Kannada Latest

ಜೀವನೋಪಾಯಕ್ಕಾಗಿ ಕಡಲಾಳಕ್ಕೆ ಈಜು: ಕಡಲ ಕಳೆ ಸಂಗ್ರಹಿಸುತ್ತಿರುವ ತಮಿಳುನಾಡಿನ ಸೀರೆಯುಟ್ಟ ಮಹಿಳೆಯರು

ತಮಿಳುನಾಡಿನ ಈ ಮಹಿಳಾ ಕಡಲ ಕಳೆ ಸಂಗ್ರಹಕಾರರು ಕಡಲ ಕಳೆಯನ್ನು ಕೊಯ್ಲು ಮಾಡುವ ಜತೆ ಸಮುದ್ರ ಜೀವಿಗಳನ್ನು ರಕ್ಷಿಸುವವರೆಗೆ ಧೈರ್ಯಗೆಡದೇ ತಮ್ಮ ಜೀವನೋಪಾಯದ ಮಾರ್ಗವನ್ನು ಸುಸ್ಥಿರವಾಗಿಟ್ಟುಕೊಂಡಿದ್ದಾರೆ.

Team YS Kannada
16th Aug 2019
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ನಮ್ಮಲ್ಲಿ ಹಲವರಿಗೆ ನೀರಿನೊಳಗಿನ ಅಧ್ಬುತ ಪ್ರಪಂಚವನ್ನು ಅನ್ವೇಷಿಸಲು ಬಹುಶಃ ಸ್ಕೂಬಾ ಡೈವಿಂಗ್‌ ಉತ್ತಮ ಮಾರ್ಗವಾಗಿದೆ. ಹಲವರು ಇದನ್ನು ರೋಮಾಂಚನ ಕ್ರೀಡೆಯನ್ನಾಗಿ ನೋಡಿದರೆ, ತಮಿಳುನಾಡಿನ ಈ ಮಹಿಳೆಯರಿಗಿದು ಜೀವನೋಪಾಯದ ಮೂಲವಾಗಿದೆ.


q

ಚಿತ್ರಕೃಪೆ: ಫ್ರಂಟ್‌ಲೈನ್‌


ತಮಿಳುನಾಡಿನ ಚಿನ್ನಪಾಲಂನ 20 ರಿಂದ 60 ವಯಸ್ಸಿನ ಸುಮಾರು 300 ಮಹಿಳೆಯರು ಮನ್ನಾರ್‌ ಕೊಲ್ಲಿಯಲ್ಲಿರುವ ದ್ವೀಪಗಳ ದಡದ ಬಂಡೆಗಳ ಮೇಲೆ ಬೆಳೆಯುವ ಕಡಲ ಕಳೆಯನ್ನು ಸಂಗ್ರಹಿಸಲು ಸಮುದ್ರದ ಆಳಕ್ಕೆ ಇಳಿಯುತ್ತಾರೆ. ತಾವು ದೈನಂದಿನ ಆದಾಯಕ್ಕಾಗಿ ಕಡಲಕಳೆಯನ್ನೇ ಅವಲಂಬಿಸಿದ್ದೇವೆ ಎಂದು ಅವರು ಹೇಳುತ್ತಾರೆ.


ಆದಾಗ್ಯೂ, ಅವರು ಯಾವುದೇ ಸಾಂಪ್ರದಾಯಿಕ ಸ್ಕೂಬಾ ಡೈವಿಂಗ್‌ ಉಡುಪು ಅಥವಾ ಆಮ್ಲಜನಕ ಸಿಲಿಂಡರ್‌ ಹೊಂದಿಲ್ಲ. ಆದರೆ ಸೀರೆಯನ್ನುಟ್ಟುಕೊಂಡೇ ನೀರಿನಾಳಕ್ಕೆ ಇಳಿಯುತ್ತಾರೆ!


q

ಚಿತ್ರಕೃಪೆ: ಫ್ರಂಟ್‌ಲೈನ್‌


ಉಬ್ಬರವಿಳಿತವನ್ನು ಎದುರಿಸುವ ಅವರು, ತಮ್ಮಕಾಲುಗಳನ್ನು ರಕ್ಷಿಸಿಕೊಳ್ಳಲು ರಬ್ಬರ್‌ನ ಪಾದರಕ್ಷೆಯನ್ನು ಧರಿಸುತ್ತಾರೆ. ಬರಿಗೈನಿಂದ ಕಡಲ ಕಳೆಯನ್ನು ಸಂಗ್ರಹಿಸುವುದು ಅಪಾಯವೆಂದು ತಿಳಿದಾಗಿನಿಂದ ತಮ್ಮ ಕೈಗಳಿಗೆ ಬಟ್ಟೆಯನ್ನು ಸುತ್ತಿಕೊಳ್ಳುತ್ತಾರೆ ಮತ್ತು ಮುಖವಾಡವನ್ನು ಧರಿಸುತ್ತಾರೆ.ಅಲ್ಲದೇ ನೀರಿನಾಳದಲ್ಲಿ ಕಡಲಕಳೆ ಸಂಗ್ರಹಿಸಲು ತಮ್ಮ ಹಿಂಬಾಗದಲ್ಲಿ ಪ್ಲ್ಯಾಸ್ಟಿಕ್‌ ಚೀಲವನ್ನಿಟ್ಟುಕೊಂಡು ಹೋಗುತ್ತಾರೆ, ಎಂದು ವರದಿಗಳು ತಿಳಿಸಿವೆ.


q

ಚಿತ್ರಕೃಪೆ: ಫ್ರಂಟ್‌ಲೈನ್‌


ಕಡಲಕಳೆ ಸಂಗ್ರಹಕಾರರ ಸಂಘದ ಮುಖ್ಯಸ್ಥರಾದ ಭಾಗ್ಯವತಿ ಎಸ್‌. ರವರು ತಮ್ಮಕಷ್ಟದ ಕುರಿತು ದಿಲಾಜಿಕಲ್‌ ಇಂಡಿಯನ್‌ಗೆ ಹೀಗೆ ಹೇಳುತ್ತಾರೆ.


 “ನಾವು ದಿನನಿತ್ಯ ಧರಿಸುವ ಉಡುಪಿನಲ್ಲಿಯೇ ನೀರಿನಾಳಕ್ಕೆ ಹೋಗುತ್ತೇವೆ ಮತ್ತು ಕಡಲ ಕಳೆಯನ್ನು ಸಂಗ್ರಹಿಸುವಾಗ ನಮ್ಮ ಕೈ ಕಾಲುಗಳು ಜಜ್ಜಿಹೋಗಿರುವುದನ್ನು ನೀವು ನೋಡಬಹುದು. ನಮ್ಮ ಜೀವ ಮತ್ತು ಕೈಕಾಲುಗಳ ರಕ್ಷಣೆಗೆ ನಮಗೆ ರಕ್ಷಣಾತ್ಮಕ ಉಡುಪುಗಳು, ಗ್ಲೌಸ್‌ ಮತ್ತು ಬೂಟುಗಳ ಅವಶ್ಯಕತೆಯಿದೆ.”


ಕಲ್ಲುಗಳು ಬಂಡೆಗಳು ಮತ್ತು ಮಡಿದ ಹವಳದ ದಿಬ್ಬಗಳಂತಹ ಗಟ್ಟಿಯಾದ ಮೇಲ್ಮೈ ಮೇಲೆ ಬೆಳೆಯುವ ವಿವಿಧ ಜಾತಿಯ ಸಮುದ್ರ ಸಸ್ಯಗಳು ಮತ್ತು ನೀರಿನಡಿ ಬೆಳೆಯುವ ಪಾಚಿಗಳಿಗೆ ಸಾಮಾನ್ಯ ಹೆಸರೇ ಕಡಲ ಕಳೆ. ವರದಿಯ ಪ್ರಕಾರ 2025ರ ವೇಳೆಗೆ ಇದು ಭಾರತದಲ್ಲಿ 26 ಬಿಲಿಯನ್‌ ಡಾಲರ್‌ ಮೌಲ್ಯದ ಮಾರುಕಟ್ಟೆ ಹೊಂದುವ ಸಾಮರ್ಥ್ಯ ಹೊಂದಿದೆ.


ಸೌಂದರ್ಯ ವರ್ಧಕ ಮತ್ತು ಔಷಧಿಗಳ ತಯಾರಿಕೆಗೆ ಕಡಲ ಕಳೆಗಳ ಬಳಕೆ ಹೆಚ್ಚಾಗಿದೆಯಲ್ಲದೇ ಸಮುದ್ರ ಜೀವಿಗಳ ರಕ್ಷಣೆಯಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಸರ್ಕಾರವು 2002 ರಿಂದ ಕಡಲ ಕಳೆ ಸಂಗ್ರಹಿಸುವುದನ್ನು ನಿಷೇಧಿಸಿದೆ ಮತ್ತು ಈ ಪ್ರದೇಶಗಳನ್ನು ಸಮುದ್ರ ಮೀಸಲು ಪ್ರದೇಶವನ್ನಾಗಿ ಘೋಷಿಸಿದೆ.


ದಿ ಲಾಜಿಕಲ್‌ ಇಂಡಿಯಾದೊಂದಿಗೆ ಮಾತನಾಡುತ್ತಾ ಭಾಗ್ಯವತಿಯವರು ಹೀಗೆ ಹೇಳುತ್ತಾರೆ:


“ಕಡಲಕಳೆಯ ಬಹುಪಾಲು ದ್ವೀಪದ ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಂಡು ಬರುತ್ತದೆ. ಅವರು ದ್ವೀಪಗಳಿಗೆ ನಮ್ಮನ್ನು ನಿರ್ಬಂಧಿಸಿದರೆ ನಾವು ಕೊಯ್ಲನ್ನು ಹೇಗೆ ಮಾಡಬೇಕು? ನಮ್ಮ ಕುಟುಂಬದವರನ್ನುಮತ್ತು ಪ್ರೀತಿಪಾತ್ರರನ್ನು ನೋಡಿಕೊಳ್ಳುವುದು ಹೇಗೆ ಸಾಧ್ಯ?”


ಆದ್ದರಿಂದ, ಈ ಮಹಿಳೆಯರ ಜೀವನೋಪಾಯದ ರಕ್ಷಣೆ ಮತ್ತು ಸಮುದ್ರ ಜೀವಿಗಳ ರಕ್ಷಣೆಗಾಗಿ, ಕಡಲಕಳೆ ಸಂಗ್ರಹಕಾರರ ಸಂಘದ ಮಾಜಿ ಮುಖ್ಯಸ್ಥ ಲಕ್ಷ್ಮಿ ಮೂರ್ತಿ ಅವರು ಒಕ್ಕೂಟವನ್ನು ಸ್ಥಾಪಿಸಿದರು. ಲಕ್ಷ್ಮಿಯವರು ಹೇಳುತ್ತಾರೆ:


“ನಾವು ಕಡಲ ಕಳೆ ಕೊಯ್ಲನ್ನು ತಿಂಗಳಿಗೆ 12 ದಿನಕ್ಕೆ ಕಡಿತಗೊಳಿಸಿದ್ದೇವೆ, ಅಂದರೆ, ಪ್ರತಿ ಹುಣ್ಣಿಮೆಯಿಂದ 6 ದಿನಗಳ ಕಾಲ ಕೊಯ್ಲು ನಡೆಸಿ ನಂತರ 9 ದಿನ ವಿರಾಮ ನೀಡುತ್ತೇವೆ. ತದನಂತರ ಅಮವಾಸ್ಯೆಯ ದಿನದಿಂದು ಕೊಯ್ಲು ಆರಂಭಿಸಿ ಮತ್ತೆ 9 ದಿನ ವಿರಾಮ ಕೊಡುತ್ತೇವೆ.” ಇದರಿಂದ ಕಡಲಕಳೆ ಗಳು ಪುನಃಬೆಳೆಯಲು ಮತ್ತು ಕೊಯ್ಲನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಅವರು ಹೇಳುತ್ತಾರೆ.


2014ರಲ್ಲಿ ಈ ಮಹಿಳಾ ಆಂದೋಲನಕ್ಕೆ ಸಹಾಯ ಮಾಡಲು ತಮಿಳುನಾಡು ಸರ್ಕಾರವು ಇವರನ್ನು ಮೀನುಗಾರರ ವಿಶಿಷ್ಟ ಗುಂಪು ಎಂದು ಗುರುತಿಸಲು ಬಯೋಮೆಟ್ರಿಕ್‌ ಕಾರ್ಡ್‌ಗಳನ್ನು ಸಹ ನೀಡಿತು.ಇದು ಅವರ ಕೆಲಸದಲ್ಲಿ ಅಧಿಕಾರಿಗಳ ಮಧ್ಯ ಪ್ರವೇಶವನ್ನುತಡೆಯುತ್ತದೆ.


ತಮ್ಮ ಪ್ರಯತ್ನಗಳಿಗಾಗಿ, ಲಕ್ಷ್ಮಿಯವರಿಗೆ 2016 ರಲ್ಲಿ ಕ್ಯಾಲಿಫೋರ್ನಿಯಾದ ಸೀಕಾಲಜಿ ಪ್ರಶಸ್ತಿ ದೊರಕಿದೆ. ತಮಗೆ ಬಂದ ಪ್ರಶಸ್ತಿಯ ಮೊತ್ತವನ್ನು ಸ್ಥಳೀಯ ನಿವಾಸಿಗಳ ಮಕ್ಕಳಿಗಾಗಿ ಶಾಲೆ ನಿರ್ಮಿಸಲು ಅವರು ದಾನಮಾಡಿದ್ದಾರೆ.


ಈ ಉದ್ಯೋಗವುಸುಲಬವಾದುದಲ್ಲ, ಯುವಪೀಳಿಗೆಯು ಈ ಉದ್ಯೋಗದಿಂದ ದೂರ ಉಳಿಯಲು ಶಿಕ್ಷಣವು ಅತ್ಯಗತ್ಯ ಎಂದು ಅವರು ಹೇಳುತ್ತಾರೆ.

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags