ಬಡ ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡುತ್ತಿದ್ದಾರೆ ಮುಂಬೈನ ಈ ಕ್ಷೌರಿಕ
ಮಹಾರಾಷ್ಟ್ರಾದ ಠಾಣೆ ಜಿಲ್ಲೆಯ ತಿತ್ವಾಲಾದ ಕ್ಷೌರಿಕ ರವಿಂದ್ರ ಬಿರಾರಿ, ವಾರಕ್ಕೊಮ್ಮೆ ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡುತ್ತಿದ್ದಾರೆ.
ಲಾಕ್ಡೌನ್ ಘೋಷಣೆಯಾದಾಗಿನಿಂದಲೂ ಸಲೂನ್ಗಳು ಮುಚ್ಚಿರುವ ಪರಿಣಾಮ ಹಲವರಿಗೆ ತೊಂದರೆಯಾಗಿದೆ. ಕೆಲವರು ತಮ್ಮ ಉದ್ದ ಕೂದಲುಗಳನ್ನು ಹಾಗೆಯೇ ಇಟ್ಟುಕೊಳ್ಳಲು ಬಯಸಿದರೆ, ಇತರರು ತಮ್ಮ ಕುಟುಂಬದವರ ಅಥವಾ ಸ್ನೇಹಿತರ ಸಹಾಯದಿಂದ ಕ್ಷೌರ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಹೇಗೆ ಬೇಕೊ ಹಾಗೆ ಕತ್ತರಿಸಿದ ಕೂದಲು, ಬಾಚಿಕೊಳ್ಳದೆ, ಗಡ್ಡ ಬೊಳಿಸದೆ ಹಾಗೆ ಬಿಟ್ಟ ಮುಖಗಳು ಕೊರೊನಾವೈರಸ್ ತಂದಿರುವ ಬಿಕ್ಕಟ್ಟಿನ ಸಮಯದಲ್ಲಿ ಸಾಮಾನ್ಯವಾಗಿಬಿಟ್ಟಿವೆ.
ಭಾರತ ಸರ್ಕಾರ ಕ್ಷೌರಿಕರಿಗೆ ಅಂಗಡಿ ತೆರೆದು ಕಾರ್ಯ ನಿರ್ವಹಿಸಲು ಸಮ್ಮತಿ ನೀಡಿದ್ದರು, ಪ್ರಮಾಣಿತ ಕಾರ್ಯಚರಣಾ ವಿಧಾನಗಳು(ಎಸ್ಒಪಿ) ಮತ್ತು ಸುರಕ್ಷತಾ ಕ್ರಮಗಳಿಲ್ಲದದಿರುವುದರಿಂದ ಹಲವು ಕ್ಷೌರಿಕರು ಗೊಂದಲದಲ್ಲಿದ್ದಾರೆ.
ಮಹಾರಾಷ್ಟ್ರಾದ ಠಾಣೆ ಜಿಲ್ಲೆಯ ತಿತ್ವಾಲಾದ ಕ್ಷೌರಿಕರೊಬ್ಬರು ಕೊರೊನಾ ಬಿಕ್ಕಟ್ಟಿನ ನಡುವೆ ವಾರದಲ್ಲಿ ಒಂದು ಬಾರಿ ಅಗತ್ಯವಿರುವ ಸೌಲಭ್ಯವಂಚಿತ ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡುತ್ತಿದ್ದಾರೆ. ದುಡ್ಡು ಕೊಟ್ಟು ಕ್ಷೌರ ಮಾಡಿಸಿಕೊಳ್ಳಲಾಗದ ಮುಂಬೈನ ಮಕ್ಕಳಿಗೆ ಸಹಾಯವಾಗುತ್ತಿದ್ದಾರೆ ಇವರು.
“ಲಾಕ್ಡೌನ್ ಜಾರಿಗೊಂಡು ಎರಡು ತಿಂಗಳು ಕಳೆದಿದೆ; ಎಲ್ಲ ಸಲೂನ್ಗಳು ಮುಚ್ಚಿವೆ. ರಸ್ತೆಯಲ್ಲಿ ವಾಸಿಸುವ ಬಡ ಮಕ್ಕಳು ದುಡ್ಡಿಲ್ಲದೆ ಕ್ಷೌರ ಮಾಡಿಸಿಕೊಳ್ಳಲು ಎಲ್ಲಿಯೂ ಹೋಗದಂತಹ ಪರಿಸ್ಥಿತಿ ಎದುರಾಗಿದೆ, ಹಾಗಾಗಿ ಅವರಿಗೆ ಉಚಿತವಾಗೆ ಕ್ಷೌರ ಮಾಡುತ್ತಿದ್ದೆನೆ,” ಎನ್ನುತ್ತಾರೆ ಬಿರಾರಿ, ವರದಿ ಎಎನ್ಐ.
ಕೋವಿಡ್-19 ಪ್ರಕರಣಗಳು ತೀವ್ರವಾಗಿ ಮುಂಬೈನಲ್ಲಿ ಹೆಚ್ಚುತ್ತಿದ್ದರಿಂದ ಬಿರಾರಿಯವರು ಭಂದುಪ್ನಲ್ಲಿರುವ ತಮ್ಮ ಸಲೂನ್ ಅನ್ನು ಮುಚ್ಚಬೇಕಾಯಿತು. ಆದರೆ ಅವರು ಇಂತಹ ಸಮಯದಲ್ಲೂ ತಮ್ಮ ಸೇವೆಯನ್ನು ನೀಡಲು ಮುಂದೆ ಬಂದಿದ್ದಾರೆ ಎನ್ನುವುದು ವಿಶೇಷ.
ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಭಾರತದಾದ್ಯಂತ ಕ್ಷೌರಿಕ ಸಮುದಾಯವು ಕಷ್ಟಕ್ಕೆ ಸಿಲುಕಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಇಂತಹ ಸಮಯದಲ್ಲೂ, ಬಿರಾರಿ ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಒಂದು ಹೆಜ್ಜೆ ಇಟ್ಟಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇವರ ಬಳಿ ಕ್ಷೌರ ಮಾಡಿಸಿಕೊಂಡ ಬಾಲಕನೊಬ್ಬ ಎಎನ್ಐ ಜೊತೆ ಮಾತನಾಡುತ್ತಾ, “ಇವರು ತುಂಬಾ ಒಳ್ಳೆಯವರು. ಲಾಕ್ಡೌನ್ ಆದಾಗಿನಿಂದ ಯಾರೂ ಇಲ್ಲಿ ಬಂದಿರಲಿಲ್ಲ. ಇವರು ಇಲ್ಲೆ ಬಂದು ಉಚಿತವಾಗಿ ನಮ್ಮ ಕಟಿಂಗ್ ಮಾಡುತ್ತಾರೆ,” ಎಂದ.
ಇವತ್ತಿಗೆ ಮಹಾರಾಷ್ಟ್ರಾದಲ್ಲಿ 94,401 ಪ್ರಕರಣಗಳು ಕಾಣಿಸಿಕೊಂಡಿದ್ದು, ಕೋವಿಡ್-19 ಪೀಡಿತ ರಾಜ್ಯಗಳ ಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿ ನಿಂತಿದೆ. ರಾಜ್ಯದ ಮುಂಬೈ ನಗರ ಒಂದರಲ್ಲೇ 51,000 ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.