Kannada Latest

ಪ್ಲಾಸ್ಟಿಕ್ ರಹಿತ ಹಾಗೂ ಶೂನ್ಯ ತ್ಯಾಜ್ಯ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ 23 ರ ಮುಂಬೈನ ಈ ಯುವತಿ

ತ್ಯಾಜ್ಯ ವಿಂಗಡಣೆ, ಸಂಯೋಜನೆ, ಮುಟ್ಟಿನ ನೈರ್ಮಲ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ಮುಕ್ತವಾಗಿರುವ, ಟಿ ಲಲಿತಾ ಮೂಲದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿಮೆ ಮಾಡುವುದರ ಜೊತೆಗೆ ತ್ಯಾಜ್ಯವನ್ನು ಸಂಗ್ರಹಿಸುವವರಿಗೆ ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಸಹಾಯ ಮಾಡುತ್ತಿದ್ದಾರೆ.

Team YS Kannada
16th Aug 2019
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಕಸ ಸಂಗ್ರಹಣೆ ಮತ್ತು ಸಂಸ್ಕರಣೆಯ ಬಗ್ಗೆ ಯಾವಾಗಲೂ ನಿರ್ಧಾರ ತೆಗೆದುಕೊಳ್ಳುವವರು ಜಿಲ್ಲಾ ಅಥವಾ ರಾಜ್ಯ ಅಧಿಕಾರಿಗಳು. ಅಸಮರ್ಪಕ ತ್ಯಾಜ್ಯ ವಿಲೇವಾರಿಗೆ ನಾವು ಕೇವಲ ಅಧಿಕಾರಿಗಳನ್ನು ದೂಷಿಸುತ್ತಿದ್ದೇವೆ ವಿನಃ, ವ್ಯಕ್ತಿಗತವಾಗಿ, ನಮ್ಮಲ್ಲಿ ಅನೇಕರು ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿಮೆ ಮಾಡುವ ಪ್ರಯತ್ನವನ್ನು ಇಂದಿಗೂ ಮಾಡಿಲ್ಲ.


ಹಾಗೂ ಆಪಾದನೆಯ ಆಟ ಮುಂದುವರೆದಂತೆ, ಕಸವನ್ನು ವಿಂಗಡಿಸಿ ಹಾಗೂ ಅದರ ಸಮರ್ಪಕ ವಿಲೇವಾರಿ ಮಾಡಬೇಕಾದವರು ಕಸ ಸಂಗ್ರಹಿಸುವವರಾದ್ದರಿಂದ ಅಂತಿಮವಾಗಿ ಬಳಲುವವರು ಮಾತ್ರ ಅವರೆ. ಉತ್ಪತ್ತಿಯಾಗುವ ಅಪಾಯಕಾರಿ ತ್ಯಾಜ್ಯವನ್ನು ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಅಮೋನಿಯಾ, ಮೀಥೇನ್ ಮತ್ತು ಇಂಗಾಲದಂತಹ ವಿಷಕಾರಿ ಅನಿಲಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದರಿಂದ ಅವರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತವೆ.


ಮುಂಬೈನ ಥಾನೆಯ ಸಿಪಿ ತಲಾವ್ ಲ್ಯಾಂಡ್ಫಿಲ್ನಲ್ಲಿ ತ್ಯಾಜ್ಯ ತೆಗೆಯುವವರ ದುಃಸ್ಥಿತಿಯನ್ನು ನೋಡಿದ 23 ವರ್ಷದ ಟಿ ಲಲಿತಾ ಆಶ್ಚರ್ಯ ವ್ಯಕ್ತಪಡಿಸಿದರು.‌ ಮಹಿಳಾ ತ್ಯಾಜ್ಯ ಆಯ್ದುಕೊಳ್ಳುವವರ ಹಕ್ಕುಗಳ ಬಗ್ಗೆ ವ್ಯವಹರಿಸುವ ಎನ್‌ಜಿಒ ಸ್ತ್ರೀ ಮುಕ್ತಿ ಸಂಘಟನೆಯೊಂದಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಲಲಿತಾ, ಮೂಲದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿಮೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬುದನ್ನು ಅರಿತರು.


ಕ

ಟಿ ಲಲಿತಾ, ಮೂಲ: ಎನ್‌ಡಿಟಿವಿ


ಕಸ ಶೇಖರಣೆಯಾಗಿದ್ದ ಜಾಗಕ್ಕೆ ಭೇಡಿ ನೀಡಿದ ಬಗ್ಗೆ ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ, ಅವರು,


"ಪ್ರಜೆಯಾಗಿ, ನಾನು ಯಾವಾಗಲೂ ಮುಂಬಯಿಯಲ್ಲಿ ಕಸ ಸಂಸ್ಕರಣೆಯ ವಿಷಯದ ಬಗ್ಗೆ ಚಿಂತಿಸುತ್ತಿದ್ದೆ. ಆದರೆ ನಾನು ತ್ಯಾಜ್ಯವನ್ನು ಸಂಗ್ರಹಿಸುವವರೊಂದಿಗೆ ಸಂವಹನ ನಡೆಸಿದಾಗ ಮಾತ್ರ, ಜನರಿಗೆ ಮೂಲಭೂತವಾದ ಸಾಮನ್ಯ ನಾಗರಿಕ ಪ್ರಜ್ಞೆ ಇಲ್ಲ ಎಂಬುದು ನನಗೆ ಕಸ ಶೇಖರಣೆಯಾಗಿದ್ದ ಜಾಗಕ್ಕೆ ಎನ್‌ಜಿ‌ಒದ ಮಹಿಳಾ ಕಸ ಆಯ್ದುಕೊಳ್ಳುವವರೊಂದಿಗೆ ಭೇಟಿ ನೀಡಿದಾಗ ಅಲ್ಲಿ ಹೂತ್ತಿದ್ದ ತ್ಯಾಜ್ಯವನ್ನು ನೋಡಿದಾಗ ಅರಿವಾಯಿತು. ಅದು ನನ್ನನ್ನು ಬೆಚ್ಚಿ ಬಿಳಿಸಿತ್ತು. ‌ಹೆಚ್ಚಿನದಾಗಿ ಹೇಳಬೇಕೆಂದರೆ, ಅಲ್ಲಿ ಎಲ್ಲಾ ರೀತಿಯ ತ್ಯಾಜ್ಯವು ಶೇಖರಣೆಯಾಗಿತ್ತು. ಕಸ ಆಯ್ದುಕೊಳ್ಳುವವರಿಗೆ ಒಣ ಕಸ ತೆಗೆದುಕೊಳ್ಳುವುದೊಂದೇ ಅವರ ಆದಾಯದ ಮೂಲವಾಗಿದ್ದರಿಂದ ಅವರು ಒಣ ಕಸವನ್ನು ಕೈಯಿಂದಲೇ ಬೇರ್ಪಡಿಸಿ ತೆಗೆದುಕೊಳ್ಳುತ್ತಿದ್ದರು" ಎಂದರು.


ಇದನ್ನು ನೋಡಿದ ಮೇಲೆ ಲಲಿತಾ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡು, ಪ್ಲಾಸ್ಟಿಕ್ ರಹಿತ ಜೀವನ ನಡೆಸಲು ಆರಂಭಿಸಿದರು. ಅವರು ಜೈವಿಕ ವಿಘಟನೀಯವಲ್ಲದ ಉತ್ಪನ್ನಗಳಾದ ಸ್ಟ್ರಾಗಳು, ಪಾಲಿಥೀನ್, ಬಾಟಲಿಗಳನ್ನು ಉಪಯೋಗಿಸುವುದನ್ನು ನಿಲ್ಲಿಸಿದ್ದಾರೆ. ಮನೆಯಿಂದ ಹೊರಗೆ ಹೊರಟರೆ ತಮ್ಮೊಂದಿಗೆ ಒಂದು ಬಟ್ಟೆಯ ಚೀಲವನ್ನು ಹಾಗೂ ಒಂದು ನೀರಿನ ಬಾಟಲಿಯನ್ನು ಸದಾ ಜೊತೆಯಲ್ಲಿಯೇ ತೆಗೆದುಕೊಂಡುಹೋಗುವ ಲಲಿತ, ಪ್ಲಾಸ್ಟಿಕ್ ಪ್ಯಾಕೇಜಿಂಗ್ ತಡೆಯಲು ಹೊರಗಿನಿಂದ ಊಟವನ್ನು ತರಿಸುವುದನ್ನೇ ನಿಲ್ಲಿಸಿದ್ದಾರೆ.


ಈ ಬಗ್ಗೆ ಇಂಡಿಯನ್ ವುಮೆನ್ ಬ್ಲಾಗ್‌ನೊಂದಿಗೆ ಮಾತನಾಡುತ್ತಾ, ಲಲಿತಾ,


"ನನ್ನ ಶೂನ್ಯ-ತ್ಯಾಜ್ಯ ಜೀವನಶೈಲಿ ಶುರುವಾದದ್ದು ಹೀಗೆ. ನಾನು ಹಸಿ ಕಸವನ್ನು ಮನೆಯಲ್ಲಿಯೇ ಗೊಬ್ಬರ ಮಾಡಲು ಶುರುಮಾಡಿದೆ. ಗೃಹನಿರ್ಮಿತ ವಸ್ತುಗಳನ್ನು ನಾನು ಕೇವಲ ಪಿನ್‌ಟ್ರೆಸ್ಟ್‌(ಮೊಬೈಲ್ ಅಪ್ಲಿಕೇಷನ್) ಪರಿಕಲ್ಪನೆಯಂತೆ ನೋಡುತ್ತಿದ್ದೆ. ಶೂನ್ಯ ತ್ಯಾಜ ಜೀವನಶೈಲಿಯ ಬಗ್ಗೆ ಕೆಲವು ಕಡೆ ಓದಿ ಹಾಗೂ ಹಲವು ವೀಡಿಯೋಗಳನ್ನು ನೋಡಿದ ನಂತರ ನಾನು ಸಂಪೂರ್ಣವಾಗಿ ಶೂನ್ಯ ತ್ಯಾಜ್ಯ ಹಾಗೂ ಪರಿಸರ ಸ್ನೇಹಿ ಹಾಗೂ ನನ್ನ ಬಾಲ್ಕನಿಯಲ್ಲಿಯೇ ಗೊಬ್ಬರವಾಗಿ ಪರಿವರ್ತಿಸಬಹುದಾದ ಪ್ಲಾಸ್ಟಿಕ್ ರಹಿತ ಉತ್ಪನ್ನಗಳನ್ನು ಉಪಯೋಗಿಸುತ್ತ ನನ್ನ ಜೀವನಶೈಲಿಯನ್ನು ಬದಲಾಯಿಸಿಕೊಂಡೆ.


ಕ

ಸಾಂದರ್ಭಿಕ ಚಿತ್ರ :ಇಂಡಿಯನ್ ವುಮೆನ್ ಬ್ಲಾಗ್‌


ತಮ್ಮ ಶೂನ್ಯ ತ್ಯಾಜ್ಯ ಪರಿಕಲ್ಪನೆಯನ್ನು ಸಾಧಿಸಲು ತ್ಯಾಜ್ಯ ಬೇರ್ಪಡಿಸುವಿಕೆ, ಸಂಯೋಜನೆ, ಮುಟ್ಟಿನ ನೈರ್ಮಲ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ಮುಕ್ತವಾಗಿಬಿಡುವುದು ಎಂಬ ನಾಲ್ಕು ಹಂತಗಳನ್ನು ಪಾಲಿಸುತ್ತಾರೆ ಲಲಿತಾ.


ತಮ್ಮ ಪ್ರಯಾಣದ ಬಗ್ಗೆ ಎನ್‌ಡಿಟಿವಿ ಯೊಂದಿಗೆ ಮಾತನಾಡುತ್ತಾ, ಲಲಿತಾ,


"ನನ್ನ ಪ್ರಯಾಣ ಸಂಪೂರ್ಣವಾಗಿ ಮಿತವಯ್ಯದ್ದಾಗಿದೆ. ನಾನು ಸ್ಯಾನಿಟರಿ ಪ್ಯಾಡ್‌ಗಳನ್ನು, ಸೋಪು ಹಾಗೂ ಶಾಂಪೂಗಳನ್ನು ಇನ್ನು ಮುಂದೆ ಖರೀದಿಸುವುದಿಲ್ಲ. ನಾನು ಉಪಯೋಗಿಸುವ ಎಲ್ಲಾ ಉತ್ಪನ್ನಗಳು ಅಡುಗೆ ಮನೆಯಲ್ಲಿ ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುತ್ತವೆ. ನಾನು ದುಬಾರಿ ಡಿ‌ಐ‌ವೈ ಉತ್ಪನ್ನಗಳನ್ನು ಕೊಳ್ಳುವುದಿಲ್ಲ. ಹಾಗಾಗಿ ನಾನು ಬೇವು ಮತ್ತು ದಾಸವಾಳದ ಎಲೆಗಳನ್ನು ಮುಖಕ್ಕೆ ಹಾಗೂ ಕೂದಲಿಗೆ ಉಪಯೋಗಿಸುತ್ತೇನೆ" ಎಂದರು.


ಇದಲ್ಲದೆ, ಲಲಿತಾ ಸ್ವಂತವಾಗಿ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ತಯಾರಿಸುತ್ತಾರೆ‌. ಅವರು ಮನೆಯಲ್ಲಿ ಇರುವ ಅಥವಾ ಸ್ಥಳೀಯವಾಗಿ ಸಿಗುವ ಪದಾರ್ಥಗಳನ್ನು ಬಳಸುತ್ತಾರೆ‌. ಅವರು ಕೂದಲಿಗೆ ರೀತಾ, ದೇಹಕ್ಕೆ ಕಡಲೆಬೇಳೆ ಹಿಟ್ಟು ಹಾಗೂ


ಅರಿಶಿನ, ಕಡಲೆ ಹಿಟ್ಟು ಮತ್ತು ಪುಡಿಮಾಡಿದ ದಾಸವಾಳದ ಎಲೆಗಳನ್ನು ಬೆರೆಸಿ ನೈಸರ್ಗಿಕ ಕಂಡಿಷನರ್ ಆಗಿ ಬಳಸುತ್ತಾರೆ.


ಈ ಬಗ್ಗೆ ಜಾಗೃತಿ ಮೂಡಿಸಲು ಈಗ ಸಾಮಾಜಿಕ ಜಾಲತಾಣಗಳನ್ನು ಸಕ್ರಿಯವಾಗಿ ಬಳಸುತ್ತಿರುವ ಲಲಿತಾ, ಜನರು ಪರಿಸರಕ್ಕಾಗಿ ತಮ್ಮ ಜೀವನಶೈಲಿಯನ್ನು ಬದಲಾಯಿಸಲು ಸಿದ್ಧರಿದ್ದಾರೆ, ಆದರೆ ಪರ್ಯಾಯ ಆಯ್ಕೆಗಳ ಬಗ್ಗೆ ಜ್ಞಾನದ ಕೊರತೆಯಿರುವುದು ಅವರನ್ನು ಹಾಗೆ ಮಾಡುವುದನ್ನು ತಡೆಯುತ್ತದೆ ಎಂದು ಹೇಳಿದ್ದಾರೆ.

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories