ಬಿ.ಎ ರಷ್ಯನ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜೆಎನ್‌ಯು ಕಾವಲುಗಾರ

ಜೆಎನ್‌ಯುನ ಕಾವಲುಗಾರನಾದ ರಾಮ್‌ಜಾಲ್ ಮೀನಾಲ್ ಅವರು ಬಿ.ಎ ರಷ್ಯನ್ ಭಾಷೆಯ ಕಲಿಕೆಗಾಗಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯನ್ನು ಭೇದಿಸಿದ್ದಾರೆ. ರಾಮ್‌ಜಾಲ್ ಈಗಾಗಲೇ ಹಿಂದಿ, ‌ಇತಿಹಾಸ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದು, ರಾಜಕೀಯ ವಿಜ್ಞಾನದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ.

ಬಿ.ಎ ರಷ್ಯನ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜೆಎನ್‌ಯು ಕಾವಲುಗಾರ

Monday July 22, 2019,

2 min Read

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ(ಜೆಎನ್‌ಯು) ಕಾವಲುಗಾರನಾಗಿ ಕೆಲಸ ಮಾಡುತ್ತಿರುವ ರಾಮ್‌ಜಾಲ್ ಮೀನಾಲ್ ಅವರು ಬಿ.ಎ ರಷ್ಯನ್ ಪದವಿಯ‌ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈಗ ಇದು ಎಲ್ಲ ಕಡೆ ವೈರಲ್ ಆಗಿದೆ. 


ರಾಜಸ್ಥಾನದ ಕರೌಲಿ ಎಂಬ ಹಳ್ಳಿಯವರಾದ ರಾಮ್‌ಜಾಲ್ 30ರ ವಯಸ್ಸಿನಲ್ಲಿಯೆ‌ ಮೂರ ಹೆಣ್ಣುಮಕ್ಕಳ ತಂದೆಯಾಗಿದ್ದು, ಕುಟುಂಬದ ಹಿರಿಮಗನಾದ ಇವರು, ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ದುಡಿಮೆಯ ಅನಿವಾರ್ಯತೆಗೆ ಸಿಲುಕಿದರು. ಕೆಲಸ ಮಾಡುತ್ತಲೇ ದೂರಶಿಕ್ಷಣದ ಮೂಲಕ ಬಿ.ಎ ಹಾಗೂ ಎಂ.ಎ ಪದವಿಗಳನ್ನು‌ ಪಡೆದಿದ್ದಾರೆ.


2014ರಲ್ಲಿ ದೆಹಲಿಗೆ ಬಂದು ಜೆಎನ್‌ಯುಗೆ ಕಾವಲುಗಾರನಾಗಿ ಕೆಲಸಕ್ಕೆ ಸೇರಿದ ಇವರು ಮುಂದೊಂದು ದಿನ ಅದೇ ವಿಶ್ವವಿದ್ಯಾಲಯೆಲ್ಲಿ ವಿದೇಶಿ ಭಾಷಾ ಕಲಿಕೆಯ ವಿದ್ಯಾರ್ಥಿಯಾಗಿ ದಾಖಲಾಗಬಹುದೆಂದು ಅವರು ಊಹಿಸಿಕೊಂಡಿರಲಿಲ್ಲ. ಅದಾಗ್ಯೂ ಅವರ ಧೃಡ ನಿಶ್ಚಯ ಮತ್ತು ನಂಬಿಕೆ ಇದನ್ನು ಸಾಧ್ಯವಾಗಿಸಿತು.


q

ಚಿತ್ರ ಕೃಪೆ: ಸಾಮಾಜಿಕ ಜಾಲತಾಣ

"ನಾನು‌ 2014ರ ಇಲ್ಲಿ ನವೆಂಬರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ ಇಲ್ಲಿಯ ಶೈಕ್ಷಣಿಕ ವಾತಾವರಣವನ್ನು ಗಮನಿಸಿದೆ. ನಂತರ ನಾನು ವಿದ್ಯಾರ್ಥಿಯಾಗಿ ಯೂನಿವರ್ಸಿಟಿಗೆ ಸೇರುವ ಬಗ್ಗೆ ಆಲೋಚಿಸಲಾರಂಭಿಸಿದೆ" ಎಂದು ರಾಮ್‌ಜಾಲ್ ಎನ್‌ಡಿಟಿವಿ ಗೆ ತಿಳಿಸಿದ್ದಾರೆ.


ಅಲ್ಲದೇ, ನಾನು ಹಲವಾರು ಮೊಬೈಲ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದು, ಪ್ರತಿದಿನ ಪ್ರಸ್ತುತ ವ್ಯವಹಾರಗಳ ಬಗ್ಗೆ ಪರಿಶೀಲಿಸಲು ಅವುಗಳನ್ನು ಬಳಸುತ್ತೇನೆ. ಇದಲ್ಲದೆ ನಾನು ಜೆಎನ್‌ಯುನಲ್ಲಿ ಅಧ್ಯಯನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ ಇಲ್ಲಿ ಅಭ್ಯಸಿಸುತ್ತಿರುವ ಹಲವಾರು ವಿದ್ಯಾರ್ಥಿಗಳು ನನಗೆ ಅಧ್ಯಯನ ಸಾಮಗ್ರಿಗಳನ್ನು ಒದಗಿಸಿ ನನಗೆ ಸಹಾಯ ಮಾಡಿದರು.


ಕುಟುಂಬದಲ್ಲಿ ಹಿರಿಯ ಮಗನಾಗಿದ್ದ ರಾಮ್‌ಜಾಲ್ ಅವರು ರಾಜಸ್ಥಾನದಲ್ಲಿ ಪ್ರೌಢ ಶಿಕ್ಷಣದ ನಂತರ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು. ಇದು ಅವರನ್ನು ನಿರುತ್ಸಾಹಗೊಳಿಸಲಿಲ್ಲ. ಮುಂದೆ ಅವರು ಪದವಿಯನ್ನು ಪಡೆದಕೊಂಡರು.


ಭಾರತದಲ್ಲಿ ನಾಗರಿಕ ಸೇವಕರಾಗಿ ಸೇವೆ ಮಾಡುವುದು ರಾಮ್‌ಜಾಲ್ ಅವರ ಕನಸಾಗಿದೆ. ಇದು ಅವರ ಕಲಿಕೆಯ ಉತ್ಸಾಹವನ್ನು ಮತ್ತಷ್ಟು ಪ್ರೇರೆಪಿಸುತ್ತದೆ.


"ನಾನು ಮುಂಚಿನಿಂದಲೂ ನಾಗರಿಕ ಸೇವೆಗಳತ್ತ ಆಕರ್ಷಿತನಾಗಿದ್ದು, ಐಐಎಸ್ ಹಾಗೂ ಐಪಿಎಸ್ ಎರಡನ್ನು ಇಷ್ಟಪಡುತ್ತೇನೆ" ಎಂದು ಎಡೆಕ್ಸ್ ಲೈವ್ ಗೆ ತಿಳಿಸಿದ್ದಾರೆ.


ದೆಹಲಿಯಲ್ಲಿ ಸಾಕಷ್ಟು ಅವಕಾಶವಿದೆ ಎಂಬುದನ್ನು ಅರಿತಿರುವ ರಾಮ್‌ಜಾಲ್ ವಿವಿಧ ಭಾಷೆಗಳನ್ನು ಕಲಿಯಲು ಆಸಕ್ತಿ ಹೊಂದಿದ್ದಾರೆ. ಅಲ್ಲದೇ ಇತರೆ ಸಂಸ್ಕೃತಿಗಳ ವೈವಿಧ್ಯತೆಯ ಬಗ್ಗೆ ಅರಿಯಲು ಪ್ರಪಂಚ ಪರ್ಯಟನೆಯ ಬಹುದೊಡ್ಡ ಕನಸನ್ನು‌ ಹೊತ್ತಿದ್ದಾರೆ.


ಆದ್ದರಿಂದ, ರಾಮ್‌ಜಾಲ್ ಜೆಎನ್‌ಯುನಲ್ಲಿ ರಷ್ಯಾದ ಕೋರ್ಸ್ ಅನ್ನು ಆಯ್ದುಕೊಂಡರು. ಅದಾಗ್ಯೂ ಅವರು ಅರ್ಜಿ ನಿಯಮಿತವಾಗಿದೆ. ಆದರೆ ಅವರು ಒಂದೇ ಸಮಯದಲ್ಲಿ ಕೆಲಸ ಹಾಗೂ ಅಧ್ಯಯನ ಮಾಡಲು ಸಾಧ್ಯವಿಲ್ಲ. ಯಾವುದು ಖಚಿತವಾಗಿಲ್ಲವಾದರೂ, ತಮ್ಮ ಪದವಿ ಕೋರ್ಸ್‌ನಿಂದ ಹೊರ ಬಂದಾಗ ತುಂಬಾ ವಿಷಾದಿಸಿದ್ದರು. ಮತ್ತೆ ಅದನ್ನು ಸಂಭವಿಸಲು ಬಯಸುವುದಿಲ್ಲ ಎಂದು ಹೇಳುತ್ತಾರೆ.


ಅವರ ಕುಟುಂಬವು ಆರ್ಥಿಕವಾಗಿ ರಾಮ್‌ಜಾಲ್ ಅವರ ಕೆಲಸ ಆಧಾರದ ಮೇಲೆಯೆ ಅವಲಂಬಿತವಾಗಿರುವದರಿಂದ ಅದಕ್ಕಾಗಿ ಅಧ್ಯಯನ ಮಾಡಲು ಹಾಗೂ ಕೆಲಸ ಮಾಡಲು ಅನುಕೂಲವಾಗುವಂತೆ ಕೆಲಸವನ್ನು ರಾತ್ರಿ ಪಾಳೆಯ ವೇಳೆಗೆ ಬದಲಾಯಿಸಲು ಯೋಜಿಸಿದ್ದಾರೆ.