ಸೌರ ರಹಸ್ಯವನ್ನು ಬಯಲು ಮಾಡುತ್ತಿದೆ ನಾಸಾದ 'ಸೂರ್ಯ-ಚುಂಬನ' ಪಾರ್ಕರ್ ಬಾಹ್ಯಾಕಾಶ ನೌಕೆ

ಮೊದಲ ಬಾರಿಗೆ ಸೂರ್ಯನ ಅತಿ ಸಮೀಪ ತಲುಪಿ ಸೂರ್ಯನ ರಹಸ್ಯಗಳನ್ನು ಪಾರ್ಕರ್ ಬಯಲುಮಾಡಿದೆ ಎಂದು ಸೌರ ಮಾರುತ ಮತ್ತು ಬಾಹ್ಯಾಕಾಶ ಹವಾಮಾನ, ಯುಎಸ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಸೌರ ರಹಸ್ಯವನ್ನು ಬಯಲು ಮಾಡುತ್ತಿದೆ ನಾಸಾದ 'ಸೂರ್ಯ-ಚುಂಬನ' ಪಾರ್ಕರ್ ಬಾಹ್ಯಾಕಾಶ ನೌಕೆ

Monday December 09, 2019,

3 min Read

ನೇಚರ್ ಜರ್ನಲ್ನಲ್ಲಿ ಪ್ರಕಟವಾದ ಲೇಖನವು ದೀರ್ಘಕಾಲದ ರಹಸ್ಯಗಳಿಗೆ ಸುಳಿವುಗಳನ್ನು ನೀಡುತ್ತದೆ, ಕೊರೋನಾ ಎಂದು ಕರೆಯಲ್ಪಡುವ ಸೂರ್ಯನ ವಾತಾವರಣವು ಅದರ ಮೇಲ್ಮೈಗಿಂತ ನೂರಾರು ಪಟ್ಟು ಹೆಚ್ಚು ಯಾಕೆ ಬಿಸಿಯಾಗಿರುತ್ತದೆ, ಜೊತೆಗೆ ಸೌರ ಮಾರುತದ ನಿಖರವಾದ ಮೂಲಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.


ಆಗಸ್ಟ್ 2018 ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ, ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ವಾತಾವರಣದ ಹಿಂದೆಂದೂ ಅನ್ವೇಷಿಸದ ಭಾಗಗಳನ್ನು ಅನ್ವೇಷಿಸುವ ಮೂಲಕ ಯೋಜಿತ 24 ಪಾಸ್‌ಗಳಲ್ಲಿ ಮೂರು ಪಾಸ್ ಗಳನ್ನು ಪೂರ್ಣಗೊಳಿಸಿದೆ, ಬಾಹ್ಯಾಕಾಶ ನೌಕೆಯ ಸುತ್ತಲಿನ ಪರಿಸರವನ್ನು ಅಳೆಯಲು ಅತ್ಯಾಧುನಿಕ ವೈಜ್ಞಾನಿಕ ಸಾಧನಗಳನ್ನು ಬಳಸಲಾಗಿದೆ.


ಈ ಆವಿಷ್ಕಾರಗಳು ಸೂರ್ಯನಿಂದ ದೂರವಿರುವ ವಸ್ತು ಮತ್ತು ಕಣಗಳ ವರ್ತನೆಯ ಬಗ್ಗೆ ಹೊಸ ಮಾಹಿತಿಯನ್ನ ನೀಡುತ್ತದೆ, ನಮ್ಮ ನಕ್ಷತ್ರದ ಭೌತಶಾಸ್ತ್ರದ ಬಗ್ಗೆ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ವಿಜ್ಞಾನಿಗಳಿಗೆ ಇದು ಸಹಾಯ ಮಾಡುತ್ತದೆ ಎಂದು ನಾಸಾ ಹೇಳಿದೆ.


ಪಾರ್ಕರ್‌ ಸೋಲಾರ್‌ ಪ್ರೋಬ್‌ (ಚಿತ್ರಕೃಪೆ: ನಾಸಾ)


ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಮತ್ತು ತಂತ್ರಜ್ಞಾನವನ್ನು ರಕ್ಷಿಸುವ ಈ ಯೋಜನೆಯಲ್ಲಿ, ಸೂರ್ಯನು ವಸ್ತು ಮತ್ತು ಶಕ್ತಿಯನ್ನು ಹೇಗೆ ನಿರಂತರವಾಗಿ ಹೊರಹಾಕುತ್ತಾನೆ ಎಂಬುದರ ಬಗ್ಗೆ ಪಾರ್ಕರ್ ಬಹಿರಂಗಪಡಿಸಿದ ಮಾಹಿತಿಯು ನಮ್ಮ ಗ್ರಹದ ಸುತ್ತಲಿನ ಬಾಹ್ಯಾಕಾಶ ಹವಾಮಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಊಹಿಸಲು ಬಳಸುವ ಮಾದರಿಗಳನ್ನು ವಿಜ್ಞಾನಿಗಳು ಪುನಃ ಬರೆಯಲು ಸಹಾಯ ಮಾಡುತ್ತದೆ ಎಂದು ಅದು ಹೇಳಿದೆ.


ಯುಎಸ್ ಬಾಹ್ಯಾಕಾಶ ಸಂಸ್ಥೆ ಪ್ರಕಾರ, ನಕ್ಷತ್ರಗಳು ಹೇಗೆ ರಚಿಸಲ್ಪಟ್ಟಿವೆ ಮತ್ತು ವಿಕಸನಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧನೆಗಳು ಸಹಾಯ ಮಾಡುತ್ತವೆ.


"ಪಾರ್ಕರ್ ನ ಈ ಮೊದಲ ಮಾಹಿತಿಯು ಸೂರ್ಯನ ಬಗ್ಗೆ ಹೊಸ ಮತ್ತು ಆಶ್ಚರ್ಯಕರ ಮಾಹಿತಿಯನ್ನು ಬಹಿರಂಗಪಡಿಸುತ್ತದೆ" ಎಂದು ನಾಸಾದಲ್ಲಿ ವಿಜ್ಞಾನದ ಸಹಾಯಕ ಆಡಳಿತಾಧಿಕಾರಿ ಥಾಮಸ್ ಜುರ್ಬುಚೆನ್ ಹೇಳಿದ್ದಾರೆ.


"ಹೆಚ್ಚು ದೂರದಿಂದ ಸೂರ್ಯನನ್ನು ನೋಡುವುದಕ್ಕಿಂತ ಹತ್ತಿರದಿಂದ ಗಮನಿಸುವುದು ನಮಗೆ ಪ್ರಮುಖ ಸೌರ ವಿದ್ಯಮಾನಗಳ ಬಗ್ಗೆ ಅಭೂತಪೂರ್ವ ಮಾಹಿತಿಯನ್ನು ನೀಡುತ್ತದೆ ಮತ್ತು ಅವು ಭೂಮಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಮತ್ತು ನಕ್ಷತ್ರಪುಂಜಗಳ ಬಗ್ಗೆ ಸಕ್ರಿಯ ತಿಳುವಳಿಕೆಗೆ ಸಂಬಂಧಿಸಿದ ಹೊಸ ಒಳನೋಟಗಳನ್ನು ನಮಗೆ ನೀಡುತ್ತದೆ" ಎಂದು ಜುರ್ಬುಚೆನ್ ಹೇಳಿದರು.


ಸೂರ್ಯನಿಗೆ ಸಂಬಂಧಿಸಿದ ರೋಮಾಂಚಕಾರಿ ಭೌತಶಾಸ್ತ್ರದ ವಿಷಯದ ತಿಳುವಳಿಕೆಯ ಪ್ರಾರಂಭವಿದು ಎಂದು ಅವರು ವಿವರಿಸಿದರು, ಮತ್ತು ಪಾರ್ಕರ್ ಜೊತೆ ಹೊಸ ಆವಿಷ್ಕಾರಗಳನ್ನು ಮಾಡಲು ತಯಾರಿ ನಡೆಸಿದ್ದಾರೆ.


"ನಾವು ಇಲ್ಲಿಯವರೆಗೆ ನಡೆಸಿದ ಸೌರ ತನಿಖೆಯ ಮೊದಲ ಮೂರು ಪಾಸ್ ಗಳು ಅದ್ಭುತವಾಗಿವೆ" ಎಂದು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಪ್ರಮುಖ ಲೇಖಕ ಸ್ಟುವರ್ಟ್ ಬೇಲ್ ಹೇಳಿದ್ದಾರೆ.


"ಸಣ್ಣ ಕರೋನಲ್ ರಂಧ್ರಗಳಿಂದ ಸೌರ ಮಾರುತವು ಹೀಗೆ ಹೊರಹೊಮ್ಮುತ್ತದೆ ಎಂದು ಹೇಳುವ ಕೊರೋನದ ಕಾಂತೀಯ ರಚನೆಯನ್ನು ನಾವು ನೋಡಬಹುದು” ಎಂದು ಬೇಲ್ ಹೇಳಿದ್ದಾರೆ.


ಪಾರ್ಕರ್ ಸೌರ ಯೋಜನೆಯ ಮುಖ್ಯ ಗುರಿಗಳಲ್ಲಿ ಒಂದು "ನಿಧಾನ" ಸೌರ ಮಾರುತದ ಮೂಲವನ್ನು ಕಂಡುಹಿಡಿಯುವುದು ಮತ್ತು ಸೂರ್ಯನ ಬಿಸಿ ವಾತಾವರಣದಲ್ಲಿ ಅದು ಹೇಗೆ ವೇಗಗೊಳ್ಳುತ್ತದೆ ಎಂಬುದು.


ಸೌರ ಮಾರುತವು ಚಾರ್ಜ್ಡ್ ಕಣಗಳನ್ನು ಹೊಂದಿರುತ್ತದೆ, ಹೆಚ್ಚಾಗಿ ಪ್ರೋಟಾನ್‌ಗಳು ಮತ್ತು ಹೀಲಿಯಂ ನ್ಯೂಕ್ಲಿಯಸ್ಗಳನ್ನು ಹೊಂದಿರುತ್ತದೆ, ಅವು ಸೂರ್ಯನ ಕಾಂತಕ್ಷೇತ್ರದ ರೇಖೆಗಳೊಂದಿಗೆ ಚಲಿಸುತ್ತವೆ ಎಂಬುದನ್ನು ಸಂಶೋಧಕರು ಗಮನಿಸಿದ್ದಾರೆ.


"ವೇಗದ" ಸೌರ ಮಾರುತ ಎಂದು ಕರೆಯಲ್ಪಡುವ ಮಾರುತವು ಸೆಕೆಂಡಿಗೆ 500 ರಿಂದ 1,000 ಕಿಲೋಮೀಟರ್ ವೇಗದಲ್ಲಿರುತ್ತದೆ, ಇದು ಸೂರ್ಯನ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿನ ಸೌರ ಕೊರೋನಾದ ದೊಡ್ಡ ರಂಧ್ರಗಳಿಂದ ಬರುತ್ತದೆ ಎಂದು ತಿಳಿದುಬಂದಿದೆ.


ಆದಾಗ್ಯೂ, "ನಿಧಾನ" ಸೌರ ಮಾರುತದ ಮೂಲವು ಸಾಂದ್ರವಾಗಿರುತ್ತದೆ ಆದರೆ "ವೇಗದ" ಸೌರ ಮಾರುತದ ಅರ್ಧದಷ್ಟು ವೇಗವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ.


ಇತರ ಬಾಹ್ಯಾಕಾಶ ನೌಕೆಗಳಿಂದ ಸೂರ್ಯನ ವಿಪರೀತ ನೇರಳಾತೀತ ನಕ್ಷೆಗಳನ್ನು ಸೆರೆ ಹಿಡಿದಿದ್ದಾರೆ, ಇದರಿಂದ ಸಂಶೋಧಕರು ಗಾಳಿ ಮತ್ತು ಕಾಂತೀಯ ಕ್ಷೇತ್ರಗಳ ಮೂಲವಾದ ಕೊರೋನಲ್ ರಂಧ್ರಗಳನ್ನು ಪತ್ತೆ ಹಚ್ಚಿದರು. ಕರೋನಲ್ ರಂಧ್ರಗಳು ನಿಧಾನವಾದ ಸೌರ ಮಾರುತದ ಮೂಲ ಎಂದು ಬಲವಾಗಿ ಕಂಡುಬರುತ್ತದೆ.


ಕೊರೋನಲ್ ರಂಧ್ರಗಳು ಸೂರ್ಯನ ತಾಣಗಳಿಗೆ ಸಂಬಂಧಿಸಿವೆ, ಅವು ಸುತ್ತಮುತ್ತಲಿನ ಕೊರೋನಾಕ್ಕಿಂತ ತಂಪಾದ ಮತ್ತು ಕಡಿಮೆ ದಟ್ಟವಾಗಿರುವ ಪ್ರದೇಶಗಳಾಗಿವೆ.


ಮತ್ತೊಂದು ಆಶ್ಚರ್ಯವೆಂದರೆ, ಸಂಶೋಧಕರು ಹೇಳುವಂತೆ, ಪ್ರತಿ ಫ್ಲೈ-ಬೈ ಪೆರಿಹೆಲಿಯನ್-ಸೂರ್ಯನಿಗೆ ಅತೀ ಹತ್ತಿರವಾದ ಕಕ್ಷೆಯಲ್ಲಿ ನೌಕೆಯು ಇರುವ ಸಮಯದಲ್ಲಿ-ಬಾಹ್ಯಾಕಾಶ ನೌಕೆಯನ್ನು ಪದೇ ಪದೇ ಧೂಳು ಆವರಿಸುತ್ತಿದ್ದುದು.


ಈ ಕಣವು ಮೈಕ್ರೊನ್‌ಗಿಂತ ಚಿಕ್ಕದಾಗಿದೆ, ಇದು ಮಿಲಿಮೀಟರ್‌ನ ಸಾವಿರದಷ್ಟು ಎಂದರೆ ತಪ್ಪಾಗಲಾರದು. ಈ ಧೂಳಿನ ಕಣಗಳು ಕ್ಷುದ್ರಗ್ರಹಗಳು ಅಥವಾ ಧೂಮಕೇತುಗಳಿಂದ ಭಗ್ನಾವಶೇಷಗಳಾಗಿವೆ, ಅದು ಸೂರ್ಯನ ಬಳಿ ಕರಗಿ ಅವುಗಳ ಸಿಕ್ಕಿಬಿದ್ದ ಧೂಳನ್ನು ಬಿಟ್ಟುಹೋಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.


ಆ ಧೂಳು ಈಗ ಸೂರ್ಯನನ್ನು ಸುತ್ತುತ್ತಿದೆ, ಮತ್ತು ಬಾಹ್ಯಾಕಾಶ ನೌಕೆಯನ್ನು ಬೆಳಕಿನ ಒತ್ತಡದಿಂದ ಹೊರಕ್ಕೆ ಹೊರಹಾಕಲಾಗುತ್ತಿದೆ ಮತ್ತು ಸೌರಮಂಡಲದಿಂದ ಸಂಪೂರ್ಣವಾಗಿ ಪಾರಾಗಲು ಉದ್ದೇಶಿಸಲಾಗಿದೆ ಎಂದು ಬೇಲ್ ಶಂಕಿಸಿದ್ದಾರೆ.