ಸಾವಿರಾರು ಲೈಂಗಿಕ ಕಾರ್ಯಕರ್ತೆಯರು ಹಾಗೂ ಅವರ ಮಕ್ಕಳ ಜೀವನ ಬದಲಿಸಿದ ಸೀಮಾ ವಾಘ್‌ಮೋಡೆ

ಬಿಲ್ ಮತ್ತು ಮೆಲಿಂದಾ ಗೇಟ್ಸ್ ಎಂಬ ಫೌಂಡೇಶನ್ ನ ಸಹಾಯಹಸ್ತದೊಂದಿಗೆ ಸೀಮಾ ವಾಘ್‌ಮೋಡೆ ಎಂಬುವವರು ತಮ್ಮ ಕಾಯಕಲ್ಪ ಎಂಬ ಸ್ವಯಂಸೇವಾ ಸಂಸ್ಥೆಯ ಮೂಲಕ ಪುಣೆಯಲ್ ಬುಧ್ವಾರ್ ಪೇಟೆಯಲ್ಲಿನ‌ ರೆಡ್ ಅಲರ್ಟ್ ಏರಿಯಾದ ಲೈಂಗಿಕ‌ ಕಾರ್ಯಕರ್ತೆಯರ ಹಾಗೂ ಅವರ ಮಕ್ಕಳಿಗೆ ವಸತಿ, ಊಟ ಹಾಗೂ ಶಿಕ್ಷಣದೊಂದಿಗೆ ಆರೋಗ್ಯ‌ ಕಾಳಜಿವಹಿಸುವ ಮೂಲಕ‌‌ ಮಾನವೀಯತೆ ಮೆರೆಯುತ್ತಿದ್ದಾರೆ.

ಸಾವಿರಾರು ಲೈಂಗಿಕ ಕಾರ್ಯಕರ್ತೆಯರು ಹಾಗೂ ಅವರ ಮಕ್ಕಳ ಜೀವನ ಬದಲಿಸಿದ ಸೀಮಾ ವಾಘ್‌ಮೋಡೆ

Monday September 30, 2019,

5 min Read

2020ನೇ ಜನವರಿಯಲ್ಲಿ, ಪ್ರಿಯಾ (ಹೆಸರು ಬದಲಿಸಲಾಗಿದೆ) ಎಂಬಾಕೆ ಪುಣೆಯಿಂದ ನೂರು ಕಿ.ಮೀ ದೂರದಲ್ಲಿರುವ ಬೋರಿ ಗ್ರಾಮದ ಪುರುಷನೊಬ್ಬನನ್ನು ವಿವಾಹವಾದರು. ಆದರೆ ಅದೇ ಕೆಲವು ವರ್ಷಗಳ ಹಿಂದೆ ಪುಣೆಯ ರೆಡ್ ಅಲರ್ಟ್ ಏರಿಯಾದಲ್ಲಿನ ವಾಣಿಜ್ಯ ಲೈಂಗಿಕ ಕಾರ್ಯಕರ್ತರನ್ನು ತುಂಬಾ ಕೀಳುಮಟ್ಟದಲ್ಲಿ‌ ನೋಡಲಾಗುತ್ತಿತ್ತು. ಅವರು ಈ ದಾರಿಯನ್ನು ಬಿಟ್ಟರೂ ಮದುವೆಯಾಗಿ ಸಂಗಾತಿಯೊಂದಿಗೆ ನೆಮ್ಮದಿ ಜೀವನ‌ ನಡೆಸುವುದು ಕನಸಾಗಿತ್ತು. ಲೈಂಗಿಕ ಶೋಷಣೆಯಿಂದ ಮುಕ್ತವಾಗಿ ನೆಮ್ಮದಿ ಜೀವನ ನಡೆಸಲು ಬಯಸಿದ‌ ಪ್ರಿಯಾ ಸಹಾಯಕ್ಕಾಗಿ ಸೀಮಾಳನ್ನು ಸಂಪರ್ಕಿಸಿದರು. ಹೀಗೆ ಲೈಂಗಿಕ ಕಾರ್ಯಕರ್ತರು ಸ್ವತಃ ತಾವೇ ತಮ್ಮ‌ ಜೀವನ ಬದಲಿಸಿಕೊಳ್ಳುವ ಹಂಬಲ‌ ಹೊಂದುವ ಹಾಗೇ ಸೀಮಾ ತಮ್ಮ‌ ಯೋಜನೆಗಳನ್ನು ರೂಪಿಸುತ್ತಿದ್ದಾರೆ.


ಇದೀಗ, ಈ ಪ್ರದೇಶದಲ್ಲಿ ಯಾವುದಾದರೂ ಮಹಿಳೆ ಈ ಅಭ್ಯಾಸದಲ್ಲಿ ತೊಡಗಿದ್ದರೇ, ಸ್ಥಳಿಯರೇ ಬಂದು ತಿಳಿಸುತ್ತಾರೆ ಹಾಗೂ ಅವರನ್ನು ಪೊಲೀಸರ ಸಹಾಯದಿಂದ ರಕ್ಷಿಸುತ್ತಾರೆ.


ಮತ್ತೋರ್ವ ಹುಡುಗಿ ಅಭಿಲಾಶ (ಹೆಸರು ಬದಲಿಸಲಾಗಿದೆ) ಎಂಬ ಹುಡುಗಿ ತನ್ನ ಬಿ.ಕಾಂ ಪದವಿಯನ್ನು ಮುಗಿಸಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನ ವಿದ್ಯಾಭ್ಯಾಸ ಮುಂದುವರೆಸಿದ್ದಾಳೆ.


ಕಾಯಕಲ್ಪದ ಮೂಲಕ ಸೀಮಾ ಈ ಇಬ್ಬರೂ ಮಹಿಳೆಯ ಜೀವನ ಸುಧಾರಿಸಿರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಭಿಲಾಶಳ ವಿದ್ಯಾಭ್ಯಾಸಕ್ಕಾಗಿ 52,000 ರೂಗಳನ್ನು ಸಂಸ್ಥೆಯ ಮೂಲಕ ನೀಡಿದ್ದರೂ, ತನ್ನ ಕಾರ್ಯ ಇಲ್ಲಿಗೆ ಮುಗಿದಿಲ್ಲವೆಂಬ ಅತೃಪ್ತಿ ಸೀಮಾರಲ್ಲಿ ಇದೆ.


1993ರಲ್ಲಿ ಸೀಮಾ, ಭಾರತದಲ್ಲಿ ರಾಜ್ಯ ಸರ್ಕಾರದ ಹೆಚ್.ಐ.ವಿ ಹಾಗೂ ಏಡ್ಸ್ ಸಂಶೋಧನ ತಂಡಕ್ಕೆ ಸೇರ್ಪಡೆಯಾದರು. ವೈರಸ್ ಹಾಗೂ ಸಿಂಡ್ರೋಮ್ ಗಳ ಬಗ್ಗೆ ಹೆಚ್ಚಿನ ಅರಿವಿಲ್ಲದ ಕಾರಣ ಲೈಂಗಿಕ ಕಾರ್ಯಕರ್ತೆಯರ ಆರೋಗ್ಯ ಪರಿಸ್ಥಿತಿಗಳನ್ನು ನಿರ್ಣಯಿಸಲು ಕಳುಹಿಸಲಾಗಿತ್ತು. ಪುಣೆಯ ಬುಧ್ವಾರ್ ಪೇಟೆಯ ರೆಡ್ ಅಲರ್ಟ್ ಏರಿಯದಲ್ಲಿ ಆರೋಗ್ಯ ತಪಾಸಣೆಯಿಂದ ಮಾತ್ರ ಪರಿಹಾರ ಸಾಧ್ಯವಿಲ್ಲ ವೆಂಬುದು ಸೀಮಾಗೆ ತಿಳಿದಿತ್ತು.


ಸೀಮಾಳಿಗೆ ಲೈಂಗಿಕ ಕಾರ್ಯಕರ್ತೆಯರು ಹಾಗೂ ಅವರ ಮಕ್ಕಳ ಜೀವನವನ್ನು ಅವರ ಹಣೆಬರಹದಂತೆ ಬಿಡಲು ಸಾಧ್ಯವಾಗಲಿಲ್ಲ.


ಅವರ ಜೀವನ ಸುಧಾರಣೆಗೆ ಸೀಮಾ ಮುಂದೆ ನಿಂತಾಗ ಅವರ ಪತಿ ಶಿರೀಶ್ ಸೀಮಾಳಿಗೆ ಸಲಹೆಯೊಂದನ್ನು ನೀಡಿದ್ದರು. “ಅವರಿಗಾಗಿ ನೀನು ನಿಜವಾಗಿಯು ಕೆಲಸ‌ ಮಾಡಬಯಸಿದ್ದರೇ ಮಾಡು‌‌ ಆದರೆ, ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಪತಿ ಹೇಳಿದ್ದರಂತೆ.


ಸೀಮಾ ವಾಘ್‌ಮೋಡೆ ರಕ್ಷಿಸಿ‌ ಸಲಹುತ್ತಿರುವ ಲೈಂಗಿಕ ಕಾರ್ಯಕರ್ತೆಯರು ಹಾಗೂ ಅವರ ಮಕ್ಕಳು

ಹೋರಾಟದ ಜೀವನಕ್ಕಾಗಿಯೇ ಜನಿಸಿದರು

ಪುಣೆಯ ಬುಧ್ವಾರ್ ಪೇಟೆಯಲ್ಲಿನ‌ ರೆಡ್ ಅಲರ್ಟ್ ಸ್ಥಳ ಕೇವಲ ಲೈಂಗಿಕ ಕಾರ್ಯಕರ್ತೆಯರಿಗೆ ಮಾತ್ರ ಮನೆಯಾಗಿಲ್ಲದೇ ಅವರ ಮಕ್ಕಳೂ ಕೂಡ ಅಲ್ಲೇ ವಾಸಿಸುವಂತಾಗಿದೆ. ಅಲ್ಲಿನ ಅನುಭವ ಹಂಚಿಕೊಳ್ಳುತ್ತಾ ಸೀಮಾ ನೆನಪಿಸಿಕೊಳ್ಳುತ್ತಾರೆ. ಒಬ್ಬ ಬಾಲಕ ತನಗೆ ಹಸಿವಾಗಿದ್ದ ಕಾರಣದಿಂದಾಗಿ ತನ್ನ ತಾಯಿಗೆ, ಇನ್ನೂ ಹೆಚ್ಚು ಗ್ರಾಹಕರನ್ನು ಕರೆದುಕೊಂಡು ಬಾ ಎಂದು ಹೇಳಿದ್ದನ್ನು ಕೇಳಿಸಿಕೊಂಡ ಸೀಮಾಳಿಗೆ, ಆ ಒಂದು ಘಟನೆ ಇಡೀ ಜೀವನವನ್ನೇ ಬದಲಿಸಿತು.


ಯಾರಿಗೂ ಬೇಡವಾದ ಜೀವನದಲ್ಲಿ ಹುಟ್ಟಿದ ಮಕ್ಕಳಿಗೆ ಏನಾದರೂ ಮಾಡಬೇಕೆಂದು ಪಟ ತೊಟ್ಟ ಸೀಮಾ, ಮಕ್ಕಳ ನಿಜವಾದ ಶುದ್ಧತೆ, ಮುಗ್ಧತನ, ಅವರ ಬಾಲ್ಯ ಹಾಗೂ ಅವರ ಮೂಲಭೂತ ಹಕ್ಕುಗಳನ್ನು ಅವರಲ್ಲಿ ಕಂಡರು.


ಇದಾದ ಒಂದು ವರ್ಷದ ನಂತರ, 1994ರಲ್ಲಿ ಬುಧವಾರ್ ಪೇಟೆಯಲ್ಲಿ ಸೀಮಾ ಕಾಯಕಲ್ಪ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಹೆಚ್ಐವಿ/ಏಡ್ಸ್ ಸೋಂಕಿತರಿಗೆ ಸ್ಥಾಪಿಸಿದ ಮೊದಲ ಎನ್‌ಜಿಓ ಆಗಿತ್ತಲ್ಲದೇ, ಲೈಂಗಿಕ ಕಾರ್ಯಕರ್ತೆಯರ ಮಕ್ಕಳಿಗೂ ಪುನರ್ವಸತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಮನೆಯಿಂದ ದೂರವಿದ್ದ ಸ್ವರ್ಗ

ಎರಡು ದಶಕಗಳ‌ ನಂತರ ಸುಮಾರು 10,000ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ಹಾಗೂ ಅವರ ಮಕ್ಕಳ ಮೇಲೆ ಪ್ರಭಾವ ಬೀರಿದರು. ಸ್ಥಳೀಯರು ಸೀಮಾಳನ್ನು ಮೇಡಮ್, ದೀದಿ, ಮಮ್ಮಾ, ಅಚಿ(ಅಜ್ಜಿ) ಎಂದು‌ ಪ್ರೀತಿಯಿಂದ ಕರೆಯುತ್ತಾರೆ.


2006ನೇ ಇಸವಿಯು ಸೀಮಾಳಿಗೆ ಹೊಸ ಪ್ರಯತ್ನದ ಕಾಲವಾಗಿತ್ತು. ಲೈಂಗಿಕ ಕಳ್ಳಸಾಗಾಣಿಕೆ ಉದ್ಯಮವು ಉತ್ತುಂಗ ಮಟ್ಟದಲ್ಲಿತ್ತು. ತಾಯಿಯು ಲೈಂಗಿಕ ಕಾರ್ಯದಲ್ಲಿ ತೊಡಗಿರುವುದನ್ನು ನೋಡುವುದನ್ನು ಬಿಟ್ಟು ಮಕ್ಕಳಿಗೆ ಬೇರೆ ದಾರಿ ಇಲ್ಲ ಎಂದು ತಿಳಿದ ನಂತರ, ಕಾಯಕಲ್ಪ ಸಂಸ್ಥೆಯು ಪುಣೆಯಲ್ಲಿನ ವೈಎಂಸಿಎ ಯೊಂದಿಗೆ ಒಪ್ಪಂದ ಮಾಡಿಕೊಂಡು ಮಕ್ಕಳಿಗೆ ಬೆಳಗ್ಗೆಯಿಂದ ರಾತ್ರಿಯವರೆಗೂ ಆರೈಕೆ ಮಾಡುವ ಕೇಂದ್ರವೊಂದನ್ನು ತೆರೆಯಿತು.


ಮುಂದುವರೆದಂತೆ, ಆ ಮಕ್ಕಳನ್ನು ಈ ಜಿಲ್ಲೆಯಿಂದಲೇ ದೂರವಿರಿಸಲು ಸೀಮಾ ಹಾಗೂ ಅವರ ಪತಿ ನಿರ್ಧರಿಸಿದರು. 2015ರಲ್ಲಿ ವಾಘ್‌ಮೋಡೆ ಕುಟುಂಬದ ಅಳಿಯಂದಿರು ಬೋರಿ ಗ್ರಾಮದಲ್ಲಿದ್ದ ಒಂದು ತುಂಡು ಭೂಮಿಯನ್ನು ದಾನ ಮಾಡಿದರು. ಸ್ಕಾಟಿಷ್ ಚಾರಿಟಿಯ ಸಂಘಟನೆಯಾದ ದಿ ಫ್ರೀ ಟು ಲೀವ್ ಟ್ರಸ್ಟ್ ನ ಧನಸಹಾಯದಿಂದ 6,500 ಚದರ ಅಡಿ ವಿಸ್ತೀರ್ಣದ ಮಕ್ಕಳ ಅಭಿವೃದ್ಧಿ ಕೇಂದ್ರವನ್ನು ನಿರ್ಮಿಸಲಾಯಿತು.


ಬೋರಿ ಗ್ರಾಮದಲ್ಲಿ ರೆವರೆಂಡ್ ಹರಿಭೌ ವಾಘ್‌ಮೋಡೆ ಪಾಟೀಲ್ ಪ್ರತಿಷ್ಠಾನ


"ಇದು ಸ್ವರ್ಗದಂತಿದೆ ಮತ್ತು ಇದನ್ನೇ ನಾನು ಅವರಿಗಾಗಿ ನಿರ್ಮಿಸಲುವ ಬಯಸಿದ್ದೇನು" ಎಂದು ಸೀಮಾ ಯುವರ್ ಸ್ಟೋರಿ ಗೆ ತಿಳಿಸಿದರು.


ಕಳೆದ ವರ್ಷ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಸ್ಥಳವಿರುವ ಮತ್ತೊಂದು ಕಟ್ಟಡವನ್ನು ನಿರ್ಮಿಸಲಾಯಿತು. ಇನ್ನೂ ಸಾಕಷ್ಟು ಭೂಮಿಯಿದೆ ಆದರೆ ಆಟದ ಮೈದಾನಗಳು, ನೀರಿನ ಟ್ಯಾಂಕ್‌ಗಳು ಮತ್ತು ಇತರ ಹೆಚ್ಚಿನ ಸೌಲಭ್ಯಗಳನ್ನು ಸೃಷ್ಟಿಸಲು ಸಂಸ್ಥೆಯಲ್ಲಿ ಹಣದ ಕೊರತೆಯಿದೆ ಎಂದು ಸೀಮಾ ಹೇಳಿದರು.

ಅತೀ ದೊಡ್ಡ ಕುಟುಂಬ

ಅಭಿವೃದ್ಧಿ ಕೇಂದ್ರಕ್ಕೆ ಸೀಮಾಳ ಮಾವನ ಹೆಸರನ್ನು ಇಡಲಾಗಿದ್ದು, ರೆವರೆಂಡ್ ಹರಿಭೌ ವಾಘಮೋಡ್ ಪಾಟೀಲ್ ಪ್ರತಿಷ್ಠಾನ್ ಎಂದು ಕರೆಯಲಾಗುತ್ತದೆ. ಸೀಮಾ ಪ್ರಕಾರ, ಇಲ್ಲಿ ಎಲ್ಲರಿಗೂ ಅವಕಾಶವಿದ್ದು, ಈ ಪ್ರದೇಶದ ಮಕ್ಕಳು ಮತ್ತು ಸಾಮಾನ್ಯವಾಗಿ ಮಕ್ಕಳನ್ನು ನೋಡಿಕೊಳ್ಳುವ ಲೈಂಗಿಕ ಕಾರ್ಯಕರ್ತರನ್ನು ರಕ್ಷಿಸಿದ್ದಾರೆ.


"ನಾನು ನಿಮಗಾಗಿ ಇದ್ದೇನೆ ಮತ್ತು ಎಲ್ಲ ರೀತಿಯಿಂದಲೂ ನೀವು ಇತರರಿಗಾಗಿ ಇರಬೇಕು" ಎಂದು ಸೀಮಾ ತಮ್ಮ ಸಂಸ್ಥೆಯಲ್ಲಿರುವವರಿಗೆ ಸಲಹೆ ನೀಡುತ್ತಾರೆ. ಒಂದು ಮುಂಜಾನೆಯಲ್ಲಿ ಯಾರೋ ಒಬ್ಬರ ಶಿಶುವನ್ನು ಸಂಸ್ಥೆಯ ಮೆಟ್ಟಿಲುಗಳ ಮೇಲೆ ಬಿಟ್ಟು ಹೋಗಲಾಗಿತ್ತು. ಅವಳನ್ನು ಮನೆಗೆ ಸ್ವಾಗತಿಸುತ್ತಾ, ಅವಳಿಗೆ ಏಂಜಲ್ ಎಂದು ಹೆಸರಿಡಲಾಯಿತು, ಇದೀಗ ಆ ಮಗುವಿಗೆ ಸುಮಾರು ಎರಡೂವರೆ ವರ್ಷ.

ಸೂಕ್ಷಾಭಿರುಚಿಯ ಭಿಕ್ಷುಕಿ

ಸೀಮಾ (63) ತನ್ನನ್ನು ತಾನು ಸೂಕ್ಷಾಭಿರುಚಿಯ ಭಿಕ್ಷುಕಿ ಎಂದು ಕರೆದುಕೊಳ್ಳುತ್ತಾರೆ. ಯಾಕೆಂದರೆ ಹಣವನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಕ್ಕೆ ಇನ್ನೊಬ್ಬರ ಕೇಳುವುದು ಸರಿಯೆಂದು ನಂಬಿರುವ ಸೀಮಾ "ಇದಕ್ಕಾಗಿ ನಾನು ಯಾಕೆ ತಪ್ಪಿತಸ್ಥರೆಂದು ಭಾವಿಸಬೇಕು?" ಎಂದು ಪ್ರಶ್ನಿಸುತ್ತಾರೆ. ತನ್ನ ಎನ್‌ಜಿಒಗಳನ್ನು ಮುನ್ನಡೆಸಲು ಸಿಗುವ ಯಾವುದೇ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ ಹಾಗೂ ಅವರ ಸಹಾಯವನ್ನು ಪಡೆದ ಪ್ರತಿಯೊಬ್ಬರಿಗೂ ಇದು ಚೆನ್ನಾಗಿ ತಿಳಿದಿದೆ.


ಸೀಮಾ, ಏಪ್ರಿಲ್ 7, 2017 ರಂದು ಕಾಯಕಲ್ಪದ ಕಾರಿನಿಂದ ಇಳಿದಾಗ, ಬುದ್ವಾರ್ ಪೇಟೆನಲ್ಲಿರುವ ಎನ್‌ಜಿಒ ಕಚೇರಿಯು ತುಂಬಿಹೋಗಿರುವುದನ್ನು ಕಂಡು ನಿಬ್ಬೆರಗಾದರು. ಅಲ್ಲಿ‌ನ ಜನರು ಯಾವುದೋ ಅಸಾಮಾನ್ಯ ಸಂಭ್ರಮಾಚರಣೆಯ ಮನಸ್ಥಿತಿಯಲ್ಲಿದ್ದರು. ಏಕೆಂದರೆ ಅಂದು ಸೀಮಾ ಅವರ 60 ನೇ ಹುಟ್ಟುಹಬ್ಬವನ್ನು ಆಚರಿಸಲು ಹೃದಯದ ಆಕಾರಗಳಲ್ಲಿ ಹೂವಿನ ದಳಗಳಿಂದ ಅಲಂಕರಿಸಲಾಗಿತ್ತು.


ಸೀಮಾಗೆ ಉಡುಗೊರೆ ನೀಡಲು ವಾಣಿಜ್ಯ ಲೈಂಗಿಕ ಕಾರ್ಯಕರ್ತರು 60,000 ರೂಗಳನ್ನು ಕೂಡಿಸಿದ್ದರು.


“ಅದಕ್ಕೆ ನಾನು 40,000 ರೂ. ಹೆಚ್ಚು ಸಂಗ್ರಹಿಸಿ ಹಸುವನ್ನು ಖರೀದಿಸಿದೆ ಇದರಿಂದ ನನ್ನ ಮಕ್ಕಳು ತಾಜಾ ಹಾಲನ್ನು ಕುಡಿಯುತ್ತಿದ್ದಾರೆ. ಹಾಗೂ ನಾವು ಈಗ ನಮ್ಮ ಜಮೀನಿನಲ್ಲಿ ಬಾತುಕೋಳಿಗಳು, ಮೊಲಗಳು ಮತ್ತು ಹಸುವನ್ನು ಸಾಕಿದ್ದೇವೆ” ಎನ್ನುತ್ತಾರೆ ಸೀಮಾ


2004 ರಲ್ಲಿ, ಕಾಯಕಲ್ಪಾಗೆ ಬಿಲ್ ಮತ್ತು ಮೆಲಿಂದಾ ಗೇಟ್ಸ್ ಫೌಂಡೇಶನ್‌ನಿಂದ ಆರು ವರ್ಷಗಳ ಕಾಲ ಧನಸಹಾಯ ನೀಡಲಾಯಿತು ನಂತರ 2008 ರಲ್ಲಿ, ಗೇಟ್ಸ್ ಕುಟುಂಬವು ಕಾಯಕಲ್ಪಕ್ಕೆ ಭೇಟಿ ನೀಡಿತು.

ಮುನ್ನುಗ್ಗುವುದರಲ್ಲಿ ಪ್ರತಿಫಲವಿದೆ

ಸರ್ಕಾರ ಈ ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರನ್ನು ಹೆಚ್ಚು ನಿರ್ಲಕ್ಷಿಸುತ್ತಿದೆ. ಅಲ್ಲದೇ ಸರ್ಕಾರ ಸೀಮಾರವರು ಮಹಿಳೆಯರ ಕುಂದುಕೊರತೆಗಳನ್ನು ಪರಿಹರಿಸುವಲ್ಲಿ ಯಾವುದೇ ಧನಸಹಾಯವನ್ನೂ‌ ಮಾಡಿಲ್ಲ.


ಕಾಂಡೋಮ್ ಬಳಕೆಯ ಪ್ರಾಮುಖ್ಯತೆಯನ್ನು ತಿಳಿಸುವುದು ಹಾಗೂ ಎಚ್ಐವಿ/ಏಡ್ಸ್ ರೋಗಿಗಳಿಗೆ ಸ್ಥಿರವಾದ ಚಿಕಿತ್ಸೆಯನ್ನು ನೀಡುವುದನ್ನಾದರೂ ಮಾಡಬೇಕು ಏಕೆಂದರೆ 5,000 ರೂ ವೆಚ್ಚದ ಮಾಸಿಕ ಚಿಕಿತ್ಸೆ ಕೆಲವೊಮ್ಮೆ ಲಭ್ಯವಿರುವುದಿಲ್ಲ ಹಾಗಾಗಿ ಅವರಿಗೆ ಬೇರೆ ಪರ್ಯಾಯ ಮಾರ್ಗಗಳಿಲ್ಲ. ಪರಿಣಾಮವಾಗಿ, ರೋಗಿಯ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಸೀಮಾ ಹೇಳುತ್ತಾರೆ.


ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಔಷಧಿಗೆ ತಕ್ಕಂತೆ ರೋಗಿಯು ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ತಮ್ಮನ್ನು ಆರೈಕೆ ಮಾಡಿಕೊಳ್ಳಬೇಕು. ಇದಕ್ಕಾಗಿಯೇ, ಲೈಂಗಿಕ ಕಾರ್ಯಕರ್ತರು ಎಂಟು ವರ್ಷಗಳ ಕಾಲ ಕಾಯಕಲ್ಪ ಅಡಿಯಲ್ಲಿ ಸಮುದಾಯ ಅಡಿಗೆ (ಕಮ್ಯೂನಿಟಿ ಕಿಚೆನ್) ಯನ್ನು ನಡೆಸುತ್ತಿದ್ದರು ಹಾಗೂ ಬಂದ‌ ಅನುದಾನವನ್ನು ಅವರು ಆಹಾರ‌ಪೂರೈಕೆಗಾಗಿ ಬಳಸಿದರು. ನಂತರ, ಸಂಸ್ಥೆ ಮಕ್ಕಳಿಗೂ ಆಹಾರವನ್ನು ವ್ಯವಸ್ಥೆ ಮಾಡಿತು ಮತ್ತು ಅವರು ಶಾಲೆಗೆ ಹಾಜರಾಗುವಂತೆ ಮನವರಿಕೆ ಮಾಡಿತು.


ಈ ಹಾದಿ ಸೀಮಾರಿಗೆ ಸುಲಭವಾದ ದಾರಿಯಾಗಿರಲಿಲ್ಲ. ಈ ಬಗ್ಗೆ ಜನರು ಸಂಶಯ ವ್ಯಕ್ತಪಡಿಸಿದರು ಹಾಗೂ ಅವರ ಉದ್ದೇಶದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು. ಆದರೆ ಈಗಾಗಲೆ ಅವರು‌‌ ಈ ಕಾರಣಕ್ಕಾಗಿ ತುಂಬಾ ಹೂಡಿಕೆ ಮಾಡಿದ್ದರು ಹಾಗಾಗಿ ಈಗಲಾದರೂ ಅವರು ತಮಗಾಗಿ ಸಮಯ ತೆಗೆದುಕೊಳ್ಳಬೇಕು ಎಂದು ಸಂಸ್ಥೆಯಲ್ಲಿರುವವರು ಭಾವಿಸಿದರು.


ಸೀಮಾಳ‌‌ ಹಿರಿಯ ಮಗಳು ಮದುವೆಯಾದಾಗ, ಅವಳು ತನ್ನ ತಾಯಿಯೊಂದಿಗೆ ಸಾಕಷ್ಟು ಸಮಯ ಬೆರೆಯಲಾಗಲಿಲ್ಲ ಆದರೇ, ತನ್ನ ಕಿರಿಯ ಮಗಳಿಗೆ ಅದೇ ರೀತಿ ಮಾಡಬಾರದು ಎಂದು ಸೀಮಾ‌ ಹಿರಿಯ ಮಗಳು ಕೇಳಿಕೊಂಡಳು.

ಆದರೆ ಉದಕ್ಕೆ ಉತ್ತರಿಸಿದ ಸೀಮಾ


"ಅಗತ್ಯವಿರುವವರಿಗೆ ಸಹಾಯ ಮಾಡಲು, ತೆರೆದ ಹೃದಯದಿಂದ ಮುಂದೆ ಬರುವುದರಲ್ಲಿ ಪ್ರತಿಫಲವಿದೆ" ಎಂದರು.