ಬಡ ಮಕ್ಕಳಿಗೆ ವಿಜ್ಞಾನದ ಶಿಕ್ಷಣ ನೀಡುತ್ತಿದ್ದಾರೆ 12 ನೇ ತರಗತಿಯ ಈ ಇಬ್ಬರು ವಿದ್ಯಾರ್ಥಿಗಳು

17 ವರ್ಷದ ಉಮಾಂಗ್ ಚಮೇರಿಯಾ ಹಾಗೂ ನೀಲೇಷ್ ಷಾಹ್ ಬಡ ಮಕ್ಕಳಿಗಾಗಿ ವಿಜ್ಞಾನವನ್ನು ವಿನೋದವಾಗಿ, ಸುಲಭವಾಗಿ ಹಾಗೂ ಆಸಕ್ತಿದಾಯಕವಾಗಿಸಲು ವಿಜ್ಯಾನ್ ಎಸ್ ಟಿ ಈ ಎಂ ಲ್ಯಾಬ್‌ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ.

10th Sep 2019
  • +0
Share on
close
  • +0
Share on
close
Share on
close

ಭಾರತ ಉನ್ನತ ಮಟ್ಟದ ಐಐಟಿ, ಐಎಸ್‌ಬಿ, ಐಐಎಸ್‌ಸಿ ಅಂತಹ ಹಲಾವಾರು ವೈಜ್ಞಾನಿಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಆದಾಗ್ಯೂ, ಶಾಲೆಗಳಲ್ಲಿ ವೈಜ್ಞಾನಿಕ ಶಿಕ್ಷಣದ ಮಟ್ಟವನ್ನು ನೋಡಿದರೆ ಆಘಾತವಾಗುತ್ತದೆ, ಅದರಲ್ಲೂ ಮೂಲಭೂತ ಸೌಕರ್ಯದಿಂದ ವಂಚನೆಗೊಂಡ ಮಕ್ಕಳ ಸ್ಥಿತಿಯಂತೂ ಹೇಳತೀರದು.


ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್‌ ಸಿಸ್ಟಂನ ಅಧ್ಯಯನದ ಪ್ರಕಾರ 75 ಪ್ರತಿಶತ 11 ಹಾಗೂ 12ನೇ ತರಗತಿ ವಿರ್ದ್ಯಾಥಿಗಳಿಗೆ ವಿಜ್ಞಾನದ ಪ್ರಯೋಗಾಲಯಗಳ ಕೊರತೆ ಇದೆ. ಪ್ರಯೋಗಾಲಯದ ವ್ಯವಸ್ಥೆ ಇದ್ದಲ್ಲಿ ವಿರ್ದ್ಯಾಥಿಗಳಿಗೆ ವಿಷಯ ಸುಲಭವಾಗಿ ಅರ್ಥವಾಗುವುದಷ್ಟೇ ಅಲ್ಲದೆ, ವಿಜ್ಞಾನದ ವಿಷಯದಲ್ಲಿ ಮುಂದುವರೆದು ಜೀವನ ರೂಪಿಸಿಕೊಳ್ಳುವ ವಿರ್ದ್ಯಾಥಿಗಳಿಗೆ ನೇರವಾಗುತ್ತದೆ.


ಅಮೇರಿಕನ್ ಕೆಮಿಕಲ್ ಸೊಸೈಟಿಯ ಅಧ್ಯಯನವೊಂದರ ಪ್ರಕಾರ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದ ವಿರ್ದ್ಯಾಥಿಗಳು ಉತ್ತಮ ಸಮಸ್ಯೆ ನಿವಾರಣಾ ಕೌಶಲ್ಯವನ್ನು ಹಾಗೂ ಯೋಚನಾ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ ಜೊತೆಗೆ ಪ್ರಯೋಗಾಲಯದಲ್ಲಿ ನಡೆಯುವ ಕ್ರಿಯೆ ಪ್ರತಿಕ್ರಿಯೆಗಳು, ವಸ್ತುಗಳು ಮತ್ತು ಉಪಕರಣಗಳಿಗೆ ತೆರೆದುಕೊಳ್ಳುವುದಕ್ಕೆ ಸುಲಭವಾಗುತ್ತದೆ.


ಈ ಪರಿಸ್ಥಿತಿಯನ್ನು ಬದಲಾಯಿಸುವ ಪ್ರಯತ್ನದಲ್ಲಿ, ಕೋಲ್ಕತ್ತಾದ ಕ್ಸೇವಿಯರ್ ಕಾಲೇಜಿಯೇಟ್ ಶಾಲೆಯಲ್ಲಿ ಜೊತೆಗೆ ಓದುತ್ತಿರುವ 17 ವರ್ಷದ ಬಾಲಕರಾದ ಉಮಾಂಗ್ ಚಮರಿಯಾ ಮತ್ತು ನಿಲೇಶ್ ಷಾ ಅವರು ವಿಜ್ಞಾನ ಪ್ರಯೋಗಾಲಯಗಳನ್ನು ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡುತ್ತಿದ್ದಾರೆ.


ಕೋಲ್ಕತ್ತಾದಲ್ಲಿ 2018 ರಲ್ಲಿ ಪ್ರಾರಂಭವಾದ ಅವರ ವಿಜ್ಞಾನ ಎಸ್‌ಟಿಇಎಂ ಲ್ಯಾಬ್ಸ್ 7, 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಪ್ರಯೋಗಗಳನ್ನು ತರುವ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. (STEM ಎಂದರೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ). ಅವರ ಪ್ರಯೋಗಾಲಯಗಳು ಈವರೆಗೆ 550-600 ಮಕ್ಕಳ ಮೇಲೆ ಪರಿಣಾಮ ಬೀರಿದೆ ಮತ್ತು ಸಂಸ್ಥೆ ಪ್ರಸ್ತುತ ವಿದ್ಯಾಂಜಲಿ ಪ್ರೌಢ ಶಾಲೆ ಮತ್ತು ಶ್ರೀ ಜೈನ್ ವಿದ್ಯಾಲಯ ಎಂಬ ಎರಡು ಶಾಲೆಗಳಲ್ಲಿ ತರಗತಿಗಳನ್ನು ನಡೆಸುತ್ತಿದೆ. ಇದನ್ನು ಸೆಪ್ಟೆಂಬರ್‌ನಲ್ಲಿ ಕೋಲ್ಕತ್ತಾದ ಹೆರಿಟೇಜ್ ಶಾಲೆಯಲ್ಲಿ ಪ್ರಾರಂಭಿಸಲು ಸಹ ಸಜ್ಜಾಗಿದೆ.


ವಿಜ್ಞಾನ ಎಸ್‌ಟಿಇಎಂ ಲ್ಯಾಬ್ ಸಂಸ್ಥಾಪಕರಾದ ಉಮಾಂಗ್ ಚಮರಿಯಾ ಮತ್ತು ನಿಲೇಶ್ ಶಾ.


ಇದು ಹೇಗೆ ಪ್ರಾರಂಭವಾಯಿತು?

ಚಿಕ್ಕ ವಯಸ್ಸಿನಿಂದಲೂ ವಿಜ್ಞಾನದ ಬಗ್ಗೆ ಒಲವು ಹೊಂದಿದ್ದ ಮತ್ತು ವಿಶ್ವಕೋಶಗಳನ್ನು ಓದುವುದರಲ್ಲಿ ತೊಡಗಿದ್ದ ಈ ಜೋಡಿ ಯಾವಾಗಲೂ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮತ್ತು ಪ್ರಾಯೋಗಿಕ ಪ್ರಯೋಗಗಳ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಯಸುತ್ತೇವೆ ಎನ್ನುತ್ತಾರೆ.


"ಇಂದು ಬಹಳಷ್ಟು ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ತಪ್ಪು ಆಲೋಚನೆಗಳನ್ನು ಹೊಂದಿದ್ದಾರೆ, ಮತ್ತು ಅವರಲ್ಲಿ ಹಲವರು ಶಾಲೆಗೆ ಚಿಂತೆಯಲ್ಲಿಯೇ ಹೋಗುತ್ತಾರೆ. ಆದಾಗ್ಯೂ, ಶಾಲೆಯ ಪಠ್ಯಕ್ರಮವನ್ನು ಮೀರಿದ ಇನ್ನೂ ಹೆಚ್ಚಿನ ವಿಷಯಗಳಿವೆ ಎಂದು ಅವರು ಅರಿತುಕೊಳ್ಳುವುದಿಲ್ಲ,” ಎಂದೆನ್ನುತ್ತಾರೆ ವಿಜ್ಞಾನ ಎಸ್‌ಟಿಇಎಂ ಲ್ಯಾಬ್ಸ್‌ನ ಸಹ-ಸಂಸ್ಥಾಪಕ ಉಮಾಂಗ್ ಚಮರಿಯಾ.


ತಮ್ಮ ಶಾಲೆಯ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಪ್ರಾಯೋಗಿಕ ಪ್ರಯೋಗಗಳನ್ನು ಮಾಡುವಾಗ ವಿಜ್ಞಾನ ಎಸ್‌ಟಿಇಎಂ ಲ್ಯಾಬ್‌ಗಳ ಕಲ್ಪನೆಯು ಉಮಾಂಗ್‌ಗೆ ಬಂದಿತು. ಅವರು ಭೌತಶಾಸ್ತ್ರ ಪ್ರಯೋಗಾಲಯದ ಮುಖ್ಯಸ್ಥರೊಂದಿಗೆ ಸಂಭಾಷಣೆ ನಡೆಸಿದಾಗ ಅವರ ಸ್ವಂತ ಮಕ್ಕಳು ಓದುವ ಶಾಲೆಯಲ್ಲಿಯೂ ವಿಜ್ಞಾನ ಪ್ರಯೋಗಾಲವಿಲ್ಲ ಎಂದು ಅರಿತುಕೊಂಡರು.


ಪಠ್ಯಕ್ರಮವನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವೆಂದು ಕಂಡುಕೊಳ್ಳುವುದರಿಂದ, ಕಡಿಮೆ ಸೌಕರ್ಯವಿರುವ ಶಾಲೆಗಳಲ್ಲಿನ ಹೆಚ್ಚಿನ ಮಕ್ಕಳು ವಿಜ್ಞಾನದಲ್ಲಿ ವೃತ್ತಿಯನ್ನು ಮಾಡಲು ಹಿಂಜರಿಯುತ್ತಾರೆ ಎಂದು ಆ ಸಂವಾದದ ಸಮಯದಲ್ಲಿ ಅರಿತುಕೊಂಡರು.


"ಆಗ ನಾನು ಎಸ್‌ಟಿಇಎಂ ಲ್ಯಾಬ್ ಅನ್ನು ರಚಿಸಲು ನಿರ್ಧರಿಸಿದೆ, ಆದ್ದರಿಂದ ನಾನು ಹಿಂದುಳಿದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಗಗಳನ್ನು ತೆಗೆದುಕೊಳ್ಳಬಹುದಾಗಿತ್ತು" ಎಂದು ಉಮಾಂಗ್‌ ಹೇಳುತ್ತಾರೆ.


ಉಮಾಂಗ್ ತಮ್ಮ ಜೊತೆಗೆ ಓದುತ್ತಿರುವ ಮತ್ತು ಆಪ್ತ ಸ್ನೇಹಿತ ನಿಲೇಶ್ ಅವರನ್ನು ಸಂಪರ್ಕಿಸಿದರು, ಇಬ್ಬರು ವಿಜ್ಞಾನವನ್ನು ಸುಲಭವಾಗಿ ಅರ್ಥವಾಗುವ ಮತ್ತು ವಿನೋದವಾಗಿ ತಿಳಿಸಿಕೊಡಬಲ್ಲ ಪ್ರಯೋಗಾಲಯವನ್ನು ಆರ್ಥಿಕವಾಗಿ ಸದೃಢರಾಗಿಲ್ಲದ ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಿದರು.


ಈ ಜೋಡಿಯು ನಂತರ ವಿಜ್ಞಾನ ಎಸ್‌ಟಿಇಎಂ ಲ್ಯಾಬ್‌ಗಳಿಗಾಗಿ ಒಂದು ಪ್ರಮುಖ ತಂಡವನ್ನು ರಚಿಸಿತು, ಈ ಕೆಲಸದಲ್ಲಿ ಆಸಕ್ತಿಯಿರುವ ಇತರ ಎಂಟು ಸದಸ್ಯರನ್ನು ಇದು ಒಳಗೊಂಡಿತು. ಅವರಲ್ಲಿ ಕೆಲವರು ತಮ್ಮ ಶಾಲೆಯವರಾಗಿದ್ದರೆ, ಮತ್ತೆ ಕೆಲವರು ಅವರ ಸ್ನೇಹಿತರಾಗಿದ್ದರು.


ವಿಜ್ಞಾನ ಎಸ್‌ಟಿಇಎಂ ಲ್ಯಾಬ್‌ಗಳ ಸ್ಥಾಪಕರು ವಿಜ್ಞಾನವನ್ನು ವಿನೋದವಾಗಿ ಅರ್ಥಮಾಡಿಸುತ್ತ, ಶಾಲಾ ವಿದ್ಯಾರ್ಥಿಗಳಿಗೆ ಸುಲಭವಾಗಿ ಗ್ರಹಿಸುವಂತೆ ಹೇಳುತ್ತಾರೆ.


ಕಲಿಕೆಯ ರೇಖೆ

ಇಬ್ಬರು ಹದಿಹರೆಯದವರು ಮೊದಲು ತಮ್ಮ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿದರು, ಅವರು ಈ ವಿಚಾರವನ್ನು ಬೆಂಬಲಿಸಿದ ಅವರು ಉದ್ಯಮವನ್ನು ಪ್ರಾರಂಭಿಸಲು ಮತ್ತು ಅವರ ಶೈಕ್ಷಣಿಕ ಗುರಿಗಳನ್ನು ಸಮತೋಲನಗೊಳಿಸಲು ಸಮರ್ಥರಾಗಿದ್ದಾರೆಂದು ನಂಬಿದ್ದರು.


ನಂತರ, ಪ್ರಾಂಶುಪಾಲರು ಅವರನ್ನು ಕೋಲ್ಕತ್ತಾದ ಹಿಂದುಳಿದ ಮಕ್ಕಳ ಶಾಲೆಯಾದ ವಿದ್ಯಾಂಜಲಿಗೆ ಕಳುಹಿಸಿದರು, ಅಲ್ಲಿ ಅವರು 7 ರಿಂದ 9 ನೇ ತರಗತಿಯ ಮಕ್ಕಳಿಗೆ ಪ್ರಯೋಗಗಳನ್ನು ಕಲಿಸಲು ಪ್ರಾರಂಭಿಸಿದರು. ಅವರು ಎಸ್‌ಟಿಇಎಂ ಪಠ್ಯಕ್ರಮವನ್ನು ರಚಿಸಿದರು, ಇದು ವಿದ್ಯಾರ್ಥಿಗಳಿಗೆ ಪರಿಕಲ್ಪನೆಗಳನ್ನು ಉತ್ತಮ ರೀತಿಯಲ್ಲಿ ಕಲಿಯಲು ಮತ್ತು ಗ್ರಹಿಸಲು ಸಹಾಯ ಮಾಡುವ ಪ್ರಯೋಗಗಳನ್ನು ಒಳಗೊಂಡಿದೆ.


“ನಾವು ವಿದ್ಯಾಂಜಲಿಯಲ್ಲಿ ಪ್ರಾರಂಭಿಸಿದಾಗ, ಪ್ರಾಯೋಗಿಕ ಅವಧಿಯಲ್ಲಿ ಕೇವಲ 15 ವಿದ್ಯಾರ್ಥಿಗಳು ಇದ್ದರು. ಆದಾಗ್ಯೂ, ಪ್ರತಿಕ್ರಿಯೆ ಉತ್ತಮವಾಗಿತ್ತು ಮತ್ತು ಅವರು ಮತ್ತಷ್ಟು ಕಲಿಯಲು ಉತ್ಸುಕರಾಗಿದ್ದರು ”ಎಂದು ಹೇಳುತ್ತಾರೆ ಉಮಾಂಗ್


ವಿದ್ಯಾರ್ಥಿಗಳ ಕಾರ್ಯಕ್ಷಮತೆಯಿಂದ ಸಂತೋಷಗೊಂಡ ವಿದ್ಯಾಂಜಲಿ ಪ್ರಾಂಶುಪಾಲರಾದ ವಿಜಯನ್ ಎಸ್‌ಟಿಇಎಂ ಲ್ಯಾಬ್‌ಗಳನ್ನು ನಗರದ ಮತ್ತೊಂದು ಶಾಲೆಯಾದ ಶ್ರೀ ಜೈನ್ ವಿದ್ಯಾಲಯದಲ್ಲಿ ಸ್ಥಾಪಿಸುವಂತೆ ಸೂಚಿಸಿದರು.


ಶ್ರೀ ಜೈನ್ ವಿದ್ಯಾಲಯದಲ್ಲಿ ವಿಜ್ಞಾನ ಎಸ್‌ಟಿಇಎಂ ಲ್ಯಾಬ್ಸ್ ತಂಡದ ಕೆಲವು ಸದಸ್ಯರು.


"ವಿದ್ಯಾಂಜಲಿಯಲ್ಲಿ ನಮ್ಮ ಪ್ರಾಯೋಗಿಕ ಅಧಿವೇಶನದಲ್ಲಿ 15 ವಿದ್ಯಾರ್ಥಿಗಳನ್ನು ಹೊಂದಿದ್ದರಿಂದ ಹಿಡಿದು, ಶ್ರೀ ಜೈನ್ ವಿದ್ಯಾಲಯದಲ್ಲಿ ಒಂದು ಸಮಯದಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದುವವರೆಗೆ, ಪ್ರತಿ ಎರಡು ವಾರಗಳಿಗೊಮ್ಮೆ ಶನಿವಾರದಂದು ನಾವು ಹೊಸ ವಿಷಯಗಳೊಂದಿಗೆ ಸಿದ್ಧವಾಗಿ ಬರಬೇಕಾಗಿರುತ್ತಿತ್ತು" ಎನ್ನುತ್ತಾರೆ ಉಮಾಂಗ್.


“ವಿಜ್ಞಾನ ಎಸ್‌ಟಿಇಎಂ ಲ್ಯಾಬ್ಸ್ ಬಳಸುವ ಎಲ್ಲಾ ವಸ್ತುಗಳು ಮತ್ತು ಉತ್ಪನ್ನಗಳನ್ನು ಮನೆಯಲ್ಲಿ ಸುಲಭವಾಗಿ ಸಿಗುತ್ತವೆ, ಮತ್ತು ಕಡಿಮೆ ವೆಚ್ಚದಲ್ಲಿ ದೊರೆಯುವಂತವಾಗಿವೆ. ನಾವು ಲಾಭೋದ್ದೇಶವಿಲ್ಲದ ಕಂಪನಿಯಾಗಿರುವುದರಿಂದ, ನಾವು ನಮ್ಮದೇ ಆದ ವಸ್ತುಗಳನ್ನು ಕೊಂಡುಕೊಳ್ಳುತ್ತೇವೆ” ಎಂದು ಹೇಳುತ್ತಾರೆ ನೀಲೇಶ್.


ಸರಿಯಾದ ಹಾದಿಯಲ್ಲಿ ಧೃಡವಾದ ಹೆಜ್ಜೆ

ಇಂದು, ವಿಜ್ಞಾನದ ಎಸ್‌ಇಟಿಇಎಂ ಲ್ಯಾಬ್ಸ್, ವಿಜ್ಞಾನಕ್ಕೆ ಸಂಬಂಧಿಸಿದ ಕಟ್ಟುಕತೆ ಮತ್ತು ತಪ್ಪು ಕಲ್ಪನೆಗಳನ್ನು ಒಡೆಯುವ ಮೂಲಕ ದೀನದಲಿತ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ - ಇದು ಕಠಿಣ ವಿಷಯವಾಗಿದೆ, ಒಬ್ಬರು ಚಿಕ್ಕ ವಯಸ್ಸಿನಿಂದಲೇ ಕಲಿಯಲು ಪ್ರಾರಂಭಿಸಿದರೆ ಮಾತ್ರ ವಿಜ್ಞಾನದಲ್ಲಿ ಮುಂದುವರಿಯಬಹುದು, ಮುಂದುವರಿಸಲು ಅತ್ಯಂತ ದುಬಾರಿಯಾಗಿದೆ ಮತ್ತು ಅದನ್ನು ಸರಿಯಾಗಿ ಕಲಿಯದಿದ್ದರೆ ಸಾಕಷ್ಟು ಹಣವನ್ನು ಗಳಿಸಲಾಗುವುದಿಲ್ಲ - ಎಂಬ ಹಲವು ತಪ್ಪುಕಲ್ಪನೆಗಳಿವೆ.


ಸಂಸ್ಥಾಪಕರ ಪ್ರಕಾರ, ವಿಜ್ಞಾನ ಎಸ್‌ಟಿಇಎಂ ಲ್ಯಾಬ್‌ಗಳಿಗೆ ಒಡ್ಡಿಕೊಂಡ ನಂತರ, ವಿದ್ಯಾರ್ಥಿಗಳು ವಿಜ್ಞಾನವನ್ನು ಒಂದು ಆಯ್ಕೆಯಾಗಿ ಪರಿಗಣಿಸಲು ಪ್ರಾರಂಭಿಸಿದ್ದಾರೆ. ಅವರು ತಮ್ಮ ವೈಜ್ಞಾನಿಕ ಸಾಮರ್ಥ್ಯಗಳನ್ನು ಅನ್ವೇಷಿಸಬಹುದಾದ ವಿವಿಧ ಕ್ಷೇತ್ರಗಳು ಮತ್ತು ವೃತ್ತಿ ಆಯ್ಕೆಗಳ ಬಗ್ಗೆಯೂ ಕಲಿಯುತ್ತಿದ್ದಾರೆ ಎನ್ನಲಾಗಿದೆ.


ವಿಜ್ಞಾನ ಎಸ್‌ಟಿಇಎಂ ಲ್ಯಾಬ್ಸ್‌ನ ತರಗತಿ ಆರಂಭಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳು.


ಮಣ್ಣಿನ ಶುದ್ಧೀಕರಣ, ನೀರಿನ ಒತ್ತಡ ಮತ್ತು ಕಾಂತೀಕರಣ ದಂತಹ ಕೆಲವು ವಿಜ್ಞಾನ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಕಲಿತರು. "ನಮ್ಮ ಅಧಿವೇಶನಗಳ ಅವಧಿಯಲ್ಲಿ ನಾವು ವಿದ್ಯಾರ್ಥಿಗಳ ಮುಖದಲ್ಲಿ ನೋಡಿದ ಕುತೂಹಲವನ್ನು ಯಾವುದೇ ಪಠ್ಯಪುಸ್ತಕವು ಒದಗಿಸುವುದಿಲ್ಲ" ಎಂದು ನೆನಪಿಸಿಕೊಳ್ಳುತ್ತಾರೆ ನೀಲೇಶ್.


ವಿಜ್ಞಾನ ಎಸ್‌ಟಿಇಎಂನ ಯಶಸ್ಸಿನ ಬಗ್ಗೆ ಮತ್ತು ಅದು ಶಾಲೆಗೆ ಹೇಗೆ ಪ್ರಯೋಜನವನ್ನು ನೀಡಿದೆ ಎಂದು ಮಾತನಾಡುತ್ತಾ, ವಿದ್ಯಾಂಜಲಿಯ ಪ್ರಾಂಶುಪಾಲರಾದ ಸಶ್ವತಿ,


"ಪ್ರಯೋಗಗಳನ್ನು ಪರಿಚಯಿಸುವ ಮತ್ತು ನಿರ್ವಹಿಸುವ ಬಯಕೆಯೊಂದಿಗೆ ವಿಜ್ಞಾನ ಎಸ್‌ಟಿಇಎಂ ಲ್ಯಾಬ್ಸ್ ಮೊದಲು ನನ್ನನ್ನು ಸಂಪರ್ಕಿಸಿದಾಗ, ಇದು ಅತ್ಯಂತ ಉತ್ತಮ ಉಪಕ್ರಮ ಎಂದು ನಾನು ಭಾವಿಸಿದೆ. ಸಂವಾದಾತ್ಮಕ ಅವಧಿಗಳನ್ನು ಹೊಂದಿರುವುದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ ಏಕೆಂದರೆ ಅದು ವಿದ್ಯಾರ್ಥಿಗಳನ್ನು ಅಂತರ-ಶಾಲಾ ಅನುಭವಕ್ಕೆ ಒಡ್ಡುತ್ತದೆ, ಅದು ಅವರಿಗೆ ಅಗತ್ಯ ಎಂದು ನಾನು ಭಾವಿಸಿದ್ದೆನೆ.”


ಉಮಾಂಗ್ ಮತ್ತು ನಿಲೇಶ್ ಅವರು ಬಲೂನ್ ಮತ್ತು ಇತರ ಸುಲಭವಾಗಿ ಲಭ್ಯವಿರುವ ಸಾಧನಗಳೊಂದಿಗೆ ಪ್ರಯೋಗವನ್ನು ನಡೆಸುತ್ತಾರೆ.


ಶ್ರೀ ಜೈನ್ ವಿದ್ಯಾಲಯದ ಶಿಕ್ಷಕಿ ಬಿನಾ ಗುಪ್ತಾ , “ನಮ್ಮ ಶಾಲೆಯಲ್ಲಿ ವಿಜ್ಞಾನ ಎಸ್‌ಟಿಇಎಂ ಲ್ಯಾಬ್‌ಗಳನ್ನು ಹೊಂದಿರುವುದು ನಮ್ಮ ವಿದ್ಯಾರ್ಥಿಗಳಿಗೆ ಹೊಸ ಅನುಭವವಾಗಿದೆ. ಉಮಾಂಗ್ ಮತ್ತು ನಿಲೇಶ್ ಅತ್ಯಂತ ಶ್ರಮಶೀಲ ವ್ಯಕ್ತಿಗಳು ಮತ್ತು ನಮ್ಮ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಸರಳ ಮತ್ತು ಶೈಕ್ಷಣಿಕ ರೀತಿಯಲ್ಲಿ ವಿವರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಠ್ಯಕ್ರಮದ ಹೊರಗಿನ ಪರಿಕಲ್ಪನೆಗಳನ್ನು ಕಲಿಯಲು ಇದು ಅವರಿಗೆ ಸಾಕಷ್ಟು ಸಹಾಯ ಮಾಡಿದೆ” ಎಂದರು.


ಭವಿಷ್ಯ

ಉಮಾಂಗ್ ಮತ್ತು ನಿಲೇಶ್ ಭವಿಷ್ಯಕ್ಕಾಗಿ ಕೆಲವು ದೊಡ್ಡ ಯೋಜನೆಗಳನ್ನು ಹೊಂದಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಇವರಿಬ್ಬರು ಕಲ್ಕತ್ತಾದ ಹೆರಿಟೇಜ್ ಶಾಲೆಯಲ್ಲಿ ವಿಜ್ಞಾನ ಎಸ್‌ಟಿಇಎಂ ಲ್ಯಾಬ್‌ಗಳನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ.


ಸದ್ಯ ಇವರು ಇನ್ಟಾಗ್ರಾಮ್‌ ನಲ್ಲಿ ಖಾತೆ ಹೊಂದಿದ್ದಾರೆ ಮತ್ತು ಆಸಕ್ತ ಶಾಲೆಗಳೊಂದಿಗೆ ಸಮಾಲೋಚಿಸಲು ಅಧಿಕೃತ ವೆಬ್‌ಸೈಟ್ ಅನ್ನು ಸಹ ತೆರೆದಿದ್ದಾರೆ.

Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

Our Partner Events

Hustle across India