12 ಸಾವಿರ ಜನರನ್ನು ಅಂಗಾಂಗ ದಾನಿಗಳನ್ನಾಗಿಸಿದ ರಾಜಸ್ಥಾನದ ವೈದ್ಯೆ

‘ಅಂಗ ರಥ ಯಾತ್ರಾʼದ ಮೂಲಕ ರಾಜಸ್ಥಾನದೆಲ್ಲೆಡೆ ಸುತ್ತಾಡಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಜೈಪುರ ಮೂಲದ ವೈದ್ಯೆ ಉಪಾಸನಾ ಚೌಧರಿ.

12 ಸಾವಿರ ಜನರನ್ನು ಅಂಗಾಂಗ ದಾನಿಗಳನ್ನಾಗಿಸಿದ ರಾಜಸ್ಥಾನದ ವೈದ್ಯೆ

Tuesday December 01, 2020,

2 min Read

ಏಳು ವರ್ಷದ ನಂತರವು ತಮ್ಮ ಸಂಬಂಧಿಗೆ ಕಸಿ ಮಾಡಲು ದಾನಿ ಸಿಗದಿದ್ದಾಗ ರಾಜಸ್ಥಾನದ ಝುಂಝುನ ಜಿಲ್ಲೆಯ ಉಪಾಸನಾ ಚೌಧರಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವುದೆ ತಮ್ಮ ಜೀವನದ ಧ್ಯೇಯವೆಂದುಕೊಂಡರು. 28 ವರ್ಷದ ಅವರು ಪ್ರಸ್ತುತ ಜಿಲ್ಲೆಯ ಪಿಡಿಯು ಸರ್ಕಾರಿ ಕಾಲೇಜಿನ ಅಧ್ಯಾಪಕ ವರ್ಗದ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.


“ನನ್ನ ಸಂಬಂಧಿಗೆ ಕಿಡ್ನಿ ಕಸಿ ಮಾಡಬೇಕಿತ್ತು, ಆದರೆ ದಾನಿ ಸಿಗಲಿಲ್ಲ. ನನ್ನ ಮಾವನ ಹೆಚ್‌ಎಲ್‌ಎ ಸರಿಹೊಂದಲಿಲ್ಲ. ಅವರರು ಡಯಾಲಿಸಿಸ್‌ ಮೇಲೆ ಬದುಕುತ್ತಿದ್ದರಿಂದ ಎಷ್ಟೆ ಪ್ರಯತ್ನ ಪಟ್ಟರು ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಆಗಲೇ ನಾನು ಏನಾದರು ಮಾಡಬೇಕೆಂದು ನಿರ್ಧರಿಸಿದೆ,” ಎಂದು ಉಪಾಸನಾ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.


ಅಂಗಾಂಗ ದಾನದಲ್ಲಿ ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ರಾಜಸ್ಥಾನ ತುಂಬಾ ಹಿಂದುಳಿದಿದೆ. ವ್ಯವಸ್ಥೆಯು ಅಷ್ಟು ಸೂಕ್ಷ್ಮವಿಲ್ಲ ಮತ್ತು ಜನರಲ್ಲಿ ಅರಿವು ಇಲ್ಲ. ಸತ್ತವರು ತಮ್ಮ ಅಂಗಾಂಗಗಳಿಂದ ಬದುಕಿರುವವರಿಗೆ ಸಹಾಯ ಮಾಡಬಹುದು ಎನ್ನುತ್ತಾರೆ ಅವರು.


ರಾಷ್ಟ್ರೀಯ ಅಂಗಾಂಗ ದಾನ ದಿನ(ನವೆಂಬರ್‌ 27)ದ ಪ್ರಯುಕ್ತ ಮಹಾತ್ಮಾ ಗಾಂಧಿ ಸ್ವಸ್ಥ್ಯ ಸಂಸ್ಥಾನ ಎನ್‌ಜಿಒದ ಸದಸ್ಯರಾಗಿ ಉಪಾಸನಾ ಸೆಪ್ಟೆಂಬರ್‌ 25 ರಂದು ಅಂಗಾಂಗ ದಾನ ಜಾಗೃತಿ ಯಾತ್ರೆ ‘ಅಂಗ ರಥ ಯಾತ್ರಾʼ ಆರಂಭಿಸಿದರು. ರಾಜಸ್ಥಾನದ 15 ಜಿಲ್ಲೆಗಳನ್ನು ಸುತ್ತಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಿದರು. ತಮ್ಮ ಎರಡು ತಿಂಗಳ ವೇತನವನ್ನು ಯಾತ್ರೆಗೆ ವಿನಿಯೋಗಿಸಿ 12 ಸಾವಿರ ಜನರನ್ನು ಅಂಗಾಂಗ ದಾನ ಮಾಡುವಂತೆ ಲಿಖಿತ ಪ್ರಮಾಣದ ಜತೆಗೆ ಮನವೊಲಿಸಿದರು.

ಉಪಾಸನಾ ಚೌಧರಿ ಮತ್ತು ತಂಡ ರಾಜಸ್ಥಾನದ 15 ಜಿಲ್ಲೆಗಳಲ್ಲಿ ಜಾಗೃತಿ ಯಾತ್ರಾ ಮಾಡುತ್ತಿರುವುದು (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


ಜನರಿಗೆ ಅವಷ್ಯಕತೆ ಇದ್ದವರಿಗೆ ಅಂಗಾಂಗ ನೀಡಿರುವ ಚಿತ್ರಗಳನ್ನು ತೋರಿಸುತ್ತೇವೆ. ಕೆಲವು ಜನರಿಗೆ ಇದರ ಬಗ್ಗೆ ತಿಳಿದಿದೆ ಆದರೆ ಹೇಗೆ ಎಂದು ಗೊತ್ತಿಲ್ಲ. ನಾವು ಕೇವಲ ಜಾಗೃತಿ ಮೂಡಿಸದೆ, ಅವರ ಅಂಗಾಂಗ ದಾನ ಮಾಡುವಂತೆ ಭಾಷೆಯನ್ನು ತೆಗೆದುಕೊಂಡಿದ್ದೇವೆ,” ಎಂದು ಅವರು ದಿ ಲಾಜಿಕಲ್‌ ಇಂಡಿಯನ್‌ಗೆ ಹೇಳಿದರು.


ಯಾತ್ರೆಯಲ್ಲಿ ಅಂಗಾಂಗ ದಾನದ ವಿವಿಧ ಆಯ್ಕೆಗಳು ಮತ್ತು ದೇಹದ ಯಾವ ಭಾಗವನ್ನು ದಾನ ಮಾಡಬೇಕೆಂದು ನಿರ್ಧರಿಸುವುದರ ಬಗ್ಗೆಯು ತಿಳಿಸಲಾಗಿದೆ. ಅಂಗಾಂಗ ದಾನಕ್ಕಂಟಿರುವ ಹಲವು ಮೌಢ್ಯಗಳ ಬಗ್ಗೆಯೂ ಜಾಗೃತಿ ಮೂಡಿಸಿದ್ದಾರೆ. ಇದಕ್ಕೆ ಸ್ಥಳೀಯ ಶಿಕ್ಷಕರು ಮತ್ತು ಆಡಳಿತ ಅಧಿಕಾರಿಗಳ ಸಹಾಯ ಪಡೆದಿದ್ದಾರೆ.


“ಮುಂಚೆ ಸತ್ತ ಮೇಲೆ ಕಣ್ಣನ್ನು ಮಾತ್ರ ದಾನಮಾಡಬಹುದು ಎಂದು ನಾನಂದುಕೊಂಡಿದ್ದೆ. ಪ್ರಕ್ರಿಯೆ ಹೇಗಿರುತ್ತದೆ ಎಂದು ಗೊತ್ತಿರಲಿಲ್ಲ. ಯಾತ್ರೆ ನನ್ನ ಅರಿವನ್ನು ಹೆಚ್ಚಿಸಿತು. ಉತ್ತಮವಾಗಿ ಇನ್ನೊಬ್ಬರು ಬದುಕಬೇಕೆಂದು ನನ್ನೆಲ್ಲ ಅಂಗಗಳನ್ನು ನಾನು ದಾನ ಮಾಡಿದ್ದೇನೆ,” ಎಂದರು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಿಮಾಂಶು ಎನ್ನುವವರು.