Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಕರ್ನಾಟಕದ ವಲಸಿಗರಿಗೆ ಊರಿಗೆ ಮರಳಲು ಸಹಾಯ ಮಾಡಿದ ಸೋನು ಸೂದ್‌

ನಟ ಸೋನು ಸೂದ್‌ ಏರ್ಪಡಿಸಿದ್ದ 10 ಬಸ್‌ಗಳಲ್ಲಿ 350 ವಲಸಿಗರು ಕರ್ನಾಟಕದ ಕಲಬುರ್ಗಿಯತ್ತ ಸೋಮವಾರ ಪ್ರಯಾಣ ಬೆಳೆಸಿದರು.

ಕರ್ನಾಟಕದ ವಲಸಿಗರಿಗೆ ಊರಿಗೆ ಮರಳಲು ಸಹಾಯ ಮಾಡಿದ ಸೋನು ಸೂದ್‌

Thursday May 14, 2020 , 2 min Read

ಕೊರೊನಾವೈರಸ್‌ ಭಾರತದ ಲಕ್ಷಾಂತರ ಜನರ ಜೀವನವನ್ನು ಕಂಗೆಡಿಸಿರುವುದಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಹಾನಿಗೆ ಕಾರಣವಾಗಿದೆ.


ಇಂತಹ ಕಷ್ಟದ ಸಮಯದಲ್ಲಿ ಕಳೆದ ಎರಡು ತಿಂಗಳಿನಿಂದ ಹಲವು ಪ್ರಸಿದ್ಧ ಜನರು ನೋಂದವರ ಸಹಾಯಕ್ಕೆ ನಿಂತಿದ್ದಾರೆ. ಅವರಲ್ಲಿ ಹಿಂದಿ ಚಿತ್ರರಂಗದ ನಟ ಸೋನು ಸೂದ್‌ ಕೂಡಾ ಒಬ್ಬರು. ಇವರು ಹಲವಾರು ಸಂಸ್ಥೆಗಳಿಗೆ ದೇಣಿಗೆ ನೀಡಿರುವುದಲ್ಲದೆ, ರಮಜಾನ್‌ ತಿಂಗಳಲ್ಲಿ ಜುಹುನಲ್ಲಿರುವ ತಮ್ಮ ಹೊಟೆಲ್‌ ಅನ್ನು 25,000 ವಲಸಿಗರಿಗೆ ಆಹಾರ ನೀಡುವುದಕ್ಕೆ ಬಳಸಲು ಕೊಟ್ಟಿದ್ದಾರೆ.


ಇದಲ್ಲದೇ ಸೋನು ಸೂದ್‌ ವಲಸಿಗರು ತಮ್ಮ ಊರುಗಳಿಗೆ ಮರಳಲು ಸಹಾಯವಾಗುವಂತೆ 10 ಬಸ್‌ಗಳನ್ನು ಮೇ 11 ರಂದು ವ್ಯವಸ್ಥೆ ಮಾಡಿದ್ದರು. 350 ವಲಸಿಗರನ್ನು ಈ ಬಸ್‌ಗಳಲ್ಲಿ ಕರ್ನಾಟಕಕ್ಕೆ ರವಾನಿಸಲಾಗಿದೆ.


“ಹೇಗೆ ಸಹಾಯ ಮಾಡುವುದು ಗೊತ್ತಿಲ್ಲ ಎಂದು ಜನರು ಹೇಳುತ್ತಾರೆ. ಆದರೆ ಹಲವಾರು ವಿಧಗಳಲ್ಲಿ ಸಹಾಯ ಮಾಡಬಹುದು. ಪ್ರತಿ ಬಾರಿ ನಾನು ದಿನಸಿ ತರಲು ಹೋದಾಗ ಭಾರವಾದ ಚೀಲಗಳನ್ನು ಹಿಡಿದು ರಸ್ತೆಯಲ್ಲಿ ಹೊರಟಿರುವ ನೂರಾರು ಮಕ್ಕಳನ್ನು, ವಯಸ್ಸಾದವರನ್ನು, ಯುವಕ ಯುವತಿಯರನ್ನು ನೋಡಿದ್ದೇನೆ. ಅವರನ್ನು ತಡೆದು, ”ನೀವು ಸ್ವಲ್ಪ ನಿಂತುಕೊಳ್ಳಿ. ನಾನು ನಿಮಗೇನಾದರೂ ವ್ಯವಸ್ಥೆ ಮಾಡುತ್ತೇನೆ,” ಎನ್ನುತ್ತೇನೆ. ಕೆಲವರು ಕೇಳಿಸಿಕೊಂಡು ನಿಲ್ಲುತ್ತಾರೆ, ಕೆಲವರು ಹಾಗೆ ಹೊರಡುತ್ತಾರೆ. ಆವಗಿನಿಂದ ನಾನು ಈ ಜನರನ್ನು ಹೇಗೆ ತಮ್ಮ ಮನೆಗೆ ಕಳುಹಿಸಬಹುದು ಎಂಬುದರ ಬಗ್ಗೆ ಯೋಚಿಸುತ್ತಿದ್ದೇನೆ,” ಎಂದರು ಸೋನು ಸೂದ್‌, ವರದಿ ಹಿಂದೂಸ್ತಾನ ಟೈಮ್ಸ್‌.


ಟ

ವಲಸೆ ಕಾರ್ಮಿಕರಿಗೆ ವಿದಾಯ ಹೇಳುತ್ತಿರುವ ಸೋನು ಸೂದ್‌ (ಚಿತ್ರಕೃಪೆ: ಇಂಡಿಯನ್‌ ಎಕ್ಸ್‌ಪ್ರೆಸ್‌)




ಊಟ ಉಪಚಾರದ ವ್ಯವಸ್ಥೆಯನ್ನು ಸೋನು ಅವರೆ ಮಾಡಿದ್ದರು. ಕೆಲವು ದಿನಗಳಿಗೊಮ್ಮೆ 10 ಬಸ್‌ಗಳನ್ನು ಬೇರೆ ಬೇರೆ ರಾಜ್ಯಗಳಿಗೆ ಕಳಿಸುವುದು ಅವರ ಯೋಜನೆಯಾಗಿದೆ.


ಸಾರಿಗೆಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ ಸೋನು ಅವರು ಸ್ಥಳೀಯ ಪೋಲಿಸರೊಂದಿಗೆ, ಮಹಾರಾಷ್ಟ್ರಾ ಸರ್ಕಾರದೊಂದಿಗೆ ಮತ್ತು ಇತರ ರಾಜ್ಯ ಸರ್ಕಾರರದೊಂದಿಗೆ ಮಾತನಾಡಿದ್ದಾರೆ. ವಲಸಿಗರನ್ನು ಮನೆಗೆ ಕಳಿಸಲು, ಅವರ ಆರೋಗ್ಯ ತಪಾಸಣೆ ಮಾಡಲು ಅವರು ಅನುಪತಿ ಪಡೆಯಬೇಕಾಯಿತು ಮತ್ತು ಅವರು ಕೆಂಪು ವಲಯಕ್ಕೆ ಸಂಬಂಧಿಸಿದವರಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು.


“ಮಹಾರಾಷ್ಟ್ರದ ಠಾಣೆಯಿಂದ ಸೋಮವಾರ ಕರ್ನಾಟಕದ ಕಲಬುರ್ಗಿಗೆ ಬಸ್‌ಗಳು ಹೊರಟವು,” ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಉತ್ತರ ಪ್ರದೇಶ, ಬಿಹಾರ್‌, ಜಾರ್ಖಂಡ್‌ ಮತ್ತು ಒಡಿಷಾ ರಾಜ್ಯಗಳಿಗೆ ಬಸ್‌ ವ್ಯವಸ್ಥೆ ಕಲ್ಪಿಸಿದ ನಟ, ಕೆಲ ವಲಸಿಗರನ್ನು ರೈಲಿನ ಮೂಲಕ ಕಳುಹಿಸಲು ಯೋಚಿಸುತ್ತಿದ್ದಾರೆ.