂದು ದಿನದ ಬೆಳಕನ್ನು ನೋಡಲು ಸಾಧ್ಯವಾಗುತ್ತದೆ ಎಂದು ಭರವಸೆ ನೀಡುತ್ತಾರೆ. ಅದಕ್ಕೂ ಮೊದಲು ನಿಯಮಗಳನ್ನು ಪಾಲಿಸಿ, ಸುರಕ್ಷತೆಗಾಗಿ ಮನೆಯಲ್ಲಿ ಇರಿ,‌ ಅದು ಅವರ ಒಳ್ಳೆಯದಕ್ಕಾಗಿಯೇ ಎಂದು‌ ಸಂದೇಶವನ್ನು ನೀಡುತ್ತಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಒಬ್ಬರು,‌ ಪೋಲಿಸ್ ಆಡಳಿತವು ಜನರ ಹಿತಕ್ಕಾಗಿ ಹಗಲು ರಾತ್ರಿಯೆನ್ನದೆ ಕಾರ್ಯ ನಿರ್ವಹಿಸುತ್ತಿದೆ, ಅವರನ್ನು ಕೀಳಾಗಿ ಕಾಣದೆ ಅವರನ್ನು ಗೌರವಿಸಿ ಎಂದು ಹೇಳಿದ್ದಾರೆ‌.

ಚೆನ್ನೈನ ಮತ್ತೊಬ್ಬ ಪೋಲಿಸ್ ಅಧಿಕಾರಿ, ಸಾಮಾಜಿಕ ಅಂತರಕ್ಕಾಗಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿರುವ ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಜಗೃತಗೊಳಿಸಲು ಕೊರೊನಾವೈರಸ್ ಇರುವ ಚಿಹ್ನೆಯ‌‌ ಶಿರಸ್ತ್ರಾಣ ಧರಿಸಿ ಜನರು‌ ಔಷಧಾಲಯಕ್ಕೆ ಹೋಗುತ್ತಾರೆಯೆ ಅಥವಾ ದಿನಸಿ ಅಂಗಡಿಗೆ ಹೆಜ್ಜೆ ಹಾಕುತ್ತಾರೆಯೇ ಎಂದು ಪರಿಶೀಲಿಸಿ, ಅನಾವಷ್ಯಕವಾಗಿ ತಿರುಗುವವರನ್ನು ಮನೆಗೆ ಕಳಿಸುತ್ತಿದ್ದಾರೆ.


ಇಂದೋರ್‌ನಲ್ಲಿ ಕೆಲವು ಪೋಲಿಸ್ ಅಧಿಕಾರಿಗಳು‌ ಅಸ್ಥಿಪಂಜರದ ಚಿತ್ರವನ್ನು ಹೊಂದಿರುವ ಕಪ್ಪು ಬಟ್ಟೆಯನ್ನು ಧರಿಸಿ ಭೂತವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

ಆಂಧ್ರಪ್ರದೇಶದಲ್ಲಿ ಪೋಲಿಸ್ ಅಧಿಕಾರಿಯೊಬ್ಬರು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೋವಿಡ್-19 ಚಿತ್ರಗಳಿಂದ ಚಿತ್ರಿತವಾದ ಕುದುರೆ ಮೇಲೆ ಸವಾರಿ ಮಾಡುತ್ತಿದ್ದಾರೆ.

ಕೇರಳದಲ್ಲಿಯೂ, ಪೋಲಿಸ್ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೈ ತೊಳೆಯುವುದು, ನೈರ್ಮಲ್ಯ ಅಭ್ಯಾಸ, ಸ್ಯಾನಿಟೈಸರ್‌ಗಳನ್ನು ಬಳಸುವುದರ ಬಗ್ಗೆ ವಿಡಿಯೋವೊಂದನ್ನು‌‌ ಸಾಮಾಜಿಕ ಜಾಲತಾಣದಲ್ಲಿ‌ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಡಬ್ಲ್ಯೂಎಚ್‌ಒ ಅನುಸರಿಸಿದ ರೀತಿಯಲ್ಲಿ ಕೈ ತೊಳೆಯುವ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆ.



ಕಲ್ಕತ್ತಾ ಪೋಲಿಸರು ಸಹ ಜನರಲ್ಲಿ ಭರವಸೆಯನ್ನು‌ ಮೂಡಿಸಲು ನವೀನ ಮಾರ್ಗವೊಂದನ್ನು‌ ಕಂಡುಕೊಂಡಿದ್ದು, ಸಂಗೀತಗಾರ ಅಂಜನ್ ದತ್ತಾ ಅವರ ಬೇಲಾ ಬೋಸ್ ಎಂಬ ಹಾಡನ್ನು ಕೊರೊನಾವೈರಸ್ ಗೆ ತಕ್ಕ ಹಾಗೆ ಬದಲಾಯಿಸಿದ್ದಾರೆ.