ಲಾಕ್‌ಡೌನ್‌ 4.0: ಮತ್ತಷ್ಟು ನಗರಗಳಲ್ಲಿ ಸೇವೆ ಆರಂಭಿಸಿದ ಓಲಾ, ಉಬರ್‌

4 ನೇ ಹಂತದ ಲಾಕ್‌ಡೌನ್‌ ಮಾರ್ಗಸೂಚಿಗಳು ಬಿಡುಗಡೆಯಾದ ನಂತರ ಓಲಾ, ಉಬರ್ ದೆಹಲಿ ಮತ್ತು ಬೆಂಗಳೂರು ಸೇರಿದಂತೆ ಮತ್ತಷ್ಟು ನಗರಗಳಲ್ಲಿ ಸೇವೆಯನ್ನು ಪುನರಾರಂಭಿಸುತ್ತಿವೆ.

ಲಾಕ್‌ಡೌನ್‌ 4.0: ಮತ್ತಷ್ಟು ನಗರಗಳಲ್ಲಿ ಸೇವೆ ಆರಂಭಿಸಿದ ಓಲಾ, ಉಬರ್‌

Tuesday May 19, 2020,

1 min Read

ಕೊರೊನಾವೈರಸ್‌ ಲಾಕ್‌ಡೌನ್‌ನಿಂದ ಬೆಂಗಳೂರು ಮತ್ತು ದೆಹಲಿ ಸೇರಿದಂತೆ ದೇಶಾದ್ಯಂತ ಕ್ಯಾಬ್‌ ಸೇವೆಗಳನ್ನು ನಿಷ್ಕ್ರಿಯಗೊಳಿಸಿ 50 ದಿನಗಳಾಗಿ ಹೋಗಿದೆ.


“ಸರ್ಕಾರದ ಲಾಕ್‌ಡೌನ್‌ 4.0 ಮಾರ್ಗಸೂಚಿಗಳೊಂದಿಗೆ ಉಬರ್‌, ಮತ್ತಷ್ಟು ನಗರಗಳಲ್ಲಿ ಸೇವೆ ಪ್ರಾರಂಭಿಸುತ್ತಿದೆ. ನಿರ್ದಿಷ್ಟ ನಗರಗಳಲ್ಲಿ ಸೇವೆ ಪ್ರಾರಂಭಗೊಳ್ಳುದರ ಬಗೆಗೆ ಪ್ರಯಾಣಿಕರಿಗೆ ಅಪ್ಲಿಕೇಷನ್‌ ಮೂಲಕ ಮಾಹಿತಿ ನೀಡಲಾಗುವುದು,” ಎಂದು ಬ್ಲಾಗ್‌ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.


ವಿನ್ಯಾಸ: ಗೋಕುಲ್‌ ಕೆ




ಹೊಸ 10 ನಗರಗಳೊಂದಿಗೆ, ಈಗ ಉಬರ್‌ ದೇಶದ 35 ನಗರಗಳಲ್ಲಿ ಕಾರ್ಯಾರಂಭಿಸಲಿದೆ. ಈ ಮೊದಲು ಕಂಪನಿ 25 ನಗರಗಳಲ್ಲಿ ಸೇವೆಯನ್ನು ಪುನರಾರಂಭಿಸಿತ್ತು.


ತ್ರಿಚಕ್ರ ಮತ್ತು 4 ಚಕ್ರ ವಾಹನಗಳು ಕರ್ನಾಟಕ, ತೆಲಂಗಾಣ, ದೆಹಲಿ, ಹರಿಯಾಣ, ಚಂದಿಗರ್‌, ಪಂಜಾಬ್‌, ತಮಿಳುನಾಡು (ಚೆನ್ನೈ ಹೊರತುಪಡಿಸಿ), ಆಂಧ್ರ ಪ್ರದೇಶ, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಸೇವೆಗೆ ಸಿದ್ಧವಾಗಿವೆ ಎಂದು ಓಲಾ ಹೇಳಿದೆ.


“ದಿನವೂ ನಗರದ ಜನತೆಗೆ ಕ್ಯಾಬ್‌ ಸೇವೆ ಒದಗಿಸಿ ಜೀವನ ನಡೆಸುವ ಲಕ್ಷಾಂತರ ಚಾಲಕರಿಗೆ ಇದು ಸಿಹಿ ಸುದ್ದಿಯಾಗಿದೆ. 160 ನಗರಗಳಲ್ಲಿ ಉಪಸ್ಥಿತಿ ಹೊಂದಿರುವ ಓಲಾ, ತನ್ನ ಪ್ರತಿ ಟ್ರಿಪ್‌ನಲ್ಲಿಯೂ ಸುರಕ್ಷತೆಗೆ ಗಮನ ನೀಡುತ್ತಿದೆ,” ಎಂದು ಓಲಾ ಇಮೈಲ್‌ನಲ್ಲಿ ಉತ್ತರಿಸಿದೆ.


ದೆಹಲಿಯಲ್ಲಿ ಟ್ಯಾಕ್ಸಿ ಮತ್ತು ಕ್ಯಾಬ್‌ಗೆ ಚಾಲನೆ ನೀಡಿದ್ದರೂ ಒಂದು ಬಾರಿ ಕೇವಲ ಇಬ್ಬರೂ ಪ್ರಯಾಣಿಕರಿಗೆ ಮಾತ್ರ ಅನುಮತಿ ಕಲ್ಪಿಸಲಾಗಿದೆ.


ಪ್ರಯಾಣಿಕರು ಮತ್ತು ಚಾಲಕರ ಸುರಕ್ಷತೆಗಾಗಿ ಓಲಾ ಉಬರ್‌ ಹೊಸ ಕ್ರಮಗಳನ್ನು ಸಿದ್ಧಪಡಿಸಿದೆ.


ಓಲಾದ ಸುರಕ್ಷತಾ ನಿಯಮಗಳಲ್ಲಿ ಕಡ್ಡಾಯವಾಗಿ ಚಾಲಕರು ಪ್ರಯಾಣಿಕರು ಮಾಸ್ಕ್‌ ಧರಿಸುವುದು, ಟ್ರಿಪ್‌ ಮುಗಿದ ನಂತರ ಸಂಪೂರ್ಣ ಕಾರಿನ ಸ್ವಚ್ಛತೆ ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವುದಕ್ಕಾಗಿ ಕೇವಲ ಇಬ್ಬರಿಗೆ ಮಾತ್ರ ಪ್ರಯಾಣಕ್ಕೆ ಅನುಮತಿಸಿರುವುದು ಸೇರಿದೆ.


ಸೋಮವಾರ ಉಬರ್‌, ಚಾಲಕ ಮತ್ತು ಪ್ರಯಾಣಿಕರಿಬ್ಬರೂ ಖಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಘೋಷಿಸಿತ್ತು. ಅಷ್ಟೇ ಅಲ್ಲದೆ ಚಾಲಕರು ಮಾಸ್ಕ್‌ ಧರಿಸಿರುವ ಸೆಲ್ಫಿಯನ್ನು ಸಲ್ಲಿಸಿಯೆ ವೇದಿಕೆಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಿದೆ.


ಒಂದು ವೇಳೆ ಚಾಲಕರಿಗೆ ಅಸುರಕ್ಷತೆ ಏನಿಸಿದರೆ ಅಥವಾ ಪ್ರಯಾಣಿಕರು ಮಾಸ್ಕ್‌ ಧರಿಸಿರದಿದ್ದರೆ ಟ್ರಿಪ್‌ ಕ್ಯಾನ್ಸಲ್‌ ಮಾಡುವ ಆಯ್ಕೆಯನ್ನು ನೀಡಿದೆ.