ಆವೃತ್ತಿಗಳು
ಸ್ಪೂರ್ತಿ

ಮಂಗಳೂರಿನ ಈ ಮಹಿಳೆ 900ಕ್ಕೂ ಹೆಚ್ಚು ಎಸೆದಿರುವ ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ಸುಂದರ ಕಲಾಕೃತಿಯನ್ನಾಗಿ ಮಾರ್ಪಡಿಸಿದ್ದಾಳೆ.

ಕೊನೆಯ ವರ್ಷದ ವಾಸ್ತು ಶಿಲ್ಪ ಕಲೆಯ ವಿದ್ಯಾರ್ಥಿ ಮೇಘಾ ರಸ್ತೆಯಲ್ಲಿ, ಬೀಚ್ ನಲ್ಲಿ ಎಸೆದಿರುವ ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳಿಂದ ಅದ್ಭುತ ಕಲಾಕೃತಿಗಳನ್ನು ಮಾಡಿದ್ದಾರೆ.

Team YS Kannada
12th Jul 2019
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಎಸೆದಿರುವ ಪ್ಲಾಸ್ಟಿಕ್ ಕಸವು ದೊಡ್ಡ ಸಮಸ್ಯೆಯಾದರು ನಾವೆಲ್ಲ ಅದನ್ನು ನಿರ್ಲಕ್ಷಿಸುತ್ತ ಬಂದಿದ್ದೇವೆ. ಈ ಬಾಟಲಿಗಳನ್ನು ನಾವು ಎಲ್ಲಿಬೇಕಾದರೂ ನೋಡಬಹುದು-ರಸ್ತೆಯ ಪಕ್ಕದಲ್ಲಿ, ನದಿ ದಂಡೆಗಳಲ್ಲಿ ಅಷ್ಟೇ ಅಲ್ಲದೆ ಸಾಗರದಲ್ಲೂ ಕೂಡ. ಇವು ಕೊನೆಗೆ ನೀರಿನ ಹರಿವಿಗೆ ತಡೆಯೋಡ್ಡಿ ಪ್ರವಾಹಕ್ಕೆ ಕಾರಣವಾಗುತ್ತವೆ.


ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ಮಂಗಳೂರಿನ 23 ವರ್ಷದ ವಾಸ್ತು ಶಿಲ್ಪ ಕಲೆಯ ಕೊನೆಯ ವರ್ಷದ ವಿದ್ಯಾರ್ಥಿ ಮೇಘಾ ಮೆಂಡನ್ ತಾವೇ ಮುಂದೆ ಬಂದಿದ್ದಾರೆ.


Plastic/Glass art bottles

23 ವರ್ಷದ ಮೇಘ ಮೆಂಡನ್ ಬೀಚ್ ಮತ್ತು ದಾರಿಗಳಲ್ಲಿ ಎಸೆದಿರುವ ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ನೋಡಿ ಬೇಸರವಾಗಿ ಅವುಗಳ ಬಗ್ಗೆ ಏನಾದರು ಮಾಡಬೇಕೆಂದು ನಿರ್ಧರಿಸಿದಳು. (ಚಿತ್ರ : ಎನ್ ಡಿ ಟಿ ವಿ)

ಎಸೆದಿರುವ ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ನೋಡಿದರು ನೋಡದಂತಿರುತ್ತೇವೆ ನಾವು. ಆದರೆ ಮೇಘನಾ ಅವುಗಳಲ್ಲಿ ಸುಂದರವಾದ ಕಲಾಕೃತಿಯನ್ನು ಕಾಣುತ್ತಾರೆ. ಇಲ್ಲಿಯವರೆಗೆ ಇವರು 900 ಪ್ಲಾಸ್ಟಿಕ್/ಗಾಜಿನ ಬಾಟಲಿಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅವುಗಳನ್ನು ಅಲಂಕಾರಿಕ ವಸ್ತುಗಳಾಗಿ ಮಾರ್ಪಡಿಸಿದ್ದಾರೆ.


ಯಾವುದು ಅವರನ್ನು ಇಷ್ಟೆಲ್ಲಾ ಮಾಡಲು ಪ್ರೇರೆಪಿಸಿತು, ಎಂದು ಎನ್ ಡಿ ಟಿವಿ ಗೆ ಹೀಗೆ

ಹೇಳಿದ್ದಾರೆ.

“ನಾನು ಮಂಗಳೂರ ಕಡಲ ತೀರದಲ್ಲಿ ವಾಸಿಸುತ್ತೇನೆ, ಎಸೆದಿರುವ ಅಷ್ಟೊಂದು ಪ್ಲಾಸ್ಟಿಕ್/ಗಾಜಿನ ಬಾಟಲಿಗಳ ರಾಶಿಯನ್ನು ನೋಡಲಾಗದೆ ಎಲ್ಲ ಬಾಟಲಿಗಳನ್ನು ಸಂಗ್ರಹಿಸಿ, ಅವುಗಳನ್ನ ಹೇಗಾದರೂ ಬಳಸಬೇಕೆಂದು ನಿರ್ಧರಿಸಿದೆ. ಒಂದು ದಿನ ಅವನ್ನೆಲ್ಲ ಮನೆಗೆ ತಂದು ನನ್ನ ವಿಚಾರಗಳನ್ನೆಲ್ಲಾ, ಒಟ್ಟುಗೂಡಿಸಿ ಅವುಗಳ ಮೇಲೆ ಬಣ್ಣ ಹಚ್ಚಲು ಶುರುಮಾಡಿದೆ. ಅದೇ ಬಾಟಲಿಗಳನ್ನು ನಮ್ಮ ಮನೆಯಲ್ಲೇ ಅಲಂಕಾರಿಕ ವಸ್ತುಗಳಾಗಿ ಬಳಸುತ್ತಿದ್ದೇನೆ.”

ಇಷ್ಟಕ್ಕೆ ನಿಲ್ಲದ ಮೇಘಾ, ಇತ್ತೀಚೆಗೆ ಕ್ರೀಯಾಶೀಲತೆ ಮತ್ತು ಸ್ವಚ್ಚತೆಯ ಮಹತ್ವವನ್ನು ತಿಳಿಸಲು 5 ದಿನದ ಕಲಾ ಶಿಬಿರ ವನ್ನು ಆಯೋಜಿಸಿದ್ದರು. ಈ ಶಿಬಿರವನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು ಮತ್ತು ಶಿಬಿರದ ನಂತರ ಅಲ್ಲಿ ತಯಾರಾದ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.


Plastic art exhibition

ಮೇಘಾ ಮೆಂಡನ್, ಇತ್ತೀಚೆಗೆ ಕ್ರೀಯಾಶೀಲತೆ ಮತ್ತು ಸ್ವಚ್ಚತೆಯ ಮಹತ್ವವನ್ನು ತಿಳಿಸಲು 5 ದಿನದ ಕಲಾ ಶಿಬಿರ ವನ್ನು ಆಯೋಜಿಸಿದ್ದರು.

(ಚಿತ್ರ : ಎನ್ ಡಿ ಟಿ ವಿ)


ದಿ ಶಿಲ್ಲೋಂಗ್ ಟೈಮ್ಸ್ ಜೊತೆ ಮಾತನಾಡುತ್ತ ಮೇಘಾ,


“ನಾವೆಲ್ಲ ಎಸೆದಿರುವ ಬಾಟಲಿಗಳನ್ನು ಸಂಗ್ರಹಿಸಲು ತಣ್ಣೀರಬಾವಿ ಬೀಚ್ ಗೆ ಹೋದೆವು, ನಂತರ ಅವುಗಳನ್ನು ಸ್ವಚ್ಛಗೊಳಿಸಿ, ಬಣ್ಣ ಹಚ್ಚಿ ಒಳಗೆ ಎಲ್ ಇ ಡಿ ಲೈಟ್ ಗಳನ್ನು ಹಾಕಿದೆವು.”


ಸುಮಾರು 200 ಸುಂದರ ಬಾಟಲಿಗಳನ್ನು ಈ ಶಿಬಿರದಲ್ಲಿ ಪ್ರದರ್ಶಿಸಲಾಯಿತು, ಈ ಶಿಬಿರದಲ್ಲಿ ಸುಮಾರು 28 ವಿದ್ಯಾರ್ಥಿಗಳು ಮತ್ತು ಗ್ರಹಿಣಿಯರು ಪಾಲ್ಗೊಂಡಿದ್ದರು.


megha mendon

ಮೇಘ ಮೆಂಡನ್ ರವರ ಈ ಕೆಲಸವು ಉತ್ತಮ(ಬಣ್ಣದ) ನಾಳೆಗಳಿಗೆ ಅವಶ್ಯಕವಾದ ಮರುಬಳಕೆಗೆ ಬಲವಾದ ನೆಲೆ ನೀಡುತ್ತದೆ.

(ಚಿತ್ರ: ಕೋಸ್ಟಲ್ ಡೈಸರ್)

ಅವರ ಈ ಬದಲಾವಣೆಯ ಬಗ್ಗೆ,


“ಮರುಬಳಕೆ ಮತ್ತು ಸುಸ್ಠಿರತೆಯೆ ಭವಿಷ್ಯ. ಈ ಸತ್ಯ ಎಷ್ಟು ಬೇಗ ನಾವೆಲ್ಲರೂ ಅರ್ಥ ಮಾಡಿಕೊಳ್ಳುತ್ತೇವೆಯೋ ಅಷ್ಟು ಒಳ್ಳೆಯದು. ಪ್ರತಿಯೊಬ್ಬರು ನಮ್ಮ ಪರಿಸರದ ಬಗ್ಗೆ ಮತ್ತು ಅದನ್ನು ಕಾಡುತ್ತಿರುವ ದೈತ್ಯ ಕಸದ ರಾಶಿಯಿಂದ ಕಾಪಾಡಲು ಅವಶ್ಯಕವಾದ ಉಪಾಯಗಳ ಬಗ್ಗೆ ಯೋಚಿಸುವ ಸಮಯ ಇದಾಗಿದೆ. ನಾನು ಕಳೆದ ಎರಡು ವರ್ಷದಿಂದ ಬೀಚ್ ಮತ್ತು ಮನೆಯ ಸುತ್ತಮುತ್ತಲು ಎಸೆದಿರುವ ಬಾಟಲಿಗಳನ್ನು ಸಂಗ್ರಹಿಸುತ್ತಾ ಬಂದಿದ್ದೇನೆ. ಸ್ವಲ್ಪ ದಿನಗಳ ಹಿಂದಷ್ಟೆ ನನಗೆ ಇದರ ಬಗ್ಗೆ ನಮ್ಮ ಮನೆಯ ಸುತ್ತಮುತ್ತಲಿನ ಜನರಿಗೆ ಜಾಗೃತಿ ಮೂಡಿಸಬೇಕೆಂಬ ಯೋಚನೆ ಬಂದಿದ್ದು. ಯಾರೋಬ್ಬರಾದರೂ ನನ್ನಿಂದ ಸ್ಪೂರ್ತಿ ಪಡೆದರೆ, ನಾನು ಕೃತಜ್ಞಳಾದಂತೆ”


ಈಗ ಮೇಘಾ ತನ್ನ ಕ್ರೀಯಾಶೀಲತೆಯನ್ನು ಬಳಸಿಕೊಂಡು, ಬೇರೆ ವಿಧದ ಕಸವನ್ನು ಹೇಗೆ ಮರುಬಳಕೆ ಮಾಡಬೇಕೆಂದು ಯೋಚಿಸುತ್ತಿದ್ದಾರೆ. ಅವರು ಅಲಂಕಾರ ಮಾಡಿರುವ ಹಲವಾರು ಬಾಟಲಿಗಳು ಪರಿಸರ ರಕ್ಷಣೆಯ ಸಂದೇಶಗಳನ್ನು ಹೊಂದಿವೆ ಮತ್ತು ಉಳಿದವುಗಳು ಭಾರತೀಯ ಸಂಸ್ಕ್ರತಿಯಿಂದ ಪ್ರೇರೆಪಿತವಾದ ವಿನ್ಯಾಸಗಳಾಗಿವೆ.



 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories