'ಲಾಯರ್ ನಿಂದ ಫಾರ್ಮರ್' ಆಗಿ ಬದಲಾದ ಈ ಪ್ರಕೃತಿ ಪ್ರೇಮಿ

ಅಪರ್ಣಾ ರಾಜಗೋಪಾಲ್ ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಹತ್ತು ಎಕರೆ ಬಂಜರು ಭೂಮಿಯನ್ನು ವಿವಿಧ ಬೆಳೆಗಳನ್ನು ಬೆಳೆಸುವ ಮೂಲಕ‌ ಸೊಂಪಾದ ಹಸಿರು ಫಾರ್ಮ್ ಆಗಿ ಪರಿವರ್ತಿಸಿದ್ದಾರೆ ಜೊತೆಗೆ‌ ಅನೇಕ‌ ಪ್ರಾಣಿಗಳಿಗೆ ಆಶ್ರಯ ನೀಡಿದ್ದಾರೆ.

'ಲಾಯರ್ ನಿಂದ ಫಾರ್ಮರ್' ಆಗಿ ಬದಲಾದ ಈ ಪ್ರಕೃತಿ ಪ್ರೇಮಿ

Tuesday August 06, 2019,

3 min Read

ಚೆನ್ನೈ ಮೂಲದವರಾದ ಪ್ರಸ್ತುತ ಉತ್ತರ ಪ್ರದೇಶದ ನೋಯ್ಡಾದ ನಿವಾಸಿಯಾದ ಅಪರ್ಣಾ ರಾಜಗೋಪಾಲ್ ಬೆಂಗಳೂರಿನ ಪ್ರತಿಷ್ಟಿತ ರಾಷ್ಟೀಯ ಕಾನೂನು ಶಾಲೆಯಲ್ಲಿ ಪದವಿ‌ ಪಡೆದಿದ್ದಾರೆ.


ಅವರೇ‌ ಹೇಳುವಂತೆ, ಇಂದು ಅವರು ವಕೀಲರಲ್ಲ, ಸ್ವಯಂ ಕಲಿಕೆ ರೈತರಾಗಿ ಮಾರ್ಪಾಡಾಗಿದ್ದಾರೆ. ಅಪರ್ಣಾ ಪ್ರಕೃತಿ ಪ್ರೇಮಿ ಕೂಡ ಹೌದು. 2014ರಲ್ಲಿ ಆಕಸ್ಮಿಕವಾಗಿ ಬೀಜೋಮ್ ಎಂಬ ಪ್ರಾಣಿಧಾಮ ಮತ್ತು ಸುಸ್ಥಿರವಾದಂತಹ ಕೃಷಿ ಫಾರ್ಮ್ ಅನ್ನು ಸ್ಥಾಪಿಸಿದರು‌


q

ಅಪರ್ಣಾ ರಾಜಗೋಪಾಲ್ (ಚಿತ್ರಕೃಪೆ: ಫೇಸ್‌ಬುಕ್)


ವಕೀಲಿ ವೃತ್ತಿಯಿಂದ ಪ್ರಕೃತಿಯ ಬದುಕಿನತ್ತ ಸಾಗಿದ ತಮ್ಮ‌ ಪಯಣದ ಕುರಿತು ಎಫರ್ಟ್ಸ್ ಫಾರ್ ಗುಡ್ ಜೊತೆಗೆ ಮಾತನಾಡುತ್ತಾ, ಭೂಮಿಯನ್ನು ಹುಡುಕುತ್ತಾ ನೋಯ್ಡಾಗೆ ಹೋದಾಗ ಎಲ್ಲವೂ ಪ್ರಾರಂಭವಾಯಿತು ಎಂದು ಅವರು ಹೇಳಿದರು.


ಹೆಚ್ಚು ಭೂಮಿಯನ್ನು ಗುತ್ತಿಗೆ ಪಡೆದ ನಂತರ, 2014 ರಲ್ಲಿ ಮಸಾನೊಬು ಪುಕುವೋಕಾ ಅವರ ಹಸಿರು ಹುಲ್ಲಿನ ಕ್ರಾಂತಿಯನ್ನು ನಾನು ಕಂಡುಕೊಂಡೆ. ಆಗ ನಾನು ಗುತ್ತಿಗೆ ಪಡೆದ ಭೂಮಿಯನ್ನು ಹೊಸ ರೀತಿಯಲ್ಲಿ ನೋಡಿದೆ. ನಾನು ಮಣ್ಣನ್ನು ಪ್ರೀತಿಸತೊಡಗಿದೆ. ಇದೀಗ ಈ ಭೂಮಿಯ ಜೊತೆಗೆ ನಾನು‌ ನನ್ನ‌‌ ನಾಲ್ಕೂವರೆ ವರ್ಷಗಳನ್ನು ಕಳೆದಿದ್ದೆನೆ.


ಅದೇ ವರ್ಷ ಉತ್ತರ ಪ್ರದೇಶದ‌ ಪ್ರವಾಹದ ಪ್ರದೇಶದಲ್ಲಿ "ಬೀಜೋಮ್" ಜನ್ಮ ತಾಳಿತು.


ಬಂಜರು ಭೂಮಿಯಿಂದ ಫಲವತ್ತಾದ ಭೂಮಿ


ಬಂಜರು ಭೂಮಿಯಿಂದ ಅದನ್ನು ಫಲವತ್ತಾದ ಭೂಮಿಯಾಗಿ‌ ಬೆಳೆಸಿರುವುದು‌ ಹೂವಿನಷ್ಟೇ ಸುಲಭ ಹಾದಿಯಾಗಿರದೆ, ಕಠಿಣ ಹಾದಿಯಾಗಿತ್ತು. ಆರಂಭದಲ್ಲಿ ಭೂಮಿಯು ಪೂರ್ಣವಾಗಿ ಒಣಗಿತ್ತು. ರೈತರು ಕೆಲವು ಬೆಳೆಗಳನಷ್ಟೇ‌ ಮಾತ್ರ ಬೆಳೆಯುತ್ತಿದ್ದರು. ಆದರೆ ಅವರು ಖಾಲಿಯಾದ ಮಣ್ಣಿನ ಫಲವತ್ತತೆಗೆ ಹಾಗೂ ಅನಿಯಮಿತ ಇಳುವರಿಗೆ ಬಲಿಯಾಗಿದ್ದರು.


ಹಾಗಾದರೆ ಅಪರ್ಣಾ ಅವರು ಈ ಒಣ ಭೂಮಿಯನ್ನು ಇಂದಿನ ಈ ಸುಸ್ಥಿತಿಗೆ ಹೇಗೆ ಪರಿವರ್ತಿಸಿದರು? ಈ ಯಶಸ್ಸಿನ ಕೀಲಿಯು ಜಾನುವಾರುಗಳ ಸಗಣಿ ಹಾಗೂ ಗಂಜಲು ಎಂದು ಅವರು ಹೇಳುತ್ತಾರೆ. ಸುಮಾರು ನೂರಕ್ಕೂ ಹೆಚ್ಚು ಜಾನುವಾರುಗಳಿಂದ ಸಂಗ್ರಹಿಸಿದ ಸಗಣಿ ಹಾಗೂ ಎತ್ತು, ಕುದುರೆ, ಎರಡು ಹಂದಿ, ಆಡುಗಳ ಹಿಂಡು ಮತ್ತು‌ ಕೆಲವು ಹೆಬ್ಬಾತುಗಳ ಹಾಗೂ ಸಾಕಿದ ಹುಂಜಗಳ ಸಗಣಿಯನ್ನು ಬಳಸಲಾಗುತ್ತದೆ. ಗೂಗಲ್ ಸಾಹಯದಿಂದ ಪ್ರಾಣಿಗಳ ಸಗಣಿ ಬಳಸಿ ರಸಗೊಬ್ಬರವನ್ನು ತಯಾರಿಸುವುದನ್ನು ತಿಳಿದುಕೊಂಡಿದ್ದೇನೆ ಹಾಗೂ ಬೇವಿನ ಮೂಲಕ ಕೀಟನಾಶಕಗಳನ್ನು ತಯಾರಿಸಿ ಅದನ್ನು ಬೆರೆಸುತ್ತೇವೆ ಎಂದು ಅಪರ್ಣಾ ತಿಳಿಸುತ್ತಾರೆ.


q

ಬೀಜೋಮ್ ಅಲ್ಲಿ‌ ಜಾನುವಾರು ಸಾಕಾಣಿಕೆ (ಚಿತ್ರಕೃಪೆ : ಎಫರ್ಟ್ಸ್ ಫಾರ್ ಗುಡ್)

ಇಂದು ಈ ಜಮೀನಿನಲ್ಲಿ ಗೋಧಿ, ಟೂವರ್ ದಾಲ್ ನಂತಹ ಬೆಳೆಗಳಿವೆ. ಸ್ವಿಸ್ ಚಾರ್ಡ್, ಕೇಲ್ ನಂತಹ ತರಕಾರಿಗಳಿವೆ. ಹಾಗೂ ಕೆಲವು ದಕ್ಷಿಣ ಭಾರತದ ಸಸ್ಯಗಳಿವೆ.


ಸಾವಯವ ಕೃಷಿಯ ಕುರಿತು 'ಎಫರ್ಟ್ಸ್ ಫಾರ್ ಗುಡ್' ಜೊತೆಗೆ ಮಾತನಾಡಿದ ಅಪರ್ಣಾ,


ನಾವು ಅಂತರ್ ಬೆಳೆ, ಬಹು ಬೆಳೆ, ಒಡನಾಡಿ‌ ನೆಡುವಿಕೆ ಮತ್ತು ಬೆಳೆ‌ ತಿರುಗುವಿಕೆಯ ಅಂತಹ ಸಾಂಪ್ರದಾಯಿಕ ವ್ಯವಸ್ಥೆಗಳನ್ನು ಬಳಸಿಕೊಂಡು ಆಹಾರವನ್ನು ಬೆಳೆಯುತ್ತೇವೆ. ಅಲ್ಲದೇ ಮಾವು ಹಸಿ‌ಗೊಬ್ಬರ, ಕಾಂಪೋಸ್ಟ್, ಸಾರಜನಕವನ್ನು ಬಳಸುತ್ತೇವೆ‌‌‌ ಎಂದು ಹೇಳುತ್ತಾರೆ.


ಇಂದು ಅಪರ್ಣಾ ಅವರ ಭೂಮಿಯು ಎರೆಹುಳುಗಳು, ಚಿಟ್ಟೆಗಳು ಹಾಗೂ ಜೇನ್ನೊಣಗಳಿಗೆ ನೆಲೆಯಾಗಿದೆ ಹಾಗೂ ಇತರೆ ಕೃಷಿ ಜಾನುವಾರಗಳೊಂದಿಗೆ ಒಂಭತ್ತು ತಳಿಯ ಹಸುಗಳನ್ನು‌ ಹೊಂದಿದೆ.


ಕ

(ಚಿತ್ರ ಕೃಪೆ: ಎಫರ್ಟ್ಸ್ ಫಾರ್ ಗುಡ್ )


'ಎಫರ್ಟ್ಸ್ ಫಾರ್ ಗುಡ್ ' ಜೊತೆಗೆ ಮಾತನಾಡುತ್ತಾ, ಅಪರ್ಣಾರವರು 


ನೈಸರ್ಗಿಕ ಕೃಷಿ ತಂತ್ರಗಳ ಹಾಗೂ ಪ್ರಾಥಮಿಕ ಫರ್ಮಾಕಲ್ಚರ್ ಮೂಲಕ‌ ನಾವು ಆಹಾರವನ್ನು‌ ಬೆಳೆಯುತ್ತೇವೆ. ಜಮೀನಲ್ಲಿರುವ ಎಲ್ಲಾ ಪ್ರಾಣಿಗಳ‌ ಸಗಣಿ ಹಾಗೂ ಗಂಜಲವನ್ನು ಸಾವಯವ ಗೊಬ್ಬರ ತಯಾರಿಸಲು ಮತ್ತು ಹೊಲದಲ್ಲಿ ಕೀಟ ನಿವಾರಕಗಳಾಗಿ ಬಳಸಲಾಗುತ್ತದೆ.


ಇದಲ್ಲದೆ, ಈ ಫಾರ್ಮ್ ನಲ್ಲಿ ಸೌರಶಕ್ತಿ ಹಾಗೂ ಜೈವಿಕ ಅನಿಲವನ್ನು ಬಳಸಲಾಗುತ್ತದೆ. ಮಳೆನೀರಿನ ಕೊಯ್ಲಿನ ತಂತ್ರದ ಮೂಲಕ ಮಳೆಯ ನೀರನ್ನು ಸರಿಯಾಗಿ ಬಳಸಿಕೊಳ್ಳಲಾಗುತ್ತದೆ. ಸುಸ್ಥಿರ ಕೃಷಿಯನ್ನು ಸರಿಯಾಗಿ ಮಾಡಲಾಗಿತ್ತಿದೆ.


ರೈತರ ಸಬಲೀಕರಣದ ಕುರಿತಾಗಿ ಮಾತನಾಡಿದ ಅವರು,


ಶುದ್ಧ ಆಹಾರವನ್ನು ಬೆಳೆಯಲು ರೈತರಿಗೆ ಕೇವಲ ಬಾಯಿಮಾತಲ್ಲಿ ಹೇಳಿದರೆ ಉಪಯೋಗವಾಗುವುದಿಲ್ಲ,‌ ಅವರಿಗೆ ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯದಂತಹ ಮೂಲ ಸೌಲಭ್ಯಗಳನ್ನು ಅನುಕೂಲಗಳನ್ನು ಒದಗಿಸಿ ಕೊಡಬೇಕು. ಇದರಿಂದ ಅವರು ಬೆಳೆಯುತ್ತಿರುವ ಆಹಾರದತ್ತ ಸರಿಯಾಗಿ ಗಮನ ಹರಿಸಬಹುದು.


ಅಲ್ಲದೇ, ಅಪರ್ಣಾ ರೈತರ ಮಕ್ಕಳಿಗಾಗಿ "ಬೀಜೋಮ್ ಶಿಕ್ಷಾ" ಎಂಬ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಮತ್ತು ಉಚಿತ ವೈದ್ಯಕೀಯ ಚಿಕಿತ್ಸಾಲಯವನ್ನು ಕೂಡ ಆರಂಭಿಸಿದ್ದಾರೆ.


ಕ

ಕೃಷಿ ತ್ಯಾಜ್ಯದಿಂದ ತಯಾರಿಸಲಾದ ಶಾಲೆಯ ಬೆಂಚುಗಳು (ಚಿತ್ರಕೃಪೆ‌: ಎಫರ್ಟ್ಸ್ ಫಾರ್ ಗುಡ್)


ಕೃಷಿ ತ್ಯಾಜ್ಯದ ಮೂಲಕ ಶಾಲೆಯಲ್ಲಿನ ಬೆಂಚುಗಳನ್ನು ತಯಾರಿಸಲಾಗುತ್ತದೆ‌. ಕೃಷಿ ಸಮುದಾಯದಲ್ಲಿನ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ಬೆಳೆಸಲು ವಿಶೇಷ ತರಬೇತಿ ನೀಡಲಾಗುತ್ತದೆ.


ಮಹಿಳೆಯರಿಗೆ ಟೈಲರಿಂಗ್ ನಂತಹ ಮೂಲಭೂತ ಕೌಶಲ್ಯ ಹಾಗೂ ಪತ್ರಿಕೆಗಳ ಚೀಲಗಳನ್ನು ತಯಾರಿಸುವಂತಹ ಸುಸ್ಥಿರ ಪರ್ಯಾಯಗಳನ್ನು ಕಲಿಸಲಾಗುತ್ತದೆ‌. ಇದಲ್ಲದೆ, ಅವರಿಗೆ 'ಬೀಜೋಮ್‌ಸಮುದಾಯ'ದ ಯೋಜನೆ ಯಡಿ ನೈಸರ್ಗಿಕ ಕೃಷಿಯ ಬಗ್ಗೆ ತರಬೇತಿ ನೀಡಲಾಗುತ್ತದೆ.


ಪ್ರಕೃತಿಯ ಮೇಲಿನ ಪ್ರೀತಿಗೆ ಅಪರ್ಣಾರವರು ಪರಿಸರಕ್ಕೆ ಕೊಡುಗೆ ನೀಡುವುದಲ್ಲದೆ, ತಮ್ಮ ಯೋಜನೆಯ ಮೂಲಕ ಕೃಷಿ ಸಮುದಾಯವನ್ನು ಸಬಲೀಕರಣಗೊಳಿಸುತ್ತಿದ್ದಾರೆ ಮತ್ತು ತಮ್ಮ ಈ ಕಾರ್ಯದ ಮೂಲಕ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.


ಪ್ರಕೃತಿಯ ಮೇಲಿನ ಪ್ರೀತಿಯ ಮೂಲಕ, ಅಪರ್ಣ ಪರಿಸರಕ್ಕೆ ಕೊಡುಗೆ ನೀಡುವುದಲ್ಲದೆ, ತನ್ನ ಯೋಜನೆಯ ಮೂಲಕ ಕೃಷಿ ಸಮುದಾಯವನ್ನು ಸಬಲೀಕರಣಗೊಳಿಸುತ್ತಿದ್ದಾಳೆ, ಮತ್ತು ಅನೇಕರಿಗೆ ಸ್ಫೂರ್ತಿಯಾಗಿದೆ.