ತಾಳೆ ಎಲೆಗಳನ್ನು ಬಳಸಿ, ಪರಿಸರಸ್ನೇಹಿ ಅಡುಗೆ ಪರಿಕರಗಳನ್ನು ಉತ್ಪಾದಿಸುತ್ತಿರುವ "ಆದಾಯ ಫಾರ್ಮ್"

ಈ "ಆದಾಯ ಫಾರ್ಮ್" ಜೈವಿಕ ವಿಘಟನೀಯ ಅಂಶಗಳನ್ನು ಹೊಂದಿದಂತಹ ಊಟದ ಮೇಜಿನ ಪರಿಕರಗಳು ಮತ್ತು ಕಟ್ಲೇರಿ ಸಾಮಾನುಗಳಾದ ಚಾಕು-ಕತ್ತರಿಗಳನ್ನು ತಯಾರಿಸಿತ್ತದೆ. ಇವುಗಳನ್ನು ಬಳಸಿದ ಮೇಲೆ ದನಕರುಗಳಿಗೆ ಮೇಯಿಸಬಹುದು ಅಥವಾ ಅದನ್ನು ಸಾವಯವ ಗೊಬ್ಬರವಾಗಿ‌ ಪರಿವರ್ತಿಸಬಹುದು.

ತಾಳೆ ಎಲೆಗಳನ್ನು ಬಳಸಿ, ಪರಿಸರಸ್ನೇಹಿ ಅಡುಗೆ ಪರಿಕರಗಳನ್ನು ಉತ್ಪಾದಿಸುತ್ತಿರುವ "ಆದಾಯ ಫಾರ್ಮ್"

Wednesday August 07, 2019,

2 min Read

ಆಕಾಶ್ ಅಂಬಾನಿ-ಶ್ಲೋಕಾ ಮೆಹ್ತಾ ಮತ್ತು ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಅವರ ಅದ್ದೂರಿ ವಿವಾಹಗಳು ಒಂದು ಸಾಮಾನ್ಯವಾದ ಹೋಲಿಕೆಯ ಅಂಶವನ್ನು ಹೊಂದಿದ್ದವು. ಅದೇ, ಪರಿಸರಸ್ನೇಹಿ ಉತ್ಪನ್ನಗಳ ಬಳಕೆ ಮತ್ತೂ‌ ವಿಶೇಷವಾಗಿ ಊಟದ ಮೇಜಿನ‌ ಪರಿಕರಗಳ ಬಳಕೆ.


ಇತ್ತೀಚೆಗೆ ಶ್ರೀಮಂತರು ಮತ್ತು ಪ್ರಸಿದ್ಧರಷ್ಟೆ ಅವರ ಮದುವೆಗಳಲ್ಲಿ ಹಸಿರು ಹಾಗೂ ಪರಿಸರ ಸ್ನೇಹಿ ವಸ್ತುಗಳ ಮೊರೆ ಹೋಗುತ್ತಿಲ್ಲ, ಬದಲಾಗಿ ಪರಿಸರಸ್ನೇಹಿ ವಿವಾಹಗಳು ಭಾರತದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿವೆ. ಇಂತಹ ಸಂದರ್ಭಗಳಲ್ಲಿ ಪ್ಲಾಸ್ಟಿಕ್ ಬಳಸುವದರಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಹೆಚ್ಚಿನ ಜನರು ಅರಿತುಕೊಂಡಿದ್ದಾರೆ. ಆದ್ದರಿಂದ ಅವರು ಈಗ ಪರಿಸರಸ್ನೇಹಿ ಎಂಬ ಹೊಸ ಟ್ರೆಂಡ್ ಆಗಿ ಬದಲಾಯಿಸುತ್ತಿದ್ದಾರೆ.


q

ಚಿತ್ರಕೃಪೆ: ಎನ್‌ಡಿಟಿವಿ


ಅಂತಹ ಸಂದರ್ಭಗಳಲ್ಲಿ ಜೈವಿಕ ವಿಘಟನೀಯವಲ್ಲದ ಕಟ್ಲರಿಗಳು ಹಾಗೂ ಮೇಜಿನ ‌ಪರಿಕರಗಳ ಬಳಕೆಯ ಬಗ್ಗೆ ಕಾಳಜಿ ವಹಿಸಿದದನ್ನು ಕಂಡು, ಚೆನ್ನೈ ಮೂಲದ ರೋಲಿ ಭಟ್ ಮತ್ತು ಟಿ.ಹರ್ಷ ದಂಪತಿಗಳು "ಆದಾಯ ಫಾರ್ಮ್" ಅನ್ನು‌‌‌ ಪ್ರಾರಂಭಿಸಿದರು. ಇಲ್ಲಿ ಇವರು ತಾಳೆ ಎಲೆಗಳಿಂದ ತಯಾರಿಸಿದ‌ ಊಟದ ಮೇಜಿನ ಮೇಲೆ ಬಳಸುವ ಪರಿಕರಗಳನ್ನು ನೀಡುತ್ತದೆ.


ಉತ್ಪನ್ನಗಳ ಬಗ್ಗೆ ನ್ಯೂ‌ ಇಂಡಿಯನ್ ಎಕ್ಸ್‌ಪ್ರೆಸ್‌ ನೊಂದಿಗೆ ಮಾತನಾಡಿದ ರೋಲಿ,


"ನಮ್ಮ ಉತ್ಪನ್ನಗಳು ಜೈವಿಕ ವಿಘಟನೀಯ ಅಂಶಗಳನ್ನು‌ ಹೊಂದಿವೆ, ಆದ್ದರಿಂದ ಬಳಕೆಯ ನಂತರ ಅದನ್ನು ಮಿಶ್ರಗೊಬ್ಬರವನ್ನಾಗಿ ಹಾಗೂ ಸಾವಯವ ಗೊಬ್ಬರವಾಗಿ ಬಳಸಬಹುದಾಗಿದೆ".


ತಾಳೆ ಮರಗಳಿಂದ ಉದುರಿ ಬಿದ್ದ ಎಲೆಗಳನ್ನು ಸಂಗ್ರಹಿಸಿ ಕರ್ನಾಟಕದ ಭದ್ರಾವತಿಯಲ್ಲಿರುವ ಕಾರ್ಖಾನೆಗೆ ತರಲಾಗುತ್ತದೆ. ಅಲ್ಲಿ 300 ರೈತರು ಇದರ ಕಾರ್ಯವನ್ನು‌ ನಿರ್ವಹಿಸುವಂತೆ‌ ರೈತರ ಸರಪಳಿಯನ್ನು ಈ ದಂಪತಿಗಳು ನಿರ್ವಹಿಸುತ್ತಿದ್ದಾರೆ. ಎಲೆಗಳನ್ನು ಸಂಗ್ರಹಿಸಿದ ನಂತರ, ಅವುಗಳನ್ನು ನೀರಿನಿಂದ‌ ನಿಯಮಾಧೀನಗೊಳಿಸಲಾಗುತ್ತದೆ ನಂತರ, ಯಾವುದೇ ರಾಸಾಯನಿಕ ಹಾಗೂ ಅಂಟನ್ನು ಬಳಸದೆ ಶಾಖವನ್ನು ಬಳಸಿಕೊಂಡು ಅವುಗಳನ್ನು ವಿವಿಧ ಆಕಾರಗಳಲ್ಲಿ ಅಚ್ಚು ಮಾಡಲಾಗುತ್ತದೆ. 


q

ಚಿತ್ರಕೃಪೆ: ಎನ್‌ಡಿಟಿವಿ


ಉತ್ಪನ್ನದ ಬಗ್ಗೆ ಎನ್‌ಡಿಟಿವಿಯೊಂದಿಗೆ ಮಾತನಾಡಿದ‌ ರೋಲಿ,


ಯಾವುದಾದರೂ ಒಂದು ಎಲೆಯನ್ನು ನೆಲದ ಮೇಲೆ ಎಸೆಯಿರಿ ಆಗ ಅದು ಒಂದೆರಡು ವಾರಗಳಲ್ಲಿ‌ ಕೊಳೆಯುತ್ತದೆ. ನಮ್ಮ ಜೈವಿಕ ವಿಘಟನೀಯ ಉತ್ಪನ್ನಗಳ ಮುಖ್ಯ ಉದ್ದೇಶವು ಇದೇ ಆಗಿದೆ. ಉತ್ಪಾದನಾ ಹಂತದಲ್ಲಿ ನಾವು ಎಲೆಗಳ ಉಳಿದ‌ ಅಂಶಗಳನ್ನು ರೈತರಿಗೆ ಗೊಬ್ಬರವಾಗಿ ಬಳಸಲು ಅಥವಾ ಅವರ ಜಾನುವಾರುಗಳಿಗೆ ಆಹಾರಕ್ಕಾಗಿ ನೀಡುತ್ತೇವೆ.


q

ಆದಾಯ ಫಾರ್ಮ್‌ನ ಸಂಸ್ಥಾಪಕರಾದ‌ ರೋಲಿ ಭಟ್ ಮತ್ತು ಟಿ.ಹರ್ಷ ಚಿತ್ರಕೃಪೆ: ಆದಾಯ ಫಾರ್ಮ್


ಇಂದು ಆದಾಯ ಫಾರ್ಮ್ ಸೂಪ್ ಬಟ್ಟಲಿನಿಂದ ಹಿಡಿದು ಸಾಸೇಜ್ ಟ್ರೇಗಳ ತನಕ ಸಂಪೂರ್ಣವಾಗಿ ಜೈವಿಕ‌ ವಿಘಟನೀಯ ಅಂಶಗಳಿಂದ ಕೂಡಿದ 30 ರಿಂದ 35 ಬಗೆಯ ವಿವಿಧ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಅವುಗಳ ಮೂರರಿಂದ‌ ಹನ್ನೆರಡು ರೂಪಾಯಿಗಳ ಬೆಲೆಯನ್ನು ಹೊಂದಿವೆ‌. ಆದರೆ, ಕನಿಷ್ಟ 25 ಸಾಮಗ್ರಿಗಳ ಆರ್ಡರ್ ಅನ್ನು ಇವರು ಸ್ವೀಕರಿಸಿತ್ತಾರೆ.


ಆದಾಯ ಫಾರ್ಮ್‌ನ ಜಾಲತಾಣದ ಮೂಲಕವು ಉತ್ಪನ್ನಗಳನ್ನು ಖರೀದಿಸಬಹುದು. ಅಲ್ಲದೆ ಅಮೇಜಾನ್ ನಂತಹ ಇ-ಕಾಮರ್ಸ್ ವೇದಿಕೆಗಳ ಮೂಲಕ ಈ ಉತ್ಪನ್ನಗಳನ್ನು ಭಾರತದಾದ್ಯಂತ ತಲುಪಿಸಲಾಗುತ್ತದೆ.


ಪ್ಲಾಸ್ಟಿಕ್‌ ಪ್ರಭಾವ ಮತ್ತು ಅದನ್ನು ಹೇಗೆ ಬದಲಾಯಿಸಬಹುದು ಎಂಬ ನಿಟ್ಟಿನಲ್ಲಿ ಎನ್‌ಡಿಟಿವಿ ಯೊಂದಿಗೆ ಮಾತನಾಡಿದ ರೋಲಿ,


"ಪ್ಲಾಸ್ಟಿಕ್ ಇಂದು ಅಕ್ಷರಶಃ ಎಲ್ಲೆಡೆ ಹರಡಿದೆ. ಇಂದು ಹೊರಗಡೆ ಯಾವುದಾದರೂ ಆಹಾರವನ್ನು ಆರ್ಡರ್ ಮಾಡಿದಾಗ, ಅದು ಪ್ಲಾಸ್ಟಿಕ್ ಅನ್ನು ಕೂಡ ಜೊತೆಗೆ ತರುತ್ತದೆ‌. ವಿವಿಧ ಸ್ಥಳೀಯ ಆಹಾರ ಮಳಿಗೆಗಳಲ್ಲಿ‌ ಏಕ ಬಳಕೆಯ ಪ್ಲಾಸ್ಟಿಕ್ ಬಟ್ಟಲುಗಳಲ್ಲಿ ಆಹಾರವನ್ನು‌ ನೀಡಲಾಗುತ್ತದೆ. ಆದರೆ ನಾವು ಶೇಕಡವಾರು ಏಕ ಬಳಕೆಯ ಪ್ಲಾಸ್ಟಿಕ್ ಬದಲಾಗಿ ಜೈವಿಕ ಟೇಬಲ್ ವೇರ್ ಅಥವಾ ಕಟ್ಲೇರಿಗಳ‌ ಸಾಮಾನುಗಳನ್ನು ಬಳಸಬಹುದು. ಪ್ಲಾಸ್ಟಿಕ್ ಹೋಗಲಾಡಿಸುವುದರ ಕಡೆಗೆ ನಮ್ಮದು‌ ಒಂದು ಕಡೆಯ ಪ್ರಯತ್ನವಾಗಿದೆ" ಎನ್ನುತ್ತಾರೆ.