ಸಮುದ್ರದಲ್ಲಿ 36 ಕಿ.ಮೀ. ಈಜಿದ ಎಎಸ್‌ಡಿಯಿಂದ ಬಳಲುತ್ತಿರುವ 12 ವರ್ಷದ ಬಾಲಕಿ
ಜಿಯಾ ರೈ ಕೇವಲ 8 ಗಂಟೆ 40 ನಿಮಿಷದಲ್ಲಿ 36 ಕಿ.ಮೀ. ಈಜಿ ಎಎಸ್‌ಡಿ ಹೊಂದಿರುವ ಅತಿ ಕಿರಿಯ ಈಜುಗಾರ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾಳೆ.
ನೌಕಾ ನಾವಿಕ ಮದನ್ ರೈ ಅವರ ಮಗಳಾದ 12 ವರ್ಷದ ಜಿಯಾ ರೈ ಬಂದ್ರಾ ಫೆಬ್ರುವರಿ 17ರಂದು ಕೇವಲ 8 ಗಂಟೆ 40 ನಿಮಿಷದಲ್ಲಿ ವರ್ಲಿ ಸೀ ಲಿಂಕ್‌ನಿಂದ ಗೇಟ್‌ವೇ ಆಫ್ ಇಂಡಿಯಾ ವರೆಗೆ 36 ಕಿ.ಮೀ. ಈಜಿ ಇತಿಹಾಸ ನಿರ್ಮಿಸಿದ್ದಾಳೆ.
ಎಎಸ್‌ಡಿ ಎಂದರೆ ಆಟಿಸ್ಮ್ ಸ್ಪೆಕ್ಟ್ರಮ್ ಡಿಸಾರ್ಡರ್, ಇದು ಒಂದು ಬೆಳವಣಿಗೆಯ ಅಂಗವೈಕಲ್ಯವಾಗಿದ್ದು ಅದು ಗಮನಾರ್ಹವಾದ ಸಾಮಾಜಿಕ, ಸಂವಹನ ಮತ್ತು ನಡವಳಿಕೆಯ ಸವಾಲುಗಳನ್ನು ಉಂಟುಮಾಡುತ್ತದೆ.
ಎಎಸ್‌ಡಿ ಪೀಡಿತಳಾಗಿರುವ ಜಿಯಾ ತನ್ನ ಹತ್ತನೇ ವಯಸ್ಸಿನಿಂದಲೆ ಈಜಲು ಶುರುಮಾಡಿದ್ದಾಳೆ. ಎಎಸ್‌ಡಿ ಕುರಿತಾಗಿ ಜಾಗೃತಿ ಮೂಡಿಸುವುದಕ್ಕಾಗಿ ಜಿಯಾ ಈಜುತ್ತಿದ್ದಾಳೆ. ಬಾಂದ್ರಾ-ವೊರ್ಲಿ ಸೀ ಲಿಂಕ್‌ನಲ್ಲಿ ಬೆಳ್ಳಂಬೆಳಿಗ್ಗೆ 3.50 ಕ್ಕೆ ಈಜಲು ಶುರುಮಾಡಿದ ರಿಯಾ ಮಧ್ಯಾಹ್ನ 12.30 ಕ್ಕೆ ಗೇಟ್‌ವೇ ಆಪ್ ಇಂಡಿಯಾ ತಲುಪಿದಳು.
ಇದರ ಬಗ್ಗೆ ಜಿಯಾ ಸವಾಲು ಕೊನೆಗೊಳಿಸುವ ಚಿತ್ರಗಳೊಂದಿಗೆ ರಕ್ಷಣಾ ಸಚಿವಾಲಯದ ಪಿಆರ್‌ಓ ಡಿಫೆನ್ಸ್ ಮುಂಬಯಿ ಟ್ವೀಟ್ ಮಾಡಿದೆ.
“12 ವರ್ಷದ ಬಾಲಕಿ ಜಿಯಾ ರೈ ಫೆಬ್ರುವರಿ 17 ರಂದು ಬಾಂದ್ರಾ-ವೋರ್ಲಿ ಸೀ ಲಿಂಕ್ ನಿಂದ ಗೇಟ್ ವೇ ಆಪ್ ಇಂಡಿಯಾ ಮುಂಬಯಿ ತನಕ ಈಜಿ ಎಎಸ್‌ಡಿ ಬಗ್ಗೆ ಜಾಗೃತಿ ಮೂಡಿಸಿದ್ದಾಳೆ. ಎಎಸ್‌ಡಿ ಹೊಂದಿರುವ ಜಿಯಾ ಕೇವಲ 8 ಗಂಟೆ 40 ನಿಮಿಷದಲ್ಲಿ 36 ಕಿ.ಮೀ. ದೂರ ಈಜಿದ್ದಾಳೆ.”
“ಬೆಳಿಗ್ಗೆ 3.50 ಕ್ಕೆ ಬಾಂದ್ರಾ ವೊರ್ಲಿ ಸೀ ಲಿಂಕ್‌ನಲ್ಲಿ ಈಜಲು ಪ್ರಾರಂಭಿಸಿ 12.30 ಕ್ಕೆ ಗೇಟ್ ವೇ ಆಫ್ ಇಂಡಿಯಾ ತಲುಪಿ ದಾಖಲೆ ನಿರ್ಮಿಸಿದ್ದಾಳೆ. ಮಹಾರಾಷ್ಟ್ರ ಈಜು ಮಂಡಳಿಯ ಉಸ್ತುವಾರಿಯಲ್ಲಿ ಸ್ಪರ್ಧೆ ನಡೆದಿದೆ,” ಎಂದು ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.
ರಿಯಾಗೆ ಭಾರತದ ಈಜು ಒಕ್ಕೂಟದ ಸಹಾಯಕ ಉಪಾಧ್ಯಕ್ಷ ಅಭಯ್ ದಾದೆ ಅವರು ಟ್ರೋಫಿ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.