ರಾಜಸ್ಥಾನದ ಪುಟ್ಟ ಪಟ್ಟಣದ ಮನೀಶ್ ಗುರ್ವಾನಿ ಯುಪಿಎಸ್‌ಸಿ ನಲ್ಲಿ 18ನೇ ರಾಂಕ್ ಪಡೆದು ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ

ಮನೀಶ್ ಗುರ್ವಾನಿ ರಾಜಸ್ಥಾನದ ನೋವಾ ಎಂಬ ಸಣ್ಣ ಪಟ್ಟಣದಲ್ಲಿ ಹುಟ್ಟಿ ಬೆಳೆದರೂ, ಅವರ ಕನಸುಗಳು ದೊಡ್ಡದಾಗಿದ್ದವು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಅವರ ಉದ್ದೇಶವು 2017 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 18ನೇ ರಾಂಕ್ ಗಳಿಸಲು ಕಾರಣವಾಯಿತು.

ರಾಜಸ್ಥಾನದ ಪುಟ್ಟ ಪಟ್ಟಣದ ಮನೀಶ್ ಗುರ್ವಾನಿ ಯುಪಿಎಸ್‌ಸಿ ನಲ್ಲಿ 18ನೇ ರಾಂಕ್ ಪಡೆದು ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ

Tuesday November 05, 2019,

4 min Read

ಶಾಖದಿಂದ ಕೂಡಿದ ಅಲೆಗಳು, ಸದಾಬೀಸುವ ಗಾಳಿ ಮತ್ತು ಮರಳಿನ ದಿಬ್ಬಗಳಿಂದ ಗುಣಲಕ್ಷಣಗಳನ್ನು ಹೊಂದಿರುವ ನೋಹಾರ ರಾಜಸ್ಥಾನದ ಹನುಮನ್‌ಘರ್ ಜಿಲ್ಲೆಯಲ್ಲಿರುವ ಒಂದು ಪುಟ್ಟ ಪಟ್ಟಣವಾಗಿದೆ. ಇದು ಮನೀಶ್ ಗುರ್ವಾನಿ ಅವರ ಹುಟ್ಟೂರು. ಮನೀಶ್ ತಮ್ಮ ಬಾಲ್ಯದಲ್ಲಿ ಇತರ ಹುಡುಗರಂತೆ ಕಣ್ಣಲ್ಲಿ ಕನಸನ್ನು ಹೊತ್ತು ಹೃದಯದಲ್ಲಿ ಉತ್ಸಾಹದ ಬುಗ್ಗೆಯನ್ನು ಹೊಂದಿದ ಓರ್ವ ಸಾಧಾರಣ ಹುಡುಗನೇ ಆಗಿದ್ದರು, ಅವರಿಗೆ ಮೊದಲಿನಿಂದಲೂ ಸಮಾಜಕ್ಕೆ ಏನಾದ್ರು ಕೊಡುಗೆ ಸಲ್ಲಿಸಬೇಕು ಎಂಬ ಧೃಢ ನಿಶ್ಚಯಮಾತ್ರ ಹೃದಯದಲ್ಲಿ ಆಳವಾಗಿತ್ತು.


ಮನೀಶ್ ಗುರ್ವಾನಿ


ಪ್ರತಿ ಕಷ್ಟವನ್ನು ಸಹಿಷ್ಣುತೆಯಿಂದ ಜಯಿಸಬೇಕು ಎಂದು ಹೇಳಲಾಗುತ್ತದೆ. ಮತ್ತು ಮನೀಶ್ ಇದನ್ನೇ ಮುಂದುವರೆಸಿದರು. ಬೋಧನಾ ಮಾಧ್ಯಮ ಇಂಗ್ಲಿಷ್ ಅನ್ನು ಹೊಂದಿದ್ದ ಯಾವುದೇ ಶಿಕ್ಷಣ ಸಂಸ್ಥೆ ನೋವಾದಲ್ಲಿ ಇಲ್ಲವಾಗಿದ್ದರಿಂದ ಮನೀಶ್ ಗೆ ಹತ್ತನೇ ತರಗತಿಯವರೆಗೆ ಹಿಂದಿ ಮಾತನಾಡುವ ಶಾಲೆಯಲ್ಲಿ ಅಧ್ಯಯನ ಮಾಡುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಆದರೆ ಛಲಬಿಡದ ಮನೀಶ್ ಜನರೊಂದಿಗೆ ಬೆರೆತು ಅವರ ಮಾತುಕತೆಯಿಂದ ಇಂಗ್ಲೀಷ್ ಭಾಷೆಯನ್ನು ಕಲಿಯಲು ಆರಂಭಿಸಿದರು. ಇನ್ನೊಂದು ಕಡೆ ಮನೀಶ್ ತಮ್ಮ ಅನಾರೋಗ್ಯಪೀಡಿತ ತಾಯಿಯನ್ನು ನೋಡಿಕೊಳ್ಳುತ್ತಿದ್ದರು.


"2003 ವರ್ಷವು ನನ್ನ ಜೀವನದ ಅತ್ಯಂತ ಕಠಿಣ ಹಂತಗಳಲ್ಲಿ ಒಂದಾಗಿದೆ. ನನ್ನ ತಾಯಿಗೆ ಬೆನ್ನಿನಲ್ಲಿ ಎರಡು ಗೆಡ್ಡೆಗಳು ಇರುವುದು ಪತ್ತೆಯಾದವು ನಂತರ ಒಂದೆರಡು ದಿನಗಳಲ್ಲಿ ಆಕೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು. ಆ ಅವಧಿಯಲ್ಲಿ ಆಕೆಯನ್ನು ನೋಡಿಕೊಳ್ಳುವುದು ಬಿಟ್ಟರೆ ಬೆರೆಕಡೆ ಗಮನ ಹರಿಸಲು ನಂಗೆ ಸಾಧ್ಯವೇ ಇರಲಿಲ್ಲ," ಎಂದು ಮನೀಶ್ ತಮ್ಮ ಪ್ರಾರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.


ಪ್ರತಿಕೂಲ ಸಮಯದಲ್ಲೂ ತನ್ನ ಸುತ್ತಲಿನವರ ಮೇಲೆ ಕಾಳಜಿ ವಹಿಸುವ ಈ ಗುಣವೇ ಮನೀಶ್ ಅವರನ್ನು 2017 ರ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ಪರೀಕ್ಷೆಯಲ್ಲಿ 18 ನೇ ಅಖಿಲ ಭಾರತ ಶ್ರೇಣಿಯನ್ನು ಸಾಧಿಸಲು ಕಾರಣವಾಯಿತು.


"ಇತರ ಐಎಎಸ್ ಆಕಾಂಕ್ಷಿಗಳಂತೆ, ನಾನು ತುಂಬಾ ಶ್ರಮಿಸಿದೆ. ನಾನು ಪ್ರತಿದಿನ ಆರು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ ಮತ್ತು ನಂತರ ಅದನ್ನು ಕ್ರಮೇಣ 10 ರವರೆಗೆ ಮನನ ಮಾಡುತ್ತಿದ್ದೆ. ಮತ್ತು ನನಗೆ ನನ್ನ ಶ್ರಮದ ಮೇಲೆ ನಂಬಿಕೆ ಇತ್ತು." ಎಂದು ಮನೀಶ್ ಗುರ್ವಾನಿ ಸೋಷಿಯಲ್ ಸ್ಟೋರಿಗೆ ಹೇಳುತ್ತಾರೆ.


ಈ ಸಾಧನೆ ಮಾಡಿದ ನಂತರ, ಮನೀಶ್ ಅವರು ಭಾರತ ಸರ್ಕಾರದ ವಾಣಿಜ್ಯ ಸಚಿವಾಲಯದಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು ಮುಸ್ಸೂರಿ ಮತ್ತು ಜಾಮ್‌ನಗರದಲ್ಲಿ ತರಬೇತಿ ಪಡೆದರು. ಅವರು ಪ್ರಸ್ತುತ ಗುಜರಾತ್‌ನ ಕಚ್ ಜಿಲ್ಲೆಯ ಭುಜ್ ಪುರಸಭೆಯಲ್ಲಿ ಸಹಾಯಕ ಕಲೆಕ್ಟರ್ ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಹುದ್ದೆಯನ್ನು ಅಲಂಕರಿಸಿದ್ದಾರೆ.


ಒಂದು ಆದರ್ಶವಾದ ಪ್ರಯಾಣ

ಮನೀಶ್ ರಾಜಸ್ಥಾನದ ಲ್ಯಾಂಡ್ ಆಫ್ ಕಲರ್ಸ್ ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಪಿತಾಂಬರ್ ಲಾಲ್ ಅವರು ಸರಕಾರಿ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರಾಗಿದ್ದು, ಅವರ ತಾಯಿ ಗೋಪಿ ಚಂದಾನಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಮನೀಶ್ ನೋವಾದಲ್ಲಿನ ಕೆಡಿಪಿ ಸೆಕೆಂಡರಿ ಶಾಲೆ ಎಂಬ ಹಿಂದಿ-ಮಾಧ್ಯಮ ಶಾಲೆಯಲ್ಲಿ ಅಧ್ಯಯನ ಮಾಡಿದರು.


ನಂತರ ಅವರು ಮನೆಶಿಕ್ಷಣದ ರೂಪದಲ್ಲಿ ಸಿಕಾರ್‌ನ ಕೋಚಿಂಗ್ ಕೇಂದ್ರದಿಂದ 11 ಮತ್ತು 12ನೇ ತರಗತಿಯನ್ನು ಮುಂದುವರಿಸಿದರು. 2008 ರಲ್ಲಿ ಬಿಟ್ಸ್ ಪಿಲಾನಿಯಲ್ಲಿ ದ್ವಿ ಪದವಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆದಾಗ ಅವರ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿತು.


ಮನೀಶ್ ಗುರ್ವಾನಿ ಕಾಲೇಜಿನಿಂದ ತನ್ನ ಸ್ನೇಹಿತರೊಂದಿಗೆ


ನಾನು ಗಣಿತದಲ್ಲಿ ಎಂಎಸ್ಸಿ ಮತ್ತು ಬಿಟ್ಸ್‌ನಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಬಿಇ ಎರಡನ್ನೂ ಓದಿದ್ದೇನೆ. ನಾನು ಬಾಲ್ಯದಿಂದಲೂ ಐಎಎಸ್ ಅಧಿಕಾರಿಯಾಗಲು ಒಲವು ತೋರಿದ್ದೆ ಮತ್ತು ನನ್ನ ಮೂರನೇಯ ಮತ್ತು ನಾಲ್ಕನೇ ವರ್ಷದ ಕಾಲೇಜಿನಲ್ಲಿ ಈ ಕಲ್ಪನೆ ಬಲಗೊಂಡಿತು. ಸಮಾಜದಲ್ಲಿ ಮತ್ತು ನನ್ನ ಸುತ್ತಮುತ್ತಲಿನ ಜನರ ಜೀವನೋಪಾಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ನಾನು ಯಾವಾಗಲೂ ಬಯಸುತ್ತೇನೆ. ಅದಕ್ಕಾಗಿ ನಾಗರಿಕ ಸೇವಾ ಜಾಗದಲ್ಲಿರಲು ನಿರ್ಧರಿಸಿದೆ. ಇದಲ್ಲದೆ, ನನ್ನ ಪೋಷಕರು ಇಬ್ಬರೂ ಸರ್ಕಾರದೊಂದಿಗೆ ಕೆಲಸ ಮಾಡುತ್ತಿರುವುದರಿಂದ, ಸಂಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ನನಗೆ ಉತ್ತಮ ತಿಳುವಳಿಕೆ ಇತ್ತು” ಎಂದು ಮನೀಶ್ ನೆನಪಿಸಿಕೊಳ್ಳುತ್ತಾರೆ.


ಮನೀಶ್ ಅವರ ಆಲೋಚನೆಗಳನ್ನು ರೂಪಿಸಿದ ಮತ್ತೊಂದು ಅಂಶವೆಂದರೆ, ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ನಡೆಸಿದ ಸರ್ಕಾರಿ ಪ್ರಾಯೋಜಿತ ಸಾರ್ವಜನಿಕ ಸೇವಾ ಕಾರ್ಯಕ್ರಮವಾದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್). ಈ ಯೋಜನೆಯ ಭಾಗವಾಗಿ ಬಿಟ್ಸ್‌ನ ಎಲ್ಲ ವಿದ್ಯಾರ್ಥಿಗಳಿಗೆ ಸ್ವಯಂಸೇವಕರಾಗಲು ಅವಕಾಶವಿತ್ತು. ಮತ್ತು, ಮನೀಶ್ ಈ ಪಾತ್ರವನ್ನು ವಹಿಸಿಕೊಳ್ಳುವುದಕ್ಕಿಂತ ಹೆಚ್ಚು ಸಂತೋಷಪಟ್ಟರು. ಈ ಹಿನ್ನಲೆಯಲ್ಲಿ, ಗ್ರಾಮೀಣ ರಾಜಸ್ಥಾನದಲ್ಲಿ ಹಲವಾರು ಬಟ್ಟೆ ದಾನದ ಯೋಜನೆಗಳು ಆರೋಗ್ಯ ಮತ್ತು ರಕ್ತ ಶಿಬಿರಗಳನ್ನು ಆಯೋಜಿಸಲು ಅವರು ಮುಂದಾದರು. ತರಗತಿಗಳ ನಂತರ ಕಾಲೇಜು ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗಳ ಮಕ್ಕಳಿಗೆ ಗಣಿತ, ಇಂಗ್ಲೀಷ್ ಮತ್ತು ವಿಜ್ಞಾನದಂತಹ ವಿಷಯಗಳನ್ನು ಬೋಧಿಸಲು ಸಹ ಅವರು ಕರೆದೊಯ್ದರು.


ನೂರಕ್ಕೂ ಹೆಚ್ಚು ಮಕ್ಕಳಿಗೆ ಬೋಧಿಸುವ ಸಮಯದಲ್ಲಿ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಯಾವ ರೀತಿಯ ಅಂತರಗಳಿವೆ ಎಂದು ನಾನು ಅರಿತುಕೊಂಡೆ. ಇಲ್ಲಿಯವರೆಗೆ, ಮೊದಲಿಗೆ, ಶಿಕ್ಷಣದ ಗುಣಮಟ್ಟವು ಅವರ ಜ್ಞಾನ ಮತ್ತು ವಿತರಣೆಯ ಮೇಲೆ ನೇರವಾಗಿ ಅವಲಂಬಿತವಾಗಿರುವುದರಿಂದ ಶಿಕ್ಷಕರಿಗೆ ತರಬೇತಿ ನೀಡುವುದರತ್ತ ಗಮನ ಹರಿಸುವುದು ನನ್ನ ಯೋಜನೆಯಾಗಿದೆ” ಎಂದು ಮನೀಶ್ ಹೇಳುತ್ತಾರೆ.


ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮನೀಶ್ ಗುರ್ವಾನಿ ಮತ್ತು ಇತರರೊಂದಿಗೆ ಮಾತನಾಡುತ್ತಿದ್ದರು.


ಅವರು ತಮ್ಮ ಐಎಎಸ್ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಭಾರತೀಯ ಎಂಜಿನಿಯರಿಂಗ್ ಸೇವೆ ಮತ್ತು ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್ (ಗೇಟ್) ಪರೀಕ್ಷೆಯನ್ನು ಕೈಗೊಂಡರು. ಅವರು ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಗೆ ಪ್ರಯತ್ನಿಸಿದಾಗ, ಮನೀಶ್ 322 ನೇ ರಾಂಕ್ ಪಡೆದರು ಮತ್ತು ಅವರಿಗೆ ಭಾರತೀಯ ಕಂದಾಯ ಸೇವೆಗಳಲ್ಲಿ ಸ್ಥಾನ ನೀಡಲಾಯಿತು. ಆದಾಗ್ಯೂ, ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವಾಗ ಅವರು ಮತ್ತೆ ಪರೀಕ್ಷೆಯನ್ನು ಬರೆಯಲು ಕಠಿಣ ತಯಾರಿ ನಡೆಸುತ್ತಿದ್ದರು. 2016 ರಲ್ಲಿ 18 ರ ಅಖಿಲ ಭಾರತ ರಾಂಕ್ (ಎಐಆರ್) ಪಡೆದಾಗ ಮನೀಶ್ ಅವರ ಪ್ರಯತ್ನಗಳು ಫಲ ನೀಡಿದವು.


ನನ್ನ ಫಲಿತಾಂಶಗಳನ್ನು ತಿಳಿದ ಕೂಡಲೇ, ನಾನು ಸಂತಸಪಟ್ಟೆ ಮತ್ತು ಸಂತೋಷದ ಕಣ್ಣೀರು ನನ್ನ ಕೆನ್ನೆಗಳಲ್ಲಿ ಉರುಳುತ್ತಲೇ ಇತ್ತು. ನನ್ನ ಪ್ರಯಾಣ ಸುಲಭವಾಗಿಲಿಲ್ಲ. ನಾನು ಹಿಂದಿ-ಮಾಧ್ಯಮ ಶಾಲೆಯಲ್ಲಿ ಓದಿದ್ದರಿಂದ, ಕಾಲೇಜಿನಲ್ಲಿ ನೀಡಲಾಗುವ ಎಲ್ಲಾ ಉಪನ್ಯಾಸಗಳನ್ನು ನನಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇಂಗ್ಲೀಷ್ ನಲ್ಲಿ ಜನರೊಂದಿಗೆ ಸಂಭಾಷಿಸುವುದು ಸಹ ನಂಬಲಾಗದಷ್ಟು ಕಠಿಣವಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ. ನಂತರ, ಕ್ರಮೇಣ, ನಾನು ಹೆಚ್ಚು ಹೆಚ್ಚು ಓದುವ ಮೂಲಕ ಭಾಷೆಯನ್ನು ತಿಳಿದುಕೊಳ್ಳಲು ಪ್ರಾರಂಭಿಸಿದೆ ”ಎಂದು ಮನೀಶ್ ಹೇಳುತ್ತಾರೆ.


ಇದೆಲ್ಲ ಹೇಗಾಯಿತು?

ಮೊದಲಿನಿಂದಲೂ ಯುಪಿಎಸ್‌ಸಿಯನ್ನು ಭೇದಿಸಲು ಮನೀಶ್ ಒಂದು ಕಾರ್ಯತಂತ್ರವನ್ನು ಹೊಂದಿದ್ದರು. ಭಾರತದ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ನಾಗರಿಕ ಸೇವೆಗಳ ಪರೀಕ್ಷೆಯನ್ನು ತೆರವುಗೊಳಿಸಲು ಕಠಿಣವಾದದ್ದು ಎಂದು ಪರಿಗಣಿಸಲಾಗಿದೆ. ಇಲ್ಲಿ ಯಶಸ್ಸಿನ ಪ್ರಮಾಣ ಕೇವಲ 25 ಪ್ರತಿಶತವಾಗಿದೆ.


ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸುತ್ತಿರುವ ಮನೀಶ್ ಗುರ್ವಾನಿ.


"ಪರೀಕ್ಷೆಗೆ ತಯಾರಿ ನಡೆಸುವಾಗ ಒಬ್ಬರು ಉಲ್ಲೇಖಿಸಬಹುದಾದ ಮೂಲಗಳ ಕೆಲವಿವೆ, ಅನೇಕ ಆಕಾಂಕ್ಷಿಗಳು ಇದರಿಂದ ಸುಲಭವಾಗಿ ಗೊಂದಲಕ್ಕೊಳಗಾಗುತ್ತಾರೆ. ಹೇಗಾದರೂ, ಅವರು ಸೀಮಿತ ಪುಸ್ತಕಗಳಿಗೆ ಅಂಟಿಕೊಳ್ಳಬೇಕು ಮತ್ತು ಪ್ರತಿದಿನ ಪತ್ರಿಕೆ ಓದಬೇಕು ಎಂದು ನಾನು ಸೂಚಿಸುತ್ತೇನೆ. ನಾನೂ ಅದೇ ರೀತಿ ಮಾಡಿದೆ. ನನಗೆ ಸಹಾಯವಾದ ಒಂದು ಅಭ್ಯಾಸವೆಂದರೆ ಪರೀಕ್ಷೆಯ ಮೊದಲು ಎಲ್ಲವನ್ನೂ ಪರಿಷ್ಕರಿಸುವುದು ಮತ್ತು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸುವುದು. ಕೆಲವೊಮ್ಮೆ, ಉತ್ತಮ ಪ್ರಯತ್ನಗಳ ಹೊರತಾಗಿಯೂ, ಒಬ್ಬರು ಅದನ್ನು ಮಾಡದಿರಬಹುದು. ಅಂತಹ ಸಂದರ್ಭಗಳಲ್ಲಿ, ಜನರು ಖಿನ್ನತೆಗೆ ಒಳಗಾಗಬಾರದು. ನಾಗರಿಕ ಸೇವೆಗಳಲ್ಲದಿದ್ದರೆ, ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡಲು ಇನ್ನೂ ನೂರು ಮಾರ್ಗಗಳಿವೆ ”ಎಂದು ಮನೀಶ ಅಭಿಪ್ರಾಯಪಟ್ಟರು.


ಮನೀಶ್ ಅವರ ರೋಲ್ ಮಾಡೆಲ್ ಯಾರೆಂದು ಕೇಳಿದಾಗ, ಮನೀಶ್ ಹೇಳಿದರು,


ನನ್ನ ತಾಯಿ ನನ್ನ ಆದರ್ಶ ಮತ್ತು ಶಕ್ತಿಯ ಮೂಲ. ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ ನಂತರ ಮತ್ತು ಸುಮಾರು 20 ಶಸ್ತ್ರಚಿಕಿತ್ಸೆಗಳ ನಂತರವೂ ಅವಳು ಮುಂದುವರಿಯುತ್ತಿದ್ದಳು. ಮತ್ತೆ ಎದ್ದು ನಿಲ್ಲುವ ಅವಳ ಸಾಮರ್ಥ್ಯವನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ. ಮತ್ತು, ನಾನು ಇದನ್ನು ಅವಳಿಂದ ಅಳವಡಿಸಿಕೊಳ್ಳಲು ಬಯಸುತ್ತೇನೆ."