ಪ್ಲಶ್ ಮಿ, ಪ್ಲಶ್-ಮಿ-ನಾಟ್: ನೀರಿಲ್ಲದ ಮೂತ್ರಾಲಯ ಫಟಕದ ಮೂಲಕ ಶೌಚಾಲಯದಲ್ಲಿ ಪೋಲಾಗುತ್ತಿರುವ ಶೇ. 90ರಷ್ಟು ನೀರನ್ನು ಉಳಿಸಲು ಭಾರತಕ್ಕೆ ಈ ಜಾಗತಿಕ ಕಂಪೆನಿ ನೆರವಾಗುತ್ತಿದೆ
ದೇಶದಲ್ಲಿ ಪ್ರತಿನಿತ್ಯ 118 ಕೋಟಿ ಲೀಟರ್ ನೀರು ಚರಂಡಿಯನ್ನು ಸೇರುತ್ತಿವೆ ಎನ್ನುವುದು ನಿಮಗೆ ತಿಳಿದಿದೆಯೇ? ದೇಶಾದ್ಯಂತ ಪ್ಲಶ್-ಮಿ-ನಾಟ್ ಮೂಲಕ ಶೌಚಾಲಯದಲ್ಲಿ ನೀರಿನ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಜಾಗತಿಕ ಸ್ವಚ್ಛತೆ ಮತ್ತು ನೈರ್ಮಲ್ಯದ ಕಂಪೆನಿಯಾದ ಡೈವರ್ಸಿಯು ಸಮಗ್ರ ನೀರಿಲ್ಲದ ಮೂತ್ರಾಲಯ ಸೇವೆಯನ್ನು ನೀಡುತ್ತಿದೆ.
ಪ್ರಸ್ತುತ ಭಾರತವು ಹಿಂದೆಂದಿಗಿಂತಲೂ ಹೆಚ್ಚು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ – 600 ಮಿಲಿಯನ್ ಅಂದರೆ ದೇಶದ ಅರ್ಧದಷ್ಟು ಜನರು ತೀವ್ರವಾದ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ನೀತಿ ಆಯೋಗ ವರದಿ ಮಾಡಿದೆ. ಇದಲ್ಲದೇ ದೇಶದ ಶೇ. 75 ರಷ್ಟು ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಲಭ್ಯವಿಲ್ಲ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸುರಕ್ಷಿತ ಕೊಳವೆ ನೀರು ಸಿಗುತ್ತಿಲ್ಲ ಎಂದು ವರದಿ ಮಾಡಿದೆ.
ದೇಶದ ಶೇ. 70 ರಷ್ಟು ನೀರು ಕಲುಷಿತವಾಗಿರುವ ಕಾರಣ, ನೀರಿನ ಗುಣಮಟ್ಟ ಸೂಚ್ಯಂಕದಲ್ಲಿ ಭಾರತವು 122 ದೇಶಗಳಲ್ಲಿ 120ನೇ ಸ್ಥಾನದಲ್ಲಿದೆ, ಇದರಿಂದಾಗಿ ದೇಶದಲ್ಲಿ ಪ್ರತಿ ವರ್ಷ ಅಂದಾಜು 2 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ.
ನೀರಿನ ಸವಕಳಿ ಒಂದು ಪ್ರಮುಖ ಸಮಸ್ಯೆಯಾಗಿದ್ದರೂ, ಶೌಚಾಲಯಲ್ಲಿ ಪ್ಲಶ್ ಮಾಡುವುದೇ ಇದಕ್ಕೆ ಕಾರಣವೆಂದು ಹೇಳಲಾಗದು. ಆದರೆ ನೀರು ಪೂರೈಕೆದಾರರ ಒಕ್ಕೂಟವಾಗಿರುವ ಕನ್ಸರ್ವ್ ಎಚ್2ಓ ನ ವರದಿ ಪ್ರಕಾರ ಪ್ರತಿ ಬಾರಿ ಪ್ಲಶ್ ಮಾಡುವಾಗ 1.2 ಲೀಟರ್ ನೀರು ವ್ಯಯವಾಗುತ್ತದೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಇತ್ತೀಚಿನ ವರದಿ ಪ್ರಕಾರ ದೇಶದ ಶೇ. 89 ರಷ್ಟು ಜನರು (107 ಕೋಟಿ) ಶೌಚಾಲಯ ವ್ಯವಸ್ಥೆ ಹೊಂದಿದ್ದಾರೆ. ಇದರನ್ವಯ ಪ್ರತಿಯೊಬ್ಬರು ದಿನನಿತ್ಯ ಏಳು ಬಾರಿ ಶೌಚಾಲಯ ಉಪಯೋಗಿಸಿದರೆ, ನಾವು ದಿನಕ್ಕೆ 118 ಕೋಟಿ ಲೀಟರ್‌ಗೂ ಹೆಚ್ಚು ನೀರನ್ನು ಪ್ಲಶ್ ಮಾಡುವ ಮೂಲಕವೇ ವ್ಯಯ ಮಾಡುತ್ತೇವೆ.
ಜಾಗತಿಕ ಸ್ವಚ್ಛತೆ ಮತ್ತು ನೈರ್ಮಲ್ಯದ ಕಂಪೆನಿಯಾಗಿರುವ ಡೈವರ್ಸಿ, ಪ್ಲಶ್-ಮಿ-ನಾಟ್ ಎನ್ನುವ ಹೊಸ ಪರಿಹಾರದ ಮೂಲಕ ನೀರಿನ ಉಳಿತಾಯ ಮಾಡುವ ಪ್ರಯತ್ನ ಮಾಡುತ್ತಿದೆ. ಇದು ನೀರಿಲ್ಲದ ಮೂತ್ರಾಲಯವಾಗಿದೆ. ಇದು ಶೌಚಾಲಯದಲ್ಲಿ ನೀರಿನ ಬಳಕೆ ಕಡಿಮೆ ಮಾಡುವುದಲ್ಲದೇ ದುರ್ವಾಸನೆಯನ್ನು ತಡೆಯುತ್ತದೆ. 2014 ರಲ್ಲಿ ಪ್ರಾರಂಭವಾಗಿರುವ ಪ್ಲಶ್-ಮಿ-ನಾಟ್ಅನ್ನು ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಾಶ್ಮೀರದ ವೈಶ್ಣೋ ದೇವಿ ದೇವಾಲಯದ ಸುತ್ತ ಮುತ್ತ, ಪಾಸ್ಟ್ ಫುಡ್ ಕಂಪೆನಿಯಾದ ಮೆಕ್‌ಡೊನಾಲ್ಡ್ಸ್‌ನ ಹಲವಾರು ಮಳಿಗೆಗಳಲ್ಲಿ ಮತ್ತು ದಿಲ್ಲಿ ಪಬ್ಲಿಕ್ ಸ್ಕೂಲ್‌ನ ಕೆಲವು ಶಾಖೆಗಳನ್ನು ಸೇರಿದಂತೆ ಇಲ್ಲಿಯವರೆಗೆ 15,000 ಮೂತ್ರಾಲಯಗಳಲ್ಲಿ ಅಳವಡಿಸಲಾಗಿದೆ.
ನೀರಿನ ಮಿತವ್ಯಯವನ್ನು ಉತ್ತೇಜಿಸುವುದು
ಇಂದು ನೀರಿನ ದುರುಪಯೋಗ, ಅತಿಯಾದ ಬಳಕೆ ಮತ್ತು ಮಾಲಿನ್ಯದಿಂದಾಗಿ ನೀರು ಒಂದು ಬಿಕ್ಕಟ್ಟಿನಲ್ಲಿರುವ ಸಂಪನ್ಮೂಲವಾಗಿದೆ. ಪ್ಲಶ್-ಮಿ-ನಾಟ್ ವ್ಯವಸ್ಥೆಯು ನೀರಿನ ಮಿತವ್ಯಯವನ್ನು ಉತ್ತೇಜಿಸುವ ಗುರಿ ಹೊಂದಿದೆ.
“ಹೋಟೆಲ್‌ಗಳು, ವಿಮಾನ ನಿಲ್ದಾಣಗಳು ಮತ್ತು ಸಾರ್ವಜನಿಕ ಶೌಚಾಲಯಗಳಿಗೆ ಪ್ರತಿ ದಿನ ಹಲವಾರು ಜನರು ಭೇಟಿ ನೀಡುತ್ತಾರೆ ಆದ್ದರಿಂದ ನೀರಿನ ಬಳಕೆಯೂ ತುಂಬಾ ಹೆಚ್ಚಾಗಿರುತ್ತದೆ. ಒಮ್ಮೆ ಪ್ಲಶ್ ಮಾಡಿದರೆ 1.5 ಲೀ. ನೀರು ವ್ಯಯವಾಗುತ್ತದೆ. ನಮ್ಮಈ ಪರಿಹಾರದಿಂದ ಶೇ. 90 ರಷ್ಟು ನೀರನ್ನು ಉಳಿಸಲು ಸಹಾಯಕವಾಗಿದೆ.” ಎಂದು ಡೈವರ್ಸಿಯ ಅಧ್ಯಕ್ಷರಾದ (ಎಪಿಎಸಿ ವಿಭಾಗ) ಹಿಮಾಂಶು ಜೈನ್‌ರವರು ಯುವರ್‌ಸ್ಟೋರಿ ಗೆ ಹೇಳುತ್ತಾರೆ.
ಪುಣೆಯ ದಿಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಪರಿಹಾರ ಕ್ರಮವನ್ನು ಮೂರು ವರ್ಷದ ಹಿಂದೆಯೇ ಅಳವಡಿಸಿಕೊಳ್ಳಲಾಗಿದೆ. ನೀರನ್ನು ಉಳಿಸುವುದಲ್ಲದೇ, ತಮ್ಮ ವಿದ್ಯಾರ್ಥಿಗಳಿಗೂ ಅದನ್ನು ಪಾಲಿಸುವಂತೆ ಹೇಳಲಾಗುತ್ತಿದೆ.
“ಡೈವರ್ಸಿಯವರ ಪರಿಹಾರೋಪಾಯವನ್ನು ನಮ್ಮ ಕ್ಯಾಂಪಸ್‌ನ 54 ಮೂತ್ರಾಲಯಗಳಿಗೆ ಅಳವಡಿಸಿದ್ದೇವೆ. 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರು ದಿನಕ್ಕೆ ಒಮ್ಮೆ ಮೂತ್ರಾಲಯವನ್ನು ಬಳಸಿಕೊಳ್ಳುತ್ತಾರೆಂದು ಊಹಿಸಿದರೂ ಪ್ರತಿನಿತ್ಯ ಕನಿಷ್ಟ 2,000 ಲೀಟರ್ ನೀರನ್ನು ನಾವು ಉಳಿಸುತ್ತೇವೆ, ಇದು ಕಡಿಮೆಯೇನಲ್ಲ. ಪ್ಲಶ್-ಮಿ-ನಾಟ್ ಮೂಲಕ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳಿಗೆ ಹಲವಾರಿ ಸಂವೇದನಾಶೀಲ ಕಾರ್ಯಕ್ರಮಗಳನ್ನ ನಡೆಸಲಾಗಿದೆ” ಎಂದು ದಿಲ್ಲಿ ಪಬ್ಲಿಕ್ ಸ್ಕೂಲ್‌ನ ಸೌಲಭ್ಯ ವ್ಯವಸ್ಥಾಪಕರಾದ ಸುಮತಿ ಅರೋರಾರವರು ಹೇಳುತ್ತಾರೆ.
ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ಲಶ್-ಮಿ-ನಾಟ್‌ಅನ್ನು ಅಳವಡಿಸಲಾಗಿದೆ. ಅಸೋಸಿಯೇಷನ್ ಆಫ್ ಪ್ರೈವೇಟ್ ಏರ್ಪೋರ್ಟ್ ಆಪರೇಟರ್ಸ್‌ನ ವರದಿ ಪ್ರಕಾರ ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆಯು 4,850 ಕೋಟಿ ಆಗಿದೆ. ಆದ್ದರಿಂದ ಉಳಿಸುವ ನೀರಿನ ಪ್ರಮಾಣ ಅಚ್ಚರಿಯನ್ನುಂಟುಮಾಡುತ್ತದೆ. “ನಾವು ನಿರ್ವಹಣಾ ತಂಡಕ್ಕೆ ಪ್ಲಶ್-ಮಿ-ನಾಟ್‌ಅನ್ನು ಪರಿಚಯಿಸಿದ್ದೇವೆ ಮತ್ತು ನೀರನ್ನು ಉಳಿಸಲು ಪ್ರಾರಂಭಿಸಿದ್ದೇವೆ, ಇಲ್ಲದಿದ್ದರೆ ಅದು ಚರಂಡಿಯನ್ನು ಸೇರುತ್ತಿತ್ತು. ಪ್ಯಾಕೇಜ್‌ಗಳನ್ನು ಬಳಸಲು ಮತ್ತು ಮೂತ್ರಾಲಯದ ಸ್ವಚ್ಛತೆ ಕಾಪಾಡಲು ನಮ್ಮ ದ್ವಾರಪಾಲಕರಿಗೆ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿಗಳಿಗೆ ತರಬೇತಿ ಕೊಡಲಾಗಿದೆ,” ಎಂದು ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೇಳಲಿಚ್ಚಿಸದ ವಕ್ತಾರರೊಬ್ಬರು ಯುವರ್‌ಸ್ಟೋರಿ ಗೆ ಹೇಳುತ್ತಾರೆ.
ಪ್ಲಶ್-ಮಿ-ನಾಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಪ್ಲಶ್-ಮಿ-ನಾಟ್ ಪ್ಯಾಕೇಜ್ ಪುನರ್ಬಳಕೆ ಪಾಲಿಮರ್‌ನಿಂದ ಮಾಡಿದ 12 ಯುರಿನಲ್ ಪರದೆಗಳನ್ನು ಹೊಂದಿದ್ದು ನಾಲ್ಕು ಲೀಟರ್ ದುರ್ವಾಸನೆ ನಾಶಕ ಸಾಂದ್ರೀಕರಣವನ್ನೊಳಗೊಂಡಿರುತ್ತದೆ.
“ಇದನ್ನು ಅಳವಡಿಸುವ ಮುನ್ನ, ಶೌಚಾಲಯವನ್ನು ಸಾರಗುಂದಿದ ಡೆಸ್ಕಲಿಂಗ್ ದ್ರಾವಣ ಮತ್ತು ಟಾಯ್ಲೆಟ್ ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸಬೇಕು. ಕೆಲವು ನಿಮಿಷಗಳ ನಂತರ ಇದನ್ನು ನೀರಿನಿಂದ ತೊಳೆಯಬಹುದು. ಈ ಪರದೆಯನ್ನು ಅಳವಡಿಸುವ ಮುನ್ನ ಮೂತ್ರ ದಾನಿಗೆ ನೀರು ಸರಬರಾಜಾಗುವುದನ್ನು ನಿಲ್ಲಿಸಬೇಕು. ಕೊನೆಗೆ, ದುರ್ವಾಸನೆ ನಿವಾರಕವನ್ನು ಅದರ ಮೇಲ್ಮೈಗೆ ಸಿಂಪಡಿಸಬೇಕು. ಇದು 30 ದಿನಗಳವರೆಗೆ ಬಾಳಿಕೆಗೆ ಬರುತ್ತದೆ ನಂತರ ದುರ್ವಾಸನೆ ನಿವಾರಕ ಮತ್ತು ಪರದೆಯನ್ನು ಬದಲಾಯಿಸಬೇಕು,” ಎಂದು ಡೈವರ್ಸಿ ಇಂಡಿಯಾದ ಮಾರ್ಕೆಟಿಂಗ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಆರೋದೀಪ್ ರಾಥ್ ವಿವರಿಸುತ್ತಾರೆ.
ಎಲ್ಲ ಬ್ಯಾಕ್ಟೀರಿಯಾಗಳು, ಸೊಡಿಯಂ, ಮೂತ್ರ ಮತ್ತು ಇತರ ಘಟಕಗಳು ಮೂತ್ರ ಪರದೆಯಲ್ಲಿ ಸಂಗ್ರಹವಾಗಿದ್ದರೆ, ದುರ್ವಾಸನೆ ನಿವಾರಕವು ರೋಗಕಾರಕವಲ್ಲದ ಬ್ಯಾಕ್ಟೀರಿಯಾಗಳನ್ನು ಮತ್ತು ಕಿಣ್ವಗಳನ್ನು ಬಳಸಿಕೊಂಡು ದುರ್ವಾಸನೆ, ಮೂತ್ರದ ಕಲೆಗಳನ್ನು ತೆಗೆದು ಅಡಚನೆಯನ್ನು ನಿವಾರಿಸುವುದರೊಂದಿಗೆ ಆಹ್ಲಾದಕರ ಸುಂಗಂಧವನ್ನು ಬಿಡುಗಡೆ ಮಾಡುತ್ತದೆ.
ಪ್ರತಿ ಪ್ಲಶ್-ಮಿ-ನಾಟ್ ಪ್ಯಾಕೇಜ್ ನ ಬೆಲೆ 6,000 ರೂ. ಮತ್ತು ಅದನ್ನು ಸರಿಯಾಗಿ ಬಳಸಿದರೆ 1 ತಿಂಗಳವರೆಗೆ 12 ಮೂತ್ರಾಲಯಗಳಿಗೆ ಉಪಯೋಗಿಸುವಷ್ಟು ಬಾಳಿಕೆ ಬರುತ್ತದೆ.
ಡೈವರ್ಸಿಯ ಇತರ ಉಪಕ್ರಮಗಳು
ಡೈವರ್ಸಿಯು ಉದ್ಯೋಗಿಗಳ ಸ್ವಯಂ ಸೇವಕತ್ವ, ವಿಪತ್ತು ಪರಿಹಾರ ಮತ್ತು ಉತ್ಪನ್ನ ದೇಣಿಗೆಗಳಲ್ಲಿ ತನ್ನ ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯ (ಸಿಎಸ್‌ಆರ್) ಉಪಕ್ರಮದ ಭಾಗವಾಗಿ ಕೆಲಸ ಮಾಡುತ್ತದೆ.
ಹೋಟೆಲ್‌ಗಳಲ್ಲಿ ಬಳಸಿ ಉಳಿದ ಸಾಬೂನುಗಳನ್ನು ಹೊಸ ಸಾಬೂನು ಬಿಲ್ಲೆಗಳನ್ನಾಗಿ ಪರಿವರ್ತಿಸುವ ‘ಸೋಪ್ ಫಾರ್ ಹೋಪ್’ ಅವಶ್ಯಕತೆಯಿರುವವರಿಗೆ ವಿತರಣೆ ಮಾಡುತ್ತದೆ. "400 ರೂಮ್ ಹೊಂದಿರುವ ಹೋಟೆಲ್ ಪ್ರತಿ ವರ್ಷ ಅಂದಾಜು 3.5 ಟನ್ ಸಾಬೂನು ತ್ಯಾಜ್ಯ ಬಿಡುಗಡೆ ಮಾಡುತ್ತವೆ. ಈ ತ್ಯಾಜ್ಯಗಳನ್ನು ಭೂಮಿಯೊಳಕ್ಕೆ ಸೇರಿಸಲಾಗುತ್ತದೆ ಇಲ್ಲವೇ ಜಾಗತಿಕ ಮರುಬಳಕೆ ಮಾಡುವ ವ್ಯವಸ್ಥೆ ಇರುವವರಿಗೆ ಅರ್ಧ ಬೆಲೆಗೆ ಮಾರಾಟ ಮಾಡಲಾಗುತ್ತದೆ. ನಾವು ‘ಸೋಪ್ ಫಾರ್ ಹೋಪ್’ ಉಪಕ್ರಮದಿಂದ ತ್ಯಾಜ್ಯವನ್ನು ಕಡಿಮೆ ಗೊಳಿಸಿ, ಉಳಿದ ಸೋಪ್ ಬಿಲ್ಲೆಗಳನ್ನು ಮರುಬಳಕೆ ಮಾಡಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ" ಎಂದು ಹೇಳುತ್ತಾರೆ ಔರೋದೀಪಾ.
2016 ರಿಂದ ಮುಂಬೈ, ದೆಹಲಿ, ಚೆನ್ನೈ, ಪಾಟ್ನಾ ನಗರಗಳ ಕೊಳಗೇರಿಗಳಲ್ಲಿ ವಾಸಿಸುತ್ತಿರುವವರಿಗೆ 2.5 ಲಕ್ಷಕ್ಕೂ ಹೆಚ್ಚು ಸಾಬೂನು ಬಿಲ್ಲೆಗಳನ್ನು ವಿತರಣೆ ಮಾಡಲಾಗಿದೆ.
‘ಲೈನ್ಸ್ ಫಾರ್ ಲೈಪ್’ 2016 ರಲ್ಲಿ ಪ್ರಾರಂಭವಾಗಿದ್ದು, ಹೋಟೆಲ್‌ಗಳಲ್ಲಿ ನಿರುಪಯುಕ್ತವಾಗಿರುವ ಬೆಡ್‌ಶೀಟ್‌ಗಳನ್ನು ಬಳಕೆ ಮಾಡಬಹುದಾದ ವಸ್ತುಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಬಹುದಾಗಿದ್ದು ಈ ಮೂಲಕ ಸ್ಥಳೀಯ ಸಮುದಾಯದವರಿಗೆ ಜೀವನೊಪಾಯದ ಮಾರ್ಗವನ್ನೊದಗಿಸಿದೆ. ತಲೆದಿಂಬುಗಳನ್ನು ಮತ್ತು ಬ್ಯಾಗ್‌ಗಳನ್ನು ಹೊಲಿಯಲು ಜನರಿಗೆ ತರಬೇತಿಯನ್ನು ಈ ಸಂಸ್ಥೆ ನೀಡುತ್ತಿದೆ. ನೈಸರ್ಗಿಕ ವಿಪತ್ತಿಗೆ ಸಿಲುಕಿರುವವರಿಗೆ ಮತ್ತು ನಿರಾಶ್ರಿತ ಶಿಬಿರಗಳಿಗೆ ಇವುಗಳ ಕೆಲವು ಉತ್ಪನ್ನಗಳನ್ನು ನೀಡಲಾಗುತ್ತಿದೆ.
ತಾಜ್ ಮತ್ತು ಮ್ಯಾರಿಯಟ್ ಗ್ರೂಪ್‌ಗಳು ಸೇರಿ ದೇಶಾದ್ಯಂತ ಅಂದಾಜು 142 ಹೋಟೆಲ್‌ಗಳು ಈ ಎರಡು ಉಪಕ್ರಮಗಳ ಭಾಗವಾಗಿ ಡೈವರ್ಸಿಯೊಂದಿಗೆ ಕೈ ಜೋಡಿಸಿವೆ.
ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಉತ್ತೇಜಿಸುವ ಕಾರಣಕ್ಕೆ ಕಂಪೆನಿಯು ಕೌಶಲ್ಯ ಅಭಿವೃದ್ದಿ ಯೋಜನೆಯಾದ ಗರಿಮಾವನ್ನು ಪ್ರಾರಂಭಿಸಿತು
"ಸ್ವಚ್ಛತೆಯ ವೈಜ್ಞಾನಿಕ ವಿಧಾನ, ವ್ಯಾಕ್ಯೂಮ್ ಕ್ಲೀನರ್‌ಗಳು ಮತ್ತು ಇತರ ಉಪಕರಣಗಳ ಕುರಿತು ನಾವು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ತರಬೇತಿ ನೀಡುತ್ತಿದ್ದೇವೆ, ತರಬೇತಿ ಪಡೆದ ನಂತರ ಅವರು ಹೌಸ್ ಕೀಪಿಂಗ್ ಅಥವಾ ಹಾಸ್ಪಿಟಾಲಿಟಿ ಉದ್ಯಮದಲ್ಲಿ ಅವರಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ” ಎಂದು ಹಿಮಾಂಶುರವರು ವಿವರಿಸುತ್ತಾರೆ.
ಈ ಕಾರ್ಯಕ್ರಮದ ಭಾಗವಾಗಿ ಸಂಸ್ಥೆಯು ಕಳೆದ ಎರಡು ವರ್ಷಗಳಲ್ಲಿ 9,000 ಜನರಿಗೆ ಸಹಾಯ ಮಾಡಿದೆ.
ಸಂಸ್ಥೆ ಸ್ಥಾಪನೆಯಾದ ಬಗೆ
ಅಗಸ್ಟ್ ಕೋಚ್ಸ್ ಮತ್ತು ಅವರ ಮಗ ಹಾರ್ಬರ್ಟ್ ಕೋಚ್ಸ್‌ರವರಿಂದ ವಿಕ್ಟರ್ ಕೆಮಿಕಲ್ಸ್‌ನ ಭಾಗವಾಗಿ ಡೈವರ್ಸಿ ಅಮೇರಿಕಾ, ಚಿಕಾಗೋದಲ್ಲಿ 1923 ರಲ್ಲಿ ಸ್ಥಾಪನೆಯಾಯಿತು. ಸಾರ್ವಜನಿಕ ಶೇರುಗಳು ಬರತೊಡಗಿದ ನಂತರ ಇದು 1950 ರಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು. ಕಂಪೆನಿಯ ಚೇರ್‌ಮನ್ ಹುದ್ದೆಯಿಂದ ಹಾರ್ಬರ್ಟ್ ಕೋಚ್ಸ್‌ರವರು ನಿವೃತ್ತಿ ಹೊಂದಿದ ನಂತರ ಬ್ರೂಯಿಂಗ್ ಕಂಪೆನಿಯ ಮೊಸ್ಲೋನ್‌ರವರು ಇದನ್ನು ಸ್ವಾಧೀನಪಡಿಸಿಕೊಂಡರು.
ವರ್ಷಗಳು ಉರುಳಿದರೂ ಡೈವರ್ಸಿಯ ಗುರಿಯಾದ ಸ್ವಚ್ಛತೆ, ಸುರಕ್ಷತೆ ಮತ್ತು ನೈರ್ಮಲ್ಯವನ್ನು ಬದಲಾಗಲಿಲ್ಲ. ಕಂಪೆನಿಯು ಇಲ್ಲಿಯವರೆಗೂ ಪರಿಣಾಮಕಾರಿ ಸ್ವಚ್ಛತೆ ಮತ್ತು ನೈರ್ಮಲ್ಯದ ಸೇವೆಯನ್ನು ನೀಡುತ್ತಲೇ ಇದೆ.