ಈ ಇಂಜಿನಿಯರ್ ನ ಎನ್ ಜಿ ಓ ಛತ್ತಿಸಘಡದ ನಕ್ಸಲ ಪೀಡಿತ ಸ್ಥಳಗಳಲ್ಲಿ ಮಕ್ಕಳ ಭರವಸೆಯನ್ನು ಹೆಚ್ಚಿಸುತ್ತಾ, ಗುಣಮಟ್ಟದ ಶಿಕ್ಷಣವನ್ನು ನೀಡುವತ್ತ ಹೆಜ್ಜೆ ಇಟ್ಟಿದೆ.
ಇಂಜಿನಿಯರ್ ಆಶಿಶ್ ಶ್ರಿವಾತ್ಸವ್ 2015ರಲ್ಲಿ ಇದನ್ನು ಹುಟ್ಟುಹಾಕಿದರು. ಶ್ರೀಕಾಂತ್ ರವರು ಇಲ್ಲಿಯವರೆಗೆ ಸರಿಸುಮಾರು 25,000 ಮಕ್ಕಳ ಮೇಲೆ ತಮ್ಮ ವಿಶಿಷ್ಟ ಕಲಿಕಾ ವಿಧಾನಗಳಿಂದ ಪ್ರಭಾವ ಬೀರಿದ್ದಾರೆ.
ನಕ್ಸಲ ಚಟುವಟಿಕೆಗಳಿಗೆ ಕುಖ್ಯಾತವಾದ ರಾಜ್ಯ ಛತ್ತಿಸಘಡದ ಜಿಲ್ಲೆಗಳಾದ ಸುಕ್ಮಾ ಮತ್ತು ಬಿಜಾಪುರ ಸ್ಥಳಗಳು ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿವೆ.
“ಹಿಂಸಾತ್ಮಕ ಕೃತ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸುಕ್ಮಾ ಜಿಲ್ಲೆಯಲ್ಲಿ ಕಳೆದ ಕೆಲವು ವರುಷಗಳಿಂದ ಸರಿಸುಮಾರು 40,000 ಮಕ್ಕಳು ಶಾಲೆಯನ್ನು ತೊರೆದಿದ್ದಾರೆ.”
ಬಡತನದ ಜೀವನ ಮತ್ತು ನಿರಂತರ ಪ್ರಾಣ ಭೀತಿಯಿಂದ, ಈ ಮಕ್ಕಳು ಮೂಲ ಶಿಕ್ಷಣದಿಂದ ವಂಚಿತರಾಗಿದ್ಧಾರೆ.
ಈಗ ಪರಿಸ್ಥಿತಿ ಮೊದಲಿನಂತಿರದಿರಲು ಕಾರಣಕರ್ತರಾದ ಆಶಿಶ್ ಶ್ರಿವಾತ್ಸವ್ ವ್ರತ್ತಿಯಲ್ಲಿ ಇಂಜಿನಿಯರ್. ದಿಲ್ಲಿಯಲ್ಲಿರುವ ಅವರ ಕಾರ್ಪೊರೇಟ್ ಕೆಲಸವನ್ನು ಬಿಟ್ಟು ಭಾರತವನ್ನು ಸುತ್ತಲು ಪ್ರಾರಂಭಿಸಿದರು. ಈ ಪ್ರಯಾಣದಲ್ಲಿ ದಂತೇವಾಡ ಎನ್ನುವ ಊರಿಗೆ ಭೇಟಿ ನೀಡಿದಾಗ ಅದು ಅವರಿಗೆ ದೊಡ್ಡ ಅಚ್ಚರಿಯನ್ನುಂಟು ಮಾಡಿತು. ಅಲ್ಲಿ ಅವರು ಗಮನಿಸಿದ್ದು, ನಕ್ಸಲರ ಹಿಂಸತ್ಮಾಕತೆಯಿಂದ ಮಕ್ಕಳ ಶಿಕ್ಷಣದ ಮೇಲೆ ಆದ ಅನ್ಯಾಯ.
2015 ರಲ್ಲಿ ಆಶಿಶ್ ರವರು ಶಿಕ್ಷಾರ್ಥ ಎನ್ನುವ ಎನ್ ಜಿ ಓ ಒಂದನ್ನು ಪ್ರಾರಂಭಿಸಿದರು. ಇದು ಈಗ ಮಕ್ಕಳ ಬಿಕ್ಕಟ್ಟನ್ನು ಪರಿಹರಿಸುವತ್ತ ಕೆಲಸ ಮಾಡುತ್ತಿದೆ. ಆಶಿಶ್ ರವರ ಸಹಾಯದಿಂದ ವಿದ್ಯೆಯಿಂದ ವಂಚಿತರಾದ 40,000 ಮಕ್ಕಳ ಪೈಕಿ 25,000 ಮಕ್ಕಳು ಸರಿಯಾದ ಶಿಕ್ಷಣ ಪಡಿಯುತ್ತಿದ್ದಾರೆ.
ಈ ಒಂದು ಎನ್ ಜಿ ಓ ಸದ್ಯಕ್ಕೆ ಇರುವ ಸರಕಾರಿ ಶಾಲೆಗಳ ಮೂಲಕವೇ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದು, ಶಾಲಾ ಪಠ್ಯ ಕ್ರಮವನ್ನು ಮರುವಿನ್ಯಾಸಗೊಳಿಸಿದ್ದು ಕಲಿಕೆಯ ಗುಣಮಟ್ಟವನ್ನು ವೃಧ್ಧಿಸಿದೆ.
ಇವತ್ತಿಗೆ ಶಿಕ್ಷಾರ್ಥ ನೇರವಾಗಿ 3,000 ಮಕ್ಕಳೊಂದಿಗೆ ಭಾಗಿಯಾಗಿದ್ದು, ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಪರೋಕ್ಷವಾಗಿ 25,000 ಮಕ್ಕಳಿಗೆ ಸ್ಥಳೀಯ ಅಧಿಕಾರಿಗಳ ಸಹಾಯದೊಂದಿಗೆ ತಲುಪಿದೆ.
ಮೀಡಿಯಮ್ ಗೆ ಮಾತಾಡುತ್ತಾ ಆಶಿಶ್ ಅವರು ಹೇಳಿದ್ದು,
"500 ಮಕ್ಕಳಿಂದ ಒಂದು ವಸತಿ ಶಾಲೆಯಲ್ಲಿ ಶುರುವಾದ ಇದು ನಂತರ 5 ಶಾಲೆಗಳಿಂದ 25,000 ಮಕ್ಕಳಿಗೇರಿತು. ಇಲ್ಲಿಯವರೆಗೆ 25,000 ಮಕ್ಕಳ ಮೇಲೆ ಪ್ರಭಾವ ಬೀರಿದೆ."
ಈ ಒಂದು ಎನ್ ಜಿ ಓ ಕ್ರೌಡಫಡಿಂಗ್ ಮೂಲಕ ಹಣವನ್ನು ಸಂಗ್ರಹಿಸಿದ್ದು ಪರೋಕ್ಷವಾಗಿ 30,000 ಮಕ್ಕಳಿಗೆ ಪ್ರಭಾವ ಬೀರಿದೆ.
"ಪ್ರಾಂತ್ಯಗಳಲ್ಲಿ ಶಿಕ್ಷಣದ ಸೌಲಭ್ಯಗಳನ್ನು ಗಟ್ಟಿಗೊಳಿಸುವಲ್ಲಿ, ಈ ಸಂಸ್ಥೆಯು 85 ಶಾಲೆಗಳನ್ನು ಮತ್ತೆ ತೆರೆಯಲು ಸಹಕಾರಿಯಾಗಿದೆ. 2019 ರ ಹೊತ್ತಿಗೆ 100 ಶಾಲೆಗಳನ್ನು ಮುಟ್ಟುವ ಆಶಯವನ್ನು ಹೊಂದಿದೆ. "
ಈ ಒಂದು ಎನ್ ಜಿ ಓ ಭಾರತಾದ್ಯಂತ ಯುವ ಬದಲಾವಣೆಕಾರರಿಗೆ ಮಕ್ಕಳಿಗೆ ಸಹಾಯ ಮಾಡಲು ಸಹಭಾಗಿತ್ವವನ್ನು ನೀಡುತ್ತದೆ. ಇದರ ಒಂದು ಭಾಗವಾಗಿ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಕೆಲವು ಜನರಿಗೆ ಒಂದು ವರ್ಷ ಮಕ್ಕಳಿಗೆ ಪಾಠ ಮಾಡಲು ಪ್ರಮಾಣಿಕರಿಸಿದೆ. ಸದ್ಯಕ್ಕೆ 2019 ರ ಸಹಭಾಗಿತ್ವ ಕಾರ್ಯಕ್ರಮದಲ್ಲಿ 15 ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ.
ಅದಾಗ್ಯೂ, ಸನ್ನಿವೇಶಗಳು ಸುಲಭದ್ದಾಗಿರಲಿಲ್ಲ, ಶುರುವಿನಲ್ಲಿ ಆಶಿಶ್ ರವರು ತೀವ್ರವಾದ ಪ್ರತಿರೋಧವನ್ನು ಎದುರಿಸಿದ್ದಾರೆ. ಎಫರ್ಟ್ಸ್ ಫಾರ್ ಗುಡ್ ಗೆ ಮಾತನಾಡುತ್ತ ಸವಾಲುಗಳ ಬಗ್ಗೆ ಅವರು ಹೇಳಿದ್ದು,
"ನನಗೆ ಕೊನೆಯಿಲ್ಲದಷ್ಟು ತಡೆಗಳಿದ್ದವು, ನನ್ನನ್ನು ನಾನು ಮನಗಾಣಿಸಿ ಮಕ್ಕಳನ್ನು ಅವರು ಇರುವ ಹಾಗೆ ಬಿಟ್ಟು ಮಾಮೂಲಿ ಜೀವನಕ್ಕೆ ಹಿಂತಿರುಗುವುದಕ್ಕೆ. ಅದಲ್ಲದೆ ಹಳ್ಳಿಯ ಜನರಿಗೆ ನಮ್ಮ ಜೊತೆ ಸೇರಲು ಇಷ್ಟವಿರಲ್ಲಿಲ್ಲ, ಭಾಷೆಯ ಅಡ್ದಿಯಿಂದಾಗಿ ಸಂಪರ್ಕ ಅಸಾಧ್ಯವಾಗಿತ್ತು. ಆದರು ನಾನು ಹಟ ಬಿಡಲಿಲ್ಲ. ನನಗೆ ಈ ಮಕ್ಕಳನ್ನು ಅಖಚಿತತೆಯ ಪ್ರಪಾತಕ್ಕೆ ಮುಳುಗುವುದರಿಂದ ಪಾರುಮಾಡಬೇಕಾಗಿತ್ತು. ಅವರಿಗೆ ಒಳ್ಳೆಯ ಶಿಕ್ಷಣವನ್ನು ನೀಡಿ ಭವಿಷ್ಯದ ಉತ್ತಮ ನಾಗರೀಕರನ್ನಾಗಿ ಮಾಡಬೇಕಿತ್ತು. ಆದಕ್ಕೆ ನಾನು ಇಲ್ಲಿಯೇ ಉಳಿದುಕೊಂಡೆ."
ಯಾವುದೇ ಇಂಟರ್ನೆಟ್ ಮತ್ತು ಮೂಲ ಸೌಲಭ್ಯಗಳಿಲ್ಲದೆಯೆ ಮಕ್ಕಳಿಗೆ ಕಲಿಸಲು ಹಳೆಯ ಶಾಲಾ ಪದ್ದತಿಯ ದಾರಿ ಹಿಡಿಯ ಬೇಕಾಯಿತು.
"ನಮ್ಮ ಬಾಲ್ಯದಲ್ಲಿ, ನಾವು ಎ ಫಾರ್ ಎರೋಪ್ಲೇನ್, ಬಿ ಫಾರ್ ಬಾಲ್ ಎಂದು ಕಲಿತಿದ್ದೆವು, ಇಲ್ಲಿನ ಮಕ್ಕಳು ಅವರ ಜೀವನದಲ್ಲಿ ಒಂದು ಹೈವೇ ಕೂಡಾ ನೋಡಿರುವುದಿಲ್ಲಾ, ಎರೋಪ್ಲೇನ್ ದೂರದ ಮಾತು. ಅದಕ್ಕಾಗಿ ನಾವು ಪಠ್ಯಕ್ರಮದಲ್ಲಿ ಎ ಫಾರ್ ರೋ ಆಗಿ ಬದಲಾಯಿಸಿದೆವು.ಇದು ಅವರ ಜನಾಂಗದಲ್ಲಿ ಸಾಮೂಹಿಕವಾಗಿ ದೊರೆಯುವ ಒಂದು ಸಾಧನ."
ವಿಷಯಗಳನ್ನು ಇನ್ನಷ್ಟು ಆಸಕ್ತಿದಾಯಕಗೊಳಿಸಲು ಕೆಲವು ಸಂದರ್ಭೋಚಿತ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ,.ಅದಲ್ಲದೇ ಮಕ್ಕಳಿಗೆ ಇತಿಹಾಸ ಮತ್ತು ಸ್ಮಾರಕಗಳ ಬಗ್ಗೆ ಪ್ರಬಂಧ ಬರೆಯಲು ಹೇಳದೆ, ಸ್ಥಳೀಯ ಹಬ್ಬಗಳ ಬಗ್ಗೆ ನೈಸರ್ಗಿಕ ಅದ್ಬುತಗಳ ಬಗ್ಗೆ ಬರೆಯಲು ಹೇಳಲಾಗುತ್ತದೆ.
ಇದಲ್ಲದೇ ಮಕ್ಕಳಿಗೆ ಮಹುವಾ ಹಣ್ಣಿನ ಸಹಾಯದಿಂದ ಕೂಡುವುದು ಮತ್ತು ಕಳೆಯುವುದನ್ನು ಹೇಳಿ ಕೊಡಲಾಗುತ್ತದೆ.ಸೀನಿಯರ್ ವಿದ್ಯಾರ್ಥಿಗಳಿಗೆ ಇದೆ ಹಣ್ಣು ಬಳಸಿಕೊಂಡು ಮಾರುವುದು ಹಾಗೂ ಲಾಭದ ವಿಷಯದ ಬಗ್ಗೆ ಹೇಳಿ ಕೊಡಲಾಗುತ್ತದೆ.
ಆಶಿಶ್ ರವರಿಗೆ ಅಭಿವ್ರದ್ಧಿಯೆಂದರೆ ಗಗನಚುಂಬಿ ಕಟ್ಟಡಗಳು, ಕಾಂಕ್ರಿಟ್ ರಸ್ತೆಗಳಾಗಿರದೆ, ಮೂಲವಾಗಿ ಅವಶ್ಯಕವಾಗಿರುವ ಆಹಾರ ಮತ್ತು ಶಿಕ್ಷಣವಾಗಿದೆ.