ಖ್ಯಾತ ಕ್ರೀಡಾಪಟುಗಳಾದ ಮೇರಿ ಕೋಮ್ ರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ ಈ 5 ಕ್ರೀಡಾಪಟುಗಳು ಸಮಾಜಕ್ಕೆ ತಮ್ಮದೆ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ

ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ, ಮೇರಿ ಕೋಮ್ ಮತ್ತು ಇನ್ನೂ ಹೆಚ್ಚಿನ ಕ್ರೀಡಾಪಟುಗಳು ನೀವು ಸಮಾಜಕ್ಕೆ ಕೊಡುಗೆ ನೀಡಲು ಮನಸ್ಸು ಮಾಡಿದರೆ, ಸರಿಯಾದ ದಿಕ್ಕಿನಲ್ಲಿ ಬದಲಾವಣೆಯನ್ನು ತರಲು ಬದ್ದರಾಗಿರುತ್ತೀರಿ ಎಂದು ತೋರಿಸಿದ್ದಾರೆ.

ಖ್ಯಾತ ಕ್ರೀಡಾಪಟುಗಳಾದ ಮೇರಿ ಕೋಮ್ ರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ ಈ 5 ಕ್ರೀಡಾಪಟುಗಳು ಸಮಾಜಕ್ಕೆ ತಮ್ಮದೆ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ

Tuesday September 10, 2019,

4 min Read

ಕೊನೆಯ ಬಾರಿಗೆ ಸಮಾಜಕ್ಕೆ ನೀವು ಏನು ಕೊಡುಗೆ ನೀಡಿದ್ದಿರಿ ಅಥವಾ ಪರಿಸರಕ್ಕೆ ಏನು ಸಹಾಯ ಮಾಡೀದ್ದಿರಿ? ಯಾಕಂದ್ರೆ, ಸಣ್ಣ ಅಥವಾ ದೊಡ್ಡ ಯಾವೊಂದು ಸಹಾಯವು ಸಮಾಜದಲ್ಲಿ ದೊಡ್ದ ಬದಲಾವಣೆಯನ್ನು ತರಬಲ್ಲದು. ಉದಾಹರಣೆಗೆ ನಮ್ಮ ದೇಶದ ಕೆಲವು ಹೆಸರಾಂತ ಆಟಗಾರರು ಮತ್ತು ಆಟಗಾರ್ತಿಯರು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಬದಲಾವಣೆಯನ್ನು ತರುವ ಉದ್ದೇಶವನ್ನು ಹೊಂದಿದ್ದಾರೆ.


ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ರವರು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ನೊಂದಿಗೆ ಜೊತೆಗೂಡಿದ್ದು, ವನ್ಯಜೀವಿಗಳನ್ನು ರಕ್ಷಿಸುವ ಮತ್ತು ಪ್ರಾಣಿಗಳೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಮಹತ್ವದ ಬಗ್ಗೆ ಶಾಲೆಗಳ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಖ್ಯಾತ ಕ್ರಿಕೆಟಿಗ ಮತ್ತು ಭಾರತ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ 15 ರೇಸ್ಕ್ಯೂಡ್ ನಾಯಿಮರಿಗಳನ್ನು ದತ್ತು ಪಡೆದಿದ್ದಾರೆ.


ಸಮಾಜದಲ್ಲಿ ಸಕಾರಾತ್ಮಕ ಬಾದಾಲಾವಣೆಯನ್ನು ತರಲು ತಮ್ಮ ಕ್ಷೇತ್ರದಲ್ಲಿ ತೊರುವ ತೀಕ್ಷ್ಣತೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ 5 ಕ್ರೀಡಾಪಟುಗಳು:


ಅನಿಲ್ ಕುಂಬ್ಳೆ

ಮಾಜಿ ಕೋಚ್, ಕಾಮೆಂಟೆಟರ್ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿ ಪ್ರಸಿದ್ಧರಾಗಿರುವ ಅನಿಲ್ ಕುಂಬ್ಳೆಯವರನ್ನು ಪ್ರೀತಿಯ ಕ್ರಿಕೆಟಿಗರು ಮತ್ತು ಅವರ ಹತ್ತಿರದವರು ಹೆಚ್ಚಾಗಿ 'ಜಂಬೋ' ಎಂದು ಕರೆಯುತ್ತಾರೆ ಏಕೆಂದರೆ ಅವರಿಗೆ ಪ್ರಾಣಿಗಳ ಮೇಲಿರುವ ಪ್ರೀತಿಯಿಂದಾಗಿ!


ಕುಂಬ್ಳೆಯವರು ವನ್ಯಜೀವಿ ಸಂರಕ್ಷಣಾಕಾರರು, ಛಾಯಾಗ್ರಾಹಕರು ಮತ್ತು ವಾಯ್ಸ್ ಆಫ್ ದ ಏಷ್ಯನ್ ಏಲಿಪೆಂಟ್ ರಾಗಿದ್ದಾರೆ. 2010 ರಲ್ಲಿ, ಅವರು ತಮ್ಮ ಕುಂಬ್ಳೆ ಪ್ರತಿಷ್ಠಾನದ ಅಡಿಯಲ್ಲಿ ಜಂಬೊ ಫಂಡ್ ನ್ನು ಸ್ಥಾಪಿಸಿದರು, ಇದು ನಮ್ಮ ಭಾರತೀಯ ವನ್ಯಜೀವಿಗಳನ್ನು ಮತ್ತು ಅವುಗಳು ವಾಸಿಸುವ ಸ್ಥಳಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ವನ್ಯಜೀವಿಗಳ ಸಂರಕ್ಷಣೆಗೆ ಸಂಬಂಧಿಸಿದ ಸಂಶೋಧನಾ ಅಧ್ಯಯನಗಳು ಮತ್ತು ಚಟುವಟಿಕೆಗಳನ್ನು ಬೆಂಬಲಿಸುವುದರ ಹೊರತಾಗಿ ಈ ನಿಧಿಯು ಅರಣ್ಯ ಸಿಬ್ಬಂದಿಗೆ ಮೂಲಭೂತ ಸೌಕರ್ಯಗಳು, ಆರೋಗ್ಯರಕ್ಷಣೆ ಮತ್ತು ಶಿಕ್ಷಣವನ್ನು ಒದಗಿಸುವಲ್ಲಿ ಶ್ರಮಿಸುತ್ತದೆ.


ಇದಲ್ಲದೆ 2009 ರಲ್ಲಿ, ಕರ್ನಾಟಕ ಸರ್ಕಾರವು ಅವರ ಕಾರ್ಯಗಳನ್ನು ಮೆಚ್ಚಿಕೊಂಡಿತು ಮತ್ತು ಅವರನ್ನು ವನ್ಯಜೀವಿಗಳ ರಾಜ್ಯ ಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಿಸಿತು. ಕುಂಬ್ಳೆಯವರ ಅಧಿಕಾರಾವಧಿಯಲ್ಲಿ ರಾಜ್ಯದ ವನ್ಯಜೀವಿ ಸಂರಕ್ಷಿತ ಪ್ರದೇಶವು ಶೇಕಡಾ 3.8 ರಿಂದ 5.2 ಕ್ಕೆ ಏರಿತು, ಭಾರತದಲ್ಲಿ ತನ್ನ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸಿದ ಏಕೈಕ ರಾಜ್ಯ ಕರ್ನಾಟಕವಾಗಿದೆ.


ಹಿಂದಿನ ಸಂವಾದವೊಂದರಲ್ಲಿ ಯುವರ್ ಸ್ಟೋರಿಗೆ, ಅನಿಲ್ ಕುಂಬ್ಳೆ ಹೀಗೆ ಹೇಳಿದ್ದರು,


“ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷನಾಗಿದ್ದ ಅವಧಿಯಲ್ಲಿ, ಕ್ರಿಕೆಟಿಗನಾಗಿ ಬಂದ ಮನ್ನಣೆ ಮತ್ತು ಗೌರವವು ಕಾಡುಗಳ ಸಂರಕ್ಷಣೆ ಮತ್ತು ರಕ್ಷಣೆಯ ಪ್ರಯೋಜನಗಳನ್ನು ಹೆಚ್ಚಿಸಲು ಸಹಕಾರಿಯಾಯಿತು. ಎನ್‌ಜಿಒ ಸ್ಥಾಪಿಸಲು ಬಯಸುವವರು ಖಂಡಿತವಾಗಿಯೂ ಅವರ ಕನಸುಗಳನ್ನು ಹಿಂಬಾಲಿಸಬೇಕು. ಭಾರತವು ಕೆಲವು ನ್ಯಾಯಯುತವಾದ ಸಮಸ್ಯೆಗಳನ್ನು ಹೊಂದಿರುವ ದೊಡ್ಡ ದೇಶವಾಗಿರುವುದರಿಂದ, ಪ್ರತಿ ಸಣ್ಣ ಹೆಜ್ಜೆಯೂ ಅದ್ಭುತ ಚಿಂತನೆಯಾಗಿದೆ. ಆದ್ದರಿಂದ ಒಬ್ಬ ವ್ಯಕ್ತಿಯು ಇನ್ನೊಂದು ಜೀವಕೆ ಸಹಾಯಕರಿಯಾಗಿರುವಾಗ ಪ್ರಶಂಸಿಸಲ್ಪಡಬೇಕು ಮತ್ತು ಪ್ರೋತ್ಸಾಹಿಸಬೇಕು.”


ಕ್ರಿಕೆಟಿಗ ಅನಿಲ್ ಕುಂಬ್ಳೆ


ವಿರಾಟ್ ಕೊಹ್ಲಿ

ಪ್ರಪಂಚದಾದ್ಯಂತದ ಹೆಸರು ಮಾಡಿರುವ ಪ್ರತಿಭಾವಂತ ಪ್ರಖ್ಯಾತ ಕ್ರಿಕೆಟಿಗ, ಭಾರತೀಯ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚು ತಿಳಿದಿರದ ಸಂಗತಿಯೆಂದರೆ ಪ್ರಾಣಿಗಳ ಮೇಲಿನ ಅವರ ಪ್ರೀತಿ. ವಿರಾಟ್ ರವರು ಸಹ ಪ್ರಾಣಿಗಳ ಮೇಲಿನ ಕಾಳಜಿಯನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಅವರು ಬೆಂಗಳೂರಿನ ಚಾರ್ಲಿ’ಸ್ ಅನಿಮಲ್ ರೇಸ್ಕ್ಯೂಕೇಂದ್ರಕ್ಕೆ (ಕೇರ್ರ್) ಭೇಟಿ ನೀಡಿ ಅಲ್ಲಿ 15 ರೇಸ್ಕ್ಯೂ ನಾಯಿಗಳನ್ನು ದತ್ತು ಪಡೆದಾಗ ಇದು ಸ್ಪಷ್ಟವಾಗಿದೆ.


“ರೆಸ್ಕ್ಯೂಡ”, ವಿರಾಟ್ ಕೊಹ್ಲಿ ಅವರ ನೆಚ್ಚಿನ ತಳಿ ಎಂದು ಹೇಳುತ್ತಾರೆ.


ಈ ನಾಯಿಗಳ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿ ತೆಗೆದುಕೊಳ್ಳುತ್ತಾರೆ ಅವುಗಳಲ್ಲಿ ಕೆಲವು ಕುರುಡು, ಪ್ಯಾರಾಪ್ಲೆಜಿಕ್ ಮತ್ತು ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾದ ನಾಯಿಗಳಿವೆ. ಅವರು ಜನರಿಗೆ ನೀಡುವ ಮುಖ್ಯ ಸಂದೇಶವೆಂದರೆ 'ಅಡಾಪ್ಟ್, ಡೋಂಟ್ ಶಾಪ್ (ದತ್ತು ಪಡೆಯಿರಿ, ಖರೀದಿಸಬೇಡಿ)'.


ಕ್ರಿಕೆಟಿಗ ವಿರಾಟ್ ಕೊಹ್ಲಿ (ಮೂಲ: ಮೈನೆಷನ್.ಕಾಮ್)


ಅನಿಷಾ ಪಡುಕೋಣೆ

ಭಾರತೀಯ ಗಾಲ್ಫ್ ಆಟಗಾರ್ತಿ ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ದೀಪಿಕಾ ಪಡುಕೋಣೆಯವರ ತಂಗಿಯಾದ ಅನಿಷಾ ಪಡುಕೋಣೆ ಅವರು ಲೀವ್, ಲವ್, ಲಾಫ್ ಫೌಂಡೇಶನ್ (ಟಿಎಲ್‌ಎಲ್‌ಎಲ್ಎಫ್) ಮೂಲಕ ಭಾರತದಲ್ಲಿ ಮಾನಸಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.


2015 ರಲ್ಲಿ ದೀಪಿಕಾ ಪಡುಕೋಣೆ ಅವರು ಸ್ಥಾಪಿಸಿದ, ಟಿಎಲ್‌ಎಲ್‌ಎಲ್ಎಫ್ ಒಂದು ವೇದಿಕೆಯಾಗಿದ್ದು, ಇಲ್ಲಿ ನೀವು ನಿಮಗಾಗಿ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ಸಹಾಯವನ್ನು ಪಡೆಯಬಹುದು, ಮಾನಸಿಕ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಸಮಗ್ರ ಜ್ಞಾನವನ್ನು ಪಡೆಯಬಹುದು, ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ನಿಮ್ಮ ಅನುಭವಗಳ ಕತೆಗಳನ್ನು ಅವರಿಗೆ ತಿಳಿಸುವುದರಿಂದ ನೀವು ಒಬ್ಬಂಟಿಯಾಗಿಲ್ಲ ಎಂಬುದಕ್ಕೆ ಸಹಾಯ ಮಾಡುತ್ತದೆ.


ಸಹೋದರಿ ದೀಪಿಕಾ ಪಡುಕೋಣೆ (ಎಡ) ಅವರೊಂದಿಗೆ ಅನಿಷಾ ಪಡುಕೋಣೆ (ಬಲ)

ಮೂಲ: ಸ್ಪಾಟ್‌ಬೈ.ಕಾಮ್

ಗೌತಮ್ ಗಂಭೀರ್

ಮಾಜಿ ಕ್ರಿಕೆಟಿಗ್ ಗೌತಮ್ ಗಂಭೀರ್ ಅವರನ್ನು ಭಾರತದ ಅತ್ಯಂತ ನಂಬಿಕಸ್ಥ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ನೆನಪಿಸಿಕೊಳ್ಳಬಹುದು ಆದರೆ ಅವರು ಜೀವನದ ಇತರ ಕ್ಷೇತ್ರಗಳಲ್ಲೂ ಅಷ್ಟೇ ಪ್ರತಿಭಾವಂತರು ಮತ್ತು ನುರಿತವರಾಗಿದ್ದಾರೆ. ಈ ವರ್ಷದಿಂದ ಲೋಕಸಭಾ ಸದಸ್ಯರಾಗಿರುವ ಗಂಭೀರ್ ತಮ್ಮ ರಾಜಕೀಯ ಪ್ರಯತ್ನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕೆಂದು ಆಶಿಸಿದ್ದಾರೆ.


ಗೌತಮ್ ಗಂಭೀರ್ ರವರು ಗೌತಮ್ ಗಂಭೀರ್ ಫೌಂಡೇಶನ್ ಅನ್ನು 2017 ರಲ್ಲಿ ಪ್ರಾರಂಭಿಸಿದರು, ಇದು ಹುತಾತ್ಮ ಯೋಧರ ಮಕ್ಕಳ ಜೊತೆ ಆಘಾತದ ನಂತರ ಸಮಾಲೋಚನೆ ನಡೆಸುವ ಗುರಿ ಹೊಂದಿದೆ. ಈ ಮಕ್ಕಳಿಗೆ ಶಿಕ್ಷಣದ ಶೇಕಡಾ 100 ರಷ್ಟು ಹಣವನ್ನು ಸಹ ಫೌಂಡೇಶನ್ ಒದಗಿಸುತ್ತದೆ.


ಛತ್ತೀಸ್ ಗಡ್ ದಲ್ಲಿ ಮಾವೋವಾದಿ ಹೊಂಚುದಾಳಿಯಲ್ಲಿ ಇಬ್ಬರು ಸಿಆರ್‌ಪಿಎಫ್ ಯೋಧರನ್ನು ಕೊಂದುದರ ಬಗ್ಗೆ ಗೊತ್ತಾದಾಗ ಗೌತಮ್ ಗಂಭೀರ್ ರವರು ಫೌಂಡೇಶನ್ ಪ್ರಾರಂಭಿಸಿದರು. ಈ ಸೈನಿಕರ ಹೆಣ್ಣುಮಕ್ಕಳ ಹೃದಯ ವಿದ್ರಾವಕ ಚಿತ್ರಗಳನ್ನು ನೋಡಿದ ಗಂಭೀರ್ ಹುತಾತ್ಮರ ಮಕ್ಕಳನ್ನು ಬೆಂಬಲಿಸಲು ಏನು ಬೇಕಾದರೂ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.


ಇದಲ್ಲದೆ, ಅವರು ಸಾಮಾನ್ಯ ಹಕ್ಕುಗಳಿಂದ ವಂಚಿತರಾಗಿರುವ ಹುಡುಗಿಯರಿಗಾಗಿ ಸಹ ಕೆಲಸ ಮಾಡುತ್ತಾರೆ. ಪೋಷಣೆ, ಆರೋಗ್ಯ ಮತ್ತು ನೈರ್ಮಲ್ಯದ ಮಹತ್ವವನ್ನು ಅವರಿಗೆ ಕಲಿಸುತ್ತಾರೆ, ಇದು ಬೆಳೆಯುತ್ತಿರುವ ಯಾವುದೇ ಮಗುವಿಗೆ ಅವಶ್ಯಕವೆಂದು ಅವರು ಭಾವಿಸುತ್ತಾರೆ. ಇದಲ್ಲದೆ ಮಕ್ಕಳು ಶಿಕ್ಷಣವನ್ನು ತ್ಯಜಿಸದಂತೆ ಮುಂದುವರಿಸಲು ಸಹ ಪ್ರೇರೇಪಿಸುತ್ತಾರೆ. ಹೆಚ್ಚುವರಿಯಾಗಿ, ಗೌತಮ್ ಗಂಭೀರ್ ಫೌಂಡೇಶನ್ ಭಾರತದಲ್ಲಿ ಹೆಚ್ಚಿನ ಮರಗಳನ್ನು ನೆಡುವ ಮೂಲಕ ವಾಯುಮಾಲಿನ್ಯವನ್ನು ನಿಗ್ರಹಿಸುವ ಗುರಿಯನ್ನು ಹೊಂದಿದೆ.


ಕ್ರಿಕೆಟಿಗ ಗೌತಮ್ ಗಂಭೀರ್

ಮೂಲ: ಮೆನ್ಸಎಕ್ಸ್ ಪಿ.ಕಾಮ್

ಮೇರಿ ಕೋಮ್

ಸೋಲಿಲ್ಲದೆ ಐದು ಬಾರಿ ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಚಾಂಪಿಯನ್ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ವಿಜೇತರಾದ ಮೇರಿ ಕೋಮ್ ಹೃದಯದಿಂದ ಸಂಪೂರ್ಣ ಪ್ರಾಣಿ ಪ್ರೇಮಿಯಾಗಿದ್ದು. ಯಾವುದೇ ಪ್ರಾಣಿಗಳಿಗೆ ಹಾನಿಯಾಗದಂತೆ ಖಚಿತಪಡಿಸಿಕೊಳ್ಳಲು ಅವರು ಪೆಟಾವನ್ನು ಬೆಂಬಲಿಸುತ್ತಾರೆ ಮತ್ತು ಅವುಗಳ ಪರಿಸರ ಮತ್ತು ನೈಸರ್ಗಿಕ ವಾಸಸ್ಥಾನಗಳ ಹಕ್ಕನ್ನು ಹೊಂದಿದ್ದಾರೆ.


ಈ ಹಿಂದೆ ಮೇರಿ ಕೋಮ್ ಅವರು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಭಾರತದ ಶಿಕ್ಷಣ ಮಂತ್ರಿಗಳಿಗೆ ಪತ್ರ ಬರೆದಿದ್ದರು, ಪೆಟಾದ ಸಹಾನುಭೂತಿಯ ನಾಗರಿಕ ಮಾನವೀಯ ಶಿಕ್ಷಣ ಕಾರ್ಯಕ್ರಮವನ್ನು ತಮ್ಮ ಅಧಿಕೃತ ಶಾಲಾ ಪಠ್ಯಕ್ರಮದಲ್ಲಿ ಸೇರಿಸುವಂತೆ ಕೇಳಿಕೊಂಡಿದ್ದರು.


ಈ ಕಾರ್ಯಕ್ರಮವು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಪ್ರಾಣಿಗಳನ್ನು ಗೌರವಿಸಲು ಕಲಿಸುವುದಲ್ಲದೆ, ಅವರನ್ನು ದಯಾಳು ಮತ್ತು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುತ್ತದೆ ಮತ್ತು ಮಕ್ಕಳಿಗೆ ಪ್ರಾಣಿಗಳು ಮತ್ತು ಮಾನವರ ಮೇಲಿನ ಹಿಂಸಾಚಾರದಿಂದ ದೂರವಿರಲು ಕಲಿಸುತ್ತದೆ.


ಬಾಕ್ಸರ್ ಮೇರಿ ಕೋಮ್

ಮೂಲ: ವುಮನ್ಸ್ಅಡ್ಡಾ.ಕಾಮ್

"ಕಂಪ್ಯಾಶಿನೆಟ್ ಸಿಟಿಜನ್, ಪ್ರಾಥಮಿಕವಾಗಿ ಎಂಟು ಮತ್ತು 12 ವರ್ಷದೊಳಗಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದು ಪ್ರಾಣಿ-ಸ್ನೇಹಿ ಚರ್ಚಾ ವಿಷಯಗಳು, ಪ್ರಾಣಿಗಳ ವಿಡಿಯೋ ತುಣುಕುಗಳು, ವ್ಯಂಗ್ಯಚಿತ್ರಗಳು, ಪುನರುತ್ಪಾದಕ ವರ್ಕ್‌ಶೀಟ್‌ಗಳು ಮತ್ತು ಸಹಾಯಕ ಶಿಕ್ಷಕರ ಮಾರ್ಗದರ್ಶಿಯನ್ನು ಒಳಗೊಂಡ 28 ನಿಮಿಷಗಳ ವೀಡಿಯೊವನ್ನು ಒಳಗೊಂಡಿದೆ. ಕಾರ್ಯಕ್ರಮವನ್ನು ಉಚಿತವಾಗಿ ಮತ್ತು ಪ್ರಸ್ತುತ 15,000 ಕ್ಕೂ ಹೆಚ್ಚು ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಬಳಸಲಾಗುತ್ತಿದ್ದು, ಭಾರತದಲ್ಲಿ ಮೂರು ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದೆ" ಎಂದು ಪೆಟಾ ಹೇಳುತ್ತದೆ.