ಗ್ರಾಮೀಣ ಜಾರ್ಖಂಡ್ ಅನ್ನು ಬಯಲು ಮಲವಿಸರ್ಜನೆಯಿಂದ ಮುಕ್ತಗೊಳಿಸಿದ ಮಹಿಳೆ
475 ಶೌಚಾಲಯಗಳನ್ನು ನಿರ್ಮಿಸಿದ ಹಾಗೂ 1,500 ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲು 300 ಕ್ಕೂ ಹೆಚ್ಚು 'ರಾಣಿ ಮೇಸ್ತ್ರಿಗಳಿಗೆ ತರಬೇತಿ ನೀಡಿದ ಸುನೀತಾ ದೇವಿಯವರು ತಮ್ಮ ಈ ಕೆಲಸಕ್ಕೆ ರಾಷ್ಟಪತಿ ರಾಮನಾಥ್ ಕೋವಿಂದ ಅವರಿಂದ 'ನಾರಿ ಶಕ್ತಿ' ಪುರಸ್ಕಾರವನ್ನು ಸಹ ಸ್ವೀಕರಿಸಿದ್ದಾರೆ.
ಭಾರತ ದೇಶವನ್ನು ಬಯಲು ಮಲವಿಸರ್ಜನೆಯಿಂದ ಮುಕ್ತಗೊಳಿಸಲು ಸಾಮಾಜಿಕ ಮನಸ್ಥಿತಿ ಮತ್ತು ಜನರ ನಡವಳಿಕೆಯಲ್ಲಿ ಬದಲಾವಣೆಯ ಅಗತ್ಯವಿದೆ. 90% ಜನರು ಸ್ವಚ್ಛ ಭಾರತ ಅಭಿಯಾನದ ಯೋಜನೆಯ ಅಡಿಯಲ್ಲಿ ಶೌಚಾಲಯಗಳನ್ನು ಬಳಸುತ್ತಿದ್ದಾರೆ ಎಂದು ದಾಖಲೆಗಳು ತೋರಿಸುತ್ತಿವೆ, ಆದರೆ ವಾಸ್ತವವು ಇವೆಲ್ಲಕ್ಕಿಂತ ಭಿನ್ನವಾಗಿದೆ.
ಆದರೆ, ಜಾರ್ಖಂಡ್ ರಾಜ್ಯದವರಾದ ಸುನೀತಾ ದೇವಿಯು ತನ್ನ ಗ್ರಾಮವಾದ 'ಉದಯಪುರ'ವನ್ನು ಬಯಲು ಮಲವಿಸರ್ಜನೆಯಿಂದ ಮುಕ್ತಗೊಳಿಸಲು ಪಣ ತೊಟ್ಟಿದ್ದಾರೆ. ಈ ಗುರಿ ಸಾಧಿಸಲು ಮುಖ್ಯವಾಗಿ ನೈರ್ಮಲ್ಯ, ಆರೋಗ್ಯ ಹಾಗೆಯೇ ಜನರ ವರ್ತನೆ ಮತ್ತು ನಡವಳಿಕೆಯಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಅವರು ಅರಿತಿದ್ದಾರೆ.
"ಮೊದಲಿಗೆ, ಹೆಚ್ಚಾಗಿ ಪುರುಷರು ರಾಜ್ ಮೇಸ್ತ್ರಿ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಶೌಚಾಲಯ ನಿರ್ಮಿಸುವಂತೆ ಅವರ ಮನ ಒಳಿಸುವುದು ತುಂಬಾ ಕಷ್ಟಕರವಾಗಿತ್ತು. ಏಕೆಂದರೆ ಅವರು ಹೇಳುವ ಪ್ರಕಾರ ಇದು ಸಣ್ಣ ಕೆಲಸವಾಗಿತ್ತು, ಅಲ್ಲದೆ ಹೆಚ್ಚು ಸಂಬಳ ನೀಡುವುದಿಲ್ಲದಿರುವುದು ಅವರ ಆಸಕ್ತಿಯನ್ನು ಕಡಿಮೆಗೊಳಿಸಿದ್ದವು ಆದ್ದರಿಂದ, ಜಿಲ್ಲೆಯ ಅಧಿಕಾರಿಗಳು ನಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಈ ಕೆಲಸ ನಿರ್ವಹಿಸಲು ಸ್ವಯಂಸೇವಕರನ್ನು ಕೇಳಿದಾಗ, ನಾನು ಮುಂದೆ ಬಂದೆ ಎಂದು ಸುನೀತಾ ಹೇಳುತ್ತಾರೆ". ಎಂದು ಎನ್‌ಡಿಟಿವಿ ವರದಿ ಮಾಡಿದೆ.
ತಮ್ಮ ಹಳ್ಳಿಯಲ್ಲಿ ಶೌಚಾಲಯಗಳ ಅಗತ್ಯವನ್ನು ಮನಗಂಡ ಸುನೀತಾರವರು, 2016 ರಲ್ಲಿ ರಾಣಿ ಮೇಸ್ತ್ರಿ ಗಳಿಗೆ ತರಬೇತಿ ನೀಡುವ ಅವಕಾಶವನ್ನು ಪಡೆದರು. ಇದು ಸ್ವಚ್ಛ ಭಾರತ ಪ್ರೇರಕರು, ಯುನಿಸೆಫ್ ಬೆಂಬಲಿತ ಸಿಬ್ಬಂದಿ, ಸಮುದಾಯ ವಿಧಾನಗಳ ಒಟ್ಟು ನೈರ್ಮಲ್ಯ (CATS) ತಜ್ಞ, ಬ್ಲಾಕ್ ಸಮುದಾಯ ಮತ್ತು ಜಿಲ್ಲಾ ಸ್ಬಚ್ಛತಾ ಪ್ರೇರಕರುಗಳಿಂದ ಆಯೋಜಿಸಲ್ಪಟ್ಟಿತ್ತು.
ತರಬೇತಿಯ ಅವಧಿಯಲ್ಲಿ ವೈಯಕ್ತಿಕ ಮನೆಯ ಅವಳಿ(ಟ್ವಿನ್) ಹೊಂಡದ ಶೌಚಾಲಯಗಳನ್ನು ನಿರ್ಮಿಸುವ ಎಲ್ಲಾ ತಾಂತ್ರಿಕ ಅಂಶಗಳ ಕುರಿತು ತಿಳಿದುಕೊಂಡರು. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಸುನೀತಾರವರು ಶೌಚಾಯವನ್ನು ನಿರ್ಮಿಸಲು ಸಾಧ್ಯವಾಗದಂತಹ ಅಂಚಿನಲ್ಲಿರುವ ಪ್ರದೇಶಗಳಲ್ಲಿ ಸಹ ಶೌಚಾಲಯಗಳನ್ನು ನಿರ್ಮಿಸಲು ಪ್ರಾರಂಭಿಸಿದರು.
ಎನ್‌ಡಿಟಿವಿಯೊಂದಿಗೆ ಮಾತನಾಡಿದ ಸುನೀತಾರವರು,
ಅವಳಿ-ಹೊಂಡ ತಂತ್ರಜ್ಞಾನವು ಪುರುಷ ಮೇಸ್ತ್ರಿಗಳಿಗೆ ಸಾಕಷ್ಟು ಹೊಸದಾಗಿತ್ತು. ಆದ್ದರಿಂದ, ಪ್ರತಿ ಶೌಚಾಲಯದ ನಿರ್ಮಾಣದ ಸಂದರ್ಭದಲ್ಲಿ ನಾನು ಮೇಲ್ವಿಚಾರಣೆ ವಹಿಸಿ ಕೆಲಸವನ್ನು ನಿರ್ದೇಶಿಸಿದೆ.
ತಮ್ಮ ಹಳ್ಳಿಯಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಪ್ರಯತ್ನದ ಜೊತೆಗೆ ಸುನೀತಾರವರು ಮಹಿಳಾ ಚರ್ಚಾ ಗುಂಪನ್ನು ಸಹ ರಚಿಸಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ಸ್ವಚ್ಛತೆ, ಮುಕ್ತ ಮಲವಿಸರ್ಜನೆ, ಮದ್ಯಪಾನ, ಬಾಲ್ಯವಿವಾಹ ಮತ್ತು ಮಹಿಳೆಯರ ಸುರಕ್ಷತೆಯಂತಹ ವಿಷಯಗಳನ್ನು ಚರ್ಚಿಸಲು ಎಲ್ಲರೂ ಸೇರುತ್ತಾರೆ.
ಮನೆ ಮನೆಗೆ ತೆರಳಿ ರಾಣಿ ಮೇಸ್ತ್ರಿ(ಮೇಸನ್) ಆಗಿ ಕೆಲಸವನ್ನು ತೆಗೆದುಕೊಳ್ಳಲು, ಆದಾಯವನ್ನು ಗಳಿಸಲು ಮಹಿಳೆಯರನ್ನು ಪ್ರೋತ್ಸಾಹಿಸುವವರೆಗೆ, ತೆರೆದ ಮಲವಿಸರ್ಜನೆಯ ಕಡೆಗೆ ಹೆಚ್ಚು ಅಗತ್ಯವಿರುವ ಬದಲಾವಣೆಯನ್ನು ತರಲು ಸುನೀತಾ ಪ್ರಯತ್ನಿಸುತ್ತಿದ್ದಾರೆ.
ಇಲ್ಲಿಯವರೆಗೆ, ಸುನೀತಾರವರು 475 ಕ್ಕೂ ಶೌಚಾಲಯಗಳನ್ನು ನಿರ್ಮಿಸಿದ್ದಾರೆ ಮತ್ತು 1,500 ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲು 300 ಕ್ಕೂ ಹೆಚ್ಚು ರಾಣಿ ಮೇಸ್ತ್ರಿಗಳಿಗೆ ಪ್ರೋತ್ಸಾಹಿಸಿ ತರಬೇತಿ ನೀಡಿದ್ದಾರೆ.
ತಮ್ಮ ಜನರಲ್ಲಿ ಬದಲಾವಣೆಯ ಗಾಳಿಯನ್ನು ಬೀಸಿದ್ದಕ್ಕೆ, ಸುನೀತಾರವರಿಗೆ 2018 ರ ಮಾರ್ಚ್ ೮ ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಚರಣೆಯೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು 'ನಾರಿಶಕ್ತಿ ಪುರಸ್ಕಾರ'ವನ್ನು ನೀಡಿ ಗೌರವಿಸಿದ್ದಾರೆ. 300 ಮಹಿಳೆಯರನ್ನು ರಾಣಿ ಮೇಸ್ತ್ರಿಗಳಾಗಿ ಸಬಲೀಕರಣಗೊಳಿಸಿದ್ದಕ್ಕಾಗಿ ಅವರು ಒಂದು ಲಕ್ಷ ರೂ ನಗದು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ಟೆಲಿಗ್ರಾಫ್ ಇಂಡಿಯಾ ವರದಿ ಮಾಡಿದೆ.
ಎನ್‌ಡಿಟಿವಿಯೊಂದಿಗೆ ಮಾತನಾಡಿದ ಸುನೀತಾ,
ಜನರು ಈಗ ನನ್ನ ಕೆಲಸವನ್ನು ಗೌರವಿಸಲು ಮತ್ತು ಪ್ರಶಂಶಿಸಲು ಪ್ರಾರಂಭಿಸಿದ್ದಾರೆ. ನನ್ನ ಕುಟುಂಬ ಹಾಗೂ ಪ್ರತಿಯೊಬ್ಬರ ನಿರೀಕ್ಷೆಗೆ ತಕ್ಕಂತೆ ನಾನು ಬದುಕಿದ್ದೇನೆ ಎಂದು ನಾನು ಭಾವಿಸುತ್ತೇನೆ. ಈಗ ಕುಟುಂಬಗಳ ಮನಸ್ಥಿತಿಯಲ್ಲೂ ಬದಲಾವಣೆ ಕಂಡು ಬಂದಿದೆ, ಏಕೆಂದರೆ ಕೆಲವರು ಈಗ ಮಹಿಳಾ ಸದಸ್ಯರಿಗೆ ಮೇಸ್ತ್ರಿ ಕೆಲಸ ಮಾಡಲು ಅವಕಾಶ ನೀಡುತ್ತಿದ್ದಾರೆ. ಇಂದು, ನನ್ನ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಶೌಚಾಲಯವಿದೆ.