ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡ ಇಂಜಿನೀಯರ್‌ಗಳು ಸಿದ್ಧಪಡಿಸಿದ ಡೆಲಿವರಿ ಆ್ಯಪ್

ಆಂಧ್ರ ಪ್ರದೇಶದ ಎ ರುಪೇಶ್‌ ಮತ್ತು ವೈ ಧಿಲ್ಲಿ ರಾವ್‌ ಸಾಂಕ್ರಮಿಕದ ನಡುವೆ ಹೊಸ ಡೆಲಿವರಿ ಆ್ಯಪ್ ಅಭಿವೃದ್ಧಿಪಡಿಸಿದ್ದು ಅದು ಹಣ್ಣು, ತರಕಾರಿ ಮತ್ತು ಕಿರಾಣಿ ಸಾಮಾನುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತದೆ.

ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡ ಇಂಜಿನೀಯರ್‌ಗಳು ಸಿದ್ಧಪಡಿಸಿದ ಡೆಲಿವರಿ ಆ್ಯಪ್

Wednesday October 14, 2020,

2 min Read

ಲಾಕ್‌ಡೌನ್‌ ಘೋಷಣೆಯಾದ ನಂತರ ದತ್ತಾಂಶದ ಪ್ರಕಾರ ಏಪ್ರಿಲ್‌ ತಿಂಗಳಿನಲ್ಲಿ 1.2 ಕೋಟಿ ಜನರು ಭಾರತದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಹಲವರು ಇನ್ನೂ ಉದ್ಯೋಗವಿಲ್ಲದೆ ಕಷ್ಟಪಡುತ್ತಿದ್ದರೆ ಕೆಲವರು ಹೊಸ ಹೊಸ ಯೋಚನೆಗಳೊಂದಿಗೆ ತಮ್ಮ ಜೀವನವನ್ನು ಮುನ್ನಡೆಸಲು ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ.


ಹಾಗೆಯೆ ಆಂಧ್ರಪ್ರದೇಶದ ಶ್ರಿಕಕುಲಂ ಜಿಲ್ಲೆಯ ಮಂದಾಸದ ಸಿವಿಲ್‌ ಇಂಜಿನೀಯರ್‌ ಎ ರುಪೇಶ್‌ ಮತ್ತು ರೊಬೊಟಿಕ್‌ ಇಂಜಿನೀಯರ್‌ ವೈ ಧಿಲ್ಲಿ ರಾವ್‌ ಸಾಂಕ್ರಮಿಕದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.


“ಏಪ್ರಿಲ್‌ನಲ್ಲಿ ನಾವು ಊರಿಗೆ ಮರಳಿದ್ದೆವು, ಸೆಪ್ಟೆಂಬರ್‌ ಅಂತ್ಯದವರೆಗು ಸುಮ್ಮನೆ ಇದ್ದೆವು, ಊರಲ್ಲಿ ಒಂದು ತಿಂಗಳಿಗಳಿಗಿಂತ ಹೆಚ್ಚು ಕಾಲ ಲಾಕ್‌ಡೌನ್‌ ಜಾರಿಯಿತ್ತು, ಈಗಲೂ ಭಾಹಶಃ ಲಾಕ್‌ಡೌನ್‌ ಇದೆ. ಲಾಕ್‌ಡೌನ್‌ನಲ್ಲಿ ಜನರು ಮನೆಯಲ್ಲೆ ಇರಬೇಕಾದದ್ದರಿಂದ ಅವರಿಗೆ ಅವಷ್ಯಕ ವಸ್ತುಗಳನ್ನು ಪಡೆಯಲು ಹಲವು ಸಮಸ್ಯೆಗಳು ಎದುರಾದವು. ಅವಾಗ ನಮಗೆ ಈ ಸಮಸ್ಯೆಗೆ ಏನಾದರೂ ಪರಿಹಾರ ನೀಡಬೇಕೆಂಬ ಯೋಚನೆ ಬಂದಿದ್ದು,” ಎಂದು ಧಿಲ್ಲಿ ರಾವ್‌ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.


ಊರಿನಲ್ಲಿ ಹೆಚ್ಚುತ್ತಿದ್ದ ಕೊರೊನಾ ಪ್ರಕರಣಗಳ ಸಂಖ್ಯೆಯ ನಡುವೆ ಅವರು ಎಸ್‌ಎಸ್‌ವಿ ಇಗ್ರೋಸರಿ ಎಂಬ ಶಾಪಿಂಗ್‌ ಆ್ಯಪ್ ಅನ್ನು ಸಿದ್ಧಪಡಿಸಿ, ಸಗಟು ವ್ಯಾಪಾರಿಗಳ ಜತೆ ಸೇರಿ ವಸ್ತುಗಳನ್ನು ಮನೆಗೆ ತಲುಪಿಸುವ ಸೌಲಭ್ಯ ಸೃಷ್ಟಿಸಿದರು.

ಎ ರುಪೇಶ್‌ ಮತ್ತು ಧಿಲ್ಲಿ ರಾವ್‌ (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


“ಗ್ರಾಹಕರಿಗೆ ಒಂದು ಗಂಟೆಯಲ್ಲಿ ವಸ್ತುಗಳನ್ನು ತಲುಪಿಸುತ್ತೇವೆ. ಅತೀ ಕಡಿಮೆ ಬಂಡವಾಳದೊಂದಿಗೆ ನಾವು ಉದ್ಯಮವನ್ನು ಆರಂಭಿಸಿದೆವು, ಅದರಲ್ಲಿ ಸ್ವಲ್ಪ ಆ್ಯಪ್ ಅಭಿವೃದ್ಧಿಪಡಿಸಲು ಬಳಸಿದರೆ, ಮತ್ತಷ್ಟನ್ನು ಜಾಹಿರಾತಿಗಾಗಿ ಬಳಸಲಾಗಿದೆ,” ಎಂದು ಧಿಲ್ಲಿ ಅವರು ದಿ ಲಾಜಿಕಲ್‌ ಇಂಡಿಯನ್‌ಗೆ ಹೇಳಿದರು.


1,000 ರೂ, ಒಳಗಿನ ವಸ್ತುಗಳಿಗೆ ಆ್ಯಪ್ 9 ರೂ. ಡೆಲಿವರಿ ಶುಲ್ಕವನ್ನು ವಿಧಿಸಿ ಗ್ರಾಹಕರ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುತ್ತದೆ. ಅವರದು ಚಿಕ್ಕ ಊರಾದರು ದಿನಕ್ಕೆ 30 ಆರ್ಡರ್‌ಗಳು ಬಂದಿವೆ.


ಎರಡು ವಾರಗಳ ಹಿಂದೆ ಶುರುವಾದ ಈ ಉದ್ಯಮ ಹಣ್ಣು, ತರಕಾರಿ ಮತ್ತು ಕಿರಾಣಿ ಸಾಮಾನುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತದೆ. ಬೆಳಿಗ್ಗೆ 8 ರಿಂದ 1 ಮತ್ತು ಸಂಜೆ 5 ರಿಂದ 7 ರವರೆಗೆ ಡೆಲಿವರಿ ಮಾಡಲಾಗುತ್ತದೆ.


“ಕೆಲದಿನಗಳ ಹಿಂದೆ ನಾನು 800 ರೂಗಳ ಹಣ್ಣುಗಳನ್ನು ಆರ್ಡರ್‌ ಮಾಡಿದ್ದೆ, ಅದು ಕೇವಲ 45 ನಿಮಿಷಗಳಲ್ಲಿ ನನಗೆ ಸಿಕ್ಕಿತು. ಕೊರೊನಾ ಸೊಂಕಿನ ನಡುವೆ ನಾನು ಹೊರ ಹೋಗುವ ಬದಲು ಈ ಆ್ಯಪ್ ಬಳಸಿ ವಸ್ತುಗಳನ್ನು ಪಡೆಯುತ್ತೇನೆ,” ಎಂದು ತಮ್ಮ ಅನಿಸಿಕೆ ಹಂಚಿಕೊಂಡರು ಮಂದಾಸಾದ ನಿವಾಸಿಯಾದ ಬಿ ಶಿವ ಪ್ರಸಾದ.