ಕೋವಿಡ್-19 ಟ್ರಯಲ್‌ಗೆ ವೇಗ ನೀಡಲು ವೈದೆಹಿ ಇನ್ಸ್ಟಿಟ್ಯೂಟ್‌ಗೆ ಐಸಿಎಮ್‌ಆರ್‌ನಿಂದ 1 ಲಕ್ಷ ಡಾಲರ್ ಅನುದಾನ
ಸುಮಾರು 2,000 ಔಷಧಿಗಳು ಬಂದಿದ್ದು 200 ಜನರು ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗಿಯಾಗಿದ್ದಾರೆ; ಐಸಿಎಮ್‌ಆರ್ ಮತ್ತು ಡಿಸಿಜಿಐ ಹೇಳುವಂತೆ ಕೋವ್ಯಾಕ್ಸಿನ್‌ನಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದಿರುವುದರಿಂದ ಜನತೆ ಮುಂದೆ ಬಂದು ಲಸಿಕೆಯ ಪರೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ವೈದೆಹಿ ಆಸ್ಪತ್ರೆ ಮನವಿ ಮಾಡಿದೆ.
ಲಸಿಕೆಯ ಕ್ಲಿನಿಕಲ್ ಟ್ರಯಲ್‌ಗಳಿಗೆ ವೇಗ ನೀಡುವುದಕ್ಕಾಗಿ ವೈದೆಹಿ ಇನ್ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸ್‌ಸ್‌ಗೆ ಐಸಿಎಂಆರ್‌ನಿಂದ 1 ಲಕ್ಷ ಡಾಲರ್ ಅನುದಾನ ದೊರೆತಿದೆ. ಕಳೆದ ಒಂದು ತಿಂಗಳಲ್ಲಿ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕಾಗಿ ವೈದೆಹಿಗೆ ಬಂದಿದ್ದು, ಇಲ್ಲಿಯವರೆಗೂ 200 ಸ್ವಯಂಸೇವಕರು ಲಸಿಕೆ ಪಡೆದಿದ್ದಾರೆ.
“ಭಾರತ್ ಬಯೋಟೆಕ್‌ನಿಂದ 2,000 ಔಷಧಿಗಳು ಬಂದಿವೆ. ಕ್ಲಿನಿಕಲ್ ಟ್ರಯಲ್‌ಗಾಗಿ 1,000 ಸ್ವಯಂಸೇವಕರು ಬೇಕಾಗಿದ್ದಾರೆ. ಇಲ್ಲಿಯವರೆಗೂ 200 ಜನರು ಲಸಿಕೆ ಜತೆಗೆ ಬೂಸ್ಟರ್ ಡೋಸ್ ಅನ್ನು ಪಡೆದಿದ್ದಾರೆ, ಅವರಲ್ಲಿ ಯಾವುದೆ ರೀತಿಯ ಅಡ್ಡಪರಿಣಾಮಗಳು ಕಂಡು ಬಂದಿಲ್ಲ, ಎಲ್ಲರೂ ಆರೋಗ್ಯವಾಗಿದ್ದಾರೆ. 1,000 ಸ್ವಯಂಸೇವಕರ ಮೇಲೆ ಲಸಿಕೆ ಪ್ರಯೋಗಿಸಲು ನಮಗೆ ಜನೇವರಿ ಮಧ್ಯದವರೆಗೆ ಗಡುವು ನಿಗದಿಯಾಗಿದೆ. ಈ ಸಂಖ್ಯೆಯನ್ನು ನಾವು ತಲುಪದಿದ್ದರೆ ಐಸಿಎಮ್‌ಆರ್ ಈ ಯೋಜನೆಯನ್ನು ಬೇರೆ ರಾಜ್ಯಕ್ಕೆ ಕೊಟ್ಟು ಅಲ್ಲಿಂದ ದತ್ತಾಂಶ ಸಂಗ್ರಹಿಸಬಹುದು. ಐಸಿಎಮ್‌ಆರ್‌ನ ನೇರ ಮೇಲ್ವಿಚಾರಣೆಯಲ್ಲಿ ಮತ್ತು ಡಿಸಿಜಿಐನ ಸೂಚನೆಗಳೊಂದಿಗೆ ಲಸಿಕೆಯನ್ನು ನೀಡಲಾಗಿದೆ,” ಎಂದು ವೈದೆಹಿ ಇನ್ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸ್‌ಸ್‌ನ ನಿರ್ದೇಶಕ ಕೆ ಎಮ್ ಶ್ರೀನಿವಾಸ ಮೂರ್ತಿ ಹೇಳಿದರು.
ಯುವರ್‌ಸ್ಟೋರಿಯೊಂದಿಗೆ ಮಾತನಾಡಿದ ಅವರು ಈ ಅನುದಾನವು 800 ಸ್ವಯಂಸೇವಕರಿಗೆ ಲಸಿಕೆಯ 2 ಡೋಸ್‌ಗಳನ್ನು ನೀಡಲು ಸಹಾಯಮಾಡುತ್ತದೆ, ಈಗಾಗಲೇ 200 ಜನರಿಗೆ ನೀಡಲಾಗಿರುವ ಲಸಿಕೆ ಪ್ರಯೋಗದ ವೆಚ್ಚವನ್ನು ಆಸ್ಪತ್ರೆ ತಾನೆ ಭರಿಸಿದೆ.
ಭಾರತದಲ್ಲಿ ಸ್ಥಳೀಯವಾಗಿ ಐಸಿಎಮ್‌ಅರ್ ಮತ್ತು ಎನ್‌ಐವಿಯೊಂದಿಗೆ ಸೇರಿ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ. ಮೊದಲ ಮತ್ತು ದ್ವಿತೀಯ ಹಂತದ ಮಾನವರ ಮೇಲಿನ ಪರೀಕ್ಷೆಗಾಗಿ ಕೋವ್ಯಾಕ್ಸಿನ್‌ಗೆ ಡಿಸಿಜಿಐನಿಂದ ಅನುಮತಿ ದೊರೆತಿದೆ.
“ಸಾವಿರ ಸ್ವಯಂಸೇವಕರು ಲಸಿಕೆ ಪಡೆಯದೆ ಹೋದರೆ ಲಸಿಕೆಯ ಪರಿಣಾಮವನ್ನರಿಯಲು ಬೇಕಾಗುವಷ್ಟು ದತ್ತಾಂಶ ಸಂಗ್ರಹವಾಗುವುದಿಲ್ಲ. ಇದರಿಂದ ಲಸಿಕೆ ಜನರಿಗೆ ಸಿಗಲು ತಡವಾಗುತ್ತದೆ. ಅಲ್ಲದೆ, ಪ್ರಾಯೋಗಿಕ ಲಸಿಕೆ ವಾಣಿಜ್ಯ ಉತ್ಪಾದನೆಗೆ ಪ್ರವೇಶಿಸಲು ಸಹಾಯ ಮಾಡಿದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಅವಕಾಶವು ತಪ್ಪಬಹುದು,” ಎನ್ನುತ್ತಾರೆ ಮೂರ್ತಿ.